Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ವಾರ ಒಟಿಟಿಯಲ್ಲಿ ಯಾವೆಲ್ಲಾ ಸಿನಿಮಾ ರಿಲೀಸ್ ಆಗ್ತಿದೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಒಟಿಟಿ ಫ್ಲಾಟ್ ಫಾರ್ಮ್ ಬಂದ್ಮೇಲೆ ಜನ ಥಿಯೇಟರ್ ಗೆ ಹೋಗೋದನ್ನೇ ಮರೆತು ಬಿಟ್ಟಿದ್ದಾರೆ. ಮನೆಯಲ್ಲಿ ಕೂತು ಅಮೇಜಾನ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಜಿಯೋ ಸಿನಿಮಾದಲ್ಲಿ ತಮ್ಮ ಫೇವರೇಟ್ ಶೋ ಗಳನ್ನು ಎಂಜಾಯ್ ಮಾಡ್ತಿದ್ದಾರೆ. ಈ ವಾರ ಕೂಡ ವಿವಿಧ ಭಾಷೆಯಲ್ಲಿ ಅದ್ಭುತವಾಗಿರೋ ಸಿನಿಮಾ ಹಾಗೂ ಸಿರೀಸ್ ಗಳು ಬಿಡುಗಡೆಯಾಗ್ತಿದ್ದು, ಯಾವ ದಿನ ಯಾವೆಲ್ಲಾ ಸಿನಿಮಾ ಹಾಗೂ ಸಿರೀಸ್ ಬಿಡುಗಡೆ ಆಗ್ತಿದೆ ಅನ್ನೋದನ್ನು ತಿಳಿಯೋಣ.
ಸ್ವೀಟ್ ಕಾರಮ್ ಕಾಫಿ(ಜುಲೈ 6, ಅಮೇಜಾನ್ ಪ್ರೈಮ್ ವಿಡಿಯೋ)
ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸ್ವೀಟ್ ಕಾರಮ್ ಕಾಫಿ ಸಿರೀಸ್ ಬಿಡುಗಡೆಯಾಗ್ತಿದೆ. ಇದು ಮೂರು ಜೆನರೇಷನ್ ನ ಮಹಿಳೆಯರ ಕಥೆಯನ್ನು ಒಳಗೊಂಡಿದ್ದು ಅವರ ಬದುಕಿನಲ್ಲಾಗುವ ಏಳು-ಬೀಳುಗಳನ್ನು ಒಳಗೊಂಡಿದೆ. ಜುಲೈ 6 ರಂದು ರಿಲೀಸ್ ಆಗ್ತಿದೆ.

ಬವಾಲ್ ( ಜುಲೈ 7, ಅಮೇಜಾನ್ ಪ್ರೈಮ್ ವಿಡಿಯೋ)
ಬವಾಲ್ ಎಂಬ ಹಿಂದಿ ಸಿನಿಮಾ ಈ ವಾರ ಅಮೇಜಾನ್ ಫ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗ್ತಿದೆ. ಇದು ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾವಾಗಿದೆ. ಇದು ಚಿಕ್ಕ ಪಟ್ಟಣದಲ್ಲಿರುವ ವರುಣ್ ಎಂಬ ಹುಡುಗ ಹಾಗೂ ಆತನ ಪತ್ನಿ ಜಾನ್ವಿಯ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಈ ಸಿನಿಮಾಕ್ಕೆ ನಿತಿನ್ ಎನ್ನುವವರ ನಿರ್ದೇಶನವಿದೆ. ನಟ ವರುಣ್ ಧವನ್ ಹಾಗೂ ಜಾಹ್ನವಿ ಕಪೂರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.
ಅಧುರಾ ( ಜುಲೈ 7, ಅಮೇಜಾನ್ ಪ್ರೈಮ್ ವಿಡಿಯೋ)
ಅಧುರಾ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಕ್ಕಿ ಬಿಡುಗಡೆಯಾಗಲಿದೆ. ಇದು ಹಾರರ್ ಹಾಗೂ ಥ್ರಿಲ್ಲರ್ ಸಿನಿಮಾವಾಗಿದ್ದು, ಭೂತ ಹಾಗೂ ಭವಿಷ್ಯತ್ ಕಾಲಕ್ಕೆ ಸಂಪರ್ಕ ಹೊಂದಿರುವಂತೆ ಕಥೆಯನ್ನು ಹೆಣೆಯಲಾಗಿದೆ.
