Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತುಂಬಾ ವಿಚಿತ್ರವಾದ ಪ್ರದೇಶಗಳಿವು!
ಈ ಭೂಮಿಯಲ್ಲಿ ವಿಸ್ಮಯಕಾರಿಯಾದ ಭಯಾನಕ ವಿಷಯಗಳು ಸಾಕಷ್ಟಿವೆ. ಕೆಲವೊಂದು ವಿಷಯಗಳು ಕೆಲವೊಂದು ಜಾಗಗಳು, ಕೇಳಲು ಮತ್ತು ನೋಡಲು ತುಂಬಾ ಭಯಂಕರವಾಗಿರುತ್ತದೆ. ಇಲ್ಲಿ ನಾವು ತುಂಬಾ ವಿಚಿತ್ರವಾದ ಹಾಗೂ ಭಯಾನಕವಾದ ಜಾಗಗಳ ಬಗ್ಗೆ ಹೇಳಲಾಗಿದೆ.
ಆ ಪ್ರದೇಶಗಳು ಯಾವುವು, ಅವುಗಳು ವಿಚಿತ್ರ ಜಾಗ ಅನಿಸಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.

ಪಮುಕೇಲ್:
ಇದು ಜಗತ್ತಿನ ವಿಚಿತ್ರವಾದ ಪ್ರದೇಶಗಳಲ್ಲಿ ಒಂದಾಗಿದೆ. ಪ್ರಕೃತಿಯ ಅಸ್ವಾಭಾವಿಕ ಗುಣದಿಂದಾಗಿ ಇದು ವಿಚಿತ್ರವಾದ ಪ್ರದೇಶ ಅನ್ನಿಸಿಕೊಂಡಿದೆ. ಈ ಭಾಗದಲ್ಲಿ ಜ್ವಾಲಾಮುಖಿ ಉಂಟಾಗಿ ಬೃಹತ್ ಕ್ಯಾಲ್ಸಿಯಂ ಕಾರ್ಬೋನೇಟ್ ನ ಶಿಲೆಗಳು ಉಂಟಾಗಿದೆ.

ಮೆಕ್ ಮರ್ಡೋ ಒಣಗಿದ ಕಣವೆ:
ಇದು ಅಂಟಾರ್ಟಿಕದಲ್ಲಿದೆ. ಈ ಕಣವೆಯಲ್ಲಿ ನೈಸರ್ಗಿಕವಾಗಿ ಬಿಸಿ ನೀರು ಹರಿಯುತ್ತದೆ, ಸ್ವಲ್ಪ ಕೆಂಪು ಬಣ್ಣ ಇರುವ ಈ ನೀರಿನಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಈ ಕಣವೆ ನೋಡಿದರೆ ರಕ್ತ ಹರಿಯುತ್ತಿದೆಯೇನೊ ಎಂದು ಭಾಸವಾಗುತ್ತದೆ.

ಸಲೈನ್ ಅಲ್ಕೈ ಕೆರೆ:
ಈ ಕೆರೆ ಬ್ರಿಟಿಷ್ ಕೊಲಂಬಿಯಾದಲ್ಲಿದೆ. ಈ ಕೆರೆಯಲ್ಲಿ 8-10 ಖನಿಜಾಂಶಗಳು ಸಿಗುತ್ತದೆ. ಇಲ್ಲಿ ಬೇಸಿಗೆಯಲ್ಲಿ ನೀರು ಆವಿಯಾದಾಗ ಈ ಖನಿಜಾಂಶಗಳು ಕಾಣಸಿಗುತ್ತದೆ.

ರೇಸ್ ಟ್ರ್ಯಾಕ್ ಪಾಲ್ಯ:
ಇದೊಂದು ಒಣ ಕೆರೆಯಾಗಿದ್ದು ಕ್ಯಾಲಿಫೋರ್ನಿಯಾದಲ್ಲಿದೆ. ಈ ಪ್ರದೇಶ ನೋಡಲು ಮನಮೋಹಕವಾಗಿದ್ದು, ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಈ ಪ್ರದೇಶದಲ್ಲಿ ಕಲ್ಲುಗಳು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತನ್ನಿಷ್ಟಕ್ಕೆ ಚಲಿಸುತ್ತದೆ.

ಸಹಾರ ಮರುಭೂಮಿಯ ಕಣ್ಣು:
ಸಹಾರ ಮರುಭೂಮಿಯಲ್ಲಿ ಕಣ್ಣಿನ ರೀತಿಯ ಆಕಾರ ಕಂಡುಬರುತ್ತದೆ. ಇದನ್ನು ಸಹಾರ ಮರುಭೂಮಿಯ ಕಣ್ಣು ಎಂದು ಕರೆಯಲಾಗಿದೆ. ಇದರಿಂದಾಗಿ ಈ ಮರುಭೂಮಿ ಇತರ ಮರುಭೂಮಿಗಿಂತ ವಿಚಿತ್ರ ಅನಿಸಿದೆ.

ಸೊಕೊಟ್ರಾ ದ್ವೀಪ:
ಈ ಪ್ರದೇಶವನ್ನು ಕೂಡ ಪ್ರಪಂಚದ ವಿಚಿತ್ರವಾದ ಪ್ರದೇಶ ಎಂದು ಗುರುತಿಸಲಾಗಿದೆ. ಇಲ್ಲಿ ಕಾಣ ಸಿಗುವ ಪ್ರಾಣಿ, ಪಕ್ಷಿ ಮತ್ತು ಹೂಗಳು ಪ್ರಪಂಚದ ಇತರ ಭಾಗದಲ್ಲಿ ಕಾಣಸಿಗುವುದಿಲ್ಲ ಅನ್ನುವುದು ಇದರ ವೈಶಿಷ್ಟ್ಯ.



Click it and Unblock the Notifications
