Latest Updates
-
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
90 ನಿಮಿಷದಲ್ಲಿ 1 ಮಿಲಿಯನ್..! ಹೊಸ ರೆಕಾರ್ಡ್ ಬರೆದ ರೊನಾಲ್ಡೊ ಚಾನೆಲ್.!!
ನೀವು ಫುಟ್‌ಬಾಲ್ ಪ್ರಿಯರಾಗಿದ್ದರೆ ಖಂಡಿತ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರು ಕೇಳಿರುತ್ತೀರಿ. ಫುಟ್‌ಬಾಲ್ ಗೊತ್ತಿಲ್ಲಾ ಅಂದ್ರು ಈ ಹೆಸರನ್ನ ಎಲ್ಲಾದ್ರೂ ಕೇಳಿಯೇ ಕೇಳಿರುತ್ತೀರಿ. ಫುಟ್‌ಬಾಲ್ ಲೋಕದ ಅತೀದೊಡ್ಡ ಹೆಸರು ಇದು. ಹತ್ತಾರು ಕ್ಲಬ್ ಪರ ಆಡಿರುವ ಆತ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬನಾಗಿದ್ದಾನೆ. ಆತ ಒಂದು ಪಂದ್ಯದಿಂದ ಹಾಗೂ ಒಂದು ಜಾಹಿರಾತಿನಿಂದ ಕೋಟಿ ಕೋಟಿ ಹಣ ಸಂಪಾದಿಸುತ್ತಾನೆ.
ಇನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಕಿಂಗ್ ಎನ್ನಬಹುದು. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ವ್ಯಕ್ತಿ ಈತ. ಆದ್ರೆ ಈಗ ಯೂಟ್ಯೂಬ್ ಚಾನಲ್ ಆರಂಭಿಸಿ ಅಲ್ಲೂ ದಾಖಲೆ ಬರೆದಿದ್ದಾನೆ. ಹೌದು ರೊನಾಲ್ಡೋ ಯಾವಾಗ ಯೂಟ್ಯೂಬ್ ಚಾನಲ್ ಆರಂಭಿಸುತ್ತಾರೆ ಎಂಬ ಪ್ರಶ್ನೆ ಕೇಳುತ್ತಿದ್ದರು.

ಆದ್ರೆ ಸದ್ದಿಲ್ಲದೆ ಜುಲೈನಲ್ಲಿ ಚಾನಲ್ ಆರಂಭಿಸಿದ್ದ ಅವರು ಈಗ 19 ವಿಡಿಯೋ ಅಪ್‌ಲೋಡ್ ಸಹ ಮಾಡಿದ್ದಾರೆ. ಆದ್ರೆ ಯಾರಿಗೂ ಈ ವಿಚಾರ ಗೊತ್ತೇ ಆಗಿರಲಿಲ್ಲ. ಈ ನಡುವೆ ವೇಗವಾಗಿ 1 ಮಿಲಿಯನ್ ಚಂದಾದಾರರ ಪಡೆದ ವಿಶ್ವದ ಮೊದಲ ಚಾನಲ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಚಾನಲ್ ತೆರೆದ ಕೇವಲ 90 ನಿಮಿಷಗಳ ಒಳಗೆ 1 ಮಿಲಿಯನ್ ಮಂದಿ ಚಂದಾದಾರರಾಗಿದ್ದಾರೆ.
ಹಾಗೆ ಈಗ ಒಟ್ಟು 28 ಮಿಲಿಯನ್‌ಗೂ ಅಧಿಕ ಮಂದಿ ಚಂದಾದಾರರಾಗಿದ್ದಾರೆ. ಕೇವಲ 19 ವಿಡಿಯೋ ಹಾಕಿದಾಗಲೇ ಇಷ್ಟೋಂದು ಚಂದಾದಾರರನ್ನು ಅವರು ಗಳಿಸಿದ್ದಾರೆ. ಒಂದೊಂದು ವಿಡಿಯೋಗಳು ಈಗ ಮಿಲಿಯನ್ ವೀಕ್ಷಣೆ ಕಾಣುತ್ತಿದೆ. ಯು ಆರ್ ಕ್ರಿಸ್ಟಿಯಾನೋ ಎಂಬ ಹೆಸರಿನ ಚಾನಲ್ ಈಗ ಟ್ರೆಂಡ್ ಆಗುತ್ತಿದೆ.
