Latest Updates
-
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ?
ಬೆಂಗಳೂರಿನಲ್ಲಿ ಇದ್ದರಾ 188 ವರ್ಷದ ಬಾಬಾ..? ಯಾರು ಈತ ಈತನ ನೈಜ ವಯಸ್ಸು ಎಷ್ಟು.?
ನಾವು ಭೂಮಿ ಮೇಲೆ ಅತೀ ಹೆಚ್ಚು ವರ್ಷ ಬದುಕಿದವರು ಯಾರು ಅಂದರೆ ಒಂದಿಷ್ಟು ಹೆಸರು ಹೇಳಬಹುದು. ಆದ್ರೆ ಈಗ 100 ವರ್ಷದ ಒಳಗೆ ಮನುಷ್ಯನ ಆಯುಸ್ಸು ಬಂದು ನಿಂತಿದೆ. ಆದ್ರೆ ಅಲ್ಲೊಬ್ಬರು ಇಲ್ಲೊಬ್ಬರು 120 ವರ್ಷ ಬದುಕಿದ್ದಾರೆ ಎಂದು ನಾವು ಆಗಾಗ ಸುದ್ದಿ ಕೇಳುತ್ತೇವೆ. ಆದ್ರೆ ಯಾರು ಕೂಡ 130 ಅಥವಾ 150 ವರ್ಷ ಬದುಕಿದನ್ನು ನಾವು ನೋಡಿಯೂ ಇಲ್ಲ, ಬಹುತೇಕ ಕೇಳಿಯೂ ಇಲ್ಲ.
ಆದ್ರೆ ನಾವು ಒಂದಿಷ್ಟು ಹಿರಿಯ ಮಂದಿಯನ್ನು ಜಪಾನ್, ಚೀನಾದಂತಹ ದೇಶದಲ್ಲಿ ನೋಡಬಹುದು ಅಲ್ಲಿನ ಜನರ ಜೀವಿತಾವಧಿ ಹೆಚ್ಚಾಗಿಯೆ ಇದ್ದು ಶತಾಯುಷಿಗಳನ್ನು ನೋಡಬಹುದು. ಆದ್ರೆ ಭಾರತದಲ್ಲಿಯೂ ಒಬ್ಬರು ಶತಾಯುಷಿ ಇದ್ದಾರೆ. ಅವರು ಬರೋಬ್ಬರಿ 188 ವರ್ಷ ಬದುಕಿದ್ದಾರೆ ಎಂದು ಹೇಳಲಾಗುತ್ತಿರುವ ಸುದ್ದಿಯೊಂದು ಭಾರೀ ವೈರಲ್ ಆಗಿದೆ.

ಅಚ್ಚರಿ ಎಂದರೆ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ ಎಂದು ವಿಡಿಯೋ ಕೂಡ ಹರಿದಾಡುತ್ತಿದ್ದು ನೋಡುಗರು ಅಚ್ಚರಿಯ ಜೊತೆಗೆ ಶಾಕ್‌ಗೂ ಒಳಗಾಗಿದ್ದಾರೆ. ಸಿಯಾರಾಮ್ ಬಾಬಾ ಎಂದು ಬಳಕೆದಾರರೊಬ್ಬರು ಅವರನ್ನು ಗುರುತು ಹಿಡಿದಿದ್ದು, ಬರೋಬ್ಬರಿ 188 ವರ್ಷವಂತೆ. ಆದ್ರೆ ಅವರ ನಿಜವಾದ ವಯಸ್ಸು 110 ವರ್ಷ ಎಂದು ತಿಳಿದುಬಂದಿದೆ.
ಹಾಗಾದ್ರೆ ಯಾರು ಈ ಸಿಯಾರಾಮ್ ಬಾಬಾ..? ಬೆಂಗಳೂರಿನಲ್ಲಿ ಎಲ್ಲಿದ್ದರು?
ಹಿಂದೂ ಮಹಾಕಾವ್ಯ ರಾಮಾಯಣದ ರಾಮನ ಅಪ್ರತಿಮ ಭಕ್ತರೆಂದು ಗುರುತಿಸಲಾದ ಈತ ಇಡೀ ದಿನ ರಾಮಾಯಣ ಓದಿಕೊಂಡು ಕಾಲ ಕಳೆಯುತ್ತಾರಂತೆ.
