Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ವಾಸ್ತು ಪ್ರಕಾರ ಮನೆಯ ಬಾತ್ ರೂಂ ಹೀಗಿದ್ದರೆ ಆಪತ್ತು ಗ್ಯಾರಂಟಿ!
ಮನೆ ಕಟ್ಟುವಾಗ ವಾಸ್ತು ಪ್ರಕಾರ ಮನೆ ಕಟ್ಟುವುದು ತುಂಬಾನೇ ಮುಖ್ಯವಾಗುತ್ತದೆ. ಒಂದು ವೇಳೆ ನಮ್ಮ ಮನೆಯ ವಾಸ್ತು ಏನಾದರೂ ಸರಿ ಇರದೇ ಹೋದರೆ ಅದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೌಟುಂಬಿಕ, ಆರ್ಥಿಕ ಇನ್ನಿತರ ಅಪಾಯಗಳು ಎದುರಾಗುವ ಸಾಧ್ಯತೆ ಇರುತ್ತದೆ.

ನಾವು ಕಟ್ಟಿರೋ ಮನೆಯಲ್ಲಿ ನಮಗೆ ಸುಖ, ಶಾಂತಿ, ಸಮೃದ್ಧಿ ಸಿಗಬೇಕಂದ್ರೆ ಮನೆಯ ಮೂಲೆ ಮೂಲೆಯ ವಾಸ್ತುವಿನ ಬಗ್ಗೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗುತ್ತದೆ. ಅದ್ರಲ್ಲೂ ಮುಖ್ಯವಾಗಿ ಬಾತ್ ರೂಂ ವಾಸ್ತು ಬಗ್ಗೆ ಕೂಡ ವಿಶೇಷ ಗಮನ ಕೊಡಬೇಕಾಗುತ್ತದೆ. ಅಷ್ಟಕ್ಕೂ ಬಾತ್ ರೂಂ ವಾಸ್ತು ಹೇಗಿರಬೇಕು? ಬಾತ್ ರೂಂ ನ ಗೋಡೆಯ ಬಣ್ಣ ಹಾಗೂ ಇನ್ನಿತರ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.
ಬಾತ್ ರೂಂ ನ ಗೋಡೆ ಯಾವ ಬಣ್ಣದಲ್ಲಿರಬೇಕು?
ಸ್ನಾನಗೃಹದ ಗೋಡೆಗಳ ಬಣ್ಣವು ಗಾಢ ನೀಲಿ, ಹಳದಿ, ನೇರಳೆ ಅಥವಾ ಕೆಂಪು ಬಣ್ಣದ್ದಾಗಿರಬಾರದು. ಬಾತ್ ರೂಂಗೆ ಕೇವಲ ತಿಳಿ ಬಣ್ಣಗಳನ್ನು ಬಳಸಬೇಕು. ಅಂದರೆ ಬಿಳಿ, ಕೆನೆ ಮತ್ತು ಆಕಾಶ ಬಣ್ಣಗಳನ್ನು ಮಾತ್ರ ಬಳಸುವುದು ವಾಸ್ತು ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಬಾತ್ ರೂಂ ಬಾಗಿಲ ಬಣ್ಣ ಹೇಗಿರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮರದ ಬಾಗಿಲನ್ನು ಸ್ನಾನಗೃಹಕ್ಕೆ ಬಳಸುವುದು ಒಳ್ಳೆಯದೆಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿ ಸ್ನಾನಗೃಹವನ್ನು ನಿರ್ಮಿಸುವಾಗ ನೀವು ಮರದ ಬಾಗಿಲನ್ನು ಮಾತ್ರ ಬಳಕೆ ಮಾಡಬೇಕು. ಇದರ ಹೊರತಾಗಿ ನೀವು ಕಬ್ಬಿಣದ ಬಾಗಿಲನ್ನು ಬಳಸಬಾರದು. ಇನ್ನೂ ಬಾತ್ ರೂಂ ಬಾಗಿಲಿನ ಮೇಲೆ ಕಪ್ಪು ಬಣ್ಣವನ್ನು ಬಳಸುವುದನ್ನು ತಪ್ಪಿಸಿ. ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಅಲ್ಲದೆ, ಯಾವುದೇ ಕಾರಣಕ್ಕೆ ಮುರಿದ ಬಾಗಲನ್ನು ಬಾತ್ ರೂಂ ಗೆ ಬಳಸದಿರಿ. ಒಂದಾ ದುರಸ್ತಿ ಮಾಡಿಸಿ, ಇಲ್ಲವಾದರೆ ಅದನ್ನು ಬದಲಾಯಿಸಿ.