ಕೇವಲ 90 ನಿಮಿಷದಲ್ಲಿ 1 ಮಿಲಿಯನ್ ಚಂದಾದಾರರ ಪಡೆದು ಈ ಮೊದಲು ಈ ಸಾಧನೆ ಮಾಡಿದ್ದ ಕೆ-ಪಾಪ್ ತಾರೆ ಜೆನ್ನಿ ಕಿಮ್ ದಾಖಲೆ ಸರಿಗಟ್ಟಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲು ರೊನಾಲ್ಡೋ ಕಿಂಗ್ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೇಷ್ಠ ಫುಟ್ಬಾಲ್ ಆಟಗಾರ ಎನಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅವರು ಪಟ್ಟಾರೆ 900 ಮಿಲಿಯನ್‌ಗೂ ಅಧಿಕ ಅನುಯಾಯಿಗಳ ಹೊಂದಿದ್ದಾರೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ 636 ಮಿಲಿಯನ್, ಎಕ್ಸ್‌ನಲ್ಲಿ 112 ಮಿಲಿಯನ್ ಹಾಗೂ ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈಗ ಈ ಸಾಲಿಗೆ ಯೂಟ್ಯೂಬ್ ಸಹ ಸೇರಿದ್ದ ತಿಂಗಳಿಗೂ ಮುನ್ನವೇ 28 ಮಿಲಿಯನ್ ಚಂದಾದಾರರ ಹೊಂದಿದ್ದಾರೆ.
ರೊನಾಲ್ಡೋ ಆಸ್ತಿ ಎಷ್ಟಿದೆ ಗೊತ್ತಾ?
2024 ರ ಹೊತ್ತಿಗೆ, ಕ್ರಿಸ್ಟಿಯಾನೋ ರೊನಾಲ್ಡೊ 260 ಮಿಲಿಯನ್ ಯುಎಸ್ ಡಾಲರ್ ವಾರ್ಷಿಕ ಆದಾಯ ಹೊಂದಿದ್ದಾರೆ. ಅವರು ಕ್ರೀಡಾ ಪಟುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು 60ಕ್ಕೂ ಹೆಚ್ಚು ಬ್ರಾಂಡ್‌ಗಳ ಎಂಡಾರ್ಸ್‌ಮೆಂಟ್‌ಗಳಿಂದ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ.
ದುಬಾರಿ ಕಾರುಗಳ ಒಡೆಯ
ಇನ್ನು ರೊನಾಲ್ಡೋ ಬಳಿ ವಿಶ್ವದ ಅತ್ಯಂತ ದುಬಾರಿ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಮೆಕ್ಲಾರೆನ್ ಸೆನ್ನಾ ಫಾರ್ಮುಲಾ ಒನ್ ರೇಸಿಗ್ ಕಾರ್ ಆಗಿರುವ ಈ ಸೆನ್ನಾ ರೊನಾಲ್ಟೋ ಬಳಿ ಇದೆ. ಇದರ ಬೆಲೆ ಸುಮಾರು 1 ಮಿಲಿಯನ್ ಡಾಲರ್ ಅಂದರೆ ಸುಮಾರು 9 ಕೋಟಿ ಆಗಬಹುದು. ಇದರ ಜೊತೆಗೆ ಬೆಂಟ್ಲಿ ಕಾಂಟಿನೆಂಟಲ್, ಆಡಿ RS7, ಫೆರಾರಿ 599 GTO, ಬುಗಾಟ್ಟಿ ಚಿರೋನ್, Mercedes-Benz ಬ್ರಾಬಸ್ G65, ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಡೀಡ್ ಕಾರುಗಳು ಸಹ ಅವರ ಬಳಿ ಇವೆ.



Click it and Unblock the Notifications