ಬ್ಲೈಂಡ್ ( ಜುಲೈ 7, ಜಿಯೋ ಸಿನಿಮಾ)
ಬ್ಲೈಂಡ್ ಹಿಂದಿ ಸಿನಿಮಾ ಈ ವಾರ ಜಿಯೋ ಸಿನಿಮಾದಲ್ಲಿ ರಿಲೀಸ್ ಆಗ್ತಿದೆ. ಇದು ಕ್ರೈಂ ಥ್ರಿಲ್ಲರ್ ಕಥೆಯಾಗಿದ್ದು, ಸೋನಮ್ ಕಪೂರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಸೋನಮ್ ಈ ಸಿನಿಮಾದಲ್ಲಿ ಒರ್ವ ಕಣ್ಣು ಕಾಣದ ಪೊಲೀಸ್ ಆಫಿಸರ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಮಗುವಾದ ನಂತರ ರಿಲೀಸ್ ಆಗ್ತಿರೋ ಸೋನಮ್ ಅಭಿನಯದ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾ ಕೊರಿಯನ್ ಸಿನಿಮಾದ ರಿಮೇಕ್ ಆಗಿದೆ.
ತರ್ಲಾ ( ಜುಲೈ 7, ಜೀ 5)
ಖ್ಯಾತ ಅಡುಗೆ ಪುಸ್ತಕದ ಲೇಖಕರಾದ ತರ್ಲಾ ದಲಾಲ್ ಬಗ್ಗೆ ಕೇಳಿದ್ದೀರಾ? ಈ ವಾರ ತರ್ಲಾ ದಲಾಲ್ ಅವರ ಜೀವನ ಆಧರಿಸಿದ ಬಯೋಪಿಕ್ ಸಿನಿಮಾ ಜೀ 5 ಸಿನಿಮಾ ಮೂಲಕ ತೆರೆಗೆ ಬರ್ತಿದೆ. ಚಲನಚಿತ್ರವು ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ. ಮತ್ತು ಹೆಸರಾಂತ ಕುಕ್‌ಬುಕ್ ಲೇಖಕರು ಅಡುಗೆ ಉದ್ಯಮದ ಮೇಲೆ ಬೀರಿದ ಪ್ರಭಾವದ ಮೇಲೆ ಬೆಳಕು ಚೆಲ್ಲಲಿದೆ.
ಐಬಿ71 (ಜುಲೈ 7, ಡಿಸ್ನಿ ಹಾಟ್ ಸ್ಟಾರ್)
ಐಬಿ71 ಹಿಂದಿ ಸಿನಿಮಾ ಈ ವಾರ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗ್ತಿದೆ. ಈ ಸಿನಿಮಾ 1971 ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನದ ಯುದ್ಧವನ್ನು ಆಧಾರಿಸಿದ್ದು, ಭಾರತೀಯ ಸೇನೆ ಯುದ್ಧ ಗೆಲ್ಲೋದಕ್ಕೆ ಯಾವ ರೀತಿ ತಂತ್ರಗಳನ್ನು ಹೆಣೆಯಿತು ಅನ್ನೋದರ ಕುರಿತಾಗಿದೆ.
ರುದ್ರಾಪುರಂ
ಸಿನಿಮಾ : ತೆಲುಗು
ಒಟಿಟಿ : ಡಿಸ್ನಿ ಹಾಟ್ ಸ್ಟಾರ್
ದಿನ : ಜುಲೈ 6
ಟಕ್ಕರ್
ಸಿನಿಮಾ : ತೆಲುಗು
ಒಟಿಟಿ : ನೆಟ್ ಫ್ಲಿಕ್ಸ್
ದಿನ : ಜುಲೈ 7
ಒಟ್ಟಿನಲ್ಲಿ ಈ ವಾರ ಸಿನಿ ರಸಿಕರನ್ನು ಮನೋರಂಜಿಸೋದಕ್ಕಾಗಿ ಸಾಲು ಸಾಲು ಸಿನಿಮಾಗಳು ತೆರೆ ಮೇಲೆ ಅಪ್ಪಳಿಸ್ತಿದೆ. ಸಿನಿಮಾ ನೋಡುತ್ತಾ ಈ ವೀಕೆಂಡ್ ಎಂಜಾಯ್ ಮಾಡಿ.



Click it and Unblock the Notifications
