Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆನೆಯನ್ನೇ ಪಳಗಿಸುವ ಮಹಿಳೆ ಈಕೆ..! ಇದು ದೇಶದ ಏಕೈಕ ಮಹಿಳಾ ಮಾವುತ ಕಥೆ..!
ಹೆಣ್ಣು ಸಮಾಜದ ಕಣ್ಣು, ಹೆಣ್ಣಿನಿಂದ ಮಾತ್ರ ಒಂದು ಕುಟುಂಬ ಹಾಗೂ ಸಮಾಜದ ಏಳ್ಗೆ ಸಾಧ್ಯ ಎಂಬೆಲ್ಲಾ ಮಾತುಗಳನ್ನು ಕೇವಲ ಹೇಳಿಕೆಗಳಾಗಿ ಮಾತ್ರ ಕೇಳುತ್ತಿದ್ದೇವೆ. ಆದರೆ ಇಂದಿಗೂ ಒಂದಿಲ್ಲೊಂದು ಕಾರಣದಿಂದ ಮಹಿಳೆಯ ತುಳಿತ, ಅವಮಾನ ಸಾಗುತ್ತಲೇ ಇದೆ. ಆದರೆ ಆಕೆ ಈಗ ಎಲ್ಲವನ್ನು ಮಟ್ಟಿನಿಂತು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ, ಹಲವರಿಗೆ ಸ್ಫೂರ್ತಿಯಾಗಿದ್ದಾಳೆ, ಸಮಾನ ಹಕ್ಕುಗಳನ್ನು ಪಡೆಯುತ್ತಿದ್ದಾಳೆ, ನ್ಯಾಯಕ್ಕಾಗಿ ಹೋರಾಡುತ್ತಾಳೆ, ಲಕ್ಷಾಂತರ ಮಹಿಳೆಯರನ್ನು ಪ್ರೇರೇಪಿಸುತ್ತಿದ್ದಾಳೆ.
ಇದೇ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಸಾಧನೆ ಮಾಡಿರುವ ಮಹಿಳೆಯರು ಸೇರಿ ನಮ್ಮ ಸುತ್ತಮುತ್ತಲಿನ, ನಮ್ಮ ಒಡನಾಡಿಗಳಾದ ಮಹಿಳೆಯರ ಗೌರವಿಸುವ ದಿನ. ಅವರ ಸಾಧನೆ ಒತ್ತಿ ಹೇಳುವ ಇಡೀ ಜಗತ್ತಿಗೆ ಸಾರುವ ದಿನವಾಗಿದೆ.

ನಾವು ಈ ದಿನದಂದು ವಿಶಿಷ್ಟ ವಿಭಿನ್ನ ಸಾಧನೆ ಮಾಡಿರುವ ಮಹಿಳೆಯರ ಕುರಿತು ನೆನೆಯುವ ಮೂಲಕ ಅವರಿಗೆ ಗೌರವ ನೀಡೋಣ. ಇಂದು ನಾವು ದೇಶದ ಏಕೈಕ ಮಹಿಳಾ ಆನೆ ಮಾವುತ ಪರ್ಬತಿ ಬರುವಾ ಬಗ್ಗೆ ತಿಳಿದುಕೊಳ್ಳೋಣ. ಪಾರಂಪರಿಕವಾಗಿ ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲಿ ತಾನಾಗಿಯೇ ಆನೆಯನ್ನು ಪಳಗಿಸುವ ದಾರಿ ಕಂಡುಕೊಂಡು ಪದಶ್ರೀ ಪ್ರಶಸ್ತಿ ಪಡೆದ ಆಕೆಯ ಕಥೆ ಎಂತವರಿಗೂ ಸ್ಫೂರ್ತಿಯಾಗಿದೆ.
ಪರ್ಬತಿ ಬರುವಾ ಯಾರು?
ಈಗ 68 ವರ್ಷ ವಯಸ್ಸಿನ, ಹಸ್ತಿ ಕನ್ಯಾ ಎಂದೂ ಕರೆಯಲ್ಪಡುವ ಪರ್ಬತಿ ಬರುವಾ, ಅಸ್ಸಾಂನ ಗೌರಿಪುರದ ಸಣ್ಣ ಹಳ್ಳಿಯಲ್ಲಿ ಜನಿಸಿದ್ದರು. ಆನೆಗಳೆಂದರೆ ಅವಳಿಗೆ ಪ್ರಾಣವಂತೆ, ಜೊತೆಗೆ ಆಕೆಗೆ ಆನೆಗಳ ಜೊತೆ ಹೊಂದಾಣಿಕೆಯೂ ಇತ್ತು. ಅವಳು ಆನೆಗಳೊಂದಿಗೆ ಶತಮಾನಗಳಷ್ಟು ಹಳೆಯ ಸಂಬಂಧವನ್ನು ಹೊಂದಿರುವ ಅಸ್ಸಾಮಿ ಜಮೀನ್ದಾರರ ಕುಟುಂಬದಲ್ಲಿ ಜನಿಸಿದಳು ಮತ್ತು ಬಾಲ್ಯದಲ್ಲಿ ಅವರೊಂದಿಗೆ ಆಟವಾಡಲು ಪ್ರಾರಂಭಿಸಿದಳು. ವಾಸ್ತವವಾಗಿ, ಆಕೆಯ ತಂದೆ ಪ್ರಕೃತೇಶ್ ಬರುವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಆನೆ ತಜ್ಞರಾಗಿದ್ದರು.
