Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಆಗಸ್ಟ್ 25ಕ್ಕೆ ವರಲಕ್ಷ್ಮಿ ವ್ರತ: ಪೂಜೆಗೆ ಶ್ರೇಷ್ಠ ಮಹೂರ್ತ ಯಾವಾಗ?
ನಾಗರ ಪಂಚಮಿ ಮುಗಿಯುತ್ತಿದ್ದಂತೆ ವರಮಹಾಲಕ್ಷ್ಮಿ ಹಬ್ಬ ಯಾವಾಗ ಎಂದು ಕೇಳುತ್ತಿದ್ದಾರೆ. ವರಮಹಾಲಕ್ಷ್ಮಿ ಮಾಡುವುದರಿಂದ ಅಷ್ಟಲಕ್ಷ್ಮಿಯರನ್ನು ಪೂಜಿಸಿದರೆ ದೊರೆಯುವ ಫಲ ಸಿಗುವುದರಿಂದ ಈ ದಿನವನ್ನು ತುಂಬಾ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ, ಅಲ್ಲದೆ ಈ ದಿನ ಲಕ್ಷ್ಮಿಯ ಅಲಂಕಾರವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಆನಂದ.
ಸಂಪೂರ್ಣ ಅಲಂಕೃತೆಯಾದ ಲಕ್ಷ್ಮಿಯನ್ನು ನೋಡಿದಷ್ಟೂ ಸಾಕಾಗಲ್ಲ, ಅಷ್ಟೊಂದು ಚೆನ್ನಾಗಿ ಕಂಗೊಳಿಸುತ್ತಾಳೆ. ಇನ್ನು ಮನೆಯ ಹೆಣ್ಮಕ್ಕಳು ಕೂಡ ಸಾಕ್ಷಾತ್ ಲಕ್ಷ್ಮಿ ಸ್ವರೂಪಿಯರಾಗಿಯೇ ಕಾಣಿಸುತ್ತಾರೆ. ಹಬ್ಬಕ್ಕೆ ಶಾಪಿಂಗ್ ಕಾರ್ಯ ಈಗಾಗಲೇ ಶುರುವಾಗಿರುತ್ತದೆ ಅಲ್ವಾ?

ವರಮಹಾಲಕ್ಷ್ಮಿ ವ್ರತ ಯಾವಾಗ? ಪೂಜಾ ಮೂಹೂರ್ತದ ಸಮಯ, ಲಕ್ಷ್ಮಿ ಪೂಜೆಯ ನಿಯಮಗಳು ಇವುಗಳ ಕುರಿತು ತಿಳಿಯೋಣ:
ವರಲಕ್ಷ್ಮಿ ದಿನಾಂಕ ಹಾಗೂ ಪೂಜಾ ಮುಹೂರ್ತ
ಆಗಸ್ಟ್ 25 ಶುಕ್ರವಾರ
ಸಿಂಹ ಲಗ್ನ ಪೂಜಾ ಮುಹೂರ್ತ: ಬೆಳಗ್ಗೆ 06:05ರಿಂದ 07:44ರವರೆಗೆ
ಸಮಯ: 1 ಗಂಟೆ 38 ನಿಮಿಷ
ವೃಶ್ಚಿಕ ಲಗ್ನ ಪೂಜಾ ಮುಹೂರ್ತ: ಮಧ್ಯಾಹ್ನ 12 ಗಂಟೆಯಿಂದ 02:14ರವರೆಗೆ
ಸಮಯ: 2 ಗಂಟೆ 14 ನಿಮಿಷ
ಕುಂಭ ಲಗ್ನ ಪೂಜಾ ಮುಹೂರ್ತ: ಸಂಜೆ 06:10ರಿಂದ 07:48ರವರೆಗೆ
ಸಮಯ: 1 ಗಂಟೆ 38 ನಿಮಿಷ
ವೃಷಭ ಲಗ್ನ ಪೂಜಾ ಮುಹೂರ್ತ: ರಾತ್ರಿ 11:07ರಿಂದ ಮಧ್ಯರಾತ್ರಿ 01:08ರವರೆಗೆ
ಸಮಯ: 2 ಗಂಟೆ
ವರಲಕ್ಷ್ಮಿ ವ್ರತದ ನಿಯಮಗಳು
* ಈ ದಿನಕ್ಕಿಂತ ಮೊದಲೇ ಮನೆಯನ್ನು ಸ್ವಚ್ಛ ಮಾಡಬೇಕು.
