Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರಪಂಚದಲ್ಲಿ ಈ ರೀತಿಯ ಕೂಡ 10 ವಿಚಿತ್ರ ಸೇವೆಗಳಿವೆ ಗೊತ್ತಾ?
ಪ್ರಪಂಚದಲ್ಲಿ ಅನೇಕ ಬಗೆಯ ಸೇವೆಗಳಿವೆ, ಆದರೆ ಕೆಲವೊಂದು ವಿಚಿತ್ರ ಸೇವೆಗಳೂ ಈ ಪ್ರಪಂಚದಲ್ಲಿದೆ ಎಂದರೆ ನೀವು ನಂಬುತ್ತೀರಾ? ಹೌದು ಅದರ ಬಗ್ಗೆ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಮಕ್ಕಳಿಗೆ ಕಕ್ಕ ಮಾಡುವುದಕ್ಕೂ ವೃತ್ತಿಪರ ಸೇವೆಗಳಿವೆ ಗೊತ್ತಾ? ಇಂಥ ಕೆಲ ವಿಚಿತ್ರ ಸೇವೆಗಳ ಬಗ್ಗೆಇಲ್ಲಿ ಹೇಳಲಾಗಿದೆ, ಇದರ ಬಗ್ಗೆ ಕೇಳಿದರೆ ನೀವು ಖಂಡಿತ ಆಶ್ಚರ್ಯಪಡುತ್ತೀರಿ.....

1. ಮಕ್ಕಳಿಗೆ ಕಕ್ಕ ಮಾಡಿಸಲೂ ಟ್ರೈನಿಂಗ್
ಮಕ್ಕಳಿಗೆ ಪೋಟಿ ಟ್ರೈನಿಂಗ್ ಬಗ್ಗೆ ಅನೇಕ ವೀಡಿಯೋಗಳಿವೆ, ಇದರ ಕುರಿತ ಅನೇಕ ಲೇಖನಗಳಿವೆ, ಆದರೆ ಯಾರೂ ಮನೆಗೆ ಬಂದು ಪೋಟಿ ಟ್ರೈನಿಂಗ್ ನೀಡುವುದರ ಬಗ್ಗೆ ನೀವು ಕೇಳಿರಲಿಕ್ಕಿಲ್ಲ, ಆದರೆ ಅಂಥದ್ದೊಂದು ಸರ್ವೀಸ್ ಸೆಂಟರ್ ಇದೆ. ಸಮಂತಾ ಅಲೆನ್ ಎಂಬುವವರು ಇದನ್ನು ಮೊದಲಿಗೆ ನ್ಯೂಯಾರ್ಕ್‌ನಲ್ಲಿ ಪ್ರಾರಂಭಿಸಿದರು, ಅದಾದ ಬಳಿಕ ಈಗ ತುಂಬಾ ಕಡೆ ಇಂಥ ಸರ್ವೀಸ್ ಸೆಂಟರ್‌ಗಳಿವೆ. ಇವರು ಬಂದು ನಿಮ್ಮ ಮಕ್ಕಳಿಗೆ ಸರಿಯಾದ ಪೋಟಿ ಟ್ರೈನಿಂಗ್ ನೀಡಿ ಹೋಗುತ್ತಾರೆ. ನಮ್ಮ ಭಾರತದಲ್ಲಿ ಪೋಟಿ ಟ್ರೈನಿಂಗ್ ಎಲ್ಲಾ ಅಜ್ಜಿ, ಅಮ್ಮ ಕಲಿಸುತ್ತಾರೆ, ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದೆ, ಮುಂದೆ ಭಾರತದಲ್ಲಿಯೂ ಇಂಥ ಸರ್ವೀಸ್ ಸೆಂಟರ್ ತಲೆ ಎತ್ತಬಹುದು.