ಆಕೆಯ ಕುಟುಂಬ ಆನೆಗಳ ಹಿಡಿದು ಮಾರಾಟ ಸರ್ಕಸ್‌ಗಳಿಗೆ ದೇವಾಲಯಗಳಿಗೆ ಮಾರಾಟ ಮಾಡುವ ಕಾರ್ಯ ಮಾಡುತ್ತಿತ್ತು. ಆದರೆ ಸರ್ಕಾರ ಈ ರೀತಿ ಆನೆಗಳ ಹಿಡಿದು ಮಾರಾಟ ಮಾಡುವುದು ಕಾನೂನು ಬಾಹಿತ ಎಂದು ನಿಯಮ ಜಾರಿ ಮಾಡಿತು. ಆದರೆ ಇದಕ್ಕೂ ಮೊದಲು ಬರುವಾ ಸಹ ಆನೆ ಹಿಡಿಯಲು ಕುಟುಂಬದ ಜೊತೆ ಹೋಗುತ್ತಿದ್ದಳು, ಆಕೆ ಮರಿ ಆನೆಯೊಂದನ್ನು ಸೆರೆಹಿಡಿದಾಗ ಆಕೆಗೆ ಇನ್ನೂ 14 ವರ್ಷ ವಯಸ್ಸಾಗಿತ್ತು.
ಆದರೆ ಸರ್ಕಾರ ಆನೆ ಹಿಡಿಯುವುದು ಮಾರಾಟ ನಿಷೇಧಿಸಿದ ಬಳಿಕ ಈ ಕುಟುಂಬ ಆನೆಗಳ ಸಂರಕ್ಷಣೆಗೆ ಮುಂದಾಯಿತು. ಬರುವಾ ಸಹ ಆನೆಗಳಿಗಾಗಿ ತನ್ನ ಜೀವನ ಮುಡುಪಿಟ್ಟಳು. ಆನೆಗಳ ಅರ್ಥಮಾಡಿಕೊಳ್ಳುವಲ್ಲಿ ಬರುವಾ ಗೆದ್ದಳು, ಆನೆಗಳನ್ನು ಹೇಗೆ ಪಳಗಿಸಬೇಕು, ಅವುಗಳಿಂದ ಜನರಿಗೆ ಹಾನಿಯಾಗುವುದನ್ನು ಹೇಗೆ ತಡೆಯಬೇಕು ಎಂಬುದನ್ನು ಆಕೆ ಅರಿತ್ತಿದ್ದಳು.
ಆನೆ ಮಾವುತ ಆಗಿ ಪ್ರಯಾಣ ಆರಂಭ
ಆಕೆ ಆನೆ ಮಾವುತ ಆಗುವುದಾಗಿ ನಿರ್ಧರಿಸಿದಳು, ಆಕೆ ಇಂದು ದೇಶದ ಮೊದಲು ಮತ್ತು ಏಕೈಕ ಮಹಿಳಾ ಆನೆ ಮವುತಾ ಆಗಿದ್ದಾಳೆ. ಮಾನವ-ಆನೆ ಸಂಘರ್ಷವನ್ನು ತಗ್ಗಿಸಲು ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾನೆ. ಕಾಡು ಆನೆಗಳನ್ನು ನಿಭಾಯಿಸಲು ಮತ್ತು ಸೆರೆಹಿಡಿಯಲು ಅವರು ಮೂರು ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಿದಳು. ಅಲ್ಲದೆ ಎಲ್ಲಿಯೇ ಆನೆ ಕಾರ್ಯಚರಣೆ ಇದ್ದರೂ ಆಕೆ ಹಾಜರಿರುತ್ತಾಳೆ. ಆನೆಗಳ ಪಾಲನೆ ಪೋಷಣೆಗೆಂದೆ ತನ್ನ ಇಡೀ ಜೀವನ ಮುಡುಪಾಗಿಟ್ಟಿದ್ದಾಳೆ. ಆನೆಗಳನ್ನು ತನ್ನ ಮಕ್ಕಳೆಂತೆ ನೋಡಿಕೊಳ್ಳುವುದಲ್ಲಿಯೂ ನೆಮ್ಮದಿ ಇದೆ ಆಕೆ ಹೇಳಿದ್ದಾಲೆ, ಅಲ್ಲದೆ ಮಹಿಳೆ ಮನಸ್ಸು ಮಾಡಿದರೆ ಯಾವ ಕೆಲಸವನ್ನಾದರೂ ಮಾಡಿ ಮುಗಿಸುತ್ತಾಳೆ ಎನ್ನುವುದಕ್ಕೆ ಪರ್ಬತಿ ಬರುವಾ ಒಳ್ಳೆಯ ಉದಾಹರಣೆ..



Click it and Unblock the Notifications
