Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮದು ಮಗನಿಗಾಗಿ 10 ಫ್ಯಾಷನ್ ಧಿರಿಸುಗಳು!
ಡಿಸೆಂಬರ್ ಬಂತೆಂದರೆ ಸಾಕು ಮದುವೆ ಸಮಾರಭಗಳಿಗೆ ಹೋಗುವುದೇ ಒಂದು ಕೆಲಸವಾಗಿ ಬಿಡುತ್ತದೆ. ಮದುವೆಗೆ ಬಂದವರು ಮದು ಮಗ ಮತ್ತು ಮದು ಮಗಳ ವೇಷ ಭೂಷಣವನ್ನು ಪ್ರಮುಖವಾಗಿ ಗಮನಿಸುತ್ತಾರೆ. ಅಲ್ಲದೆ ಮದುವೆಯಾಗುವವರೆಗೆ 'ನನ್ನ ಮದುವೆ ದಿನ ನಾನು ತುಂಬಾ ಆಕರ್ಷಕವಾಗಿ ಕಾಣಬೇಕು' ಎಂಬ ಆಸೆ ಇದ್ದೇ ಇರುತ್ತದೆ.
ಡ್ರೆಸ್ಸಿಂಗ್ ನಲ್ಲಿ ಹೆಣ್ಣು ಮಕ್ಕಳಿಗೆ ಅನೇಕ ಆಯ್ಕೆ ಇರುತ್ತವೆ. ಆದರೆ ಪುರುಷರಿಗೆ ಪಂಚೆ, ಪೈಜಾಮ, ಸೂಟ್ ಇಷ್ಟೆ ಆಯ್ಕೆ ಗಳಿರುತ್ತವೆ. ಹಾಗಂತ ಮದುವೆಗೆ ರೆಡಿಯಾಗಿರುವ ಹುಡುಗ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ಸೂಟ್ ಮತ್ತು ಪೈಜಾಮದಲ್ಲಿ ಮದು ಮಗನ ಸೌಂದರ್ಯವನ್ನು ಹೆಚ್ಚಿಸುವಂತಹ ಅನೇಕ ಡ್ರೆಸ್ ಗಳು ಬಂದಿವೆ. ಇಲ್ಲಿ ನಾವು ಮಗು ಮಗನ ಸೌಂದರ್ಯ ಹೆಚ್ಚಿಸುವ ಕೆಲವು ಡ್ರೆಸ್ಸಿಂಗ್ ಬಗ್ಗೆ ಚಿತ್ರಮಾಹಿತಿ ನೀಡಲಾಗಿದೆ:

1. ಸೂಟ್
ಸಾಮಾನ್ಯವಾದ ಸೂಟ್ ಧರಿಸಿದರೆ ಮದು ಮಗ ಆಕರ್ಷಕವಾಗಿ ಕಾಣಬಹುದು. ಸಿಂಪಲ್ ಆಗಿ ಮತ್ತು ಆಕರ್ಷಕವಾಗಿ ಕಾಣಬೇಕೆಂದು ಬಯಸುವವರು ಈ ಡ್ರೆಸ್ಸಿಂಗ್ ಮಾಡಬಹುದು. ಸೂಟ್ ಗೆ ನಿಮಗೆ ಸೂಕ್ತವಾದ ಬಣ್ಣದ ಶರ್ಟ್ ಧರಿಸಿ.

2. ವೈಟ್ ಸೂಟ್
ಈ ಡ್ರೆಸ್ಸಿಂಗ್ ಎಲ್ಲಾ ರೀತಿಯ ಮೈ ಬಣ್ಣದವರಿಗೆ ಚೆನ್ನಾಗಿ ಒಪ್ಪುತ್ತದೆ. ಬಿಳಿ ಬಣ್ಣದ ಸೂಟ್ ಗೆ ತಿಳಿ ಪಿಂಕ್ ಬಣ್ಣದ ಶರ್ಟ್ ಧರಿಸಿದರೆ ತುಂಬಾ ಆಕರ್ಷಕವಾಗಿ ಕಾಣುವಿರಿ.

3. ಫ್ರಿಲ್ಸ್ ಡ್ರೆಸ್
ಈ ಫ್ರಿಲ್ಸ್ ಡ್ರೆಸ್ ಮದುಮಗನಿಗೆ ರಾಯಲ್ ಲುಕ್ ನೀಡುತ್ತದೆ. ಈ ಡ್ರೆಸ್ ಧರಿಸಿದರೆ ತುಂಬಾ ಕಂಪರ್ಟ್ ಅನಿಸುತ್ತದೆ. ಈ ರೀತಿಯ ಡ್ರೆಸ್ ಅನ್ನು ನಿಮಗೆ ಇಷ್ಟವಾದ ಬಣ್ಣದಲ್ಲಿ ಕೊಂಡು ಕೊಳ್ಳಬಹುದು.

