Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
2010ರಲ್ಲಿ ಇವರು 173 ರುಪಾಯಿ ಕೊಟ್ಟು ಖರೀದಿಸಿದ ಫೋಟೋಗ್ರಾಫ್ ಮಾರಾಟ ಮಾಡಿದ್ದು 43 ಕೋಟಿಗೆ: ಈ ಫೋಟೋಗ್ರಾಫ್ ಅಂತಿಂಥದ್ದಲ್ಲ
ವಜ್ರದ ನಿಖರ ಬೆಲೆ ತಿಳಿಯಬೇಕೆಂದರೆ ನೀವು ವಜ್ರವನ್ನು ವಜ್ರದ ವ್ಯಾಪಾರಿ ಬಳಿಯೇ ಕೊಟ್ಟು ಕೇಳಬೇಕು, ಅದೇ ಕಲ್ಲನ್ನು ಗಿರಾಣಿ ಅಂಗಡಿಯವನ ಬಳಿ ಹೋಗಿ ಕೇಳಿದರೆ ಅರೆ ಈ ಕಲ್ಲು ನೋಡುವುದಕ್ಕೆ ಚೆನ್ನಾಗಿದೆ ಎಂದು ಐನೂರಾ-ಸಾವಿರಾ ಕೊಡ್ತೀನಿ ಅನ್ನಬಹುದು, ಇಲ್ಲಾ ಈ ಕಲ್ಲಿನಿಂದ ನನಗೇನು ಪ್ರಯೋಜ ಬೇಡಪ್ಪಾ ಹೋಗು ಎಂದು ಕಳುಹಿಸಬಹುದು, ಏಕೆಂದರೆ ಅವನಿಗೆ ಆ ಕಲ್ಲು ವಜ್ರದ್ದು ಎಂಬುವುದು ತಿಳಿಯಲ್ಲ, ಹಾಗಾಗಿ ಯಾವ ವಸ್ತು ಯಾರ ಕೈಯಲ್ಲಿ ಇರುತ್ತದೆ ಎಂಬುವುದು ಎಷ್ಟು ಮುಖ್ಯವೋ, ಆ ವಸ್ತುವಿನ ಪ್ರಾಮುಖ್ಯತೆ ಗೊತ್ತಿರುವವನ ಕೈಯಲ್ಲಿದ್ದರೆ ಆ ವಸ್ತುವಿಗೆ ಬೆಲೆ, ಏಕೆ ಈ ಪೀಠಿಕೆ ಎಂದರೆ ಈ ಸ್ಟೋರಿ ಓದಿ....

ಅಮೆರಿಕದ ವ್ಯಕ್ತಿಯೊಬ್ಬರು 2010ರಲ್ಲಿ ಎರಡು ಡಾಲರ್ ಕೊಟ್ಟು ಒಂದು ಹಳೆಯ ಫೋಟೋಗ್ರಾಫ್ ಖರೀದಿ ಮಾಡಿದ್ದರು. ಅವರು ಆ ಫೋಟೋವನ್ನು ಸುಮ್ಮನೆ ಇಷ್ಟವಾಯ್ತು ಎಂದು ಖರೀದಿ ಮಾಡುತ್ತಾರೆ. ನಂತರ ಅದನ್ನು ಗಮನಿಸಿದಾಗ ಅವರಿಗೆ ಗೊತ್ತಾಗುತ್ತೆ ಆ ಫೋಟೋದಲ್ಲಿ ಇರುವುದು ಸಾಮಾನ್ಯ ವ್ಯಕ್ತಿಯಲ್ಲ, ಆ ಫೋಟೋದಲ್ಲಿ ಇರುವುದು ಅಮೆರಿಕದ ಪ್ರಸಿದ್ಧ ವ್ಯಕ್ತಿ, ಈ ಕಾರಣದಿಂದ ಆ ಫೋಟೋದ ಮೌಲ್ಯ ಗೊತ್ತಾಗುತ್ತೆ. ಮೇಲೆ ವಜ್ರದ ಕತೆಯಂತೆ ಆ ಫೋಟೋಗ್ರಾಫ್ ಮಾರಿದ ವ್ಯಾಪಾರಿಗೆ ಈ ಫೋಟೋದ ಮೌಲ್ಯ ಗೊತ್ತಿರಲಿಲ್ಲ, ಆದರೆ ಈ ವ್ಯಕ್ತಿಗೆ ಗೊತ್ತಾಯ್ತು, ಅವರು ಈಗ ಅದನ್ನು ಮಾರಿರುವ ರೇಟ್ ಕೇಳಿದರೆ ಅಬ್ಬಾ ಅನಿಸುತ್ತೆ.
