Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಇಂದಿಗೂ ಭಾರತದಲ್ಲಿ 1 ರೂಪಾಯಿಗೆ ಈ 20 ವಸ್ತು ಖರೀದಿಸಬಹುದು..! ಯಾವೆಲ್ಲಾ ಗೊತ್ತಾ..!?
ಕೆಲವು ವರ್ಷಗಳ ಹಿಂದೆ ಒಂದು ರೂಪಾಯಿಗೆ ಸಿಕ್ಕಾಪಟ್ಟೆ ಬೆಲೆ ಇತ್ತು. ಒಂದು ರೂಪಾಯಿಗೆ ಯಾವೆಲ್ಲಾ ವಸ್ತು ಸಿಗುತ್ತಿದ್ದವು ಅಂತ ಇಂದು ಊಹಿಸಲು ಸಹ ಸಾಧ್ಯವಿಲ್ಲ. 15ರಿಂದ 20 ವರ್ಷದ ಹಿಂದೆ 1 ರೂಪಾಯಿಗೆ ಮಾರುಕಟ್ಟೆಯಲ್ಲಿ ಹಲವು ವಸ್ತು ಲಭ್ಯವಿತ್ತು. ಆದರೆ ಇಂದು ಒಂದು ರೂಪಾಯಿಗೆ ಏನು ಸಿಗುತ್ತಿದೆ ಎಂಬುದೇ ಹಲವರಿಗೆ ಮರೆತು ಹೋಗಿದೆ.
ಏಕೆಂದರೆ ಒಂದು ರೂಪಾಯಿ ಹಿಡಿದು ನಾವೇನು ಖರೀದಿಸಲು ಸಾಧ್ಯವಿಲ್ಲ. ಚಿಲ್ಲರೆ ಸಮಸ್ಯೆಯಿಂದಾಗಿ ಮಾತ್ರ ಹಲವು ಅಂಗಡಿಗಳಲ್ಲಿ ಒಂದು ರೂಪಾಯಿ ಬದಲು ಚಾಕೋಲೆಟ್ ನೀಡುತ್ತಾರೆ. ಆದ್ರೆ ನಿಮಗೆ ಗೊತ್ತಾ ಇಂದಿಗೂ ಹಲವು ವಸ್ತುವನ್ನು 1 ರೂಪಾಯಿ ಮೂಲಕ ನಾವು ಖರೀದಿಸಬಹುದು. ಇಂದಿಗೂ ಈ 20 ವಸ್ತುಗಳು ಒಂದು ರೂಪಾಯಿಗೆ ಸಿಗುತ್ತಿವೆ.

ನೀವು ಇನ್ನೂ ಒಂದು ರೂಪಾಯಿಗೆ ಖರೀದಿಸಬಹುದಾದ ಇಪ್ಪತ್ತು ವಸ್ತುಗಳು ಇಲ್ಲಿವೆ...
1 ಚಾಕೋಲೆಟ್ ಮತ್ತು ಕ್ಯಾಂಡಿ
ಇಂದಿಗೂ ಅಂಗಡಿಗಳಲ್ಲಿ ಒಂದು ರೂಪಾಯಿಗೆ ಚಾಕೋಲೆಟ್ ಹಾಗೂ ಕ್ಯಾಂಡಿಗಳು ಲಭ್ಯವಿದೆ. ಆದರೆ 1 ರೂಪಾಯಿ ನಾಣ್ಯ ಕೊಟ್ಟು ಅದನ್ನು ಖರೀದಿಸುವವ ಸಂಖ್ಯೆ ಕಡಿಮೆಯಾಗಿದೆ. ಅಂಗಡಿಯಾತ ಚಿಲ್ಲರೆ ಇಲ್ಲದಿದ್ದರೆ ಅದನ್ನು ನೀಡುತ್ತಾನೆ ಅಷ್ಟೆ.
