Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ರಜನಿ ಸ್ಟೈಲ್ ಗೆ ರಜನಿಯೇ ಸಾಟಿ
ರಜನಿಕಾಂತ್ ಹೆಸರು ಚಿಕ್ಕ ಮಕ್ಕಳಿಗೂ ಗೊತ್ತಿರುತ್ತದೆ. ಇವತ್ತು ರಜನಿಯ 62ನೇ ಹುಟ್ಟುಹಬ್ಬ. "ರಜನಿ ಸರ್ ಗೆ ನಮ್ಮ ಕಡೆಯಿಂದ ಮತ್ತು ನಮ್ಮ ಓದುಗರ ಕಡೆಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಗಳು".
ತನ್ನ ಅಪೂರ್ವ ಅಭಿನಯ, ಎಲ್ಲಕ್ಕಿಂತ ಮಿಗಿಲಾಗಿ ತನ್ನ ಸ್ಟೈಲ್ ನಿಂದಾಗಿ ತಮಿಳುನಾಡಿನಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿಯೇ ಮನೆ ಮಾತಾದರು. ಅವರ ಸ್ಟೈಲ್ ಗೆ ಅವರೇ ಸಾಟಿ. ರೌಡಿ ವೇಷದಿಂದ ಹಿಡಿದು, ಪೋಲೀಸ್, ಪ್ರೇಮಿ ಎಲ್ಲಾ ರೀತಿಯ ವೇಷಕ್ಕೂ ರಜನಿ ಸೈ.
ಅವರ ಸಿನಿಮಾಗಳಲ್ಲಿ ಅವರ ಅಭಿನಯದ ಜೊತೆಗೆ ಅವರ ವೇಷಭೂಷಣಗಳು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದ್ದೆವು. ಅವರ ಹುಟ್ಟು ಹಬ್ಬದ ವಿಶೇಷವಾಗಿ ತುಂಬಾ ಜನರ ಮೆಚ್ಚುಗೆಯನ್ನು ಗಳಿಸಿದಂತಹ ಅವರ ಕೆಲವೊಂದು ಸ್ಟೈಲ್ ಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

ಸ್ಟ್ರಿಕ್ಟ್ ಪೋಲೀಸ್ ಆಫೀಸರ್
ಪೋಲೀಸ್ ಆಪೀಸರ್ ವೇಷ ಮತ್ತು ದಪ್ಪ ಮೀಸೆ ಮೂಂಡ್ರ್ ಮುಗಂ ಚಿತ್ರದಲ್ಲಿ ರಜನಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ.

ರೋಮಿಯೋ
ಅಬೂರ್ವ ರಾಗಂಗಲ್ ಚಿತ್ರದ ಈ ಫೋಟೊ ನೋಡಿ ರಜನಿಯ ಕಣ್ಣಿನಲ್ಲಿ ಒಬ್ಬ ರೋಮಿಯೋನನ್ನು ಕಾಣಬಹುದು.

ರೌಡಿ ಸ್ಟೈಲ್
ಬಾಬಾ ಚಿತ್ರದಲ್ಲಿ ಈನ ರೀತಿಯ ರೌಡಿ ಲುಕ್ ನಲ್ಲಿ ಡೀಸೆಂಟ್ ರೌಡಿಯಾಗಿ ಮಿಂಚಿದ್ದರೆ. ಆ ರೋಮಿಯೋ ಲುಕ್ ಗೆ ಈ ರೌಡಿ ಲುಕ್ ಗೆ ಎಷ್ಟೊಂದು ವ್ಯತ್ಯಾಸವಿದೆಯಲ್ಲ?

ಲಕ ಲಕ ಲಕ
ಚಂದ್ರಮುಖಿ ಚಿತ್ರದಲ್ಲಿ ಯುವ ತರುಣನನ್ನು ನಾಚಿಸುವಂತೆ ವೇಷಭೂಷಣಗಳಿಂದ ಮಿಂಚಿದ್ದಾರೆ. ಅದರಲ್ಲಿ ಅವರು ಸೊಂಟ ಬಳಕಿಸುವ ಸ್ಟೈಲ್ , ಯೂತ್ ಲುಕ್ ಪ್ರೇಕ್ಷಕನಿಗೆ ತುಂಬಾ ಇಷ್ಟವಾಗುತ್ತದೆ.

ಪಡೆಯಪ್ಪ
ಪಡೆಯಪ್ಪ ಸಿನಿಮಾದಲ್ಲಿ ಕುರ್ತಾ ಪೈಜಾಮದಲ್ಲಿ ತುಂಬಾ ಆಕರ್ಷಕವಾಗಿ ಕಾಣುತ್ತಾರೆ.

ರೋಬಟ್
ತಮ್ಮ 60 ಹರೆಯದಲ್ಲೂ ಮೇಕಪ್ ನಿಂದಾಗಿ 30 ತರುಣನಂತೆ ಕಾಣುತ್ತಿದ್ದಾರೆ. ಯಾವ ಡ್ರೆಸ್ ಹಾಕಿದರೂ ಅದು ರಜನಿಗೆ ಚೆನ್ನಾಗಿ ಒಪ್ಪುತ್ತದೆ.

ರೌಡಿ ರೋಬಟ್
ಇದರಲ್ಲಂತೂ ರಜನಿಯೂ ಪಕ್ಕಾ ಮನುಷ್ಯ ರೋಬಟ್ ನಂತೆ ಕಾಣುಸುತ್ತಾರೆ.

ಬೆಳ್ಳಿ ಕೂದಲು
ಶಿವಾಜಿಯಲ್ಲಿ ಅವರ ಮೇಕಪ್ ಮತ್ತು ಬೆಳ್ಳಿ ಕೂದಲು ಪ್ರೇಕ್ಷಕನನ್ನು ತನ್ನತ್ತ ಸೆಳೆಯುವಲ್ಲಿ ಯಶ್ವಸ್ವಿಯಾಯಿತು.

ರಾಜ
ಶಿವಾಜಿ ಸಿನಿಮಾದ ಮತ್ತೊಂದು ಚಿತ್ರದಲ್ಲಿ ರಾಜನಂತಹ ವೇಷ ಹಾಗೂ ಹೇರ್ ಸ್ಟೈಲ್ ನಿಂದಾಗಿ ವಯಸ್ಸಿನಲ್ಲಿ ತುಂಬಾ ಚಿಕ್ಕವರಂತೆ ಕಾಣಿಸುತ್ತಾರೆ.



Click it and Unblock the Notifications
