Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾತ್ರೋರಾತ್ರಿ ₹750 ಕೋಟಿ ಲಾಟರಿ ಗೆದ್ದ ಯುವಕ: ಅದೃಷ್ಟ ಅಂದ್ರೆ ಇದೆ ಅಲ್ವಾ..!
ಲಾಟರಿ ಹೊಡೆಯೋದು ಅಂದ್ರೆ ಅದೃಷ್ಟ ಬದಲಾದಂತೆ. ಈಗಲು ಹಲವು ದೇಶಗಳಲ್ಲಿ ಲಾಟರಿ ಟಿಕೆಟ್ ಮೂಲಕ ಶ್ರೀಮಂತರಾದವರಿದ್ದಾರೆ. ಭಾರತದಲ್ಲೂ ಹಲವು ರಾಜ್ಯಗಳು ಲಾಟರಿ ವ್ಯವಹಾರ ನಡೆಸುತ್ತವೆ. ಇದು ಸರ್ಕಾರದ ಇಲಾಖೆ ಅಡಿಯಲ್ಲೇ ಕೆಲಸ ಮಾಡುತ್ತದೆ.
ನಾವು ಸಹ ಕೇಳಿರುತ್ತೇವೆ ಅಮೆರಿಕದಲ್ಲಿ ಮಿಲಿಯನ್ ಲಾಟರಿ ಗೆದ್ದ, ದುಬೈ ಲಾಟರಿ, ಸೌದಿ ಅರೇಬಿಯಾ ಲಾಟರಿ ಹೀಗೆ ಹತ್ತಾರು ಕಡೆಗಳಲ್ಲಿ ಲಾಟರಿ ಫೇಮಸ್ ಆಗಿವೆ. ಅದರಲ್ಲಿ ಕೋಟಿ ಕೋಟಿ ಗೆದ್ದು ಬೀಗಿದವರು ಇದ್ದಾರೆ. ಇದೂ ಸಹ ಈ ರೀತಿ ರಾತ್ರೋರಾತ್ರೋ ಒಬ್ಬ ಯುವಕ ಶ್ರೀಮಂತನಾದ ಕಥೆಯಾಗಿದೆ.
ಆತ ದೇಶದಲ್ಲೇ ಅತ್ಯಂತ ದುಬಾರಿ ಮೊತ್ತದ ಲಾಟರಿ ಗೆದ್ದಿದ್ದಾನೆ. ಹಾಗಾದರೆ ಯಾರು ಆ ಅದೃಷ್ಟವಂತ. ಯಾವ ದೇಶದ ಲಾಟರಿ ಗೆದ್ದಿದ್ದಾನೆ? ಎಷ್ಟು ಕೋಟಿ ಲಾಟರಿ ಗೆದ್ದಿದ್ದಾನೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಚೀನಾದಲ್ಲಿ ಲಾಟರಿ ಈಗಲೂ ಕಾನೂನಾತ್ಮಕ ವ್ಯವಹಾರವಾಗಿದೆ. ಇದೀಗ ಚೀನಾದ 28 ವರ್ದದ ಯುವಕನೊಬ್ಬ ದೇಶದ ಅತೀ ದೊಡ್ಡ ಮೊತ್ತದ ಲಾಟರಿ ಗೆದ್ದು ರಾತ್ರೋ ರಾತ್ರಿ ಶ್ರೀಮಂತನಾಗಿದ್ದಾನೆ. ಆತ ಪ್ರತಿ ಬಾರಿಯೂ 7 ಸಂಖ್ಯೆಗಳ ಒಂದೇ ಗುಂಪಿನ ಲಾಟರಿ ಮೇಲೆ ಬೆಟ್ಟಿಂಗ್ ಮಾಡಿ ಜಾಕ್‌ಪಾಟ್ ಗೆದ್ದಿದ್ದಾನೆ. ಆತ ಬರೋಬ್ಬರಿ 680 ಮಿಲಿಯನ್ ಯುವಾನ್ ಅಂದರೆ 96 ಮಿಲಿಯನ್ ಡಾಲರ್ ಮೊತ್ತ ಗೆದ್ದಿದ್ದಾನೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದು ಅಂದಾಜು 750 ಕೋಟಿ ರೂಪಾಯಿಯಾಗುತ್ತದೆ.