4. ಬ್ಲ್ಯಾಕ್ ಅಂಡ್ ವೈಟ್
ಈ ಫ್ಯಾಷನ್ ಯಾವ ಕಾಲಕ್ಕೂ ಔಟ್ ಡೇಟ್ ಆಗುವುದೇ ಇಲ್ಲ. ಆದ್ದರಿಂದ ಈ ಡ್ರೆಸ್ ಧರಿಸಿ ಮದು ಮಗ ಮಿಂಚಬಹುದು.

5. ಸ್ಪೆಷೆಲ್ ಸ್ಟೈಲ್
ಸಿದ್ಧಾರ್ಥ ಮಲ್ಯ ಧರಿಸಿರುವ ಈ ಡ್ರೆಸ್ಸಿಂಗ್ ನೋಡಿ. ತುಂಬಾ ಆಕರ್ಷಕವಾಗಿದೆಯಲ್ಲಾ? ರಿಸೆಪೆಕ್ಷನ್ ಗೆ ಈ ರೀತಿಯ ಡ್ರೆಸ್ಸಿಂಗ್ ಮಾಡಿದರೆ ಅಂತೂ ನಿಮ್ಮ ಡ್ರೆಸ್ಸಿಂಗ್ ಬಗ್ಗೆ ಮದುವೆಗೆ ಬಂದವರಿಂದ ನೋ ಕಂಮೆಂಟ್.

6. ಸ್ಪೆಷೆಲ್ ಸ್ಟೈಲ್
ಸಿದ್ಧಾರ್ಥ ಮಲ್ಯ ಧರಿಸಿರುವ ಈ ಡ್ರೆಸ್ಸಿಂಗ್ ನೋಡಿ. ತುಂಬಾ ಆಕರ್ಷಕವಾಗಿದೆಯಲ್ಲಾ? ರಿಸೆಪೆಕ್ಷನ್ ಗೆ ಈ ರೀತಿಯ ಡ್ರೆಸ್ಸಿಂಗ್ ಮಾಡಿದರೆ ಅಂತೂ ನಿಮ್ಮ ಡ್ರೆಸ್ಸಿಂಗ್ ಮದುವೆಗೆ ಬಂದವರಿಂದ ನೋ ಕಂಮೆಂಟ್.

7. ನೀಲಿ ಡ್ರೆಸ್
ಮದು ಮಗಳ ಸೀರೆ ನೀಲಿ ಬಣ್ಣದಾಗಿದ್ದರೆ ನಿಮ್ಮ ಡ್ರೆಸ್ಸಿಂಗ್ ಕೂಡ ಅದೇ ಬಣ್ಣದಾಗಿದ್ದರೆ ಮೇಡ್ ಫಾರ್ ಈಚ್ ಅದರ್ ಜೋಡಿಯಲ್ಲಿ ಮಾತ್ರವಲ್ಲ ಡ್ರೆಸ್ಸಿಂಗ್ ನಲ್ಲೂ ಕಾಣುತ್ತಾರೆ.

8. ಬ್ಲ್ಯಾಕ್ ಅಂಡ್ ರೆಡ್
ನೀವು ಬಿಳಿ ಮೈ ಬಣ್ಣವನ್ನು ಹೊಂದಿದ್ದರೆ ಕಪ್ಪು ಮತ್ತು ಕೆಂಪು ಡ್ರೆಸ್ ನಲ್ಲಿ ತುಂಬಾ ಆಕರ್ಷಕವಾಗಿ ಕಾಣುವಿರಿ. ಮದುವೆಗೆ ಬಂದ ಹೆಣ್ಣು ಮಕ್ಕಳು ಲೈನ್ ಹೊಡದಾರು ಹುಷಾರ್!

9. ಡಾರ್ಕ್ ಮೊಘಲ್
ಮೊಘಲ್ ಸ್ಟೈಲ್ ನ ಡ್ರೆಸ್ ಮದು ಮಗನಿಗೆ ತುಂಬಾ ಸೂಕ್ತವಾದ ಡ್ರೆಸ್ ಆಗಿದೆ. ಈ ಡ್ರೆಸ್ ನೀವು ಸಾಧಾರಣ ದಪ್ಪವಿರುವವರಿಗೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.

10. ರಾಜಕುಮಾರ
ಸಫಾರಿ ಸೂಟ್ ಗೆ ಒಂದು ಬ್ರಾಚ್ ಇದ್ದು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ. ರಾಜಕುಮಾರಿಯನ್ನು ಕಟ್ಟಿಕೊಂಡು ಹೋಗಲು ಬರುವಾಗ ರಾಜಕುಮಾರ ಹೀಗೆ ಬರಬೇಕು ಅಲ್ಲವೇ?



Click it and Unblock the Notifications
