Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಲೇಜು ಕನ್ಯೆಯರಿಗೆ ಫ್ಯಾಷನೇಬಲ್ ಕೇಶ ವಿನ್ಯಾಸ
ಮೇಕಪ್, ಡ್ರೆಸ್ಸಿಂಗ್ ಮತ್ತು ಕೂದಲಿನ ವಿನ್ಯಾಸ ಹೀಗೆ ಟ್ರೆಂಡ್‌ಗೆ ತಕ್ಕ ಹಾಗೆ ಕೋಲ ಕಟ್ಟುವುದು ಅಂದರೆ ಕಾಲೇಜು ಕನ್ಯೆಯರಿಗೆ ಇಷ್ಟ. ಆಕರ್ಷಕ ಕೂದಲಿನ ವಿನ್ಯಾಸ ಫ್ಯಾಷನೇಬಲ್ ಲುಕ್ ಕೊಡುತ್ತದೆ. ಆದ್ದರಿಂದ ಕಾಣುವಂತೆ ಹೊಸ ರೀತಿಯ ಕೂದಲಿನ ವಿನ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಸಿನಿಮಾದಲ್ಲಿ ಕಾಣುವ ಹೊಸ ಸ್ಟೈಲ್ ಅನ್ನು ಮಾಡಿಕೊಳ್ಳಲು ಇಷ್ಟಪಡುತ್ತಾರೆ.
ಆದರೆ, ಕಾಲೇಜಿಗೆ ಇಷ್ಟ ಬಂದ ರೀತಿ ಹೋಗಲು ಸಾಧ್ಯವಿಲ್ಲ. ಅದಕ್ಕೆ ಒಂದು ಶಿಸ್ತು ಅನ್ನುವುದು ಇರುತ್ತದೆ. ಆದ್ದರಿಂದ ಕಾಲೇಜಿಗೆ ಹೋಗುವಾಗ ಆಕರ್ಷಕವಾಗಿ ಮತ್ತು ಫ್ಯಾಷನೇಬಲ್ ಕಾಣ ಬಯಸುವವರು ಈ ಕೆಳಗಿನ ಕೇಶ ವಿನ್ಯಾಸ ಮಾಡಿದರೆ ನೋಡಲು ಶಿಸ್ತು ಮತ್ತು ಆಕರ್ಷಕ ಅನಿಸುವುದು.

ಜುಟ್ಟು: ಸ್ವಲ್ಪ ಎತ್ತಿ ಜುಟ್ಟು ಹಾಕಿದರೆ ಕೂದಲು ಒಪ್ಪವಾಗಿ, ಆಕರ್ಷಕವಾಗಿ ಕಾಣುತ್ತದೆ. ಈ ರೀತಿ ಜುಟ್ಟು ಹಾಕುವುದನ್ನು ಕೂಡ ಅನೇಕ ವಿನ್ಯಾಸದಲ್ಲಿ ಪ್ರಯತ್ನಿಸಬಹುದು. ತಲೆಯ ಮುಂಭಾಗದಲ್ಲಿ ಸ್ವಲ್ಪ ಕೂದಲು ತೆಗೆದು ಚಿಕ್ಕ ಟಕ್ ಕ್ಲಿಪ್ ಹಾಕಿ ನಂತರ ಜುಟ್ಟು ಕಟ್ಟಬಹುದು. ಗುಂಗುರು ಕೂದಲಿನವರಿಗೆ ಎಲ್ಲಾ ಕೂದಲನ್ನುಸೇರಿಸಿ ಎತ್ತಿ ಜುಟ್ಟು ಹಾಕಬಹುದು, ಇಲ್ಲದಿದ್ದರೆ ಸ್ವಲ್ಪ ಬದಿಗೆ ತಂದು ಕಟ್ಟಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು.
ಕೂದಲನ್ನು ಗಾಳಿಯಲ್ಲಿ ಹಾರಲು ಬಿಡುವುದು: ಸ್ಟ್ರೈಟನ್ ಮಾಡಿದ ಕೂದಲನ್ನು ಹಾಗೇ ಬಿಡುವುದೆಂದರೆ ಕಾಲೇಜು ಕನ್ಯೆಯರಿಂದ ಹಿಡಿದು ಆಫೀಸ್ ಮಹಿಳೆಯರವರೆಗೆ ತುಂಬಾ ಇಷ್ಟ. ಕಾಲೇಜು ಕನ್ಯೆಯರು ಚಿಕ್ಕ ಟಕ್ ಕ್ಲಿಪ್ ಗಳನ್ನು ತಲೆಗೆ ಸಿಕ್ಕಿಸಿ, ಕೂದಲನ್ನು ಹಾಗೇ ಹಾರಲು ಬಿಡಬಹುದು.
ಫ್ರೆಂಚ್ ಜಡೆ: ಕೂದಲಿಗೆ ಸ್ಟೆಪ್ ಜಡೆ ಅಥವಾ ಫ್ರೆಂಚ್ ಜಡೆ ಅಂದರೆ ಸ್ವಲ್ಪ ಕೂದಲನ್ನು ತೆಗೆದು ಜಡೆ ಹಾಕಿ ಅಲಂಕರಿಸಿದರೆ ಕೂದಲು ಆಕರ್ಷಕವಾಗಿ ಕಾಣುವುದು.
ರಫ್ ಲುಕ್: ಪ್ರತಿದಿನ ಕೂದಲಿನ ವಿನ್ಯಾಸ ಮಾಡುವುದು ಕಷ್ಟದ ಕೆಲಸ, ಕೆಲವೊಮ್ಮೆ ಹೆಚ್ಚು ಸಮಯವಿಲ್ಲದಿದ್ದಾಗ ಹಾಗೇ ಕಟ್ಟಿಕೊಂಡು ಹೋಗಿ, ಆ ರೀತಿ ಕಟ್ಟಿದರೆ ಕೂಡ ಈಗೀನ ಟ್ರೆಂಡ್ ಆಗಿರುವುದರಿಂದ ಅಕರ್ಷಕವಾಗಿ ಕಾಣುವುದು. ಈ ರೀತಿಯ ಕೂದಲಿನ ವಿನ್ಯಾಸ ಮಾಡುವಾಗ ಕೂದಲು ಒದ್ದೆ ಇದ್ದರೆ ಹಾಗೇ ಒಣಗಲು ಬಿಟ್ಟು ಹೋಗಬಹುದು. ಒಣಗಿದ ನಂತರ ಬೇಕಿದ್ದರೆ ರಬ್ಬರ್ ಬ್ಯಾಂಡ್‌ನಿಂದ ಸೇರಿಸಿ ಕಟ್ಟಿದರೆ ಆಕರ್ಷಕವಾಗಿ ಕಾಣುವುದು.



Click it and Unblock the Notifications