ಬರಿ 173 ರುಪಾಯಿಗೆ ಖರೀದಿಸಿದ ಫೋಟೋಗ್ರಾಫ್ ಈಗ ಮಾರಾಟವಾಗಿರುವುದು 43 ಕೋಟಿಗೆ
@fact ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. 2010ರಲ್ಲಿ ಈ ವ್ಯಕ್ತಿ ಒಂದು ಶಾಪ್‌ಗೆ ಹೋಗುತ್ತಾರೆ, ಹಳೆಯ ವಸ್ತುಗಳನ್ನು ಮಾರುವಂಥ ಶಾಪ್ ಅದು, ಅಲ್ಲೊಂದು ಹಳೆಯ ಫೋಟೋಗ್ರಾಫ್ ನೆಗೆಟಿವ್ ಕಣ್ಣಿಗೆ ಬೀಳುತ್ತೆ, ಮೊದಲಿಗೆ ಇದನ್ನು ಖರೀದಿಸಬೇಕಾ ಅಂತ ಯೋಚಿಸುತ್ತಾರೆ, ನಂತರ ಎರಡು ಡಾಲರ್ ತಾನೆ ಅಂತ ಖರೀದಿ ಮಾಡುತ್ತಾರೆ.
ನಂತರ ಆ ಫೋಟೋದಲ್ಲಿರುವ ವ್ಯಕ್ತಿಯನ್ನು ಕೂಲಂಕಷವಾಗಿ ಗಮನಿಸಿದಾಗ ಗೊತ್ತಿರುವ ಮುಖದಂತೆ ಅನಿಸುತ್ತದೆ, ತುಂಬಾ ಜನ ಪರಿಣಿತರನ್ನು ಕಂಡು ಕನ್‌ಫರ್ಮ್ ಮಾಡಿಕೊಳ್ಳುತ್ತಾರೆ, ಅದು ವಿಲಿಯಮ್ ಹೆ ಬೊನ್ನಿ (William H. Bonney) ಫೋಟೋಗ್ರಾಫ್ ಆಗಿರುತ್ತದೆ,ಇವರು ಬಿಲ್ಲಿ ದಿ ಕಿಡ್ ಎಂದೇ ಪ್ರಸಿದ್ಧಿಯಾಗಿದ್ದರಯ, ಅಮೆರಿಕದ ಪ್ರಸಿದ್ಧ ಗನ್ ಫೈಟರ್, ಈತನ ಮೇಲೆ 9 ಕೊಲೆ ಕೇಸ್‌ಗಳಿವೆ. ಈತನ ಬಗ್ಗೆ ಹಲವು ಸಿರೀಸ್ ಕೂಡ ಇವೆ.
ಈತ 1859ಕ್ಕೆ ಜನಿಸಿದ 1881ರಲ್ಲಿ ಸಾವನ್ನಪ್ಪುತ್ತಾರೆ, ಈತ ಬದುಕಿರುವಾಗ ತುಂಬಾನೇ ನಟೋರಿಯಸ್ ಆಗಿ ಮೆರೆದ ವ್ಯಕ್ತಿ. ಈತನ ಹೆಸರು ಕೇಳಿದರೆ ಸಾಕು ಇಡಿ ಅಮೆರಿಕ ಗಡಗಡ ನಡಗುತ್ತಿತ್ತು. ಆ ವ್ಯಕ್ತಿ ಫೋಟೋ ಅದಾಗಿತ್ತು. ಹಾಗಾಗಿ ಫೋಟೋದ ಬೆಲೆ 5 ಮಿಲಿಯನ್ ಡಾಲರ್ ಆಗಿದೆ. ಹಾಗಾಗಿ ಕೆಲವು ರುಪಾಯಿಗಳಿಗೆ ಖರೀದಿಸಿ ಫೋಟೋಗ್ರಾಫ್‌ಗೆ ಕೋಟಿಗಳ ಮೌಲ್ಯ.
ಲಾಟರಿ ಹೊಡೆದ ಖರೀದಿಗಾರ
ಸ್ವಲ್ಪವೇ-ಸ್ವಲ್ಪ ಹಣ ಕೊಟ್ಟು ಖರೀದಿಸಿ ಫೋಟೋಗ್ರಾಫ್ ಈಗ ಕೋಟಿಗಳ ಮೌಲ್ಯ. ಈ ಒಂದು ಫೋಟೋಗ್ರಾಫ್ ಆ ವ್ಯಕ್ತಿಗೆ ಹಣದ ಹೊಳೆ ಹರಿಸಿದೆ.



Click it and Unblock the Notifications