2. ಮೆಷಿನ್ ಕೋಲ್ಡ್ ನೀರು
ಮುಂಬೈ ಮಹಾನಗರಲ್ಲಿ ಬೇಸಿಗೆಯಲ್ಲಿ ಒಂದು ರೂಪಾಯಿಗೆ ಒಂದು ಗ್ಲಾಸ್ ನೀರು ಸಿಗುತ್ತದೆ ಅದು ತಣ್ಣಗಿನ ಐಸ್ ಹಾಕಿರುವ ನೀರಾಗಿದೆ. ಇನ್ನೊಂದು ರೂಪಾಯಿ ಹೆಚ್ಚುವರಿಯಾಗಿ ನೀಡಿದರೆ ನಿಂಬೆ ರಸ ಹಾಕಲಾಗುತ್ತದೆ.
3. ಎರಡು ಸಿಂಗಲ್ ಪೋಸ್ಟ್‌ಕಾರ್ಡ್‌ಗಳು
ಈ ದಿನಗಳಲ್ಲಿ ಅವು ಹಳೆಯದಾಗಿವೆ ಎಂದು ನೀವು ಭಾವಿಸಬಹುದು ಆದರೆ ಗ್ರಾಮೀಣ ಭಾರತದ ಕೆಲವು ಜನರು ಇನ್ನೂ ಅವುಗಳನ್ನು ಬಳಸುತ್ತಾರೆ. ಅಂಚೆ ಕಚೇರಿಯಲ್ಲಿ ಸಿಗುವ ಪೋಸ್ಟ್ ಕಾರ್ಡ್‌ಗಳು ಇಂದಿಗೂ ಒಂದು ರೂಪಾಯಿಗೆ ಸಿಗುತ್ತವೆ.
4. ಮ್ಯಾಚ್‌ಬಾಕ್ಸ್ /ಬೆಂಕಿ ಪೊಟ್ಟಣ
ನೀವು ಸಿಗರೇಟ್ ಹಚ್ಚಲು ಇಲ್ಲವೆ ದೇವರ ಕೋಣೆಯಲ್ಲಿ ಕರ್ಪೂರ ಬೆಳಗಲು ಬೆಂಕಿ ಪೊಟ್ಟಣವನ್ನೇ ಬಳಸಲಾಗುತ್ತದೆ. ಆದರೆ ಇತ್ತೀಚಿಗೆ ಯಾರು ಸಹ ಒಂದು ಪೊಟ್ಟಣ ಖರೀದಿಸುವುದಿಲ್ಲ. ಒಟ್ಟಿಗೆ ಒಂದು ಬಾಕ್ಸ್ ಖರೀದಿಸುತ್ತಾರೆ.
5. ಪ್ಲಾಸ್ಟಿಕ್ ಕಪ್
ಐಸ್ ಕ್ರೀಮ್ ಕಪ್‌ಗಳ ರೀತಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಟೀ-ಕಾಫಿ ಕಪ್‌ಗಳು ಒಂದು ರೂಪಾಯಿಗೆ ಸಿಗುತ್ತವೆ.
6. ಚುಟ್ಕಿ ಮತ್ತು ಪಾಸ್-ಪಾಸ್
ಮಾರುಕಟ್ಟೆಯಲ್ಲಿ ಕಾಣಸಿಗುವ ಹಲವಾರು ಮೌತ್ ಫ್ರಶ್ನರ್‌ಗಳು ಒಂದು ರೂಪಾಯಿಗೆ ಲಭ್ಯವಿದೆ.
7. ಚೂಯಿಂಗ್ ಗಮ್
ಅಂಗಡಿಗಳಲ್ಲಿ ಇಂದಿಗೂ ಒಂದು ರೂಪಾಯಿಗೆ ಚೂಯಿಂಗ್ ಗಮ್‌ಗಳು ಲಭ್ಯವಿದೆ. ಚಿಲ್ಲರೆಗಳ ಬದಲು ಈ ಚೂಯಿಂಗ್ ಗಮ್‌ಗಳ ನೀಡುವುದೇ ರೂಢಿಯಾಗಿದೆ.
