Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಈ ಜೀವಿಯ 1 ಲೀಟರ್ ರಕ್ತಕ್ಕೆ ಬರೋಬ್ಬರಿ ₹12 ಲಕ್ಷ..! ಯಾವ ಜೀವಿ ಗೊತ್ತಾ?
ಈ ಭೂಮಿ ಮೇಲೆ ಎಷ್ಟೊಂದು ಜೀವಿಗಳಿವೆ ಹಾಗೆ ಅದೆಷ್ಟೋ ಕೋಟಿ ಜೀವ ವೈವಿಧ್ಯತೆಗೆ ಸಾಕ್ಷಿಗಳಾಗಿವೆ. ಅದರಲ್ಲಿ ಒಂದೊಂದು ಜೀವಿಗಳು ಒಂದೊಂದು ರೀತಿ ಪರಿಸರ ವ್ಯವಸ್ಥೆಗೆ ತಮ್ಮದೆ ಕೊಡುಗೆ ನೀಡುತ್ತವೆ. ಇನ್ನು ಈ ಭೂಮಿ ಮೇಲಿರುವ ಅತ್ಯಂತ ಪ್ರಾಚೀನ ಅಥವಾ ಹಳೆಯ ಪ್ರಾಣಿ ಯಾವುದು ಎಂದರೆ ನೀವು ಉತ್ತರಿಸುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಇದಕ್ಕೆ ಉತ್ತರ ಹಾರ್ಸ್‌ಶೂ ಏಡಿ.
ಕುದುರೆ ಕಾಲಿನ ಏಡಿ ಡೂನೋಸಾರ್‌ಗಿಂತಲೂ ಹಳೆಯದಾದ ಪ್ರಾಣಿ ಎಂದು ಅಂದಾಜಿಸಲಾಗಿದೆ. ಜೀವಿಗಳು ಭೂಮಿ ಮೇಲೆ ಕಾಲಿಡುವ ಸಮಯದಲ್ಲಿ ಈ ಕುದುರೆ ಕಾಲಿನ ಏಡಿ ವಿಕಸನ ಹಂತ ತಲುಪಿತ್ತು. ನೀರಿನಿಂದ ಜೀವಿಗಳ ಹುಟ್ಟು ಆರಂಭವಾದಾಗಿನಿಂದ ಇವು ನೀರಿನಲ್ಲಿ ಜೀವಿಸಿವೆ. ಇಂದಿಗೂ ಈ ಜೀವಿಗಳು ಬದುಕಿವೆ.

ಹಾಗಾದ್ರೆ ನಮ್ಮ ಭೂಮಿ ಮೇಲೆ ಇರುವ ಅತ್ಯಂತ ಹಳೆಯ ಜೀವಿ ಎಂದರೆ ಈ ಹಾರ್ಸ್ ಶೂ ಏಡಿಗಳಾಗಿವೆ. ಆಧರೆ ಈ ಜೀವಿಯ ಬಗ್ಗೆ ಜನರಿಗೆ ಅರಿವು ಬಹಳ ಕಡಿಮೆ. ಈ ಜಗತ್ತಿನಲ್ಲಿ ಅತ್ಯಂತ ದುಬಾರಿ ರಕ್ತವನ್ನು ಹೊಂದಿರುವ ಏಕೈಕ ಜೀವಿ ಅಂದರೆ ಅದು ಕುದುರೆ ಕಾಲಿನ ಏಡಿ. ನಿಮಗೆ ಇದನ್ನು ಕೇಳಿ ಅಚ್ಚರಿಯಾಗಬಹುದು. ಆದರೆ ಈ ಹಾರ್ಸ್ ಶೂ ಏಡಿಯ ರಕ್ತ ಬಹಳ ದುಬಾರಿ. ಪ್ರಪಂಚದಲ್ಲೇ ಅತ್ಯಂತ ದುಬಾರಿ ರಕ್ತ ಹಿಂದಿರುವ ಜೀವಿ ಎಂಬ ಖ್ಯಾತಿ ಪಡೆದುಕೊಂಡಿದೆ.
ಈ ಜೀವಿಯ ರಕ್ತವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅತೀ ಹೆಚ್ಚಾಗಿ ಬಳಸಲಾಗುತ್ತದೆ. ನೂರಾರು ಔಷಧಿಗಳ ತಯಾರಿಕೆ ಸೇರಿ ಪ್ರಯೋಗಾಲಯದಲ್ಲಿ ಈ ರಕ್ತ ಬಳಕೆಯಾಗುತ್ತದೆ. ಹೀಗಾಗಿ ಈ ಜೀವಿಯ ರಕ್ತಕ್ಕೆ ಚಿನ್ನಕ್ಕಿಂತಲೂ ಮೌಲ್ಯವಿದೆ. ಹಾರ್ಸ್‌ಶೂ ಏಡಿ 450 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಜೀವಿಯಾಗಿದ್ದು, ಇದು ಡೈನೋಸಾರ್‌ಗಳಿಗಿಂತ ಹಳೆಯದು ಎಂದು ಹೇಳಲಾಗುತ್ತದೆ. ಈ ಏಡಿಗಳ ರಕ್ತವು ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿದೆ. ಅವರ ದೇಹದಲ್ಲಿ ಚಿಪ್ಪುಗಳು ಮತ್ತು ಬಾಲವಿರುತ್ತದೆ.
