Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
₹5.8 ಲಕ್ಷಕ್ಕೆ ಮಾರಾಟವಾದ 2 ವರ್ಷದ ಪುಟ್ಟ ಕಂದ ಬಿಡಿಸಿದ ಚಿತ್ರ
ನಾವು ಚಿಕ್ಕವರಿರುವಾಗ ಚಿತ್ರ ಬಿಡಿಸಲು ಹೇಳಿದರೆ ಪೇಪರ್ ಮೇಲೆ ಗೆರೆಗಳ ಎಳೆಯುತ್ತಿದ್ದೆವು. 2 ಅಥವಾ 3ನೇ ವರ್ಷದಲ್ಲಿ ನಮಗೆ ಪೆನ್ಸಿಲ್ ಹಿಡಿದುಕೊಳ್ಳಲು ಸಹ ಬರುತ್ತಿರಲಿಲ್ಲ. ಶಾಲೆಗೆ ಹೋದ ಬಳಿಕವಷ್ಟೇ ಪೆನ್ನು, ಪೆನ್ಸಿಲ್ ಬಳಸಿ ಬರೆಯಲು ಆರಂಭಿಸಿದ್ದೆವು. ಇನ್ನು ಚಿತ್ರಕಲೆ ಎಂಬುದು ದೂರದ ಮಾತು.
ಆದ್ರೆ ಇಲ್ಲೊಬ್ಬ 2 ವರ್ಷದ ಬಾಲಕ ತನ್ನ ಅದ್ಭುತ ಕಲಾಕೃತಿಗಳಿಂದಲೇ ಸುದ್ದಿಯಾಗಿದ್ದಾನೆ. ಜತೆಗೆ ಇಂಟರ್‌ನೆಟ್‌ನಲ್ಲಿ ಆತ ಈಗ ಸೆನ್ಷೇಷನ್ ಕ್ರಿಯೆಟ್ ಮಾಡಿದ್ದಾನೆ. ಆತನ ಒಂದೊಂದು ಕಲಾಕೃತಿಗಳು ಬರೊಬ್ಬರಿ 7 ಸಾವಿರ ಡಾಲರ್ ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿವೆ.

ಎರಡು ವರ್ಷದ ಈ ಜರ್ಮದ ದೇಶದ ಪುಟ್ಟ ಬಾಲಕ ಈಗ ವೈರಲ್ ಆಗಿರುವ ಕಲಾವಿದ. ಆತ ಸಣ್ಣ ಸಣ್ಣ ಡೈನೋಸಾರ್‌ಗಳು, ಕುದುರೆಗಳು, ಆನೆಗಳ ಬಿಡಿಸುತ್ತಾನೆ. ಅದಕ್ಕೆ ಬಣ್ಣವನ್ನೂ ಹಚ್ಚುತ್ತಾನೆ, ಇದೇ ಕಲಾಕೃತಿಗಳಿಗೆ ಜನ ಸಾವಿರಾರು ರೂಪಾಯಿ ನೀಡಿ ಖರೀದಿ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಯುವ ಕಲಾವಿದನ ಹೆಸರು ಲಾರೆಂಟ್ ಶ್ವಾರ್ಜ್, ಆತ ತನ್ನ ಇನ್ಸ್‌ಸ್ಟಾಗ್ರಾಮ್ ಪುಟವನ್ನು ಸಹ ಹೊಂದಿದ್ದಾನೆ, ಅದನ್ನು ಅವರ ತಾಯಿ ನಿರ್ವಹಿಸುತ್ತಾರೆ ಮತ್ತು ಅವರ ಕೆಲವು ಕಲಾಕೃತಿಗಳನ್ನು ಆ ಪೇಜ್‌ನಲ್ಲಿ ಪ್ರದರ್ಶಿಸುತ್ತಾಳೆ. ಅಂತಹ ಒಂದು ವೀಡಿಯೊ, "ಖಾಲಿ ಕ್ಯಾನ್ವಾಸ್‌ನಿಂದ ಆಕರ್ಷಕ ಕಲಾಕೃತಿಗೆ ಅದ್ಭುತವಾದ ಸ್ಪೂರ್ತಿದಾಯಕ ಬದಲಾವಣೆಯನ್ನು ಅನುಭವಿಸಿ" ಎಂಬ ಅಡಿ ಬರಹವನ್ನು ಹೊಂದಿದೆ.
2-ವರ್ಷದ ಕಲಾವಿದ ಸುಮಾರು $7,000 ಗೆ ತನ್ನ ಪೇಂಟಿಂಗ್‌ಗಳನ್ನು ಮಾರಾಟ ಮಾಡುತ್ತಾನೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಲಾರೆಂಟ್ ಅವರ ಕುಟುಂಬವು ಕಳೆದ ವರ್ಷ ಕುಟುಂಬ ರಜೆಯಲ್ಲಿದ್ದಾಗ ಆತ ಚಿತ್ರ ಬಿಡಿಸುವುದನ್ನು ಕಂಡು ಅದನ್ನು ಫೋಟೊ ತೆಗೆದು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲು ಆರಂಭಿಸಿದ್ದರು.