* ವರಲಕ್ಷ್ಮಿ ದಿನದಂದು ಮನೆಯ ಮುಂದೆ ಮಾವಿನ ಎಲೆಯಿಂದ ತೋರಣ ಕಟ್ಟಬೇಕು, ಮನೆ ಮುಂದೆ ರಂಗೋಲಿ ಹಾಕಬೇಕು.
* ರಂಗೋಲಿಯಲ್ಲಿ ಲಕ್ಷ್ಮಿಯ ಹೆಜ್ಜೆಯನ್ನು ಬಿಡಿಸಬೇಕು, ಲಕ್ಷ್ಮಿ ಹೆಜ್ಜೆ ಮನೆಯೊಳಗಡೆ ಬರುವಂತಿರಬೇಕು.
* ಈ ದಿನ ಲಕ್ಷ್ಮಿ ಶ್ಲೋಕಪಠಿಸಬೇಕು
* ಲಕ್ಷ್ಮಿ ಪ್ರತಿಷ್ಠಾಪಿಸಿ ಅಲಂಕರಿಸಬೇಕು
* ಕಲಶವನ್ನು ಪ್ರತಿಷ್ಠಾಪಿಸಿ
* ಪೂಜೆ ಮುಗಿಯುವವರೆಗೆ ಮಹಿಳೆಯರು ಉಪವಾಸವನ್ನು ಮಾಡಬೇಕು.
* ಲಕ್ಷ್ಮಿಗೆ ದೈವೇದ್ಯವನ್ನು ಅರ್ಪಿಸಿ
* ಪೂಜೆಗೆ ಆಗಮಿಸಿದ ಮುತ್ತೈದೆಯರಿಗೆ ತಾಂಬೂಲ ನೀಡಿ ಅವರ ಆಶೀರ್ವಾದ ಪಡೆಯಿರಿ.
ವರಲಕ್ಷ್ಮಿ ವ್ರತಕತೆ ಓದಿ
ವರಲಕ್ಷ್ಮಿ ಮಹತ್ವದ ಬಗ್ಗೆ ಹೇಳುವಾಗ ಚಾರುಮತಿ ಉಪಕತೆಯನ್ನು ಹೇಳಲಾಗುವುದು. ಚಾರುಪತಿಯುತನ್ನ ಪತಿ ಹಾಗೂ ಕುಟುಂಬದ ಜೊತೆ ಲಕ್ಷ್ಮಿ ಪೂಜೆಯನ್ನು ಮಾಡುತ್ತಾಳೆ, ಲಕ್ಷ್ಮಿ ಪೂಜೆಯಿಂದ ಸಂತುಷ್ಟಳಾದ ಲಕ್ಷ್ಮಿ ದೇವಿಯು ಆಕೆಯ ಕನಸಿನಲ್ಲಿ ಕಾಣಿಸಿಕೊಂಡು ವರಲಕ್ಷ್ಮಿ ವ್ರತವನ್ನು ಮಾಡುವಂತೆ ಸೂಚಿಸುತ್ತಾಳೆ.ಅದರಂತೆ ಚಾರುಮತಿ ವ್ರತದ ನಿಯಮಗಳನ್ನು ಪಾಲಿಸಿ ಲಕ್ಷ್ಮಿಯ ಆರಾಧನೆ ಮಾಡುತ್ತಾಳೆ, ಈ ಪೂಜೆಯಿಂದ ಚಾರುಮತಿ ಕುಟುಂಬಕ್ಕೆ ತುಂಬಾ ಒಳ್ಳೆಯದಾಗುತ್ತದೆ, ಅಲ್ಲದೆ ಪೂಜೆಗೆ ಆಗಮಿಸಿದ ನೆರೆಹೊರೆಯವರಿಗೂ ಲಕ್ಷ್ಮಿ ಕೃಪೆಯಿಂದ ಒಳಿತಾಗುವುದು.



Click it and Unblock the Notifications
