Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗುಂಡಗಿರುವ ದುಂಡು ಚೆಲುವೆಗೆ ಸೂಕ್ತ ಈ ಜೀನ್ಸ್

ಸೀರೆ ಆದರೆ ಎಷ್ಟೆ ದಪ್ಪವಿರಲಿ, ಸಣ್ಣವಿರಲಿ ಒಪ್ಪವಾಗಿ ಉಟ್ಟರೆ ಲಕ್ಷಣವಾಗಿ ಕಾಣಿಸುವುದು. ಆದರೆ ಜೀನ್ಸ್ ಪ್ಯಾಂಟ್ ಧರಿಸುವುದಾದರೆ ಸೂಕ್ತವಾದ ಪ್ಯಾಂಟ್ ಧರಿಸದಿದ್ದರೆ ಚೆಂದವಾಗಿ ಕಾಣಿಸುವುದಿಲ್ಲ. ಆದ್ದರಿಂದ ದಪ್ಪವಿರುವ ದೇಹಕ್ಕೆ ಯಾವ ರೀತಿಯ ಪ್ಯಾಂಟ್ ಸೂಕ್ತವೆಂದು ತಿಳಿಯಲು ಮುಂದೆ ಓದಿ.
1.ಸ್ಕಿನ್ನಿ ಜೀನ್ಸ್ : ಈ ರೀತಿಯ ಜೀನ್ಸ್ ನಲ್ಲಿ ಸ್ವಲ್ಪ ದಪ್ಪಗಿನ ಮಹಿಳೆಯರು ಆಕರ್ಷಕವಾಗಿ ಕಾಣಿಸುತ್ತಾರೆ. ಒಳ್ಳೆಯ ಸ್ಟ್ರೆಚ್ ಇರುವುದರಿಂದ ಇದು ಧರಿಸಿದರೆ ಆರಾಮದಾಯಕ ಅನಿಸುವುದು.
2. ಸ್ಟಿಚ್ಚ್ಡ್ ಪಾಕೆಟ್ ಸ್ಟ್ರೈಟ್ ಲೆಗ್ ಜೀನ್ಸ್: ಈ ರೀತಿಯ ಜೀನ್ಸ್ ಮುಂಭಾಗದಲ್ಲಿ ಪಾಕೆಟ್ ಇರುತ್ತದೆ. ಇದು ಸ್ಟ್ರೈಟ್ ಕಟ್ ಜೀನ್ಸ್ ಆಗಿರುವುದರಿಂದ ಸ್ವಲ್ಪ ದಪ್ಪವಿರುವವರ ದೇಹದ ಆಕಾರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಈ ರೀತಿಯ ಪ್ಯಾಂಟಿನಲ್ಲಿ ಕಪ್ಪು ಮತ್ತು ನೀಲಿ ಬಣ್ಣದ ಪ್ಯಾಂಟ್ ಆಕರ್ಷಕವಾಗಿ ಕಾಣುವುದು.
3. ಉದ್ದದ ಸ್ಟ್ರೈಟ್ ಲೆಗ್ ಜೀನ್ಸ್: ಸ್ವಲ್ಪ ದಪ್ಪದ ಮಹಿಳೆಯರು ಈ ರೀತಿಯ ಪ್ಯಾಂಟ್ ಆಯ್ಕೆ ಮಾಡಿಕೊಂಡರೆ ಆಕರ್ಷಕವಾಗಿ ಕಾಣುವುದು. ಈ ರೀತಿಯ ಪ್ಯಾಂಟ್ ಧರಿಸಿದಾಗ ಹೀಲ್ಡ್ ಚಪ್ಪಲಿ ಹಾಕಿ ಪ್ಯಾಂಟ್ ಕೆಳಭಾಗವನ್ನು ಮಡಚದೆ ಬಿಡಬಹುದು, ಇಲ್ಲದೆ ಫ್ಲಾಟ್ ಚಪ್ಪಲಿ ಧರಿಸಿ ಪ್ಯಾಂಟ್ ಕೆಳಭಾಗ ಮಡಚಿದರೆ ಒಳ್ಳೆಯದು.
4. ಟ್ರೌಸರ್ ಜೀನ್ಸ್: ದೊಡ್ಡ ಶಾಪ್ ಗಳಲ್ಲಿ ಈ ರೀತಿಯ ಪ್ಯಾಂಟ್ ದೊರೆಯುತ್ತದೆ. ಇದನ್ನು ಧರಿಸಿದರೆ ತುಂಬಾ ಆರಾಮದಾಯಕವಾಗಿರುತ್ತದೆ. ಸೈಡ್ ನಲ್ಲಿ ಪಾಕೆಟ್ ಇರುವ ಈ ಪ್ಯಾಂಟಿಗೆ ಶರ್ಟ್ ಹಾಕಿದರೆ ಸೆಮಿ ಫಾರ್ಮಲ್ ಲುಕ್ ಸಿಗುತ್ತದೆ. ಆದ್ದರಿಂದ ಇದನ್ನು ಆಫೀಸಿಗೆ ಕೂಡ ಧರಿಸಬಹುದು.
5. ಟಮ್ಮಿ ಕಂಟ್ರೋಲ್ ಜೀನ್ಸ್: ಇದು ಸ್ಟ್ರೈಟ್ ಫಿಟ್ ಜೀನ್ಸ್ ಆಗಿದ್ದು ಈ ಪ್ಯಾಂಟ್ ಧರಿಸಿದರೆ ಸ್ವಲ್ಪ ತೆಳ್ಳಗೆ ಕಾಣಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.



Click it and Unblock the Notifications
