Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರಮಹಾಲಕ್ಷ್ಮೀ 2023: ವರಮಹಾಲಕ್ಷ್ಮೀ ಹಬ್ಬದಂದು ಯಾವ ರಾಶಿಯವರು ಯಾವ ಮಂತ್ರ ಪಠಿಸಿದ್ರೆ ಶುಭ!
ಭಾರತದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಅದ್ರಲ್ಲೂ ದಕ್ಷಿಣ ಭಾರತೀಯರಿಗೆ ಈ ಹಬ್ಬ ಮತ್ತಷ್ಟು ವಿಶೇಷ ಅಂತಾನೇ ಹೇಳಬಹುದು. ಏಕೆಂದರೆ ವರ ಮಹಾಲಕ್ಷ್ಮೀ ವ್ರತವನ್ನು ಭಕ್ತಿಯಿಂದ ಆಚರಿಸಿದ್ರೆ ತಾಯಿ ಲಕ್ಷ್ಮೀಯು ಸಂಪತ್ತು ಹಾಗೂ ಸಮೃದ್ಧಿಯನ್ನು ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.

ಹೆಚ್ಚಿನ ಜನ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರು ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಈ ದಿನ ವಿಶೇಷ ಪೂಜೆಯನ್ನು ಸಲ್ಲಿಸಬಹುದು. ಮುಖ್ಯವಾಗಿ ಈ ದಿನ ಮಂತ್ರಗಳನ್ನು ಪಠಿಸುವ ಮೂಲಕ ದೇವಿಯ ಅನುಗ್ರಹವನ್ನು ಪಡೆಯಬಹುದು. ಅದ್ರಲ್ಲೂ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಬೇಕೆಂದರೆ ನೀವು ನಿಮ್ಮ ರಾಶಿಯ ಪ್ರಕಾರ ಮಂತ್ರಗಳನ್ನು ಪಠಣೆ ಮಾಡಬೇಕು. ಅಷ್ಟಕ್ಕು ಲಕ್ಷ್ಮೀಯ ಅನುಗ್ರಹ ಪಡೆಯಲು ಯಾವ ರಾಶಿಯವರು ಯಾವ ಮಂತ್ರವನ್ನು ಪಠಣೆ ಮಾಡಬೇಕು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯನ್ನು ಮಂಗಳನು ಆಳುತ್ತಿದ್ದಾನೆ. ವರಮಹಾಲಕ್ಷ್ಮಿಯ ದಿನದಂದು ಈ ರಾಶಿಯವರು ಶ್ರೀ ಲಕ್ಷ್ಮಿ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರ ಹೊರತಾಗಿ ನೀವು ಓಂ ಆಮ್ ಕ್ಲೀಂ ಸೌಂ ಎಂಬ ಲಕ್ಷ್ಮಿ ಮಂತ್ರವನ್ನು ಸಹ ಪಠಿಸಬಹುದು. ಈ ಮಂತ್ರವು ನಿಮಗೆ ಸಂಪತ್ತನ್ನು ತರುತ್ತದೆ.
ವೃಷಭ ರಾಶಿ
ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ. ಈ ರಾಶಿಯವರು ಬಹಳ ಜವಾಬ್ದಾರಿಯುತರು ಎಂದು ನಂಬಲಾಗಿದೆ. ವೃಷಭ ರಾಶಿಯವರು ವರಮಹಾಲಕ್ಷ್ಮಿ ದಿನದಂದು ಈ ಕೆಳಗಿನ ಲಕ್ಷ್ಮಿ ಮಂತ್ರವನ್ನು ಪಠಿಸಬೇಕು.
