Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
3 ಸೆಕೆಂಡ್ ಪ್ರಚಾರದಿಂದ ಆಕೆ ಗಳಿಸೋದು ಬರೋಬ್ಬರಿ ₹120 ಕೋಟಿ..! ಹೇಗೆ ಗೊತ್ತಾ?
ಜನರ ನಿತ್ಯ ಜೀವನದ ಹಾಸು ಹೊಕ್ಕಾಗಿರುವ ಸೋಶಿಯಲ್ ಮೀಡಿಯಾಗಳು ಇಂದು ಕೇವಲ ಮನರಂಜನೆಯ ತಾಣಗಳಾಗಿ ಮಾತ್ರ ಉಳಿದಿಲ್ಲ. ಅವುಗಳೀಗ ಹಣ ಸಂದಾದನೆಯ ಮಾರ್ಗವಾಗಿಯೂ ಮಾರ್ಪಟ್ಟಿವೆ. ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿ ಹಲವು ಸಾಮಾಜಿಕ ಜಾಲತಾಣಗಳು ಲಕ್ಷ ಲಕ್ಷ ಜನರಿಗೆ ಬದುಕು ಕಟ್ಟಿಕೊಳ್ಳಲು ದಾರಿಯಾಗಿವೆ.
ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪ್ರತಿದಿನ ಆನ್‌ಲೈನ್ ವೀಡಿಯೊಗಳನ್ನು ರಚಿಸುತ್ತಾರೆ ಮತ್ತು ಅವುಗಳನ್ನು YouTube ಅಥವಾ Instagram ಮತ್ತು Facebook ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡುತ್ತಾರೆ. ಇದರಿಂದ ಅವರ ಫಾಲೋವರ್ಟ್ ಹಾಗೂ ವೀಕ್ಷಣೆ ಹೆಚ್ಚಿಸಿಕೊಳ್ಳುತ್ತಾರೆ. ಇಂತಹ ಲಕ್ಷ ಲಕ್ಷ ಮಂದಿಯಲ್ಲಿ ಕೆಲವರಿಗೆ ಇದು ಜೀವನ ನೀಡಿದೆ. ಐಷಾರಾಮಿ ಜೀವನವನ್ನೂ ನೀಡಿದೆ.

ಇನ್ನು ಚೀನಿ ಸಾಮಾಜಿಕ ಮಾಧ್ಯಮಗಳು ಉಳಿದ ದೇಶಕ್ಕಿಂತ ಕೊಂಚ ಭಿನ್ನವಾಗಿವೆ. ಅಲ್ಲಿ ಸೋಶಿಯಲ್ ಮೀಡಿಯಾ ಎಂಬುದು ಮನರಂಜನೆಯಾಗಿ ಉಳಿದಿಲ್ಲ, ಬದಲಿಗೆ ವಾಣಿಜ್ಯ ವಲಯವಾಗಿ ಮಾರ್ಪಟ್ಟಿದೆ. ಇಲ್ಲಿ ಝೆಂಗ್ ಕ್ಸಿಯಾಂಗ್ ಕ್ಸಿಯಾಂಗ್ ಎಂಬಾಕೆ ಈಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದಾರೆ.
ಆಕೆ ಆನ್‌ಲೈನ್‌ನಲ್ಲಿ ಉತ್ಪನ್ನಗಳ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದು, ಆಕೆಯ ಆದಾಯ ಕೇಳಿದರೆ ನಿಮಗೂ ಅಚ್ಚರಿಯಾಗುತ್ತೆ. ಆಕೆ ಕೇವಲ 3 ಸೆಕೆಂಡುಗಳ ಕಾಲ ಯಾವುದಾದರೊಂದು ವಸ್ತು ತೋರಿಸುತ್ತಾಳೆ. ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದರೆ ಆಕೆಯ ಗಳಿಕೆ ಪ್ರತಿ ವಾರ ಸುಮಾರು 120 ಕೋಟಿ ರೂಪಾಯಿಯಾಗಿದೆ. ಹೌದು ನೀವು ಓದಿದ್ದು ಸತ್ಯ ಕೇವಲ 3 ಸೆಕೆಂಡ್ ಪ್ರಚಾರ ಮಾಡಿ ಆಕೆ ಪ್ರತಿ ವಾರ ಗಳಿಸುವುದು 14 ಮಿಲಿಯನ್ ಡಾಲರ್, ಭಾರತೀಯ ರೂಪಾಯಿಯಲ್ಲಿ ಸರಿ ಸುಮಾರು 120 ಕೋಟಿ ರೂಪಾಯಿ.
ಟಿಕ್‌ಟಾಕ್‌ನ ಚೈನೀಸ್ ಆವೃತ್ತಿಯಾದ ಡೌಯಿನ್‌ನಲ್ಲಿ 5 ಮಿಲಿಯನ್‌ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜೆಂಗ್ ಉತ್ಪನ್ನವನ್ನು ಪ್ರಚಾರ ಮಾಡುವ ಮತ್ತು ಆಕೆಯ ಮಿಂಚಿನ ವೇಗದಿಂದಲೇ ಖ್ಯಾತಿ ಗಳಿಸಿದ್ದಾಳೆ. ಹೀಗಾಗಿ ಆಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ ಜೊತೆಗೆ ಮಿಲಿಯನ್‌ಗಟ್ಟಳೆ ವೀಕ್ಷಣೆ ಪಡೆಯುತ್ತವೆ.
