Latest Updates
-
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ
ಶಿವನ ಫೋಟೋ ಅಥವಾ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?
ಶಿವನು ಅಭೂತಪೂರ್ವ ಶಕ್ತಿಯನ್ನು ಹೊಂದಿರುವ ಇಡೀ ಭೂ ಮಂಡಲವನ್ನೇ ಆಳುತ್ತಿರುವ ಒಂದು ದೈವೀಕ ಶಕ್ತಿ. ಯಾವ ವ್ಯಕ್ತಿಯು ಮನೆಯಲ್ಲಿ ಶಿವನ ಫೋಟೋ ಅಥವಾ ಮೂರ್ತಿಯನ್ನು ಇಟ್ಟುಕೊಂಡಿರುತ್ತಾನೋ ಅಂತಹ ಮನೆಯಲ್ಲಿ ಯಾವಾಗ್ಲೂ ಧನಾತ್ಮಕ ಶಕ್ತಿ ತುಂಬಿರುತ್ತಂತೆ. ಅಷ್ಟೇ ಅಲ್ಲ, ಅದರ ಜೊತೆಗೆ ಆ ಮನೆಯಲ್ಲಿ ಖುಷಿ ಹಾಗೂ ಸಮೃದ್ಧಿಯೂ ತುಂಬಿರುತ್ತಂತೆ.
ದೇವತೆಗಳಿಗೆಲ್ಲಾ ದೇವರು ಆ ಪರಮಶಿವ. ಪುರಾಣಗಳ ಪ್ರಕಾರ ಯಾರ ಮೇಲೆ ಶಿವನ ಆಶೀರ್ವಾದ ಇರುತ್ತದೆಯೋ ಅವರು ಎಂತಹ ಸಂಕಷ್ಟಗಳಿಂದ ಬೇಕಾದರೂ ಪಾರಾಗುತ್ತಾರಂತೆ. ಇದೇ ಕಾರಣಕ್ಕೆ ಹೆಚ್ಚಿನವರು ಮನೆಯಲ್ಲಿ ಶಿವನ ಮೂರ್ತಿ ಅಥವಾ ಫೋಟೋವನ್ನು ಇಟ್ಟುಕೊಂಡಿರುತ್ತಾರೆ.

ಆದರೆ ಮನೆಯಲ್ಲಿ ಶಿವನ ಮೂರ್ತಿ ಅಥವಾ ಫೋಟೋವನ್ನು ಹೇಗೆಂದರೆ ಹಾಗೆ ಇಡೋ ಹಾಗಿಲ್ಲ. ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಅಷ್ಟಕ್ಕು ಶಿವನ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿ ಇಡೋವಾಗ ಪಾಲಿಸಬೇಕಾದ ನಿಯಮಗಳು ಯಾವುದು ಅನ್ನೋದನ್ನು ತಿಳಿಯೋಣ.
ಮಹಾದೇವನ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಶಿವ ಫೋಟೋವನ್ನು ಯಾವಾಗಲೂ ಮನೆಯ ಉತ್ತರ ದಿಕ್ಕಿನಲ್ಲೇ ಇಡಬೇಕಂತೆ. ಯಾಕಂದ್ರೆ ಶಿವನು ವಾಸ ಮಾಡುವ ಕೈಲಾಸ ಉತ್ತರ ದಿಕ್ಕಿನಲ್ಲಿ ಇರೋದ್ರಿಂದ ಅದೇ ದಿಕ್ಕಿನಲ್ಲಿ ಶಿವನ ಫೋಟೋ ಇಡೋದು ಉತ್ತಮ ಅಂತ ಹೇಳಲಾಗುತ್ತದೆ. ಇನ್ನೂ ಉಗ್ರ ರೂಪಿಯಾದ ಶಿವ ಫೋಟೋ ಅಥವಾ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳೋದು ಒಳ್ಳೆಯದಲ್ಲ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುತ್ತಂತೆ. ಹೀಗಾಗಿ ಶಾಂತರೂಪಿಯಾದ ಶಿವನ ಫೋಟೋ ಅಥವಾ ಮೂರ್ತಿಯನ್ನು ಮಾತ್ರ ಇಟ್ಟುಕೊಳ್ಳಿ.