ಮಗ್ ಮತ್ತು ಬಕೆಟ್ ಯಾವ ಬಣ್ಣದಾಗಿರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಬಾತ್‌ರೂಮ್‌ನಲ್ಲಿರುವ ಮಗ್ ಮತ್ತು ಬಕೆಟ್‌ಗಳ ಬಣ್ಣದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಅವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಬಾತ್ ರೂಂನಲ್ಲಿ ನೀವು ಕಪ್ಪು ಉಣ್ಣೆಬಟ್ಟೆ, ಕಂದು ಮತ್ತು ನೇರಳೆ ಬಣ್ಣದ ಮಗ್ ಮತ್ತು ಬಕೆಟ್ ಗಳನ್ನು ಬಳಸಬಾರದು.
ವಾಸ್ತು ಶಾಸ್ತ್ರದ ಮಾರ್ಗಸೂಚಿಗಳ ಪ್ರಕಾರ ನಿಮ್ಮ ಬಾತ್ ರೂಂ ನಲ್ಲಿ ನೀವು ನೀಲಿ ಬಣ್ಣದ ಮಗ್ ಗಳು ಮತ್ತು ಬಕೆಟ್ ಗಳನ್ನು ಬಳಸಬೇಕು. ವಾಸ್ತು ಪ್ರಕಾರ ನೀಲಿ ಬಣ್ಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತು ಅದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ.
ವಾಷ್ ಬೇಸಿನ್ ಈ ಬಣ್ಣದಲ್ಲಿರಲಿ!
ನಿಮ್ಮ ಮನೆಯ ಬಾತ್ ರೂಂ ನ ವಾಶ್ ಬೇಸಿನ್ ಬಗ್ಗೆ ಕೂಡ ನೀವು ಕಾಳಜಿ ವಹಿಸಬೇಕು. ಏಕೆಂದರೆ ವಾಸ್ತು ಶಾಸ್ತ್ರದಲ್ಲಿ ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಹೀಗಾಗಿ ವಾಷ್ ಬೇಸಿನ್ ತಿಳಿ ಬಣ್ಣದಲ್ಲಿದ್ದರೆ ಒಳ್ಳೆಯದು.
ಬಾತ್ ರೂಂ ನ ಬಣ್ಣಕ್ಕಾಗಿ ವಾಸ್ತು ಟಿಪ್ಸ್!
* ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹವನ್ನು ನಿರ್ಮಿಸುವಾಗ ನೀವು ಗಾಢ ಬಣ್ಣಗಳನ್ನು ಬಳಸಲೇಬಾರದು.
* ಸ್ನಾನಗೃಹಕ್ಕೆ ತಿಳಿ ಬಣ್ಣಗಳನ್ನು ಬಳಸಬೇಕು ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
* ಬಾತ್ ರೂಂ ನಲ್ಲಿ ಗಾಢ ಬಣ್ಣದ ಮಗ್ ಮತ್ತು ಬಕೆಟ್ ಗಳನ್ನು ಬಳಸಬಾರದು. ನೀವು ಬಿಳಿ ಬಣ್ಣದ ಬಕೆಟ್ ಅನ್ನು ಬಳಸಬಹುದು.
* ವಾಸ್ತು ಶಾಸ್ತ್ರದ ಪ್ರಕಾರ ವಾಶ್ ಬೇಸಿನ್ ನ ಬಣ್ಣ ತಿಳಿ ಬಣ್ಣದಲ್ಲಿರಬೇಕು
* ನಿಮ್ಮ ಬಾತ್ರೂಮ್ ಮತ್ತು ಟಾಯ್ಲೆಟ್ ಒಟ್ಟಿಗೆ ಇದ್ದರೆ, ಟಾಯ್ಲೆಟ್ ಸೀಟಿನ ಬಣ್ಣ ತಿಳಿ ಬಣ್ಣದಲ್ಲಿರಲಿ.
ಮನೆಯಲ್ಲಿ ಬಾತ್ ರೂಂ ನಿರ್ಮಿಸುವಾಗ ಈ ಎಲ್ಲಾ ವಿಚಾರದ ಬಗ್ಗೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications
