Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವರ್ಷದಲ್ಲಿ ₹12 ಸಾವಿರ ಹೆಚ್ಚುವರಿ ಖರ್ಚು ಮಾಡಿಸುತ್ತಿದೆ ಆನ್‌ಲೈನ್‌ನ ಶಾಪಿಂಗ್..! ಹೇಗೆ ಗೊತ್ತಾ?
ನಾವೀಗ ಎಲ್ಲವೂ ಕುಳಿತಲ್ಲೇ ಕೈಗೆ ಸಿಗುವಂತಹ ಆನ್‌ಲೈನ್ ಜಗತ್ತಿನಲ್ಲಿದ್ದೇವೆ. ಎಲ್ಲವೂ ಮೊಬೈಲ್ ಮೂಲಕ ಕೈ ಬೆರಳ ತುದಿಗೆ ಸಿಗುತ್ತದೆ. ಆನ್‌ಲೈನ್ ಮೂಲಕ ಈಗ ಎಲ್ಲವೂ ಮನೆ ಬಾಗಿಲಿಗೆ ಬಂದು ಬಿಡುತ್ತದೆ. ಇದಕ್ಕಾಗಿ ಅಂಗಡಿಗೆ ಹೋಗಬೇಕು, ಶಾಪಿಂಗ್ ಮಾಡಬೇಕು ಎನ್ನುವ ಚಿಂತೆ ಇಲ್ಲ. ನಿಮಗೆ ಸಮಯ ಇಲ್ಲ ಎಂದರೆ ಕುಳಿತಲ್ಲೇ ಮನೆಯೊಳಗಿಂದ ಆನ್‌ಲೈನ್ ಆರ್ಡರ್ ಮಾಡಬಹುದು.
ಮನೆಗೆ ಬೇಕಾದ ಪ್ರತಿಯೊಂದು ವಸ್ತುಗಳು ಕೂಡ ಇಂದು ಥಟ್ ಅಂತ ಸಿಗುತ್ತವೆ. ಕಾಯುವ ಅಗತ್ಯವೂ ಇಲ್ಲ. ಈಗ ಆನ್‌ಲೈನ್‌ನಲ್ಲಿ ಉತ್ಪನ್ನಗಳ ಮಾರಾಟ ಮಾಡುವ ಬ್ಲಿಂಕ್ ಇಟ್, Swiggy, Zomato ಮತ್ತು Magic Pin, ಬಿಗ್ ಬಾಸ್ಕೆಟ್, ಜೆಪ್ಟೋ ಹೀಗೆ ಹತ್ತಾರು ಆಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳಿಂದು ನಮ್ಮ ನಡುವೆ ಇವೆ. ಇವು ವಾರ್ಷಿಕವಾಗಿ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತವೆ.

ಹಾಗೆ ಈ ಕಂಪನಿಗಳಿಂದು ಸಾವಿರಾರು ಉದ್ಯೋಗ ಸೃಷ್ಟಿಗೂ ಕಾರಣವಾಗಿವೆ. ಆದ್ರೆ ನೀವು ಸಹ ಈ ಆಪ್ ಮೂಲಕ ಗೃಹಪಯೋಗಿ ವಸ್ತುಗಳನ್ನು ಆರ್ಡರ್ ಮಾಡುವ ಅಭ್ಯಾಸ ಹೊಂದಿದ್ದೀರಿ ಎಂದಾದರೆ ನಿಮಗೆ ಒಂದು ವರ್ಷಕ್ಕೆ 12 ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಮಾಡಿಸುತ್ತವೆ ಎಂದು ವರದಿಯೊಂದು ತಿಳಿಸಿದೆ.
ಹೆಚ್ಚುವರಿ ಖರ್ಚು ಎಂದರೆ ಈ ಆಪ್ ಸಹಾಯದಿಂದ ನೀವು ಖರೀದಿಸುತ್ತಿರುವ ವಸ್ತುಗಳಿಂದಲ್ಲ ಬದಲಿಗೆ ಈ ಆಪ್ ಬಳಸುತ್ತಿರುವುದೇ ನಿಮಗೆ ಹೆಚ್ಚುವರಿ ಖರ್ಚಾಗಿ ಪರಿಣಮಿಸಲಿದೆಯಂತೆ.
ಆಗಸ್ಟ್ 21, 2024 ರಂತೆ ರೆಸ್ಟೋರೆಂಟ್‌ಗಳ ಸ್ವಂತ ಡೆಲಿವರಿ ಚಾನಲ್‌ಗಳ ಜೊತೆಗೆ Swiggy, Zomato ಮತ್ತು Magic Pin ನಲ್ಲಿನ 50 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳ ಬೆಲೆ ಡೇಟಾವನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಇದು ಮೂಲ ಬೆಲೆ, ವಿತರಣಾ ಶುಲ್ಕಗಳು, GST, ಪ್ಯಾಕೇಜಿಂಗ್ ಶುಲ್ಕಗಳು ಮತ್ತು ಹೆಚ್ಚುವರಿ ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಿದ್ದು, ವಾರ್ಷಿಕವಾಗಿ ನಿಮಗೆ 12 ಸಾವಿರ ರೂಪಾಯಿ ಹೆಚ್ಚುವರಿ ಪಾವತಿಗೆ ದಾರಿಯಾಗುತ್ತಿದೆ.
