Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಬೆಂಗಳೂರಿನಲ್ಲಿರುವ ಟಾಪ್ 5 ಕಬಾಬ್ ಸೆಂಟರ್
ಬೆಂಗಳೂರಿಗೆ ದೇಶದ ಯಾವುದೇ ಮೂಲೆಯಿಂದ ಜನರು ಬರಲಿ, ಅವರಿಗೆ ಈ ಸ್ಥಳ ಇಷ್ಟವಾಗುವುದು. ಆಹಾರದ ಸಮಸ್ಯೆಯಂತೂ ಮೊದಲೇ ಇಲ್ಲ, ಕೇರಳಕ್ಕೆ ಹೋದರೆ ಅಲ್ಲಿಯ ಶೈಲಿಯ ಊಟ ಮಾತ್ರ ಸಿಗುತ್ತದೆ. ಅಲ್ಲಿ ಕುಚಲಕ್ಕಿ ಅನ್ನ, ತೆಂಗಿನೆಣ್ಣೆ ಬಳಸಿ ಸಾರು, ಪಲ್ಯಗಳನ್ನು ತಯಾರಿಸಲಾಗುವುದು. ಆದರೆ ಆ ಅಡುಗೆ ಕನ್ನಡಿಗರಿಗೆ ಅಷ್ಟಾಗಿ ರುಚಿಸುವುದಿಲ್ಲ.

ಆದರೆ ಬೆಂಗಳೂರಿಗೆ ಬಂದರೆ ಮಂಗಳೂರು, ಉಡುಪಿ, ಉತ್ತರ ಕನ್ನಡ, ಪಂಜಾಬಿ, ಕೇರಳ ಶೈಲಿಯ ಅಡುಗೆ, ಆಂಧ್ರ ಶೈಲಿಯ ಅಡುಗೆ, ಚೈನಾ ಫುಡ್ ಹೀಗೆ ಎಲ್ಲಾ ಬಗೆಯ ಆಹಾರಗಳು ಸಿಗುತ್ತವೆ. ಕರ್ನಾಟಕದಲ್ಲಿ ಸಸ್ಯಾಹಾರದಷ್ಟೇ ಮಾಂಸಾಹಾರಗಳು ಪ್ರಸಿದ್ಧವಾಗಿದ್ದು ಅನೇಕ ಪ್ರಸಿದ್ಧ ಹೋಟೆಲ್ ಗಳಿವೆ. ರಜಾದಿನಗಳಲ್ಲಿ ಕಬಾಬ್ ತಿನ್ನಬೇಕೆಂದು ಅನ್ನಿಸಿದಾಗ ಅಥವಾ ಜಸ್ಟ್ ಆಸೆಯಾದಾಗ ಯಾವ ರೆಸ್ಟೋರೆಂಟ್ ಗೆ ಹೋಗುವುದು ಎಂದು ಯೋಚಿಸುತ್ತೇವೆ. ನಿಮಗೆ ತುಂಬಾ ರುಚಿಕರವಾದ ಕಬಾಬ್ ತಿನ್ನಬೇಕೆಂದರೆ ಈ ಕೆಳಗಿನ ವಿಳಾಸದ ಹೋಟೆಲ್ ಗಳಿಗೆ ಭೇಟಿ ನೀಡಬಹುದು. ಇವುಗಳನ್ನು ಬೆಂಗಳೂರಿನಲ್ಲಿ ರುಚಿಕರವಾದ ಕಬಾಬ್ ದೊರೆಯುವಂತಹ ಟಾಪ್ 5 ಹೋಟೆಲ್ ಎಂದು ಗುರುತಿಸಲಾಗಿದೆ.
