Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
239 ಪ್ರಯಾಣಿಕರ ವಿಮಾನ ನಾಪತ್ತೆಯಾಗಿ ಇಂದಿಗೆ 10 ವರ್ಷ..!!ಹತ್ತಾರು ಪ್ರಶ್ನೆಗೆ ಉತ್ತರವೇ ಸಿಕ್ಕಿಲ್ಲ.!
ಜಗತ್ತಿನಲ್ಲಿ ವಿಮಾನಯಾನ ಸೇವೆ ನೀಡುತ್ತಿರುವ ಅದೆಷ್ಟೋ ಕಂಪನಿಗಳು ಒಂದಲ್ಲಾ ಒಂದು ದುರ್ಘಟನೆ ಎದುರಿಸಿರುತ್ತವೆ. ಅದರಲ್ಲೂ ಬೋಯಿಂಗ್ 777 ಸರಣಿ ವಿಮಾನಗಳ ತುಸು ಹೆಚ್ಚಿನ ಅಪಾಯ ಹೊಂದಿದ್ದವು ಎಂದೇ ಪರಿಗಣಿಸಲಾಗಿದೆ. ಇಂದಿನಿಂದ ಸರಿಯಾಗಿ 10 ವರ್ಷಗಳ ಹಿಂದೆ ಕಾಣೆಯಾಗಿ ಸಮುದ್ರದಲ್ಲಿ ಪತ್ತೆಯಾಗಿದ್ದ ಮಲೇಷಿಯಾದ 'ಮಲೇಷ್ಯಾ ಏರ್‌ಲೈನ್ಸ್ ಫ್ಲೈಟ್ 370' ಇಂದಿಗೂ ನಿಗೂಢತೆ ತನ್ನಲ್ಲಿಟ್ಟುಕೊಂಡಿದೆ.
239 ಪ್ರಯಾಣಿಕರ ತುಂಬಿದ್ದ ಬೋಯಿಂಗ್ ಸಂಸ್ಥೆಯ ವಿಮಾನ ನಾಪತ್ತೆಯಾಗಿ ಯಾರೊಬ್ಬರ ಸುಳಿವು ಪತ್ತೆಯಾಗಿರಲಿಲ್ಲ. ಇದು ವಿಮಾನಯಾವ ಕ್ಷೇತ್ರದ ಅತ್ಯಂತ ನಿಗೂಢ ಮತ್ತು ಕಹಿ ಘಟನೆಗಳಲ್ಲಿ ಒಂದಾಗಿದೆ. ಈ ಘಟನೆ ನಡೆದು ಇಂದಿಗೆ 10 ವರ್ಷ ತುಂಬಿದರು ತನಿಖೆ ಇನ್ನು ಅಂತಿಮ ಘಟ್ಟ ತಲುಪಿಯೇ ಇಲ್ಲ. ಹಾಗಾದರೆ ಏನಿದು ಕಥೆ. ಅಂದು ನಡೆದಿದ್ದೇನು? ವಿಮಾನಕ್ಕೆ ಏನಾಯಿತು? ವಿಮಾನದಲ್ಲಿದ್ದವರು ಎಲ್ಲಿ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

"ಗುಡ್ ನೈಟ್. ಮಲೇಷಿಯನ್ ತ್ರೀ ಸೆವೆನ್ ಝೀರೋ."
ಆ ಆರು ಪದಗಳು ಮಲೇಷ್ಯಾ ಏರ್‌ಲೈನ್ಸ್ ಫ್ಲೈಟ್ 370ರ ಕಾಕ್‌ಪಿಟ್‌ನಿಂದ ಕೊನೆಯ ರೇಡಿಯೋ ಪ್ರಸರಣವಾಗಿದೆ. ಮಾರ್ಚ್ 8, 2014 ರಂದು ವಿಮಾನವು ಕೌಲಾಲಂಪುರದಿಂದ ಬೀಜಿಂಗ್‌ಗೆ ತಡರಾತ್ರಿ ಟೇಕ್ ಆಫ್ ಆಗಿತ್ತು. ವಿಮಾನ ಹಾರಾಟ ನಡೆಸಲು ಆರಂಭಿಸಿ ಒಂದು ಗಂಟೆ ಕಳೆದಿತ್ತು. ಈವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ರಾಡಾರ್ ಕೇಂದ್ರದ ಎಲ್ಲಾ ಪರದೆಯಿಂದ ವಿಮಾನದ ಸಂಪರ್ಕ ಕಡಿತಗೊಂಡಿತ್ತು. ಯಾರಿಗೂ ಏನು ನಡೆಯುತ್ತಿದೆ ಎಂಬುದು ಸರಿಯಾಗಿ ತಿಳಿಯಲಿಲ್ಲ. ಒಂದಿಷ್ಟು ನಿಮಿಷ ತಾಂತ್ರಿಕ ಸಮಸ್ಯೆಯಾಗಿರಬಹುದು ಅಂತಲೇ ಅಧಿಕಾರಿಗಳು ಸಿಸ್ಟಂಗಳ ತಡಕಾಡಿದ್ದರು.
ಅದು ಬೃಹತ್ ಬೋಯಿಂಗ್ Co. 777 ಜೆಟ್, ಮ್ಯಾನ್‌ಹ್ಯಾಟನ್ ಸಿಟಿ ಬ್ಲಾಕ್‌ನಷ್ಟು ಉದ್ದವಾಗಿದೆ ಮತ್ತು ಐದು ಅಂತಸ್ತಿನ ಕಟ್ಟಡಕ್ಕಿಂತ ಎತ್ತರವಾಗಿದೆ, ಮಧ್ಯರಾತ್ರಿ ಆಕಾಶದಲ್ಲಿ ಹಾರಾಡುತ್ತಿದ್ದರು ಕೆಳಗೆ ನಿಂತವರಿಗೆ ವಿಮಾನ ಕಾಣುವಷ್ಟು ದೊಡ್ಡವಿಮಾನವದು, ಜೊತೆಗೆ ಇಂದು 239 ಮಂದಿ ವಿಮಾನದಲ್ಲಿದ್ದರು.
