Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪ್ರಪಂಚದ ಇತರ 5 ಅದ್ಭುತ ಪ್ರದೇಶಗಳು
ಪ್ರಪಂಚದ ಏಳು ಅದ್ಭುತ ಪ್ರದೇಶಗಳ ಬಗ್ಗೆ ಕೇಳುವಾಗ ಸಾಯುವ ಮೊದಲು ಆ ಪ್ರದೇಶಗಳನ್ನು ನೋಡಿ ಬರಲು ಸಾಧ್ಯವಾದರೆ ಜೀವನ ಸಾರ್ಥಕ ಎಂಬ ಭಾವನೆ ಮನಸ್ಸಿಗೆ ಬರುವುದು ಸಹಜ. ಆದರೆ ಪ್ರಪಂಚದಲ್ಲಿ ಅವುಗಳಲ್ಲದೆ ಇನ್ನೂ ಅನೇಕ ಅದ್ಭುತವಾದ ಪ್ರದೇಶಗಳಿವೆ. ಪರ್ವತಗಳು, ಬೆಟ್ಟ ಗುಡ್ಡಗಳು, ಕೆರೆಗಳು ಹೀಗೆ ಬಹುಸುಂದರವಾದ ಸ್ಥಳಗಳಿವೆ.
ಅಂತಹ ಪ್ರದೇಶಗಳಿಗೆ ಭೇಟಿ ನೀಡಿದಾಗೆಲ್ಲಾ ನಮಗೆ ಸಂತೋಷದ ಜೊತೆ ಸಾಯುವ ಮೊದಲು ಇಂತಹ ಅದ್ಭುತ ಪ್ರದೇಶಗಳನ್ನು ನೋಡಿದೆ ಎಂಬ ಸಾರ್ಥಕತೆ ಉಂಟಾಗುತ್ತದೆ.
ಇಲ್ಲಿ ನಾವು ಪ್ರಪಂಚದ 7 ಅದ್ಭುತಗಳನ್ನು ಬಿಟ್ಟು ಇತರ ಕೆಲವು ಅದ್ಭುತ ಪ್ರದೇಶಗಳ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ:

ದಿ ಗ್ರ್ಯಾಂಡ್ ಕಣಿವೆ:
ಆಳವಾದ ಈ ಕಣಿವೆ ಅಮೇರಿಕದಲ್ಲಿದೆ. ಇದೊಂದು ಅದ್ಭುತವಾದ ಪ್ರದೇಶವಾಗಿದ್ದು ಇಲ್ಲಿಗೆ ಅನೇಕ ಮಂದಿ ಭೇಟಿ ನೀಡುತ್ತಾ ಇರುತ್ತಾರೆ. ಕೊಲರಾಡೊ ನದಿಯ ಕೊರೆತದಿಂದಾಗಿ ಈ ಕಣಿವೆ ಉಂಟಾಗಿದೆ.

ವೇವ್ ರಾಕ್:
ಇದೊಂದು ದೊಡ್ಡ ಕಲ್ಲಾಗಿದ್ದು ನೋಡಲು ಬಿರುಗಾಳಿಯಂತೆ ಕಾಣುತ್ತದೆ. ಇದನ್ನು ನೋಡಿದರೆ ಗಾಳಿಯು ಇದ್ದಕ್ಕಿದ್ದಂತೆ ಕಲ್ಲಾಗಿರಬಹುದೇ ಎಂಬ ಭ್ರಮೆಯನ್ನು ಮೂಡಿಸುತ್ತದೆ. ಈ ಕಲ್ಲು 14 ಮೀ ಎತ್ತರ ಹಾಗೂ 100 ಮಿ ಉದ್ದವನ್ನು ಹೊಂದಿದೆ. ಈ ಕಲ್ಲನ್ನು ಆಸ್ಟ್ರೇಲಿಯಾದ ಹೈಡನ್ ವೈಲ್ಡ್ ಲೈಫ್ ಪಾರ್ಕ್ ನಲ್ಲಿ ಕಾಣಬಹುದು.

ಸ್ಟೋನ್ ಫಾರೆಸ್ಟ್:
ಇದು ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿದೆ. ಇದು ಮಡಗಾಸ್ಕರ್ ನಲ್ಲಿದ್ದು ಇದನ್ನು ವರ್ಲ್ಡ್ ಹೆರಿಟೇಜ್ ಸೈಟ್ (ವಿಶ್ವ ಪಾರಂಪರಿಕ ಸ್ಥಳ) ಎಂದು ಘೋಷಿಸಲಾಗಿದೆ.

ಕ್ರಿಸ್ಟಲ್ ಗುಹೆ:
ಬರಮೂಡದಲ್ಲಿರುವ ಈ ಗುಹೆ ನೋಡಲು ಅತ್ಯಾಕರ್ಷಕವಾಗಿದೆ. ಈ ಗುಹೆ ಕೇಸ್ಟಲ್ ನ ಸಮುದ್ರ ತರದಲ್ಲಿ ಕಂಡು ಬರುತ್ತದೆ. ಇದು 500 ಮೀ ಉದ್ದ ಹಾಗೂ 62 ಮೀ ಆಳದಲ್ಲಿದೆ.

ಸಲಾರ್ ದಿ ಉಯಾನ್:
ಬೊಲಿವಿಯಾದಲ್ಲಿರುವ ಇದು ಸಮತಟ್ಟಾದ ಉಪ್ಪಿನ ಪ್ರದೇಶವಾಗಿದೆ. ಈ ಪ್ರದೇಶಕ್ಕೆ ಮಳೆಗಾಲದಲ್ಲಿ ಭೇಟಿ ಕೊಟ್ಟರೆ ನೋಡಲು ಅತ್ಯಾದ್ಭುತವಾದ ಇದರ ಸೌಂದರ್ಯಕ್ಕೆ ಒಂದು ಗಳಿಕೆ ಮೂಕ ವಿಸ್ಮಯರಾಗುವಿರಿ.



Click it and Unblock the Notifications
