For Quick Alerts
ALLOW NOTIFICATIONS  
For Daily Alerts

ದೀಪಾವಳಿಗೆ ಗಿಫ್ಟ್ ಐಡಿಯಾ

|

ದೀಪಾವಳಿಯಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಕೊಡುವುದು ನಮ್ಮಲ್ಲಿಯ ವಾಡಿಕೆ. ನಮ್ಮ ಕೈಯಲ್ಲಿ ಏನು ಸಾಧ್ಯವಾಗುತ್ತದೆಯೋ ಅದನ್ನು ಗಿಫ್ಟ್ ಆಗಿ ಕೊಡುತ್ತೇವೆ. ಅದು ಡ್ರೆಸ್, ಆಭರಣ ಆಗಿರಬಹುದು, ಮೊಬೈಲ್ ಹೀಗೆ ನಿಮಗೆ ಯಾವ ಗಿಫ್ಟ್ ಕೊಡಲು ಸಾಧ್ಯವಾಗುತ್ತದೆಯೋ ಅದನ್ನು ಕೊಡಬಹುದು.

ಗಿಫ್ಟ್ ಕೊಡುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ. ಅಯ್ಯೋ ಯಾವ ಗಫ್ಟ್ ಕೊಡಲಿ, ನಾನು ಕೊಡುವ ಗಿಫ್ಟ್ ಅವರಿಗೆ ಇಷ್ಟವಾಗಬಹುದೇ ಹೀಗೆ ತುಂಬಾ ಯೋಚಿಸುತ್ತೇವೆ. ಕೆಲವೊಮ್ಮೆ ಗಿಫ್ಟ್ ಕೊಡಬೇಕೆಂದು ಇರುತ್ತೇವೆ. ಆದರೆ ಯಾವ ಗಿಫ್ಟ್ ಕೊಡಬೇಕೆಂದು ಹೊಳೆಯುವುದೇ ಇಲ್ಲ. ಈ ರೀತಿ ಏನಪ್ಪಾ ಗಿಫ್ಟ್ ಕೊಡಲಿ ಎಂಬ ಗೊಂದಲದಲ್ಲಿದ್ದರೆ ನಾವು ನಮಗೆ ಕೆಲವು ಸುಲಭದ ಗಿಫ್ಟ್ ಗಳ ಬಗ್ಗೆ ಹೇಳಿದ್ದೇವೆ. ಈ ಗಿಫ್ಟ್ ಗಳಲ್ಲಿ ಯಾವುದು ಸೂಕ್ತವಾಗುತ್ತದೆಯೋ ಅದನ್ನು ಕೊಡಿsi, ಅವರ ಮುಖದಲ್ಲಿ ಮೂಡುವ ಸಂತೋಷದ ಬೆಳಕನ್ನು ಕಂಡು ನೀವೂ ಸಂತೋಷ ಪಡಿ.

ಗಣೇಶನ ಮೂರ್ತಿ ಅಥವಾ ಕೃಷ್ಣ ವಿಗ್ರಹ:

ಗಣೇಶನ ಮೂರ್ತಿ ಅಥವಾ ಕೃಷ್ಣ ವಿಗ್ರಹ:

ಹಿರಿಯಗಾದರೆ ಗಣೇಶನ ಮೂರ್ತಿಯನ್ನು ನೀಡಬಹುದು. ಕೃಷ್ಣನ ವಿಗ್ರಹವನ್ನು ಕೊಡ ಬಹುದು.

 ಆಭರಣ:

ಆಭರಣ:

ಸ್ವಲ್ಪ ಹೆಚ್ಚು ಬಜೆಟ್ ಇದ್ದರೆ ನಿಮ್ಮ ಪ್ರೀತಿ ಪಾತ್ರರಿಗೆ ಆಭರಣವನ್ನು ಕೊಡಿಸಬಹುದು. ಆಭರಣ ಕೊಡಿಸಿದ್ದೇ ಆದರೆ ದೀಪಾವಳಿಯ ಬೆಳಕಿನಷ್ಟೇ ಪ್ರಕಾಶ ಮಾನವಾದ ನಗುವನ್ನು ಅವರ ಮೊಗದಲ್ಲಿ ಕಾಣಬಹುದು.