8. ಶಾಂಪೂ
ಅಂಗಡಿಯಲ್ಲಿ ದೊಡ್ಡ ದೊಡ್ಡ ಶಾಂಪೂ ಬಾಟಲಿಗಳ ಜೊತೆ 1 ರೂಪಾಯಿಗೆ ಶಾಂಪೂ ಪ್ಯಾಕೆಟ್‌ಗಳು ಸಹ ಲಭ್ಯವಿದೆ. ಹಲವು ಕಂಪನಿಗಳು ಒಂದು ರೂಪಾಯಿ ಪ್ಯಾಕೆಟ್‌ನಲ್ಲೂ ಶಾಂಪೂ ಬಿಡುಗಡೆ ಮಾಡಿವೆ.
9. ಚಾಕ್‌ಪೀಸ್
ವೈಟ್ ಬೋರ್ಡ್ ಮೇಲೆ ಬರೆಯಲು ಬಳಸುವ ಚಾಕ್‌ಪೀಸ್ ಇಲ್ಲಿವೆ ಸ್ಲೇಟ್ ಮೇಲೆ ಬರೆಯಲು ಬಳಸುವ ಬಳಪ ಒಂದು ರೂಪಾಯಿಗೂ ಲಭ್ಯವಿದೆ. ಆದರೆ ಇವುಗಳ ದರವು ಈಗ ಹೆಚ್ಚಳಗಾಗಿದೆ.
10. ಸ್ಥಳೀಯ SMS
ಹೌದು, WhatsApp ನಂತಹ ಅಪ್ಲಿಕೇಶನ್‌ಗಳಿಂದಾಗಿ ಈ ಸೇವೆಯನ್ನು ಯಾರು ಬಳಸುತ್ತಿಲ್ಲ. ಆದರೆ ವಾಣಿಜ್ಯ ಬಳಕೆಯಲ್ಲಿ ಈ ಎಸ್‌ಎಂಎಸ್ ದರ 1 ರೂಪಾಯಿಯಾಗಿದೆ. ಇಲ್ಲವೆ ಅದಕ್ಕಿಂತಲೂ ಕಡಿಮೆಯಾಗಿದೆ.
11. ಎರೇಸರ್
ಪೆನ್ಸಿಲ್‌ನಲ್ಲಿ ಬರೆಯುವಾಗ ತಪ್ಪಾದರೆ ಅಳಿಸಲು ಬಳಸುವ ಎರೇಸರ್ ದರ ಒಂದು ರೂಪಾಯಿಯಾಗಿದೆ.
12. ಕ್ಯಾಂಡಲ್
ಹುಟ್ಟುಹಬ್ಬ, ಚರ್ಚ್‌ನಲ್ಲಿ ಬೆಳಗಲು, ಮನೆ ಬಳಕೆಗೆ ಇಂದಿಗೂ ಒಂದು ರೂಪಾಯಿಯ ಕ್ಯಾಂಡಲ್‌ಗಳು ಲಭ್ಯವಿದೆ.
13 ತೂಕ ಲೆಕ್ಕಹಾಕುವ ಮೆಷಿನ್
ನೀವು ಹಲವು ಅಂಗಡಿಗಳ ಮುಂದೆ ತೂಕ ಲೆಕ್ಕಹಾಕುವ ಮೆಷಿನ್ ನೋಡಿರಬಹುದು ಇವು ಒಂದು ರೂಪಾಯಿ ಇಲ್ಲವೆ 2 ರೂಪಾಯಿ ನಾಣ್ಯಗಳಿಂದ ಮಾತ್ರ ಕೆಲಸ ಮಾಡುತ್ತವೆ.
14. ಪ್ಯಾರಸಿಟಮಾಲ್
ನಿಮಗೆ ತಲೆನೋವು ಅಥವಾ ಜ್ವರವಿರಲಿ, ಈ ಮಾತ್ರೆಗಳಲ್ಲಿ ಯಾವುದಾದರೂ ಒಂದು ಮಾತ್ರೆಯು ನಿಮಗೆ ಹೆಚ್ಚು ಉತ್ತಮವಾಗುವಂತೆ ಮಾಡುತ್ತದೆ. ಮೆಡಿಕಲ್‌ನಲ್ಲಿ ಹಲವು ಪ್ಯಾರಸಿಟಮಾಲ್ ಮಾತ್ರೆಗಳ ಬೆಲೆ 1 ರೂಪಾಯಿಯಾಗಿದೆ.
