Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1941 vs 2025: ಈ ಎರಡೂ ಕ್ಯಾಲೆಂಡರ್ ಒಂದೇ! ಆಗ ಯುದ್ಧ, ಈಗಲೂ ಯುದ್ಧವೇ.. ಏನಿದು ನಿಗೂಢ?
ಭಯ ಸೃಷ್ಟಿಸಿದೆಯಾ 1941 ಕ್ಯಾಲೆಂಡರ್! 1941 ಮತ್ತು 2025 ಕ್ಯಾಲೆಂಡರ್ 100% ಒಂದೇ. ಮತ್ತೆ ಕರಾಳ ಇತಿಹಾಸ ರಿಪೀಟ್ ಆಗುತ್ತಾ? ಅಚ್ಚರಿ ಏನೆಂದರೆ, ಅಂದು ಏನಾಗಿತ್ತೋ ಇಂದು ಕೂಡ ಅದೇ ಪರಿಸ್ಥಿತಿ ಇದೆ. ಹೌದು, 2025ರಲ್ಲಿ ವಿಮಾನ ದುರಂತ, ಪಹಲ್ಗಾಮ್ ಭಯೋತ್ಪಾದಕ ದಾಳಿ, ಮ್ಯಾನ್ಮಾರ್‌ನಲ್ಲಿ ಭೂಕಂಪದಿಂದ ವಿನಾಶ, ಇರಾನ್, ಅಮೆರಿಕ ಮತ್ತು ಇಸ್ರೇಲ್ ಯುದ್ಧ! ಇತಿಹಾಸ ಪುನರಾವರ್ತನೆಯಾಗುತ್ತಿದೆಯೇ? ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ 84 ವರ್ಷಗಳಷ್ಟು ಹಳೆಯದಾದ 1941ರ ಕ್ಯಾಲೆಂಡರ್ ವೈರಲ್ ಆಗುತ್ತಿದೆ. ಜನರು ಇದನ್ನು 2025ಕ್ಕೆ ಹೋಲಿಸಿ (1941 vs 2025 calendar) ನೋಡುತ್ತಿದ್ದಾರೆ. ಈ ಎರಡು ವರ್ಷಗಳ ತಾರೀಖುಗಳು, ದಿನಗಳು ಮತ್ತು ಘಟನೆಗಳ ರಹಸ್ಯಮಯ ಹೋಲಿಕೆ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
1941ರಲ್ಲಿ ಜಗತ್ತು ಯುದ್ಧ, ವಿಪತ್ತು ಮತ್ತು ದುರಂತಗಳನ್ನು ಕಣ್ಣಾರೆ ಕಂಡಿತು. 2025ರ ಆರಂಭವು ಕೆಲವು ಭಯಾನಕ ಹೋಲಿಕೆಗಳೊಂದಿಗೆ ಪ್ರಾರಂಭವಾಗಿದೆ. 2025 ಆರಂಭವಾಗಿ ಇದೀಗ 6ನೇ ತಿಂಗಳು ನಡೆಯುತ್ತಿದೆ. ಈ ಆರು ತಿಂಗಳಲ್ಲಿ ದೊಡ್ಡ ದೊಡ್ಡ ದುರಂತಗಳು ನಡೆದು ಹೋಗಿವೆ. ಈ ಎಲ್ಲಾ ಘಟನೆಗಳನ್ನು ನೋಡಿದರೆ, ಒಂದು ಕ್ಷಣ ನಡುಕ ಉಂಟಾಗುತ್ತದೆ. ಈ ಅನಾಹುತಗಳಿಗೂ 1941ಕ್ಕೂ ಏನಾದರೂ ಸಂಬಂಧ ಇದ್ಯಾ? ಮತ್ತೆ ಕರಾಳ ಇತಿಹಾಸ ಮರುಕಳಿಸುತ್ತದೆಯೇ? ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

1941ರ ಕ್ಯಾಲೆಂಡರ್ ಏಕೆ ವೈರಲ್ ಆಗುತ್ತಿದೆ?
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 1941ರ ಕ್ಯಾಲೆಂಡರ್ (1941 calendar) ಭಾರೀ ವೈರಲ್ ಆಗುತ್ತಿದೆ. 1941 ಮತ್ತು 2025ರ ಕ್ಯಾಲೆಂಡರ್‌ಗಳು ಒಂದೇ ಆಗಿವೆ ಎಂದು ನೆಟ್ಟಿಗರು ಹೇಳಿದ್ದಾರೆ. ದಿನಾಂಕಗಳು ಮತ್ತು ದಿನಗಳು ಮಾತ್ರವಲ್ಲದೆ, 1941ರ ಘಟನೆಗಳು ಮತ್ತು 2025ರ ಘಟನೆಗಳು ಸಹ ಹೋಲಿಕೆಯಾಗುತ್ತಿವೆ. ಇದು ಕೇವಲ ಕಾಕತಾಳೀಯವೋ? ಅಥವಾ ವಿನಾಶದ ಮುನ್ಸೂಚನೆಯೋ? ಎಂಬುವುದನ್ನು ಕಾದು ನೋಡಬೇಕಿದೆ. ಆದರೆ, ಇದು ಜನರನ್ನು ಭಯಭೀತರನ್ನಾಗಿಸಿದೆ. 1941ರಲ್ಲಿ ನಡೆದ ಘಟನೆಗಳು ಈ ಕೆಳಗಿನಂತಿವೆ.