ಶಿವನ ಎಂತಹ ಫೋಟೋಗಳು ಮನೆಯಲ್ಲಿದ್ದರೆ ಉತ್ತಮ?
ವಾಸ್ತು ಶಾಸ್ತ್ರದ ಪ್ರಕಾರ ಮಾರುಕಟ್ಟೆಯಲ್ಲಿ ಕೈಗೆ ಸಿಕ್ಕ ಫೋಟೋವನ್ನು ಮನೆಯಲ್ಲಿ ತಂದಿಡಬಾರದು. ಅದಕ್ಕೂ ಕೆಲವೊಂದು ನಿಯಮಗಳಿವೆ. ಶಿವನು ನಗುತ್ತಾ ಅಥವಾ ಶಾಂತರೂಪಿಯಾಗಿರುವ ಶಿವನ ಫೋಟೋಗಳನ್ನು ಮನೆಗೆ ತಂದೆ ಒಳ್ಳೆಯದು. ನಂಬಿಕೆಗಳ ಪ್ರಕಾರ ಇದರಿಂದ ಮನೆಯಲ್ಲಿ ಶಾಂತಿ ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ.
ಶಿವನ ಕುಟುಂಬದ ಫೋಟೋವನ್ನು ಮನೆಯಲ್ಲಿ ಹಾಕಿ
ಆ ಮಹಾದೇವನು ಕೂಡ ಕುಟುಂಬಸ್ಥ. ಹೀಗಾಗಿ ಶಿವನ ಕುಟುಂಬದ ಫೋಟೋ ಅಂದರೆ ಶಿವ , ಪಾರ್ವತಿ ಹಾಗೂ ಮಕ್ಕಳಿರೋ ಫೋಟೋವನ್ನು ಮನೆಯಲ್ಲಿ ಹಾಕಿದರೆ ತುಂಬಾನೇ ಒಳ್ಳೆಯದು. ಇದರಿಂದ ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾಗೋದಿಲ್ವಂತೆ. ಇನ್ನೂ ಮಕ್ಕಳು ಕೂಡ ಪೋಷಕರಿಗೆ ಪ್ರಾಮಾಣಿಕರಾಗಿ ಇರುತ್ತಾರಂತೆ. ಹೀಗಾಗಿ ಶಿವನ ಕುಟುಂಬದ ಫೋಟೋ ಇಟ್ಟರೆ ಶುಭ ಫಲಿತಾಂಶಗಳನ್ನು ನೀಡಲಿದೆ.
ಶಿವನ ಮೂರ್ತಿಯನ್ನು ಮನೆಯ ಯಾವ ಜಾಗದಲ್ಲಿ ಇಡಬೇಕು?
ವಾಸ್ತು ಶಾಸ್ತ್ರ ಪ್ರಕಾರ ಒಂದು ವೇಳೆ ನೀವು ಶಿವನ ಮೂರ್ತಿಯನ್ನು ನಿಮ್ಮ ಮನೆಯಲ್ಲಿ ಇಡೋದಕ್ಕೆ ಇಷ್ಟ ಪಟ್ಟರೆ ಅದನ್ನು ಮನೆಯಲ್ಲಿ ಎಲ್ಲರಿಗೂ ಕಾಣುವಂತೆ ಇಡಬೇಕಂತೆ. ಅದನ್ನು ಪ್ರತಿಯೊಬ್ಬರು ನೋಡುವಂತಿರಬೇಕು. ಅಂತಹ ಸ್ಥಳದಲ್ಲಿ ಶಿವನ ಮೂರ್ತಿ ಇಟ್ಟರೆ ಒಳ್ಳೆಯದು.