15. ಪೆಪ್ಸಿ
ಚಿಕ್ಕ ವಯಸ್ಸಿನಲ್ಲಿ ಲಭ್ಯವಿದ್ದ ಗಟ್ಟಿಯಾಗಿದ್ದ ಪೆಪ್ಸಿ ಬೆಲೆ ಈಗಲೂ ಒಂದು ರೂಪಾಯಿ ಇದೆ. ಆದರೆ ಇದರ ಗಾತ್ರದಲ್ಲಿ ಮಾತ್ರ ಗಣನೀಯ ಇಳಿಕೆಯಾಗಿದೆ.
16. ಹೇರ್-ಪಿನ್‌ಗಳು
ಹೇರ್ ಪಿನ್‌ಗಳು ಮತ್ತು ಸೇಫ್ಟಿ ಪಿನ್‌ಗಳು ಈಗ ಗೊಂಚಲು ಗೊಂಚಲಾಗಿ ಬರುತ್ತವೆ. ಆದರೆ ಒಂದು ರೂಪಾಯಿಗೆ ಸಹ ಇವುಗಳ ಬೆಲೆ ನಿಗದಿಯಾಗಿರುತ್ತದೆ.
17. ಮೊಳೆ
ಇದರಲ್ಲಿ ಎಲ್ಲ ಮೊಳೆಗಳು ಒಂದು ರೂಪಾಯಿಗೆ ಸಿಗುವುದಿಲ್ಲ. ಕುಕ್ಕು ಮೊಳೆಗಳು ಸಾಮಾನ್ಯವಾಗಿ 1 ರೂಪಾಯಿಗೆ 5 ಕೊಡುತ್ತಿದ್ದರು. ಈಗಲೂ ಹಲವು ಹಾರ್ಡವೇರ್ ಅಂಗಡಿಯಲ್ಲಿ 1 ರೂಪಾಯಿಗೆ ಸಿಗುತ್ತವೆ.
18. ಸಬ್ಸಿಡಿ ಇಡ್ಲಿ
ತಮಿಳುನಾಡಿನಲ್ಲಿ ನೀಡಲಾಗುವ ಇಡ್ಲಿಯ ದರ 1 ರೂಪಾಯಿಯಾಗಿದೆ. ಸರ್ಕಾರದ ವತಿಯಿಂದ ಸಬ್ಸಿಡಿ ದರದಲ್ಲಿ ನೀಡಲಾಗುವ ಈ ಇಡ್ಲಿ ಒಂದು ರೂಪಾಯಿಗೆ ಲಭ್ಯವಿದೆ.
19 ಸುಲಭ ಶೌಚಾಲಯ
ಇನ್ನು ನಿಮಗೆ ನಗರಗಳಲ್ಲಿ ಕಂಡು ಬರುವ ಸುಲಭ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ 1 ರೂಪಾಯಿ ಪಡೆಯುತ್ತಾರೆ. ಆದರೆ ಕೆಲವು ಕಡೆಗಳಲ್ಲಿ ಅವರ ಇಷ್ಟದಂತೆ ದರ ನಿಗದಿ ಮಾಡಲಾಗಿರುತ್ತದೆ.
20. ಪ್ಲಾಸ್ಟಿಕ್ ಚೀಲ
ಅಂಗಡಿಯಲ್ಲಿ ನೀವೇನಾದರು ಖರೀದಿಸಿದರೆ ಅಂಗಡಿಯಾತ ನೀಡುವ ಪ್ಲಾಸ್ಟಿಕ್‌ಗೆ ಹೆಚ್ಚುವರಿಯಾಗಿ ಒಂದು ರೂಪಾಯಿ ಪಡೆಯುತ್ತಾನೆ. ಈ ಪ್ಲಾಸ್ಟಿಕ್‌ಗೆ ಒಂದು ರೂಪಾಯಿಯಾಗಿರುತ್ತದೆ.



Click it and Unblock the Notifications