2. ಕಣ್ಣಿಗೆ ಕಾಣದ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್
ನಿಮಗೆ ತುಂಬಾ ಒಂಟಿತನ ಕಾಡುತ್ತಿದೆ ಒಬ್ಬ ಬಾಯ್ ಫ್ರೆಂಡ್ ಬೇಕೆಂದು ಬಯಸಿದರೆ ಅದಕ್ಕೂ ವೆಬ್‌ಸೈಟ್ ಇದೆ. ತಿಂಗಳಿಗೆ ಇಷ್ಟು ಅಂತ ಹಣ ಪಾವತಿಸಬೇಕು. ಬಾಯ್ ಫ್ರೆಂಡ್ ಗಳಿಸುವಂಥ ಲೆಟರ್‌ಗಳು, ಟೆಕ್ಸ್ಟ್ ಮೆಸೇಜ್‌ಗಳು ಬರುತ್ತದೆ, ಕೆಲವರು ಇದಕ್ಕೆ ಹಣ ಪಾವತಿಸುವ ಬದಲಿಗೆ ನಮ್ಮ ಒಂಟಿತನ ಹೋಗಲಾಡಿಸಲು ಥೆರಪಿಸ್ಟ್ ಭೇಟಿ ಮಾಡಿ ಸೂಕ್ತ ಸಲಹೆ ಪಡೆಯುವುದು ಒಳ್ಳೆಯದೆಂದು ಹೇಳುತ್ತಾರೆ.
3. ನಮ್ಮ ಶತ್ರುಗಳಿಗೆ ಕಿರಿಕಿರಿ ನೀಡಲು ಸರ್ವೀಸ್ ಸೆಂಟರ್‌ಗಳಿವೆ
ಕೆಲವರು ಹಾಳಾದ ಹೂ ಕಳುಹಿಸಿಕೊಡುತ್ತಾರೆ. ನಮ್ಮ ಶತ್ರುಗೆ ಇಂಥ ವಸ್ತು ಕಳುಹಿಸಿ ಮುಜುಗರ ಮಾಡಿ ಎಂದು ಅದರ ದುಡ್ಡು ಕಟ್ಟಿದರೆ ಸಾಕು ಅವರಿಗೆ ಗಿಫ್ಟ್ ಪ್ಯಾಕ್ ರೀತಿಯಲ್ಲಿ ಕಳುಹಿಸಿ ಕೊಡುತ್ತದೆ, ಅದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಮುಖಕ್ಕೆ ರಾಚುವಂಥ ಗ್ಲಿಟರಿಂಗ್, ಮಲ ವಾಸನೆಯ ವಸ್ತು, ಕೆಟ್ಟ ವಾಸನೆಯ ಮರಳು ಹೀಗೆ ಅವರಿಗೆ ಕಿರಿಕಿರಿ ಉಂಟು ಮಾಡುವ ವಸ್ತುಗಳನ್ನು ಕಳುಹಿಸಿಕೊಡಲಾಗುವುದು.
4. ಆಲೂಗಡ್ಡೆ ಪಾರ್ಸೆಲ್
ಈ ಕಾನ್ಸೆಪ್ಟ್ ವಿಚಿತ್ರ ಅನಿಸಿದರೂ ಚೆನ್ನಾಗಿದೆ ಅನಿಸುತ್ತೆ, ಏಕೆಂದರೆ ಮರಗಳನ್ನು ಉಳಿಸಬಹುದು. ನಾವು ಕೆಲವೊಂದು ವಿಶೇಷ ದಿನಗಳಲ್ಲಿ ಕಾರ್ಡ್ಸ್ ಕಳುಹಿಸುವ ಮೂಲಕ ಶುಭ ಕೋರುತ್ತೇವೆ, ಅದರ ಬದಲಿಗೆ ಆಲೂಗಡ್ಡೆಯಲ್ಲಿ ಶುಭಾಶಯಗಳನ್ನು ಬರೆಯುವ, ಫೋಟೋ ಫ್ರಿಂಟ್ ಮಾಡುವ ಸರ್ವೀಸ್ ಸೆಂಟರ್‌ಗಳಿವೆ. ನಾವು ಶುಭಾಶಯ ಕಳುಹಿಸಲು ಸಾಧ್ಯವಾಗುವುದು ಅಲ್ಲದೆ ಮರಗಳನ್ನು ಉಳಿಸಬಹುದು. ವಿಚಿತ್ರ ಅನಿಸಿದರೂ ಚೆನ್ನಾಗಿದೆ ಅಲ್ವಾ?
