Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತರುಣಿಯರಿಗೆ ಮದುವೆಗೆ ಧರಿಸಲು 5 ಬೆಸ್ಟ್ ಡ್ರೆಸ್
ಮದುವೆ ಸೀಸನ್ ಪ್ರಾರಂಭವಾಯಿತು. ಮದುವೆಗೆ ಹೋಗುವಾಗ ಯಾವ ರೀತಿಯಲ್ಲಿ ಡ್ರೆಸ್ ಮಾಡಬೇಕೆನ್ನುವುದು ಯುವತಿಯರಿಗೆ ದೊಡ್ಡ ಚಿಂತೆಯಾಗಿರುತ್ತದೆ. ಮದುವೆ ಸಮಾರಂಭಗಳಿಗೆ ಹೋಗುವಾಗ ಜೀನ್ಸ್ ರೀತಿಯ ಉಡುಗೆಗಳನ್ನು ಧರಿಸುವುದು ಅಷ್ಟು ಸರಿ ಕಾಣುವುದಿಲ್ಲ. ಕೊನೆಗೆ ಸೀರೆಯೊಂದೇ ಯುವತಿಯರ ಮುಂದೆ ಇರುವ ಆಯ್ಕೆ ಆಗಿರುತ್ತದೆ. ಜರಿ ಸೀರೆ, ರೇಷ್ಮೆ ಸೀರೆ ಅಂತಹ ಸೀರೆಗಳನ್ನು ಅಮ್ಮ, ಆಂಟಿಂದಿರು ಉಡುತ್ತಾರೆ. 'ನಾನೇಕೆ ಅವರಂತೆ ಡ್ರೆಸ್ಸಿಂಗ್ ಮಾಡಲಿ, ಸ್ವಲ್ಪ ಮಾಡರ್ನ್ ಆಗಿ ಕಾಣುವಂತೆ ಡ್ರೆಸ್ ಮಾಡಬೇಕು' ಎಂದು ಅನಿಸುತ್ತದೆ.
ಆದ್ದರಿಂದ ಈ ಲೇಖನದಲ್ಲಿ ಮದುವೆ ಸಮಾರಂಭಗಳಿಗೆ ಯುವತಿಯರು ಹೋಗುವಾಗ ಧರಿಸಲು ಸೂಕ್ತವಾದ ಡ್ರೆಸ್ ಗಳ ಬಗ್ಗೆ ಹೇಳಾಗಿದೆ. ಇವುಗಳನ್ನು ಧರಿಸಿದರೆ ಡೀಸೆಂಟ್ ಆಗಿಯೂ ಕಾಣುವಿರಿ ಹಾಗೂ ಮಾಡರ್ನ್ ಲುಕ್ ನಿಂದ ಆಕರ್ಷಿಕವಾಗಿ ಮಿಂಚುವಿರಿ.

1. ನೆಟ್ ಸೀರೆ
ನೆಟ್ ಸೀರೆ ಫ್ಯಾಷನ್ ಬಂದು ಸ್ವಲ್ಪ ಕಾಲವಾದರೂ ಈ ಫ್ಯಾಷನ್ ಈಗಲೂ ಚಾಲ್ತಿಯಲ್ಲಿದೆ. ಯುವತಿಯೂ ಈ ಸೀರೆಯನ್ನು ಧರಿಸಿ ಕೂದಲನ್ನು ಗಾಳಿಗೆ ಹಾರಾಡಲು ಬಿಡಬಹುದು ಅಥವಾ ತುರುಬು ಕಟ್ಟಿ, ಲಘು ಮೇಕಪ್ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣವಿರಿ.

2. ಲೆಹಂಗಾ ಸ್ಯಾರಿ
ಇದೊಂದು ನ್ಯೂ ಫ್ಯಾಷನ್ ಸ್ಯಾರಿಯಾಗಿದೆ. ನೋಡಲು ಘಾಗ್ರ ರೀತಿಯ ಈ ಸೀರೆಯನ್ನು ಉಟ್ಟರೆ ಅದು ನಿಮಗೆ ಸಾಂಪ್ರದಾಯಕ ಮಿಶ್ರಿತ ಮಾಡರ್ನ್ ಲುಕ್ ನೀಡುತ್ತದೆ.

3. ಫ್ರಿಲ್ ಘಾಗ್ರ
ಈ ರೀತಿಯ ಉಡುಗೆ ತೊಡಲು ಕಡಿಮೆಯೆಂದರೂ 5.4 ಎತ್ತರ ಇರಬೇಕು. ಅಂದರೆ ಮಾತ್ರ ಆಕರ್ಷಕವಾಗಿ ಕಾಣುವಿರಿ. ಇಲ್ಲದಿದ್ದರೆ ಕುಳ್ಳಗೆ ಮತ್ತು ದಪ್ಪಗೆ ಕಾಣುವಿರಿ. ಈ ರೀತಿಯ ಡ್ರೆಸ್ ಯುವತಿಯರಿಗೆ ಹೊಸ ಲುಕ್ ನೀಡುವುದು.

4. ಮಿಕ್ಸ್ ಅಂಡ್ ಮ್ಯಾಚ್
ಈ ಚಿತ್ರದಲ್ಲಿ ಕಾಣುವ ಡ್ರೆಸ್ ನೋಡಿ. ಘಾಗ್ರದಂತಹ ಲಂಗಕ್ಕೆ ಸೊಂಟದವರೆಗೆ ಬರುವ ಟಾಪ್ ಧರಿಸಿ, ಆಕರ್ಷಕವಾಗಿ, ಗ್ರ್ಯಾಂಡ್ ಆಗಿ ಕಾಣಿಸುವ ದುಪ್ಪಟ್ಟವನ್ನು ಧಾವಣಿ ಉಟ್ಟಂತೆ ಉಟ್ಟು, ಕತ್ತಿಗೆ ನೆಕ್ ಲೇಸ್ ಹಾಕಿ, ಅರ್ಧ ಕೂದಲನ್ನು ಬಿಟ್ಟು ಕಟ್ಟುವುದು ಅಥವಾ ಇಡೀ ಕೂದಲನ್ನು ಗಾಳಿಗೆ ಹಾರಾಡುವಂತೆ ಬಿಡಬಹುದು. ಈ ರೀತಿ ಡ್ರೆಸ್ಸಿಂಗ್ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣುವಿರಿ.

5. ಅನಾರ್ಕಲಿ ಚೂಡಿದಾರ್
ಇದು ಈಗೀನ ಫ್ಯಾಷನ್ ಚೂಡಿದಾರ್ ವಾಗಿದೆ. ಡ್ರೆಸ್ಸಿಂಗ್ ಸಿಂಪಲ್ ಆಗಿರಬೇಕು, ನೋಡಲು ಗ್ರ್ಯಾಂಡ್ ಆಗಿ ಕಾಣಬೇಕೆಂದು ಬಯಸುವವರು ಈ ರೀತಿಯ ಧಿರಿಸನ್ನು ಧರಿಸಬಹುದು.



Click it and Unblock the Notifications
