Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆ ಜವಾಬ್ದಾರಿ ಹೊರಲು ಬೀದಿ ಬದಿ ಅಂಗಡಿ ತೆರೆದ 10 ವರ್ಷದ ಹುಡುಗ..! ಸೆಲ್ಯೂಟ್ ಎಂದ ನೆಟ್ಟಿಗರು.!
10 ವರ್ಷದ ಬಾಲಕ ಅಂದ್ರ ನಿಮ್ಮ ತಲೆಯಲ್ಲಿ ಆತ ಶಾಲೆಗೆ ಹೋಗಿ ತನ್ನಂತೆ ಇರುವ ಗೆಳೆಯರ ಜೊತೆ ಆಟವಾಡಿಕೊಂಡು ಬೆಳೆಯುವ ಹುಡುಗ ಎಂಬ ಕಲ್ಪನೆ ಇರುತ್ತದೆ. ಆದ್ರೆ ಇಲ್ಲೊಬ್ಬ ಹುಡುಗ ಇದೇ ವಯಸ್ಸಿನಲ್ಲಿ ಜವಾಬ್ದಾರಿ ಹೊತ್ತುಕೊಂಡು ರಸ್ತೆ ಬದಿ ಫುಡ್ ಮಾರಾಟ ಮಾಡಿ ಬದುಕುತ್ತಿರುವು ವಿಡಿಯೋ ವೈರಲ್ ಆಗಿದೆ.
ಕೆಲವು ಬಾರಿ ಜವಾಬ್ದಾರಿ ಅನ್ನೋದು ಎಂತಹ ವಯಸ್ಸಿನವರನ್ನು ಕೆಲಸ ಮಾಡುವಂತೆ ಮಾಡುತ್ತದೆ. ಅದು ಚಿಕ್ಕ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರು ಸಹ ಇದರಿಂದ ಹೊರತಾಗುವುದಿಲ್ಲ. ನಾವು ಸಿಗ್ನಲ್‌ಗಳಲ್ಲಿ, ರಸ್ತೆಯಲ್ಲಿ ಈ ರೀತಿಯ ನೂರಾರು ಮಂದಿಯನ್ನು ನಿತ್ಯವು ನೋಡಬಹುದು.

ಕೆಲವು ಕಡೆ ಸಣ್ಣ ಸಣ್ಣ ಮಕ್ಕಳು ಭಿಕ್ಷೆ ಬೇಡುವುದು, ಕಾರಿನ ಗ್ಲಾಸ್ ಒರೆಸುವುದು, ಸಿಗ್ನಲ್‌ನಲ್ಲಿ ನಿಂತು ಆಟಿಕೆಗಳ ಮಾರಾಟ ಮಾಡುವುದನ್ನು ನೋಡಿರುತ್ತೇವೆ. ಅವರೆಲ್ಲ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡೋ ಅಥವಾ ಅನಿವಾರ್ಯ ಕಾರಣದಿಂದಾಗಿ ಈ ರೀತಿ ಕೆಲಸ ಮಾಡುತ್ತಾರೆ.
ಜೊತೆಗೆ ಕೆಲವರು ಹಿರಿಯ ವಯಸ್ಕರು ಸಹ ತಮ್ಮ ವಯಸ್ಸಿನಲ್ಲಿ ಎದ್ದು ಓಡಾಡುವುದೇ ಕಷ್ಟವಾಗಿದ್ದರೂ ಸಹ ಅವರು ಟೀ-ಕಾಫಿ ಮಾರುವುದು, ಪೇಪರ್ ಹಾಕುವುದು, ಹಣ್ಣು ಮಾರುವ ಕೆಲಸ ಮಾಡುವುದನ್ನು ಸಹ ನಾವು ನೋಡಬಹುದು. ಇದರ ಹಿಂದೆ ಜವಾಬ್ದಾರಿ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ಕಾರಣ ಇರಬಹುದು.
ಹಾಗೆ ಇಲ್ಲೊಬ್ಬ 10 ವರ್ಷ ಬಾಲಕ ಸಹ ಬೀದಿ ಬದಿಯಲ್ಲಿ ನಿಂತು ಜನರಿಗೆ ಫಾಸ್ಟ್ ಫುಡ್ ಮಾಡಿಕೊಡುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಆತ ಮೊಟ್ಟೆಯಿಂದ ರೋಲ್ ಮಾಡಿ ನೀಡುತ್ತಿದ್ದಾನೆ. ಗ್ರಾಹಕ ಆತನ ಬಳಿ ಆಹಾರ ಪಡೆದು ಬಾಲಕನ ಕುರಿತು ವಿಚಾರಿಸುತ್ತಾನೆ.