5. ತಬ್ಬಿಕೊಳ್ಳಲು ಸರ್ವೀಸ್
ನಾವು ತುಂಬಾ ಬೇಸರವಾಗಿದ್ದಾಗ ನಮಗೆ ಬೇಕಾದವರೂ ಬಂದು ಒಂದು ಅಪ್ಪುಗೆ ಕೊಟ್ಟರೆ ನಮ್ಮ ಮನಸ್ಸಿನ ನೋವೆಲ್ಲಾ ಮರೆತು ಹೋಗುವುದು. ಆದರೆ ಕೆಲವರಿಗೆ ಹಾಗೆ ಸಾಂತ್ವಾನ ನೀಡಲು ಕೂಡ ಯಾರೂ ಇರಲ್ಲ, ಅಂಥವರು ಇಂಥ ಸೇವೆ ಪಡೆಯಲು ಬರುತ್ತಾರೆ. ಈ ಅಪ್ಪುಗೆ ಸೆಷನ್‌ಗೆ ಬರುವವರಿಗೆ ವೃತ್ತಿಪರರು ಸೇವೆಯನ್ನು ನೀಡುತ್ತಾರೆ. ಇದನ್ನು ತುಂಬಾ ಗೌರವವಾಗಿ ಮಾಡುತ್ತಾರೆ. ತಮ್ಮ ಕ್ಲೈಂಟ್‌ಗೆ ಒಳ್ಳೆಯ ರೀತಿಯಲ್ಲಿ ತಬ್ಬಿಕೊಳ್ಳುತ್ತಾರೆ, ಇದರಿಂದ ಆ ಕ್ಲೈಂಟ್ ಮನಸ್ಸು ರಿಲ್ಯಾಕ್ಸ್ ಆಗುತ್ತದೆ, ಮನಸ್ಸಿನಲ್ಲಿರುವ ಬೇಸರ ದೂರಾಗುವುದು, ಅವರಲ್ಲಿ ಹೊಸ ಚೈತನ್ಯ ಮೂಡುವುದು.
6. ಕೊನೆಯ ಊಟ
ನಮ್ಮಲ್ಲಿ ಇನ್ನೇನು ಅವರು ಹೆಚ್ಚು ಕಾಲ ಬದುಕಲ್ಲ ಎಂದಾಗ ಅವರ ಕೊನೆಯಾಸೆಯಂತೆ ಅವರಿಗೆ ಏನು ಮಾಡಬೇಕು, ಏನು ತಿನ್ನಬೇಕು ಎಂದು ಇಷ್ಟಪಡುತ್ತಿದ್ದೀರಿ ಎಂದೆಲ್ಲಾ ಕೇಳುತ್ತೇವೆ, ಆದರೆ ಇದಕ್ಕಂತಲೇ ಟೋರ್ನೋಟೋ ಮೂಲದ ಕಂಪನಿ ಸೇವೆಯನ್ನು ಮಾಡುತ್ತಿದೆ. 20 ಡಾಲರ್‌ಗೆ ಸಾಯಲಿರುವ ವ್ಯಕ್ತಿ ತಿನ್ನಬಯಸುವ ಅಷ್ಟೂ ಆಹಾರ ವಸ್ತುಗಳನ್ನು ತಂದು ತಲುಪಿಸುತ್ತದೆ.
