Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಕೊಡಗಿನ ವೈಶಿಷ್ಠ್ಯಪೂರ್ಣ ಹಬ್ಬ-ಕೈಲ್ ಪೋದ್

ಸಂಕ್ರಾತಿ, ಹುತ್ತರಿ, ಕೈಲ್ ಪೋದ್, ಇವು ಕೊಡಗಿನ ಪ್ರಮುಖ ಹಬ್ಬಗಳಾಗಿವೆ. ಕೊಡಗಿನಲ್ಲಿ ಎಲ್ಲಾ ಧರ್ಮದವರಿದ್ದರೂ ಕೊಡವರು ಮತ್ತು ಗೌಡರು ಅಧಿಕ ಸಂಖ್ಯೆಯಲ್ಲಿದ್ದಾರೆ. ಕೊಡಗಿನಲ್ಲಿ ಕಾವೇರಿ ಮಾತೆಯನ್ನು ಪೂಜಿಸುತ್ತಾರೆ. ಕೋವಿ, ಕತ್ತಿ ಆಯುಧಗಳನ್ನು ಹಬ್ಬದ ಸಮಯದಲ್ಲಿ ಪೂಜಿಸುತ್ತಾರೆ. ಕೈಲ್ ಪೋದ್ ಹಬ್ಬದಂದು ಆಯುಧಗಳನ್ನು ಪೂಜೆ ಮಾಡಲಾಗುವುದು. ಈ ಹಬ್ಬವನ್ನು ಪ್ರತಿ ವರ್ಷ ಸೆಪ್ಟಂಬರ್ 3 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಕೈಲ್ ಮೂಹರ್ತ ಎಂದು ಕೂಡ ಕರೆಯಲಾಗುತ್ತದೆ.
ನಾಟಿ ಕೆಲಸ, ತೋಟದ ಕೆಲಸವೆಲ್ಲಾ ಮುಗಿಸಿ ಅದರ ಸಂಭ್ರಮವನ್ನು ಆಚರಿಸಿಕೊಳ್ಳಲು ಈ ಕೈಲ್ ಪೋದ್ ಹಬ್ಬವನ್ನು ಆಚರಿಸುತ್ತಾರೆ. ಉಳಿದೆರಡು ಹಬ್ಬದಲ್ಲಿ ಹೋಳಿಗೆ, ತಂಬಿಟ್ಟು, ಪಾಯಸ, ಚಕ್ಕುಲಿ ಅಂತ ಹಬ್ಬದ ಅಡುಗೆಯನ್ನು ಮಾಡಿದರೆ ಕೈಲ್ ಪೋದ್ ಹಬ್ಬದ ವಿಶೇಷವೆಂದರೆ ಮಾಂಸಾಹಾರವನ್ನು ತಯಾರಿಸಲಾಗುತ್ತದೆ. ಕೈಲ್ ಪೋದ್ ಗೆ ಪಂದಿ ಕರಿ(ಪೋರ್ಕ್) ಪ್ರಮುಖವಾಗಿರುತ್ತದೆ. ಕಡುಬು ಮತ್ತು ಪೋರ್ಕ್ ಕರಿ ತಯಾರಿಸಿ ಅದನ್ನು ಆಯುಧಗಳು ಪೂಜೆ ಮಾಡುವ ಜಾಗದಲ್ಲಿ ಇಡಲಾಗುತ್ತದೆ.
ಹಿಂದೆಯೆಲ್ಲಾ ಭೇಟೆಯಾಡಿ ಮಾಂಸ ತಂದು ಈ ದಿನವನ್ನು ಆಚರಿಸಲಾಗುತ್ತಿತ್ತು. ಈಗ ಭೇಟೆ ನಿಷಿದ್ಧವಾದ್ದರಿಂದ ಕೋಳಿ, ಹಂದಿಗಳನ್ನು ಚೌಂಡಿ ಕಲ್ಲಿನ (ಚೌಂಡಿ ದೇವರು) ಹತ್ತಿರ ತಂದು ಕಡೆದು ಆ ಮಾಂಸದಿಂದ ಸಾರು ಮಾಡಲಾಗುವುದು.
ವೈನ್ ಮತ್ತು ಮಾಂಸ ಈ ದಿನ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ.



Click it and Unblock the Notifications