ಸೀರೆ:

ಸೀರೆ:

ಮನೆ ಹೆಂಗಸರಿಗೆ ಸೀರೆ ಕೊಡಿಸಬಹುದು. ಹೀಗೆ ಕೊಡಿಸುವಾಗ ಅವರ ಹತ್ತಿರ ಸುಮ್ಮನೆ ಮಾತನಾಡುತ್ತಾ ನಿಮಗೆ ಯಾವ ಬಗೆಯ ಸೀರೆ ಇಷ್ಟ ಅಂತ ಕೇಳಿ. ನಂತರ ಆ ಸೀರೆಯನ್ನು ತಂದುಕೊಡಿ, ತುಂಬಾ ಸಂತೋಷ ಪಡುತ್ತಾರೆ.

ಡ್ರೆಸ್:

ಡ್ರೆಸ್:

ಸಹೋದರಿ, ಹೆಂಡತಿ, ಗರ್ಲ್ ಫ್ರೆಂಡ್ ಇಂತಹವರಿಗೆ ಗಿಫ್ಟ್ ಆಗಿ ಡ್ರೆಸ್ ಕೊಡಿಸಿ, ಸರ್ ಪ್ರೈಸ್ ಗಿಫ್ಟ್. ಗಿಫ್ಟ್ ಆಗಿ ಶ್ರೀ ಕೃಷ್ಣ ವಿಗ್ರಹವನ್ನು ಕೊಡಬಹುದು.

ಮೇಕಪ್ ಸೆಟ್ ಅಥವಾ ವ್ಯಾನಿಟಿ ಬ್ಯಾಗ್:

ಮೇಕಪ್ ಸೆಟ್ ಅಥವಾ ವ್ಯಾನಿಟಿ ಬ್ಯಾಗ್:

ಮನೆಯ ಹೆಣ್ಣು ಮಕ್ಕಳಿಗಾದರೆ ಮೇಕಪ್ ಕಿಟ್ ಕೊಟ್ಟರೆ ಇಷ್ಟವಾಗುವುದು. ಮೇಕಪ್ ಸೆಟ್ ಅಲ್ಲದಿದ್ದರೆ ಬ್ರ್ಯಾಂಡ್ಡ್ ವ್ಯಾನಿಟಿ ಬ್ಯಾಗ್ ಕೊಡಿಸಿ.

ವಾಚ್:

ವಾಚ್:

ಫ್ರೆಂಡ್ ಅಥವಾ ಸಹೋದರ, ಸಹೋದರಿಗಾದರೆ ಫಾಸಿಲ್, ಫಾಸ್ಟ್ರ್ಯಾಕ್ ಈ ರೀತಿಯ ಟ್ರೆಂಡ್ ಇರುವ ವಾಚ್ ಗಳನ್ನು ಕೊಡಬಹುದು.

ಮೊಬೈಲ್:

ಮೊಬೈಲ್:

ನಿಮ್ಮ ಪ್ರೇಮಿಗೆ ಚೆಂದದ ಮೊಬೈಲ್ ಕೊಡಿಸಿ ನಿಮ್ಮ ವಿಶ್ ತಿಳಿಸಬಹುದು. ಪ್ರೇಮಿಗೆ ಮಾತ್ರವಲ್ಲ ಮನೆಯಲ್ಲಿ ಅಪ್ಪ-ಅಮ್ಮನ ಸೆಲ್ ಹಳೆಯ ಮಾಡಲ್ ಮೊಬೈಲ್ ಆಗಿದ್ದರೆ ಅವರಿಗೆ ಹೊಸ ಮಾಡಲ್ ಮೊಬೈಲ್ ಕೊಡಿಸಿ. ಓದುತ್ತಿರುವ ಸಹೋದರ-ಸಹೋದರಿ ಇದ್ದರೆ ಅವರಿಗೆ ಕೊಡಿಸಿ ತುಂಬಾ ಸತೋಷ ಪಡುತ್ತಾರೆ.

English summary

Gift Idea For This Diwali | Deepavali Special Story | ದೀಪಾವಳಿಗೆ ಗಿಫ್ಟ್ ಐಡಿಯಾ | ದೀಪಾವಳಿಗೆ ಸ್ಪೆಷೆಲ್ ಸ್ಟೋರಿ

Giving away gifts is a part of the Diwali rituals and celebration. This is the time of the year when we exchange gifts with friends and family. So choose gift items according to your budget and the person whom you want to gift to.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more