ನೋಡಲು ಭಯ ಹುಟ್ಟಿಸುವ ಈ ಜೀವಿಗಳ ರಕ್ತ ಕೆಂಪು ಬಣ್ಣದಲ್ಲಿ ಇರುವುದಿಲ್ಲ ಬದಲಿಗೆ ಇದರ ರಕ್ತವು ನೀಲಿ ಬಣ್ಣದಲ್ಲಿರುತ್ತದೆ. ಇತರೆ ಜೀವಿಗಳಲ್ಲಿ ಇರುವಂತೆ ಇವುಗಳ ರಕ್ತದಲ್ಲಿ ಹಿಮೋಗ್ಲೊಬಿನ್ ಇರುವುದಿಲ್ಲ, ಬದಲಿಗೆ ಹಿಮೋಸಯಾನಿನ್ ಎಂಬ ಮಿಶ್ರಣ ನೋಡಬಹುದು. ಇದರಲ್ಲಿ ತಾಮ್ರದ ಅಂಶವಿರುತ್ತದೆ. ಹೀಗಾಗಿ ಇವುಗಳ ರಕ್ತವನ್ನು ನೀಲಿ ಚಿನ್ನವೆಂದು ಕರೆಯಲಾಗಿದೆ.
1ಲೀಟರ್ ರಕ್ತಕ್ಕೆ 12 ಲಕ್ಷ ರೂ.
ವರದಿಗಳ ಪ್ರಕಾರ 1 ಲೀಟರ್ ರಕ್ತದ ಬೆಲೆ 15 ಸಾವಿರ ಡಾಲರ್ ಅಂದರೆ ಸುಮಾರು 12 ಲಕ್ಷ ರೂ. ಆಗಲಿದೆ. ಈ ರಕ್ತದ ಔಷಧೀಯ ಮೌಲ್ಯವು ತುಂಬಾ ಹೆಚ್ಚಾಗಿದೆ. ಈ ಜೀವಿಯ ರಕ್ತವು ಲಿಮುಲಸ್ ಅಮೆಬೋಸೈಟ್ ಲೈಸೇಟ್ (LAL) ಎಂಬ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದನ್ನು ಔಷಧ ಮತ್ತು ವೈದ್ಯಕೀಯ ಉಪಕರಣ ತಯಾರಕರು ತಮ್ಮ ಉತ್ಪನ್ನಗಳನ್ನು ಪರೀಕ್ಷಿಸಲು ಬಳಸುತ್ತಾರೆ. ಪ್ರಯೋಗಾಲಯದಲ್ಲಿ ಈ ರಕ್ತ ಎಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಅಂದರೆ ಈ ರಕ್ತವಿಲ್ಲದೆ ಯಾವುದೇ ಪ್ರಯೋಗ ಅಂತ್ಯವಾಗುವುದಿಲ್ಲ.
ತಮ್ಮ ಉತ್ಪನ್ನಗಳಲ್ಲಿ ಎಂಡೋಟಾಕ್ಸಿನ್ ಇರುವಿಕೆಯನ್ನು ಪರೀಕ್ಷಿಸಲು ಅವರು ಈ ರಕ್ತವನ್ನು ಬಳಸುತ್ತಾರೆ. ಈ ಜೀವಿಗಳು ಅಮೆರಿಕದ ಅಟ್ಲಾಂಟಿಕ್ ಸಾಗರದ ತೀರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವೈದ್ಯಕೀಯ ಕ್ಷೇತ್ರ ಸುಮಾರು 6 ಲಕ್ಷ ಏಡಿಗಳನ್ನು ಅವುಗಳ ರಕ್ತಕ್ಕಾಗಿ ಪ್ರತಿ ವರ್ಷ ಬಳಸಿಕೊಳ್ಳುತ್ತದೆ. ಇದರಲ್ಲ ಶೇ.30ರಷ್ಟು ಬದುಕುಳಿಯಬಹುದು ಎಂದು ಅಂದಾಜಿಸಲಾಗಿದೆ. 2016ರಲ್ಲಿ ಈ ಜೀವಿಯನ್ನು ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಗೆ ಸೇರಿಸಲಾಗಿದೆ. ಇವುಗಳ ಸಾಗಾಟ, ಸಾಕಾಣಿಕೆ ಕಾನೂನು ಬಾಹಿರವಾಗಿದೆ. ಭಾರತದಲ್ಲಿ ಕರಾವಳಿ ಭಾಗದಲ್ಲಿಯೂ ಇವು ಕಾಣಲು ಸಿಗುತ್ತವೆ.



Click it and Unblock the Notifications