ಈಗ ವಿಮಾನ ರಾಡಾರ್ ಸಪರ್ಕಕಡಿತಗೊಂಡು 30 ನಿಮಿಷ ಕಳೆದಿತ್ತು. ನಿಯಂತ್ರಣ ಕೊಠಡಿಯಲ್ಲಿ ಮೌನ. ಅಲ್ಲಿದ್ದವರಿಗೆ ಘಟನೆಯ ಭಯಾನಕತೆಯ ಅರಿವಾಗಿತ್ತು. 239 ಪ್ರಯಾಣಿಕರಿದ್ದ ವಿಮಾನ ಕಣ್ಮರೆಯಾಗಿತ್ತು. ಆದ್ರೆ ಎಲ್ಲಿ..? ಯಾರಿಗೂ ಉತ್ತರ ಗೊತ್ತಿಲ್ಲದ ಪ್ರಶ್ನೆ ಇದು. ಆದರೆ ಆಸ್ಟ್ರೇಲಿಯಾ ಪಶ್ಚಿಮ ಸಮುದ್ರ ತೀರದಿಂದ ನೂರಾರು ಮೈಲು ದೂರದಲ್ಲಿರುವ ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ವಿಮಾನ ಪತನವಾಗಿರಬಹುದೆಂದು ಆರಂಭಿಕ ಊಹೆ ಸತ್ಯವಾಗಿತ್ತು.
ಇಡೀ ರಕ್ಷಣ ತಂಡ ಸಮುದ್ರದಲ್ಲಿ ಬೀಡುಬಿಟ್ಟಿತು, ಆದ್ರೆ ವಿಮಾನದ ಅಳಿದುಳಿದ ತುಂಡುಗಳು ಬಿಟ್ಟರೆ ಮತ್ತೇನು ಸಿಕ್ಕಿರಲಿಲ್ಲ. 10ಕ್ಕೂ ಹೆಚ್ಚು ತಂಡಗಳು ಆಳ ಸಮುದ್ರದಲ್ಲಿ ಹುಡುಕಾಡಿದರು ಯಾವ ವಸ್ತುಗಳು ಪತ್ತೆಯಾಗಲಿಲ್ಲ. ತನಿಖಾ ತಂಡ ಎಷ್ಟು ತಲೆಕೆಡಿಸಿಕೊಂಡರು ವಿಮಾನ ಪತನಕ್ಕೆ ಕಾರಣ ತಿಳಿಯಲೇ ಇಲ್ಲ.
ಆದ್ರೆ 2023ರ ಡಿಸೆಂಬರ್‌ನಲ್ಲಿ ಮೀನುಗಾರನೊಬ್ಬ ಈ ಮಲೇಷ್ಯಾ ಏರ್‌ಲೈನ್ಸ್‌ನ MH370 ವಿಮಾನದ ದೊಡ್ಡ ತುಂಡು ನನ್ನ ಕಣ್ಣಿಗೆ ಬಿದ್ದಿದೆ ಆದರೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಹೇಳಿಕೊಂಡಿದ್ದ. ವಿಮಾನವು ಕಣ್ಮರೆಯಾದ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಅದರ ಅವಶೇಷ ಪತ್ತೆ ಸುದ್ದಿ ಭಾರೀ ಸದ್ದು ಮಾಡಿತು.
ಆತ ಮಾಧ್ಯಮದ ಮುಂದೆ ಬಂದು ನಾನು ನೋಡಿದ್ದ ದೊಡ್ಡ ವಿಮಾನವೊಂದರೆ ರೆಕ್ಕೆಯಾಗಿದೆ. ಆದರೆ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆ ಎಂದು ಆರೋಪಿಸಿದ್ದ. ಆದರೆ ಅದು ನಾಪತ್ತೆಯಾಗಿದ್ದ ಏರ್‌ಲೈನ್ಸ್‌ನ MH370ಕ್ಕೆ ತುಂಬ ಹತ್ತಿರದ ಹೋಲಿಕೆ ಇತ್ತು ಎಂದು ವಾದ ಮಂಡಿಸಲಾಗಿತ್ತು. ಏಕೆಂದರೆ ಆತ ಇದು ಸಾಮಾನ್ಯಕ್ಕಿಂತ ದೊಡ್ಡದಾದ ವಿಮಾನದ ರೆಕ್ಕೆಯಾಗಿದೆ ಎಂದು ತಿಳಿಸಿದ್ದ, ನಾಪತ್ತೆಯಾಗಿದ್ದ ಬೋಯಿಂಗ್ 777 ವಿಮಾನವೂ ಸಹ ಬೃಹತ್ ಗಾತ್ರದಾಗಿತ್ತು.
ಆದ್ರೆ ಈ ಘಟನೆಯ ಬಳಿಕ ವಿಮಾನಯಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾದವು. ಹಲವು ಹೊಸ ನಿಯಮಗಳು ಜಾರಿಯಾದವು. ವಿಮಾನಗಳ ಟ್ರ್ಯಾಕಿಂಗ್ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹೊಸ ಹೊಸ ಕಾರ್ಯಸಾಧನೆಗಳು ತೆರೆದುಕೊಂಡವು.



Click it and Unblock the Notifications