ವಿಜೇತರ ಹೆಸರನ್ನು ಬಹಿರಂಗಪಡಿಸಲು ಸಂಸ್ಥೆ ಮುಂದಾಗಿಲ್ಲ. ಆದರೆ 28 ವರ್ಷದ ಆತ ನೈಋತ್ಯ ಚೀನಾದ ಗೈಝೌ ಪ್ರಾಂತ್ಯದ ಸಣ್ಣ ವ್ಯಾಪಾರಸ್ಥ ಎಂದು ತಿಳಿಸಿದೆ. ಅವರು ತಲಾ 28 ಸೆಂಟ್‌ನಂತೆ 133 ಟಿಕೆಟ್‌ಗಳನ್ನು ಖರೀದಿಸಿದರು ಮತ್ತು ಪ್ರತಿ ಬಾರಿಯೂ ಏಳು ಸಂಖ್ಯೆಗಳ ಒಂದೇ ಗುಂಪಿನಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದನಂತೆ. ಅವರ ಪ್ರತಿಯೊಂದು ಟಿಕೆಟ್‌ಗಳು $725,000 ಹಣವನ್ನು ಗೆದ್ದಿವೆ ಎಂದು ಔಟ್‌ಲೆಟ್ ವರದಿ ಮಾಡಿದೆ.
ವಿಜೇತರು ಫೆಬ್ರವರಿ 7 ರಂದು ತಮ್ಮ ಬಹುಮಾನದ ಹಣವನ್ನು ಪಡೆದಿದ್ದಾನೆ. ಅವರ ಒಟ್ಟು ಬಹುಮಾನದ ಹಣದಲ್ಲಿ, ವೈಯಕ್ತಿಕ ಆದಾಯ ತೆರಿಗೆ ಕಾನೂನು ನಿಯಮಗಳ ಪ್ರಕಾರ, ಅವರು ಈಗ ತಮ್ಮ ಲಾಟರಿ ಆದಾಯದ ಐದನೇ ಒಂದು ಭಾಗವನ್ನು ತೆರಿಗೆಯಲ್ಲಿ ಪಾವತಿಸಬೇಕಾಗುತ್ತದೆ. ಈ ಲಾಟರಿ ಗೆಲುವು $96 ಮಿಲಿಯನ್ ಚೀನಾದ ಹಿಂದಿನ $80 ಮಿಲಿಯನ್ ದಾಖಲೆಯನ್ನು ಮೀರಿದೆ, 2012ರಲ್ಲಿ ಬೀಜಿಂಗ್‌ನಲ್ಲಿ ವಾಸಿಸುವ ವ್ಯಕ್ತಿ $80 ಹಣ ಗೆದ್ದಿದ್ದು ಈವರೆಗಿನ ಅತೀ ದೊಡ್ಡ ಮೊತ್ತದ ಗೆಲುವಾಗಿತ್ತು.
ಯುವಕ ರಾತ್ರಿ ಲಾಟರಿ ಗೆಲುವಿನ ಕುರಿತಂತೆ ತನ್ನ ಮೊಬೈಲ್‌ನಲ್ಲಿ ಬಂದಿದ್ದ ಸಂದೇಶ ಕಂಡು ದಂಗಾಗಿದ್ದ. ಆತ ಮೊದಲಿಗೆ ಇದನ್ನು ನಂಬಿರಲಿಲ್ಲವಂತೆ. ಯಾವುದೋ ಕಂಪನಿ ವಂಚನೆ ಎಸಗಲು ಈ ರೀತಿ ಜಾಲ ಬೀಸಿದೆ ಎಂದುಕೊಂಡಿದ್ದನಂತೆ. ಆದರೆ ಬೆಳಗ್ಗೆ ಎದ್ದು ಹಲವು ಬಾರಿ ಪರಿಶೀಲನೆ ನಡೆಸಿದನಂತೆ. ಅಲ್ಲದೆ ಇದನ್ನು ಪರಿಶೀಲಿಸಲು ಆತ ಗುಯಿಝೌ ಪ್ರಾಂತ್ಯಕ್ಕೆ ಓಡೋಡಿ ಬಂದಿದ್ದನಂತೆ. ಅಲ್ಲಿ ಬಂದಾಗ ಆತನಿಗೆ ಜಾಕ್‌ಪಾಟ್ ಹೊಡೆದಿರುವುದು ಖಚಿತವಾಗಿದೆ.