ಮಂತ್ರ : ಓಂ ಸರ್ವಬಾಧ ವಿನಿರ್ಮುಕ್ತೋ, ಧನ ಧಾನ್ಯಃ ಸುತಾನ್ವಿತಃ| ಮಾಂಸಿನೋ ಮತ್ಪ್ರಸಾದೇನ ಭಾವಿಹತಿ ನ ಸಂಶಯಃ||
ಮಿಥುನ ರಾಶಿ
ಮಿಥುನ ರಾಶಿಯವರು ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಈ ದಿನ ಲಕ್ಷ್ಮಿ ದೇವಿಯನ್ನು ಶುದ್ಧ ಮನಸ್ಸು ಮತ್ತು ದೇಹದಿಂದ ಪೂಜಿಸಿದ್ರೆ ದೇವಿಯು ಆಶೀರ್ವದಿಸುತ್ತಾಳಂತೆ. ಹಬ್ಬದ ದಿನ ಮಿಥುನ ರಾಶಿಯವರು ಓಂ ಶೃಂಗ ಶ್ರೀಯೇ ನಮಃ ಎಂಬ ಮಂತ್ರವನ್ನು ಪಠಿಸಿದರೆ ಒಳ್ಳೆಯದು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯನ್ನು ಚಂದ್ರನು ಆಳುತ್ತಾನೆ. ಕುಟುಂಬವನ್ನು ತುಂಬಾ ಪ್ರೀತಿಸುವ ಈ ರಾಶಿಯವರು ಕುಟುಂಬದ ಒಳಿತಿಗಾಗಿ "ಓಂ ಶ್ರೀ ಮಹಾಲಕ್ಷ್ಮಯೀ ಚ ವಿದ್ಮಹೇ.. ವಿಷ್ಣು ಪತ್ನ್ಯೇಚ ಧೀಮಹಿ.. ತನ್ನೋ ಲಕ್ಷ್ಮೀಃ ಪ್ರಚೋದಯಾತ್ ಓಂ" ಎಂಬ ಮಂತ್ರವನ್ನು ಜಪಿಸಬೇಕು. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೃಪೆಯನ್ನು ತೋರುತ್ತಾಳೆ.
ಸಿಂಹ ರಾಶಿ
ಸಿಂಹ ರಾಶಿಯನ್ನು ಸೂರ್ಯನು ಆಳುತ್ತಿದ್ದಾನೆ. ಸಿಂಹ ರಾಶಿಯಲ್ಲಿ ಜನಿಸಿದವರು ಈ ವರಮಹಾಲಕ್ಷ್ಮೀ ದಿನದಂದು "ಪರ್ವದಿನಾನ ಓಂ ಶ್ರೀ ಮಹಾಲಕ್ಷ್ಮಿಯೇ ನಮಃ" ಎಂಬ ಮಂತ್ರವನ್ನು ಪಠಿಸಬೇಕು. ಸಿಂಹ ರಾಶಿಯವರು ಈ ಮಂತ್ರ ಪಠಿಸಿದ್ರೆ ಲಕ್ಷ್ಮೀಯು ಸಂತುಷ್ಟಳಾಗುತ್ತಾಳಂತೆ.
ಕನ್ಯಾರಾಶಿ
ಕನ್ಯಾ ರಾಶಿಯನ್ನು ಬುಧನು ಆಳುತ್ತಿದ್ದಾನೆ. ವರ ಮಹಾಲಕ್ಷ್ಮೀ ಹಬ್ಬದ ದಿನ ಕನ್ಯಾ ರಾಶಿಯಲ್ಲಿ ಜನಿಸಿದವರು ಓಂ ಹ್ರೀಂ ಶ್ರೀಂ ಕ್ಲೀಂ ಮಹಾ ಲಕ್ಷ್ಮೀ ನಮಃ ಎಂಬ ಲಕ್ಷ್ಮೀ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮಗೆ ಲಕ್ಷ್ಮೀ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ, ವರಮಹಾಲಕ್ಷ್ಮಿ ಹಬ್ಬದಂದು ಈ ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಸಂಪತ್ತು, ಧಾನ್ಯ ಸಂಪತ್ತು ಹೆಚ್ಚಾಗುತ್ತಂತೆ.