ಸಿಯಾರಾಮ್ ಬಾಬಾ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಭಟ್ಯಾನ್ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅವರು 10 ವರ್ಷಗಳ ಕಾಲ ನಿರಂತರವಾಗಿ ಒಂದೆ ಕಾಲಿನಲ್ಲಿ ನಿಂತು ತಪಸ್ಸು ಮಾಡಿದ ಕಾರಣಕ್ಕೆ ಈ ಹಿಂದೆ ಸುದ್ದಿಯಾಗಿದ್ದರು. ಆದರೆ ಈಗ ಅವರ ದೇಹ ಸೊರಗಿದ್ದು ಅವರೆಂದು ಗುರುತಿಸುವುದು ಸ್ವಲ್ಪ ಕಷ್ಟವಾಗಿತ್ತು.
ಅವರು ಈ ವಯಸ್ಸಿನಲ್ಲೂ ಕನ್ನಡಕದ ಸಹಾಯವಿಲ್ಲದೆಯೇ ದಿನದಲ್ಲಿ 21 ಗಂಟೆ ರಾಮಾಯಣವನ್ನು ಓದುತ್ತಾರಂತೆ. ಮೈ ಮೇಲೆ ತುಂಡು ಬಟ್ಟೆ ಧರಿಸುವ ಅವರು, ಸ್ವಲ್ಪವೇ ಸ್ವಲ್ಪ ಆಹಾರ ಸೇವಿಸುತ್ತಾರೆ. ಹಾಗೆ ಒಬ್ಬೊಬ್ಬರು ಒಂದೊಂದು ರೀತಿ ಅವರ ವಯಸ್ಸನ್ನು ಹೇಳುತ್ತಾರೆ, ಅವರ ಶಿಷ್ಯರ ಪ್ರಕಾರ ಅವರಿಗೆ 130 ವರ್ಷ ದಾಟಿದೆಯಂತೆ. ಆದರೆ ಈ ಮೊದಲು ಇವರಿಗೆ 188 ವರ್ಷ ಎಂದು ವಿಡಿಯೋ ಮಾಡಿ ಹರಿಬಿಡಲಾಗಿತ್ತು. ಹಾಗೆ ಬೆಂಗಳೂರಿನ ಹೊರವಲಯದಲ್ಲಿ ಅವರು ನೆಲೆಸಿದ್ದರು ಎಂದು ಹೇಳಲಾಗಿತ್ತು. ಅದರೆ ಅವರು ಎಲ್ಲಿದ್ದರು ಅವರ ನಿಖರವಾದ ವಯಸ್ಸು ಎಷ್ಟು ಎಂಬುದು ಯಾರಿಗೂ ತಿಳಿದುಬಂದಿಲ್ಲ.
ದಾಖಲಾಗಿರುವ ಹಿರಿಯ ವ್ಯಕ್ತಿ ಯಾರು?
ಫ್ರೆಂಚ್‌ನ ಜೀನ್ ಕಾಲ್ಮೆಂಟ್ ಎಂಬ ಮಹಿಳೆ ಬರೋಬ್ಬರಿ 122 ವರ್ಷ ಬದುಕಿದ್ದರು. ಇವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದರು. ಇವರಿಗಿಂತ ಹೆಚ್ಚಿನ ವರ್ಷ ಬದುಕಿರುವವರು ಇರಬಹುದು. ಆದರೆ ದಾಖಲೆಗಳಿಲ್ಲ. ಹಾಗೆ ಈ ಬಾಬಾ ಕೂಡ 110 ವರ್ಷ ವಯಸ್ಸಿನವರಾಗಿರಬಹುದು ಆದ್ರೆ ಅದಕ್ಕಿಂತ ಹೆಚ್ಚಾಗಿರುವುದು ಅನುಮಾನವೇ.



Click it and Unblock the Notifications











