Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಮುಖಕ್ಕೆ ಸೂಕ್ತವಾದ ಬಿಂದಿ ಯಾವುದು?

ಹೃದಯಾಕಾರದ ಮುಖ: ಈ ರೀತಿಯ ಮುಖದವರ ಹಣೆ ಎದ್ದು ಕಾಣುತ್ತದೆ. ಆದ್ದರಿಂದ ಹೊಳೆಯುವ ಸ್ಟಿಕ್ಕರ್, ಚಿಕ್ಕ ಬಿಂದಿ ಅಥವಾ ಕುಂಕುಮ ಹಾಕಿದರೆ ಆಕರ್ಷಕವಾಗಿ ಕಾಣುವುದು. ಈ ಮುಖದವರಿಗೆ ಉದ್ದದ ಬಿಂದಿ ಧರಿಸಿದರೆ ಫ್ಯಾಷನೇಬಲ್ ಆಗಿ ಕಾಣುತ್ತದೆ.
ಮೊಟ್ಟೆಯ ಆಕಾರದ ಮುಖ: ಈ ರೀತಿಯ ಮುಖದವರು ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಈ ರೀತಿಯ ಹಣೆಯವರಿಗೆ ಫ್ಯಾಷನೇಬಲ್ ಸ್ಟಿಕ್ಕರ್ ಹಾಕಿದರೆ ಆಕರ್ಷಕವಾಗಿ ಕಾಣುವುದು. ಲಿಪ್ ಸ್ಟಿಕ್ ಮತ್ತು ಬಿಂದಿ ಸ್ವಲ್ಪ ಮ್ಯಾಚ್ (ಹೊಂದಾಣಿಕೆ) ಆಗುವಂತೆ ಇದ್ದರೆ ತುಂಬಾನೆ ಆಕರ್ಷಕವಾಗಿ ಕಾಣುವುದು.
ದುಂಡು ಮುಖ: ದುಂಡು ಮುಖದವರಿಗೆ ಉದ್ದದ ಬಿಂದಿ ಆಕರ್ಷಕವಾಗಿ ಕಾಣುತ್ತದೆ. ಫ್ಯಾಷನೇಬಲ್ ಸ್ಟಿಕ್ಕರ್ ಕೊಳ್ಳುವಾಗ ಉದ್ದದ ಸ್ಟಿಕ್ಕರ್ ಕೊಳ್ಳುವುದು ಒಳ್ಳೆಯದು. ದುಂಡನೆಯ ಸ್ಟಿಕ್ಕರ್, ಅಗಲವಾದ ಸ್ಟಿಕ್ಕರ್, ತ್ರಿಭುಜಾಕಾರದ ಸ್ಟಿಕ್ಕರ್ ಬಳಸಬಾರದು.
ಚೌಕಾರದ ಮುಖ: ಈ ಮುಖದವರು ಮೊಟ್ಟೆಯಾಕಾರದ ಮುಖದವರಿಗೆ ಹೇಳಿದಂತಹ ಬಿಂದಿಗಳನ್ನು ಬಳಸಬಹುದು. ಈ ಮುಖದವರಿಗೆ ತ್ರಿಭುಜಾಕಾರದ ಬಿಂದಿ ಕೂಡ ಅಕರ್ಷಕವಾಗಿ ಕಾಣುತ್ತದೆ.
ತ್ರಿಭುಜಾಕಾರದ ಮುಖ: ಈ ಮುಖದವರಿಗೆ ಎಲ್ಲಾ ರೀತಿಯ ಬಿಂದಿ ಸ್ವಲ್ಪ ಹೊಂದಾಣಿಕೆಯಾಗುತ್ತದೆ. ಆದರೆ ಸೂರ್ಯನ ಉದಯಿಸುವಾಗ ಕಾಣಿಸುವ ಬಣ್ಣದ ಸ್ಟಿಕ್ಕರ್, ನಕ್ಷತ್ರ ಆಕಾರದ ಸ್ಟಿಕ್ಕರ್ ತುಂಬಾ ಚೆನ್ನಾಗಿ ಒಪ್ಪುತ್ತದೆ.



Click it and Unblock the Notifications