ತುಲಾ ರಾಶಿ
ತುಲಾ ರಾಶಿಯವರು ವರ ಮಹಾಲಕ್ಷ್ಮೀ ಹಬ್ಬದ ದಿನದಂದು ಓಂ ಹ್ರೀಂ ಶ್ರೀಂ ಕ್ಲೀಂ ಮಹಾ ಲಕ್ಷ್ಮೀ ನಮಃ ಲಕ್ಷ್ಮಿಯ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮಗೆ ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಲು ಸಾಧ್ಯವಾಗುತ್ತದೆ. ವರಮಹಾಲಕ್ಷ್ಮಿ ಹಬ್ಬದ ದಿನದಂದು ಈ ಲಕ್ಷ್ಮೀ ದೇವಿಯ ಮಂತ್ರವನ್ನು ಪಠಿಸುವುದರಿಂದ ನಿಮಗೆ ಹಣ ಮತ್ತು ಧಾನ್ಯವನ್ನು ದೇವಿಯೂ ಕರುಣಿಸುತ್ತಾಳೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ವರಮಹಾಲಕ್ಷ್ಮಿ ಹಬ್ಬದ ದಿನದಂದು ಈ ಲಕ್ಷ್ಮಿ ಮಂತ್ರವನ್ನು ಪಠಿಸಬೇಕು. ಓಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ ಎಂದು ಹೇಳಿ.
ಧನು ರಾಶಿ
ಧನು ರಾಶಿಯವರು ವರಮಹಾಲಕ್ಷ್ಮೀ ಹಬ್ಬದ ದಿನದಂದು ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಎಂಬ ಮಂತ್ರವನ್ನು ಪಠಿಸಬೇಕು. ಧನು ರಾಶಿಯವರು ಈ ವರಮಹಾಲಕ್ಷ್ಮಿ ದಿನದಂದು ಈ ಮಂತ್ರವನ್ನು ಪಠಿಸುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿ ಎಂದು ಹೇಳಲಾಗುತ್ತದೆ. ವರಮಹಾಲಕ್ಷ್ಮೀ ಹಬ್ಬದ ದಿನದಂದು ಮಕರ ರಾಶಿಯವರು ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಐಂಗ್ ಮಂತ್ರವನ್ನು ಪಠಿಸಿದರೆ ಶುಭವಾಗುತ್ತೆ ಎನ್ನುವ ನಂಬಿಕೆಯಿದೆ.
ಕುಂಭ ರಾಶಿ
ಶನಿಯು ಕುಂಭ ರಾಶಿಯ ಅಧಿಪತಿ. ವರಮಹಾಲಕ್ಷ್ಮೀ ಹಬ್ಬದ ದಿನ ಕುಂಭರಾಶಿಯವರು ಲಕ್ಷ್ಮೀ ಮಂತ್ರ ಐಂ ಹ್ರೀಂ ಶ್ರೀಂ ಅಷ್ಟಲಕ್ಷ್ಮಿಯೇ ಹ್ರೀಂ.. ರಿಂ ಸಿಧ್ವೇ ಮಮ ಗೃಹೇ ಆಗಚಾಗಃ.. ನಮಃ ಸ್ವಾಹಾ ಶ್ರದ್ಧಾ ಎಂಬ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ನೀವು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯುತ್ತೀರಿ.
ಮೀನ ರಾಶಿ
ಮೀನ ರಾಶಿಯವರು ವರ ಮಹಾಲಕ್ಷ್ಮೀ ಹಬ್ಬದ ದಿನ ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ.. ಕಮಲಾಲಯ ಪ್ರಾಸೇದ್ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಿಯೇ ನಮಃ ವರಮಹಾಲಕ್ಷ್ಮೀ ಪರ್ವಾದಿನಾನಾ ಮಹಾಲಕ್ಷ್ಮಿ ಮಂತ್ರವನ್ನು ಪಠಿಸಬೇಕು. ಇದರಿಂದ ಲಕ್ಷ್ಮೀ ದೇವಿತ ಕೃಪೆ ಸದಾ ನಿಮ್ಮ ಮೇಲೆ ಇರುತ್ತಂತೆ. ಲಕ್ಷ್ಮಿ ದೇವಿಯ ಈ ಮಂತ್ರವನ್ನು ಪಠಿಸೋದ್ರಿಂದ ನಿಮ್ಮ ಹಣದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯವಾಗುತ್ತದೆ.



Click it and Unblock the Notifications