7. ಮದುವೆಗೆ ಬರುವ ವೃತ್ತಿಪರ ಅತಿಥಿಗಳು
ಈಗೆಲ್ಲಾ ಈವೆಂಟ್ ಮ್ಯಾನೇಜ್‌ಮೆಂಟ್ ಟೀಂ ಬಂದು ಇಡೀ ಬದುವೆ ಜವಾಬ್ದಾರಿ ತೆಗೆದುಕೊಂಡು ನಡೆಸುವುದನ್ನು ನೋಡುತ್ತೇವೆ, ಮದುವೆಗೆ ಬಂದವರನ್ನು ಸ್ವಾಗತಿಸುವುದರಿಂದ ಹಿಡಿದು, ಮದುವೆ ಅಲಂಕಾರ, ಅಡುಗೆ ಹೀಗೆ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ಒಂದಿಷ್ಟೂ ಲೋಪದೋಷ ಆಗದಂತೆ ನೋಡಿಕೊಂಡು ನಡೆಸಿಕೊಡುತ್ತಾರೆ, ಆದರೆ ಮದುವೆಗೆ ಬರುವ ಅತಿಥಿಗಳು ನಮ್ಮವರಾಗಿರುತ್ತಾರೆ. ಆದರೆ ವಿದೇಶದಲ್ಲಿ ಮದುವೆಗೆ ಅತಿಥಿಗಳನ್ನು ಹಣಕೊಟ್ಟು ಕರೆದುಕೊಂಡು ಬರುವ ಸರ್ವೀಸ್‌ಗಳಿವೆ. ಇದರಿಂದ ನಮಗೆ ಯಾರೂ ಇಲ್ಲ ಎಂಬ ಚಿಂತೆಯಿಲ್ಲ, ಅವರೇ ಸ್ವಲ್ಪ ಸಮಯ ಬಂಧುಗಳಂತೆ ಇದ್ದು ಹೋಗುತ್ತಾರೆ.
8. ಹ್ಯಾಂಗೂವರ್ ಬಸ್
ಯಾರಾದರೂ ಹ್ಯಾಂಗೂವರ್‌ನಿಂದ ವರ್ತಿಸಿದರೆ ಅವರನ್ನು ನೋಡಿದರೆ ಸಿಟ್ಟು ಬರುತ್ತದೆ, ಆದರೆ ಕುಡಿದು ನಶೆಯಲ್ಲಿ ಇರುವಾಗಿಯೇ ಹ್ಯಾಂಗೋವರ್ ಹೆವನ್ ಬಸ್ ಎಂಬುವುದಿದೆ, ಅದರಲ್ಲಿ ಅವರಿಗೆ ರೆಸಾರ್ಟ್ ಕಂಫರ್ಟ್ ಸಿಗುವುದು.
9. ಆಡುಗಳನ್ನು ಬಾಡಿಗೆಗೆ ನೀಡುವುದು
ನಿಮ್ಮ ಗದ್ದೆಯಲ್ಲಿ ತುಂಬಾ ಹುಲ್ಲು ಬೆಳೆದಿದ್ದರೆ ಅದನ್ನು ಕ್ಲೀನ್ ಮಾಡಲು ಆಡುಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಅವುಗಳನ್ನು ತಂದು ಕಟ್ಟಿದರೆ ಸಾಕು ಹುಲ್ಲೆಲ್ಲಾ ತಿಂದು ಕ್ಲೀನ್ ಮಾಡುತ್ತವೆ. ಅಮೆಜಾನ್ ಕೂಡ ಈ ಸರ್ವೀಸ್ ನೀಡುತ್ತದೆ.
10. ಹಾವಿನ ಮಸಾಜ್
ಹಲವು ಬಗೆಯ ಮಸಾಜ್ ಬಗ್ಗೆ ಕೇಳಿರುತ್ತೀರಿ, ಆದರೆ ಹಾವಿನಿಂದ ಮಾಡಿಸುವ ಸೇವೆ ಬಗ್ಗೆ ಕೇಳಿದ್ದೀರಾ, ಅಂಥ ಮಸಾಜ್ ಕೂಡ ಇದೆ ಗೊತ್ತಾ? ವಿಷರಹಿತ ಹಾವುಗಳನ್ನು ಇಂಥ ಮಸಾಜ್‌ಗೆ ಬಳಸಲಾಗುವುದು. ಈ ಹಾವಿನ ಮಸಾಜ್ ಮಾಡಿದರೆ ತುಂಬಾ ರಿಲ್ಯಾಕ್ಸ್ ಅನಿಸುವುದು.



Click it and Unblock the Notifications