ನೇರ ರೆಸ್ಟೋರೆಂಟ್ ಆರ್ಡರ್ ಮಾಡುವ ಮೂಲಕ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು ಬಳಸುವಾಗ ಗ್ರಾಹಕರು ಸರಾಸರಿ ಶೇ. 11 ರಷ್ಟು ಪ್ರೀಮಿಯಂ ದರ ಪಾವತಿಸುತ್ತಾರೆ ಎಂದು ವರದಿಯು ಕಂಡುಹಿಡಿದಿದೆ. ಇದರರ್ಥ ರೆಸ್ಟಾರೆಂಟ್‌ಗಳ ಚಾನೆಲ್‌ಗಳಲ್ಲಿ ಇರಿಸಲಾದ ಡೆಲಿವರಿ ಆರ್ಡರ್‌ಗಳಿಗೆ ಹೋಲಿಸಿದರೆ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳು ಪ್ರತಿ ಖಾದ್ಯಕ್ಕೆ ಸರಾಸರಿ ₹ 46 ಪ್ರೀಮಿಯಂ ದರವನ್ನು ಸೇರಿಸಲಾಗುತ್ತದೆ.
ಅಚ್ಚರಿ ಏನೆಂದರೆ ಯಾವುದೇ ಆಪ್‌ಗಳು ನಿಮಗೆ ಯಾವುದಕ್ಕೆ ಎಷ್ಟು ಹಣ ಪಾವತಿಸುತ್ತೀರಿ ಎಂಬುದನ್ನು ಸ್ವವಿರವಾಗಿ ನೀಡುವುದಿಲ್ಲ ಬದಲಿಗೆ ಇದೆಲ್ಲವು ಗೌಪ್ಯ ದರವಾಗಿದೆ. ಇದರಲ್ಲಿ ಮೆಟ್ರೋ ನಗರದಲ್ಲಿ ವಾಸವಿರುವ ಮಂದಿ ಹೆಚ್ಚಾಗಿ ಖರ್ಚು ಮಾಡುತ್ತಾರೆ. ಸರಾಸರಿ ಖರ್ಚು ಲೆಕ್ಕ ಮಾಡಿದರೆ ಒಬ್ಬರು 12 ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಮಾಡುತ್ತಿದ್ದಾರೆ.
ನೀವು ಆಪ್‌ನಲ್ಲಿ ಬುಕಿಂಗ್ ಮಾಡಿದಾಗಿನಿಂದ ನಿಮ್ಮ ಖರ್ಚು ಸೇರಿಕೊಳ್ಳುತ್ತದೆ. ಇಲ್ಲಿಂದ ಆರಂಭಗೊಂಡು ಪ್ಯಾಕೇಜಿಂಗ್‌ಗೆ 2 ರೂಪಾಯಿ ವ್ಯಯವಾಗುತ್ತದೆ. ಇದಕ್ಕಾಗಿಯೇ ಕಂಪನಿಗಳು ವಾರ್ಷಿಕವಾಗಿ 400 ಕೋಟಿ ರೂಪಾಯಿ ವ್ಯಯಿಸುತ್ತವೆ. ಹಾಗೆ ಕೆಲವೊಂದು ಬಾರಿ ಕಂಪನಿಗಳು, ಟೋಕನ್, ಕೂಪನ್‌ಗಳ ನೀಡುತ್ತವೆ, ಇಲ್ಲಿಯೂ ಖರ್ಚು ಗ್ರಾಹಕನ ಕೈಯಿಂದಲೇ ಆಗಿರುತ್ತದೆ. ಹಾಗೆ ಕಂಪನಿ ಕಡೆಯಿಂದ ಹೆಚ್ಚು ಬಾರದ ರೀತಿಯಲ್ಲಿ ಈ ಯೋಚನೆ ರೂಪಿಸಲಾಗಿರುತ್ತದೆ.
ಮತ್ತೆ ಕೆಲವು ಪ್ಲಾಟ್‌ಫಾರ್ಮ್‌ಗಳು ಪ್ರೀಮಿಯಂ ಚಂದಾದಾರಿಕೆಯ ಹೆಸರಿಲ್ಲಿಯೂ ಹೆಚ್ಚುವರಿ ಹಣ ಸಂಗ್ರಹಿಸುತ್ತವೆ. ಪ್ರೀಮಿಯಂ ಚಂದಾದಾರರಿಗೆ ಹಲವು ರೀತಿಯ ಆಫರ್ ನೀಡುತ್ತವೆ, ಇದೆಲ್ಲದಕ್ಕೂ ಆತನ ಕೈಯಿಂದಲೇ ಪಾವತಿಯೂ ಆಗಿರುತ್ತದೆ.



Click it and Unblock the Notifications