1. ತಂದೂರ್: ಇಲ್ಲಿ ತಯಾರಿಸುವ ಗ್ರಿಲ್ಡ್ ಕಬಾಬ್ ರುಚಿ ಒಮ್ಮೆ ಸವಿದರೆ ಮತ್ತೆ -ಮತ್ತೆ ಈ ರೆಸ್ಟೋರೆಂಟ್ ಗೆ ಬರುವುದು ಗ್ಯಾರಂಟಿ. ಈ ರೆಸ್ಟೋರೆಂಟ್ ಬೆಂಗಳೂರಿನ ನಂ. 1 ಕಬಾಬ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೊರೆಯುವ ಸ್ಥಳ: 28, Centenary Building, MG Road. Tel: 25584620, 25596961
2. ಕಾಪ್ಪರ್ ಚಿಮ್ನೈ: ಇದು ಉತ್ತರ ಭಾರತ ಶೈಲಿಯ ಅಡುಗೆಗೆ ಪ್ರಸಿದ್ಧಿಯನ್ನು ಪಡೆದಂತಹ ಹೋಟೆಲ್ ಆಗಿದೆ. ಇಲ್ಲಿಯ ಕಬಾಬ್ ಮಾತ್ರವಲ್ಲ ಬಟರ್ ಚಿಕನ್ ತುಂಬಾ ಜನಪ್ರಿಯತೆಯನ್ನು ಗಳಿಸಿದೆ. ಸೆಂಟ್ರಲ್ ಮಾಲ್ ಗೆ ಸಿನಿಮಾ ಅಥವಾ ಶಾಪಿಂಗ್ ಹೋದಾಗ ಕಬಾಬ್ ತಿನ್ನಬೇಕೆಂದು ಅನ್ನಿಸಿದರೆ ಈ ಹೋಟೆಲ್ ಗೆ ಭೇಟಿಕೊಡಬಹುದು.
ವಿಳಾಸ: No.47/48, 5th Floor, Bangalore Central Mall. Tel: 66111800, 66111900
3.ಸಾಹಿಬ್ ಸಿಂಧ್ ಸುಲ್ತಾನ್: ಲಕ್ನೋ ದೇಶದಲ್ಲಿ ಬೆಸ್ಟ್ ಕಬಾಬ್ ದೊರೆಯುವ ಸ್ಥಳವಾಗಿದೆ. ಈ ಅಂಗಡಿಯಲ್ಲಿ ಕೂಡ ಲಕ್ನೋ ಮಾದರಿಯಲ್ಲಿ ಕಬಾಬ್ ತಯಾರಿಸಲಾಗುವುದು. ಇಲ್ಲಿ ಕಬಾಬ್ ಬೆಲೆ ಸ್ವಲ್ಪ ದುಬಾರಿ ಅನ್ನಿಸಿದರೂ ಅದರ ರುಚಿ ನೆನೆಸಿದಾಗ ಬೆಲೆ ಅಷ್ಟೇನು ದೊಡ್ಡ ವಿಷಯ ಅನ್ನಿಸುವುದಿಲ್ಲ.
ಸ್ಥಳ: Level 2, Forum Mall, Hosur Road, Koramangala. Tel: 22067878
4. ಸಮರ್ ಖಾಂಧ್: ಈ ಕಬಾಬ್ ಸೆಂಟರ್ ಗೆ ಒಮ್ಮೆ ಬಂದರೆ ಮತ್ತೊಮ್ಮೆ ಬರಬೇಕೆನಿಸುತ್ತದೆ. ಇಲ್ಲಿಯ ಕಬಾಬ್ ರುಚಿ ನೋಡಲು ಬಯಸುವುದಾದರೆ ವಿಳಾಸ ನೋಡಿ ಇಲ್ಲಿದೆ.
Gem Plaza, 66, Infantry Road. Tel: 41113364
5. ಟುಂಡೇ ಕಬಾಬಿ/ಕಬಾಬ್: ಕೋರಮಂಗಲಕ್ಕೆಹೋದಾಗ ಈ ಬೆಸ್ಟ್ ಕಬಾಬ್ ರುಚಿನೋಡಬಹುದಾಗಿದೆ. ಇಲ್ಲಿ ಲಕ್ನೋ ಶೈಲಿಯಲ್ಲಿ ಕಬಾಬ್ ತಯಾರಿಸುತ್ತಿದ್ದು, ಇಲ್ಲಿಯ ಕಬಾಬ್ ವಾಸನೆ ಅರ್ಧ ಕಿಲೋಮೀಟರ್ ದೂರದಲ್ಲಿರುವವರನ್ನು ಕೂಡ ತನ್ನತ್ತ ಸೆಳೆಯುವಂತೆ ಇರುತ್ತದೆ. ಈ ರುಚಿಕರವಾದ ಟುಂಡೇ ಕಬಾಬ್ ಈ ಕೆಳಗಿನ ವಿಳಾಸದಲ್ಲಿ ಲಭ್ಯವಾಗುವುದು.
Kormangala 5th block, Near Paramount Hotel. Tel: 9731553030



Click it and Unblock the Notifications