ಉತ್ಪನ್ನದ ಬಗ್ಗೆ ಆಕೆಗೆ ಮಾಹಿತಿಯೇ ಇಲ್ಲ
ವಿಚಿತ್ರ ಎಂದರೆ ಆಕೆಯ ವಿಡಿಯೋದಲ್ಲಿ ತೋರಿಸುವ ಬಹುಪಾಲು ಉತ್ಪನ್ನಗಳ ಕುರಿತು ಆಕೆಗೆ ಯಾವ ಮಾಹಿತಿಯು ಇರುವುದಿಲ್ಲ. ಆಕೆಯ ಸಹಾಯಕಿಯರಿಬ್ಬರು ಮಿಂಚಿನ ವೇಗದಲ್ಲಿ ಆಕೆಗೆ ಉತ್ಪನ್ನಗಳ ನೀಡುತ್ತಾರೆ. ಆಕೆ ಬಾಕ್ಸ್ ತೆರೆದು ಆ ಉತ್ಪನ್ನ ಯಾವುದು ಎಂಬುದನ್ನು ಕ್ಯಾಮರಾ ಮುಂದೆ ತೋರಿಸುತ್ತಾಳೆ. ಆದರೆ ಉತ್ಪನ್ನದ ಬೆಲೆ ಎಷ್ಟು?, ಯಾವೆಲ್ಲಾ ವೈಶಿಷ್ಟ್ಯ ಹೊಂದಿದೆ? ಯಾವ ಕಂಪನಿ ಈ ಯಾವುದೇ ಮಾಹಿತಿ ಆಕೆ ಹಂಚಿಕೊಳ್ಳುವುದಿಲ್ಲ.
ಕ್ಲಿಕ್ ಆಯ್ತು ಈ ಮಾದರಿ
ಲಕ್ಷಕ್ಕೂ ಅಧಿಕ ಮಂದಿ ವಿವಿಧ ಉತ್ಪನ್ನಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಪ್ರಚಾರ ಪಡಿಸುತ್ತಾರೆ. ಆದರೆ ಜೆಂಗ್ ನಿರ್ವಹಿಸುವ ಈ ವಿಧಾನ ಹೊಸತ್ತಾಗಿತ್ತು. ಕೇವಲ 3 ಸೆಕೆಂಡುಗಳ ಆಕೆಯ ವಿಶ್ಲೇಷಣೆಯು ಮಾರುಕಟ್ಟೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆಕೆಯ ವಿಡಿಯೋದಲ್ಲಿ ಕಾಣಿಸಿಕೊಂಡ ವಸ್ತುಗಳು ಮಾರುಕಟ್ಟೆಯಲ್ಲಿ ಬಿಕರಿಯಾದವು. ಹೀಗಾಗಿ ಆಕೆಯೊಂದಿಗೆ ಹತ್ತಾರು ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಮುಂದಾಗಿವೆ. ಅಲ್ಲದೆ ಆಕೆಯಿಂದ ಪ್ರಚಾರಕ್ಕೊಳಗಾದ ಉತ್ಪನ್ನಗಳ ಮಾರಾಟ ಗಗನಕ್ಕೇರಿದೆ ಎಂದು ವರದಿಯಾಗಿದೆ.
ಆಕೆಯ ಅನುಸರಿಸುವ ಸಾವಿರಾರು ಮಂದಿ
ಜೆಂಗ್ ವಿಡಿಯೋಗಳು ಆಕೆಯ ವಿವರಣೆ ನೀಡುವ ಸ್ಟೈಲ್ ನೋಡಿ ಸಾವಿರಾರು ಮಂದಿ ಆಕೆಯನ್ನೇ ಅನುಸರಿಸಲು ಮುಂದಾಗಿದ್ದಾರೆ. ಚೀನಾದಲ್ಲಿ ಲಭ್ಯವಿರುವ ಹತ್ತಾರು ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪ್ರಚಾರಕರು ಈಗ ಹೆಚ್ಚಾಗಿದ್ದು, ಪ್ರತಿಯೊಬ್ಬರು ಆಕೆಯ ಮಾದರಿಯನ್ನೇ ಫಾಲೋ ಮಾಡುತ್ತಿದ್ದಾರೆ.
ಅಚ್ಚರಿ ಏನೆಂದರೆ ಕೋಟಿ ಕೋಟಿ ಮಂದಿ ದಿನನಿತ್ಯ ಗಂಟೆಗಳ ಕಾಲ ಕಷ್ಟಪಟ್ಟರು ಇಷ್ಟೊಂದು ಹಣ ಸಂಪಾದನೆ ಮಾಡಲಾಗದೆ ಪರದಾಡುವಾಗ ಆಕೆ ಕೇವಲ 3 ಸೆಕೆಂಡುಗಳ ಪ್ರಚಾರ ಕಾರ್ಯ ಕೋಟಿ ಕೋಟಿ ಸಂಪಾದನೆಯ ದಾರಿಯಾಗಿರುವುದು ವಿಸ್ಮಯವೇ ಸರಿ.!



Click it and Unblock the Notifications