ಆತ ಟಿಕೆಟ್ ಖರೀದಿಸುವ ಮೊದಲು ಈ ಹಿಂದೆ ಜಾಕ್‌ಪಾಟ್‌ಗಳು ಹೊಡೆದಿದ್ದ ಎಲ್ಲಾ ನಂಬರ್‌ಗಳು ಮತ್ತು ಟಿಕೆಟ್ ಸರಿಣಿಗಳ ಇಟ್ಟುಕೊಂಡು ಸಂಶೋಧನೆ ನಡೆಸಿದ್ದನಂತೆ. ಅದರಲ್ಲಿ ಕೆಲವು ಸಂಖ್ಯೆಗಳಿರುವ ಟಿಕೆಟ್ ಸರಣಿಯನ್ನು ಖರೀದಿಸಿದ್ದನಂತೆ. ಈಗ ಆತ ತನ್ನ ವ್ಯಾಪಾರವನ್ನೆಲ್ಲಾ ಬಿಟ್ಟು ಶ್ರೀಮಂತನಾಗಿದ್ದಾನೆ.
ಇದಕ್ಕೂ ಮೊದಲು ಚೀನಾದ ವ್ಯಕ್ತಿಯೊಬ್ಬ $30 ಮಿಲಿಯನ್ ಡಾಲರ್ ಲಾಟರಿ ಗೆದ್ದಾಗ ತನ್ನ ಕುಟುಂಬದವರಿಗೆ ಇದನ್ನು ಹೇಳದೆ ಮುಚ್ಚಿಟ್ಟಿದ್ದ ಪ್ರಕರಣ ಭಾರೀ ಸದ್ದು ಮಾಡಿತ್ತು. ಆತ ಕೇವಲ 11 ಡಾಲರ್ ನೀಡಿ 40 ಲಾಟರಿ ಟಿಕೆಟ್ ಖರೀದಿಸಿದ್ದ, ಆದರೆ ಲಾಟರಿ ಹೊಡೆದ ವಿಚಾರವನ್ನು ಹೆಂಡತಿ ಮಕ್ಕಳಿಂದ ಮುಚ್ಚಿಟ್ಟಿದ್ದ. ಬಳಿಕ $684,992 ಡಾಲರ್ ಅನ್ನು ದಾನ ನೀಡಿ ಎಲ್ಲರ ಗಮನಸೆಳೆದಿದ್ದ.
ಆದರೆ ಕುಟುಂಬಸ್ಥರಿಗೆ ಲಾಟರಿ ಗೆದ್ದ ವಿಚಾರ ಏಕೆ ಹೇಳಲಿಲ್ಲ ಎಂಬ ಪ್ರಶ್ನೆಗೆ ಆತ ಉತ್ತರಿಸಿದ್ದ, ಒಂದು ವೇಳೆ ನಾನು ಲಾಟರಿ ಗೆದ್ದ ವಿಚಾರ ಕುಟುಂಬದವರಿಗೆ ಹೇಳಿದ್ದರೆ ಅವರು ಕಷ್ಟಪಟ್ಟು ದುಡಿಯುವುದನ್ನೇ ನಿಲ್ಲಿಸುತ್ತಿದ್ದರು. ಐಷಾರಾಮಿ ಜೀವನದ ಕನಸು ಕಾಣಲು ಆರಂಭಿಸುತ್ತಿದ್ದರು. ಹೀಗಾಗಿ ಅವರಿಗೆ ಈ ವಿಚಾರ ಹೇಳಿಲಿಲ್ಲ ಎಂದಿದ್ದ.



Click it and Unblock the Notifications