ಏಕಾದಶ ರುಧ್ರಮಂತ್ರ :
ಶಿವನ ಏಕಾದಶ ರುಧ್ರ ಮಂತ್ರವನ್ನು ನಿತ್ಯ ಪಠಿಸಿದರೆ ಒಳ್ಳೆಯದಾಗುತ್ತಂತೆ. ಈ ಮಂತ್ರವನ್ನು ಪಠಿಸುತ್ತಿದ್ದರೆ ಶಿವನ ಹನ್ನೊಂದು ರೂಪಗಳು ಸಂತೃಪ್ತರಾಗುತ್ತಾರಂತೆ.
ಕಪಾಲಿ- ಓಂ ಹುಂ ಹಂ ಸತೃಸ್ತಮ್ಭನಾಯ ಹುಂ ಹುಂ ಓಂ ಫಟ್
ಪಿಂಗಲ - ಓಂ ಶ್ರೀಂ ಹ್ರೀಂ ಶ್ರೀಂ ಸರ್ವ ಮಂಗಳಾಯ ಪಿಂಗಲಾಯ ಓಂ ನಮಃ
ಭೀಮ - ಓಂ ಐಂ ಐಂ ಮನೋ ವಾಂಛಿತ ಸಿದ್ಧಾಯ ಐಂ ಐಂ ಓಂ
ವಿರೂಪಾಕ್ಷ - ಓಂ ರುದ್ರಾಯ ರೋಗನಾಶಾಯ ಆಗಚ ಚ ರಾಮ ಓಂ ನಮಃ
ವಿಲೋಹಿತ - ಓಂ ಶ್ರೀಂ ಹ್ರೀಂ ಸಂ ಸಂ ಹ್ರೀಂ ಶ್ರೀಂ ಶಂಕರಶನಾಯ ಓಂ
ಶಾಸ್ತಾ - ಓಂ ಹ್ರೀಂ ಹ್ರೀಂ ಸಾಫಲ್ಯೈ ಸಿದ್ಧಯೇ ಓಂ ನಮಃ
ಅಜಪದ - ಓಂ ಶ್ರೀಂ ಬಾಂ ಸೌಫ್ ಬಲವರ್ಧನಾಯ ಬಾಲೇಶ್ವರಾಯ ರುದ್ರಾಯ ಫುಟ್ ಓಂ
ಅಹಿರ್ಬುಧನ್ಯಾ - ಓಂ ಹ್ರಾಂ ಹ್ರೀಂ ಹುಂ ಸಮಸ್ತ ಗ್ರಹ ದೋಷ ವಿನಾಶಾಯ ಓಂ
ಶಂಭು - ಓಂ ಗಂ ಹ್ಲಂ ಶ್ರೂಂ ಗ್ಲೌಂ ಗಂ ಓಂ ನಮಃ
ಚಂದ - ಓಂ ಚುಂ ಚಂಡೀಶ್ವರಾಯ ತೇಜಸಾಯ ಚುಂ ಓಂ ಫುಟ್
ಭವ - ಓಂ ಭಾವೋದ್ ಭವ ಸಂಭವಾಯ ಇಷ್ಟ ದರ್ಶನ ಓಂ ಸಂ ಓಂ ನಮಃ
ಶಿವನನ್ನು ಒಲಿಸಿಕೊಳ್ಳೋದಕ್ಕೆ ರಾಶಿ ರಾಶಿ ದುಡ್ಡು ಸುರಿಯಬೇಕಾಗಿಲ್ಲ. ನಮ್ಮ ಮನಸ್ಸಿನಲ್ಲಿ ನಿಷ್ಕಲ್ಮಶ ಭಕ್ತಿ ಇದ್ದರೆ ಸಾಕು. ಖಂಡಿತ ಶಿವ ಒಲಿಯದೇ ಇರೋದಿಲ್ಲ.



Click it and Unblock the Notifications
