Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಟೀಕೆಗೆ ಹೆದರಿದರೆ ಜೀವನದಲ್ಲಿ ಸೋಲು
Insync
oi-Reena
By Hema S

ಯಾವ ವಿಷಯವಾಗಲಿ ತುಂಬಾ ವೈಯಕ್ತಿಕವಾಗಿ ತಗೋಬಾರದು: ಬೇರೆಯವರು ಏನಾದರೂ ಅಂದರೆ ಅದನ್ನು ತುಂಬಾ ವೈಯಕ್ತಿಕವಾಗಿ ತಗೋಬಾರದು. ಏಕೆಂದರೆ ಅದರ ಬಗ್ಗೆ ಯೋಚನೆ ಮಾಡಿದಷ್ಟು ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗುವುದು. ಇದರಿಂದ ಕೆಲಸದಲ್ಲಿ ಗಮನ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟು ಕೆಲಸದ ಕಡೆ ಗಮನ ಕೊಡಬೇಕು.
ಆತ್ಮವಿಶ್ವಾಸ ಕಳೆದುಕೊಳ್ಳಬಾರದು: ಕೆಲವೊಮ್ಮೆ ಬೇರೆಯವರು ಟೀಕೆ ಮಾಡಿದರೆ ಅದು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ. ಉದಾಹರಣೆಗೆ ' ಬಾಸ್ ಅಥವಾ ಸಹೋದ್ಯೋಗಿ ನಿನ್ನ ಕೈಯಿಂದ ಆ ಕೆಲಸ ಮಾಡಲು ಆಗಲ್ಲ' ಅಂದರೆ ನಿಮಗೆ ಮಾಡುವ ಸಾಮರ್ಥ್ಯವಿದ್ದರೂ ಅವರು ಹೇಳಿದ್ದೇ ಸರಿಯಿರಬಹುದೇ ಅಂತ ಅನಿಸಲಾರಂಭಿಸುತ್ತದೆ. ನಿಮ್ಮ ಸಾಮರ್ಥ್ಯ ಬೇರೆಯವರಿಗಿಂತ ನಿಮಗೆ ಗೊತ್ತಿರುತ್ತದೆ. ಬೇರೆಯವರು ಏನು ಹೇಳುತ್ತಿದ್ದಾರೆ ಅಂತ ಕಿವಿಗೊಡದೆ ಕೆಲಸದ ಮುಖಾಂತರ ನಿಮ್ಮ ಸಾಮರ್ಥ್ಯವನ್ನು ತೋರಿಸಿಕೊಡಬೇಕು.
ನಗು: ಬೇರೆಯವರು ಟೀಕೆ ಮಾಡಿದರೆ ಅದನ್ನು ನಿರ್ಲಕ್ಷ್ಯ ಮಾಡಬೇಕು. ಕೋಪ ಬಂದರೂ ನಿಯಂತ್ರಣದಲ್ಲಿಡಬೇಕು. ಏಕೆಂದರೆ ಕೋಪ ಮಾಡಿಕೊಂಡಷ್ಟು ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. ಆದ್ದರಿಂದ ತಕ್ಷಣವೇ ಪ್ರತಿಕ್ರಿಯೆ ನೀಡದೆ ಸಾವಧಾನವಾಗಿರಿ. ನಿಮ್ಮ ಕೆಲಸದತ್ತ ಗಮನ ಹರಿಸಿ. ಈ ರೀತಿ ಮಾಡಿದರೆ ಮಾತ್ರ ನಿಮಗೆ ಏನಾದರೂ ಸಾಧಿಸಲು ಸಾಧ್ಯ. ಟೀಕೆಗೆ ಹೆದರಿಕೊಂಡರೆ ಆತ್ಮವಿಶ್ವಾಸ ಕಳೆದುಕೊಂಡು ನಮ್ಮ ಜೀವನ ನಾವೇ ಹಾಳು ಮಾಡಿದಂತಾಗುತ್ತದೆ.
Comments
English summary
How To Face Criticism At Workplace | Tips For Happy life | ಕೆಲಸದ ಜಾಗದಲ್ಲಿ ಟೀಕೆಗಳನ್ನು ಎದುರಿಸುವುದು ಹೇಗೆ? | ಸಂತೋಷದ ಜೀವನಕ್ಕಾಗಿ ಕೆಲ ಸಲಹೆಗಳು
Story first published: Tuesday, May 22, 2012, 16:58 [IST]
Other articles published on May 22, 2012



Click it and Unblock the Notifications