• ಎರಡನೇ ಮಹಾಯುದ್ಧವು ಉಗ್ರ ಸ್ವರೂಪವನ್ನು ತಳೆದಿತ್ತು.
• ಜಪಾನ್ ಪರ್ಲ್ ಹಾರ್ಬರ್ ಮೇಲೆ ದಾಳಿ ಮಾಡಿತು.
• 1941ರಲ್ಲಿ ಸಂಭವಿಸಿದ ವಿಪತ್ತುಗಳಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಮತ್ತು ಜಗತ್ತು ತಲ್ಲಣಗೊಂಡಿತು.
2025ರಲ್ಲಿಯೂ ನಡೆಯುತ್ತಿವೆ ಇಂತಹದ್ದೇ ಘಟನೆಗಳು
1941ರಲ್ಲಿ ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಿಂದ ಲಕ್ಷಾಂತರ ಜನರು ಸಾವನ್ನಪ್ಪಿದರು. 2025ರಲ್ಲಿಯೂ ಅದೇ ರೀತಿಯ ವಿನಾಶ ಸಂಭವಿಸುತ್ತದೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಅದಕ್ಕೆ ಕಾರಣವಾಗಿರುವ ಕೆಲವು ಘಟನೆಗಳನ್ನು ಈ ಇಲ್ಲಿವೆ ನೋಡಿ.
ಅಹಮದಾಬಾದ್ ವಿಮಾನ ದುರಂತ
1941ರಲ್ಲಿ ಫ್ರಾನ್ಸ್ ಬಳಿ ಉತ್ತರ ಅಟ್ಲಾಂಟಿಕ್‌ನಲ್ಲಿ ಜರ್ಮನ್ ಯುದ್ಧ ನೌಕೆ ಬಿಸ್ಮಾರ್ಕ್ ಮುಳುಗಡೆಯಾಯಿತು. ಈ ಘಟನೆಯಲ್ಲಿ 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಇದೇ ತಿಂಗಳು (ಜೂನ್ 12, 2025ರಂದು) ನಡೆದ ಅಹಮದಾಬಾದ್ ವಿಮಾನ ದುರಂತವನ್ನು ಈ ಘಟನೆಗೆ ಹೋಲಿಕೆ ಮಾಡಲಾಗುತ್ತಿದೆ.
ನೈಸರ್ಗಿಕ ವಿಕೋಪಗಳು
ಜನವರಿ 2025ರಿಂದ ಜೂನ್ 2025ರವರೆಗೆ ಅನೇಕ ದೇಶಗಳಲ್ಲಿ ಭೂಕಂಪಗಳು, ಪ್ರವಾಹಗಳು ಮತ್ತು ಹೀಟ್‌ವೇವ್‌ನಂತಹ ಪರಿಸ್ಥಿತಿಗಳು ಉಂಟಾಗಿವೆ. ಇಂತಹದ್ದೇ ಪರಿಸ್ಥಿತಿ 1941ರಲ್ಲಿಯೂ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ.
ಯುದ್ಧದ ಮುನ್ಸೂಚನೆ
ರಷ್ಯಾ ಮತ್ತು ಉಕ್ರೇನ್ ಸಂಘರ್ಷ, ಇಸ್ರೇಲ್ ಮತ್ತು ಗಾಜಾ ಹಿಂಸಾಚಾರ, ಚೀನಾ ಮತ್ತು ತೈವಾನ್ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಇವುಗಳನ್ನು ಜಪಾನ್ ಮತ್ತು ಪರ್ಲ್ ಹಾರ್ಬರ್ ಯುದ್ಧಕ್ಕೆ ಹೋಲಿಸಲಾಗುತ್ತಿದೆ.
ತಜ್ಞರು ಏನು ಹೇಳುತ್ತಾರೆ?
ತಜ್ಞರ ಪ್ರಕಾರ, 1941ರ ಕ್ಯಾಲೆಂಡರ್ ಮತ್ತು 2025ರ ಕ್ಯಾಲೆಂಡರ್‌ನ ಹೋಲಿಕೆಯು ಕೇವಲ ಕಾಕತಾಳೀಯ. ಇದನ್ನು ಪ್ರಳಯದ ಮುನ್ಸೂಚನೆ (ಭವಿಷ್ಯ) ಎಂದು ಕರೆಯಲಾಗುವುದಿಲ್ಲ. ಆದರೆ, ಕೆಲವರು ಇದನ್ನು ಜ್ಯೋತಿಷ್ಯದ ಸಂಕೇತ ಅಥವಾ ಚಿಹ್ನೆ ಎಂದು ಪರಿಗಣಿಸುತ್ತಿದ್ದಾರೆ.
ಒಟ್ಟಾರೆ, 1941 ಮತ್ತು 2025 ಇಸವಿಯ ಕ್ಯಾಲೆಂಡರ್‌ಗಳ ನಡುವಿನ ಹೋಲಿಕೆಗಳು ಆಶ್ಚರ್ಯಕರ. ಆದರೆ, ತಜ್ಞರು ಇದನ್ನು ಕೇವಲ ಕಾಕತಾಳೀಯ ಎಂದು ಹೇಳಿದ್ದಾರೆ. ಆದಾಗ್ಯೂ, ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳ ಬಗ್ಗೆ ಗಮನಹರಿಸುವುದು ಮುಖ್ಯ.



Click it and Unblock the Notifications
