Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೆಲಸದ ಸಂದರ್ಶನದಲ್ಲಿ ಆಡಬಾರದ ಮಾತುಗಳಿವು!

ಕೆಲಸದ ಸಂದರ್ಶನಕ್ಕೆ ಹೋಗುವಾಗ ಅಲ್ಲಿಯ HR ನಮ್ಮ ಜೊತೆ ಮಾತನಾಡಿಸಿ ಕೆಲವೊಂದು ವಿಷಯವನ್ನು ನಮ್ಮಿಂದ ತಿಳಿಯಲು ಪ್ರಯತ್ನಿಸುತ್ತಾರೆ. ಆದ್ದರಿಂದ ತುಂಬ ಚಾಣಕ್ಷತನದಿಂದ ಉತ್ತರ ನೀಡಬೇಕಾಗುತ್ತದೆ. ಅದಲ್ಲದೆ ಕೆಲವೊಂದು ವಿಷಯಗಳನ್ನು ತಿಳಿಯುವುದು ಅವಶ್ಯಕವಾದರೂ ಅದನ್ನು ಸಂದರ್ಶನದ ಸಮಯದಲ್ಲಿ ಕೇಳುವುದು ಸರಿಯಲ್ಲ. ಆ ವಿಷಯಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.
ರಜೆ: ರಜೆಯಿಲ್ಲದೆ ಕೆಲಸ ಮಾಡಲು ಯಾವ ವ್ಯಕ್ತಿಯೂ ಸಿದ್ಧವಿರುವುದಿಲ್ಲ. ಹಾಗಂತ ವರ್ಷಕ್ಕೆ ಎಷ್ಟು ರಜೆ ಸಿಗುತ್ತದೆ ಎಂದು ಸಂದರ್ಶನದ ಸಮಯದಲ್ಲಿ ಕೇಳುವುದು ಒಳ್ಳೆಯದಲ್ಲ. ಕಂಪನಿಯಲ್ಲಿ ಎಷ್ಟು ರಜೆಗಳಿರುತ್ತದೆಯೋ ಅದು ಸಿಕ್ಕೇ ಸಿಗುತ್ತದೆ, ಆದ್ದರಿಂದ ಅದರ ಬಗ್ಗೆ ಕೇಳಲು ಹೋಗಬಾರದು.
ನನ್ನ ಹಿಂದಿನ ಕೆಲಸ ಇಷ್ಟವಿರಲಿಲ್ಲ: ಹಿಂದೆ ಕೆಲಸ ಮಾಡುತ್ತಿದ್ದ ಜಾಗದಿಂದ ಬಿಡಲು ಕಾರಣವೇನು ಎಂದು ಸಂದರ್ಶನಕಾರರು ಕೇಳಿದರೆ ಆ ಕೆಲಸ ನನಗೆ ಇಷ್ಟವಿರಲಿಲ್ಲ ಅಂತ ಹೇಳಬೇಡಿ. ನಿಮ್ಮ ಹಳೆಯ ಕಂಪನಿಯ ಬಗ್ಗೆ ಹೇಳುವಾಗ ಗೌರವದಿಂದ ಹೇಳಿ.
ಸಂಬಳ: ಸಂದರ್ಶನದಲ್ಲಿ ನೀವು ಆಯ್ಕೆ ಆದರೆ ನಿಮ್ಮ ಸಂಬಳ ಮಾತ್ರ ಕೇಳಿ, ಈ ಕಂಪನಿಯಲ್ಲಿ ಬೇರೆಯವರೆಗೆ ಎಷ್ಟು ಕೊಡುತ್ತಿದ್ದೀರಾ? ಎಂದು ಕೇಳಬಾರದು. ನೀವು ನಿಮ್ಮ ಬೇಡಿಕೆ ಬಗ್ಗೆ ಮಾತ್ರ ಮಾತನಾಡಬೇಕು.
ಡ್ರೆಸ್ ಕೋಡ್: ಪ್ರತಿಯೊಂದು ಕಂಪನಿಯಲ್ಲಿ ಡ್ರೆಸ್ ಕೋಡ್ ಇರುತ್ತದೆ. ಫಾರ್ಮಲ್ ಹಾಕಲು ಇಷ್ಟವಿಲ್ಲದಿದ್ದರೂ ಫಾರ್ಮಲ್ ಡ್ರೆಸ್ ಹಾಕಲೇಬೇಕಾ? ಅಂತ ಕೇಳಲು ಹೋಗಬಾರದು. ಅಲ್ಲಿ ಇತರ ಉದ್ಯೋಗಿಗಳು ಹೇಗೆ ಇರುತ್ತಾರೋ ಅದೇ ರೀತಿ ಇರಬೇಕಾಗುತ್ತದೆ, ಆದ್ದರಿಂದ ಅನಗತ್ಯ ಪ್ರಶ್ನೆ ಕೇಳಲು ಹೋಗಬಾರದು.
ದೃಢತೆ ಇರಬೇಕು: ನಿಮ್ಮ ಮಾತಿನಲ್ಲಿ ದೃಢತೆ ಇರಬೇಕು. ಅವರು ನಿಮಗೆ ಈ ಕೆಲಸ ನಿಭಾಯಿಸಿಕೊಂಡು ಹೋಗಲು ಸಾಧ್ಯನಾ ಎಂದು ಕೇಳಿದರೆ ಯೋಚಿಸುವ ಬದಲು ಸಾಧ್ಯ ಎಂದು ನಿಖರವಾಗಿ ಹೇಳಿ.
ಸಂದರ್ಶನದಲ್ಲಿ ನಿಮ್ಮ ಪ್ರತಿಯೊಂದು ಉತ್ತರ ಸಂದರ್ಶನಕಾರರನ್ನು ಆಕರ್ಷಿಸುವಂತೆ ಇರಬೇಕು. ಅದಕ್ಕಾಗಿ ಮಾತಿನಲ್ಲಿ ತುಂಬಾ ಕೃತಕತೆ ಕೂಡ ಒಳ್ಳೆಯದಲ್ಲ.



Click it and Unblock the Notifications