ಇದಾಗಿ ಕೆಲವೇ ದಿನಗಳಲ್ಲಿ ಈ ಚಿತ್ರಗಳಿಗೆ ಒಳ್ಳೆಯ ಮೆಚ್ಚುಗೆಯೂ ಬಂದಿತ್ತು. ಬರು ಬರುತ್ತಾ ಆತ ಕಲಾಕೃತಿಗಳಲ್ಲಿ ವಿಭಿನ್ನವಾಗಿ ಹೆಚ್ಚು ಆಕರ್ಷಕವಾಗಿ ಬರೆಯಲು ಆರಂಭಿಸಿದ. ಇದು ಜಗತ್ತಿನೆಲ್ಲೆಡೆ ಸುದ್ದಿಯಾಗಿತ್ತು. ಆತನ ಚಿತ್ರಗಳಿಗೆ ಬೇಡಿಕೆ ಬರಲು ಆರಂಭಗೊಂಡಿತ್ತು.
"ಕೆಲವೊಮ್ಮೆ ಆತ ಪೇಂಟಿಂಗ್ ಮಾಡಲು ಬಯಸುವುದಿಲ್ಲ ಮತ್ತು ಮೂರ್ನಾಲ್ಕು ವಾರಗಳವರೆಗೆ ಸ್ಟುಡಿಯೊಗೆ ಕಾಲಿಡುವುದಿಲ್ಲ ಆದರೆ ಇದ್ದಕ್ಕಿದ್ದಂತೆ ಒಮ್ಮೊಮ್ಮೆ ಚಿತ್ರ ಬಿಡಿಸಲು ಆರಂಭಿಸುತ್ತಾನೆ ಎಂದು ಆನ ತಾಯಿ ಹೇಳಿಕೊಂಡಿದ್ದಾರೆ.
ಆತನ ಚಿತ್ರಗಳು ಸುಮಾರು $7000 (ಅಂದಾಜು 5.8 ಲಕ್ಷ) ಗೆ ಮಾರಾಟವಾಗಿವೆ ಎಂದು ವರದಿಯಾಗಿದೆ. ಲಾರೆಂಟ್ ಅವರ ವರ್ಣಚಿತ್ರಗಳು ಮುಖ್ಯವಾಗಿ ಪ್ರಾಣಿಗಳನ್ನು ಆಧರಿಸಿವೆ. ಎರಡು ವರ್ಷದ ಮಗುವಿನ ಪ್ರತಿಭೆಯಿಂದ ಪ್ರಭಾವಿತರಾದ ಅವರ ತಾಯಿ ತನ್ನ ಮಗನ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು Instagram ಖಾತೆಯನ್ನು ತೆರೆದರು. @laurents.art ಹೆಸರಿನ ಖಾತೆಯು ಗಮನಾರ್ಹ ಜನಪ್ರಿಯತೆಯನ್ನು ಗಳಿಸಿತು, ಈಗ 30,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಆತನ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ.
ಇನ್ನು ಕೆಲವೊಂದು ಚಿತ್ರದಲ್ಲಿ ಯಾವ ವಸ್ತುಗಳೂ ಇರುವುದಿಲ್ಲವಂತೆ. ಆತ ಬಣ್ಣದ ಪೆನ್ಸಿಲ್‌ಗಳ ಬಳಸಿ ಗೆರೆ ಎಳೆದು ತನಗೆ ಇಷ್ಟಬಂದಂತೆ ಬಣ್ಣಗಳ ಹೊಡೆಯುತ್ತಾನೆ. ಅಲ್ಲಿ ನೋಡಲು ಬರಿ ಬಣ್ಣಗಳಷ್ಟೇ ಕಾಣಿಸುತ್ತವೆ. ಇದನ್ನು ಬಿಟ್ಟು ಬೇರೆ ಏನು ಇರುವುದಿಲ್ಲ. ಆದರೂ ಆ ಕಲಾಕೃತಿಗಳ ಮಾರಾಟ ಮಾಡಿ ಹಣ ಗಳಿಸಿದ್ದಾರೆ. ಅಂತಹ ಚಿತ್ರಗಳಿಗೂ ಬೇಡಿಕೆ ಇದೆಯಂತೆ.
ಜೊತೆಗೆ ಆತನ ಕಲಾಕೃತಿಗಳು ಏಪ್ರಿಲ್‌ನಲ್ಲಿ ನಡೆದ ಮ್ಯೂನಿಚ್‌ನ ಅತಿದೊಡ್ಡ ಕಲಾ ಮೇಳವಾದ ART MUC ನಲ್ಲಿ ಪ್ರದರ್ಶನಗೊಂಡಿವೆ. ಈ ವೇಳೆ ಸಹ ಆತನ ಕಲಾಕೃತಿಗಳ ಕಂಡು ಬೆರಗಾಗಿದ್ದಾರೆ. ಎರಡು ವರ್ಷದ ಪುಟ್ಟ ಬಾಲಕನ ಕೈಚಳಕದಲ್ಲಿ ಅರಳಿದ್ದ ಚಿತ್ರಗಳ ಕಂಡ ಕಲಾಪ್ರೇಮಿಗಳು ಅಚ್ಚರಿಗೊಂಡಿದ್ದಾರೆ.



Click it and Unblock the Notifications