ಆತ ತಂದೆಯನ್ನು ಕಳೆದುಕೊಂಡ ಬಾಲಕ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದಾನೆ, ತನ್ನ 14 ವರ್ಷದ ಜಸ್‌ಪ್ರೀತ್ ಸಹೋದರಿಯನ್ನು ಸಾಕಲು ಆತ ಬೀದಿ ಬದಿ ಈ ಫುಡ್ ಮಾಡುವ ಗಾಡಿ ನಡೆಸುತ್ತಿದ್ದಾನೆ. ಆತನ ತಾಯಿ ಇಬ್ಬರು ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ತೆರಳಿದ್ದಾಳೆ ಎಂದು ತಿಳಿದುಬಂದಿದೆ.
ದೆಹಲಿಯ ತಿಲಕ್ ನಗರದಲ್ಲಿ ಚಿಕನ್ ರೋಲ್ ಸ್ಟಾಲ್ ಅನ್ನು ಆತ ನಡೆಸುತ್ತಿದ್ದಾನೆ. ಕನ್ ಎಗ್ ರೋಲ್‌ಗಾಗಿ ಹುಡುಗನು ಫ್ಲಾಟ್‌ಬ್ರೆಡ್ ಅನ್ನು ಸಿದ್ಧಪಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆತ ಈ ಆಹಾರ ರೆಡಿ ಮಾಡುವುದನ್ನು ತಂದೆಯಿಂದ ಕಲಿತ್ತಿದ್ದಾನಂತೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಕ್ಕನನ್ನು ಸಾಕಲು ಆತ ಧೈರ್ಯವಾಗಿ ಮುಂದೆ ಬಂದಿದ್ದಾನೆ. ಜೀವನದ ಪಾಠದ ಮುಂದೆ ಆತ ತಲೆ ತಗ್ಗಿಸಿ ಬಾಳಲು ಮುಂದಾಗಿದ್ದಾನೆ. ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಆತನನ್ನು ನಿಜವಾದ ಹೀರೋ ಎಂದು ಕರೆದಿದ್ದಾರೆ.
ಎಲ್ಲಾ ಸೌಲಭ್ಯವಿದ್ದು ಕೆಲವರು ದುಡಿದು ತಿನ್ನುವ ಬದಲು, ಕಳ್ಳತನ, ದರೋಡೆ, ವಂಚನೆ, ಮೋಸ ಮಾಡಿ ಬದುಕುತ್ತಾರೆ. ಅಂತವರು ಈ ಹುಡುಗನ ನೋಡಿ ನಾಚಿಕೆ ಪಡಬೇಕು. ಆತ ಈ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊರಲು ಮುಂದಾಗಿ ಎಲ್ಲರಿಗೂ ಮಾದರಿಯಾಗಿದ್ದಾನೆ ಎಂಬ ಅಭಿಪ್ರಾಯಗಳು ಹರಿದಾಡಿವೆ.
ಜೊತೆಗೆ ಆತ ಹಾಗೂ ಆತನ ಸಹೋದರಿಗೆ ದೇವರು ಒಳ್ಳೆಯದು ಮಾಡಲಿ. ಇಬ್ಬರು ಜೀವನದಲ್ಲಿ ಎಲ್ಲಾ ಸಾಧಿಸುವಂತಾಗಲಿ ಎಂದು ನೆಟ್ಟಿಗರು ಆಶಿಸಿದ್ದಾರೆ. ಅಲ್ಲದೆ ಆತ ಫುಡ್ ನೀಡುವ ಸ್ಥಳದ ಹತ್ತಿರ ಯಾರಾದರು ಇದ್ದರೆ ಆತನಿಗೆ ಸಹಾಯವಾಗು ಏನಾದರು ಕೆಲಸ ಮಾಡಲಿ. ಆತನಿಗೆ ಆರ್ಥಿಕವಾಗಿ ಸಹಾಯ ಮಾಡಿ ಆತ ಕಾಲೇಜು ಹಂತದ ಶಿಕ್ಷಣ ಮುಗಿಸಲು ಸಹಾಯ ಮಾಡಿ ಎಂದು ಹಲವರು ಮನವಿ ಮಾಡಿದ್ದಾರೆ.
ಮತ್ತೆ ಕೆಲವರು ಆತನ ಕೆಲಸಕ್ಕೆ ಸಲ್ಯೂಟ್ ಮಾಡಿದ್ದಾರೆ. ಇಂತಹ ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ಪ್ರಬುದ್ಧವಾಗಿ ಜವಾಬ್ದಾರಿ ಹೊರುವ ಆತನ ನಿರ್ಧಾರಕ್ಕೆ ಸಲಾಂ ಎಂದಿದ್ದಾರೆ.



Click it and Unblock the Notifications
