Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಭಾರತದ ಈ 6 ಪ್ರಮುಖ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ
ಹಿಂದೂ ಧರ್ಮದಲ್ಲಿಅದರದ್ದೇ ನಂಬಿಕೆಗಲು, ಆಚರಣೆಗಳಿವೆ. ಅಲ್ಲದೆ ಪ್ರತಿಯೊಂದು ಹಿಂದೂ ದೇವಾಲಯಗಳಲ್ಲಿ ಕೆಲವೊಂದು ಪದ್ಧತಿಗಳಿವೆ. ಯಾರು ಆ ದೇವಾಲಯಕ್ಕೆ ಭೇಟಿ ನೀಡುತ್ತಾರೋ ಅವರು ಅದನ್ನು ಪಾಲಿಸಬೇಕಾಗುತ್ತದೆ. ಕೆಲವೊಂದು ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶವಿರಲ್ಲ, ಅದೇ ರೀತಿ ಕೆಲವೊಂದು ದೇವಾಲಯಗಳಲ್ಲಿ ಪುರುಷರಿಗೂ ಅನುಮತಿವಿರಲ್ಲ. ಪುರುಷರಿಗೆ ದೇವಾಲಯಕ್ಕೆ ಅನುಮತಿಯಿಲ್ಲದ ಆ ದೇವಾಲಯಗಳು ಯಾವುವು ಎಂದು ಗೊತ್ತೇ? ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ...

ಆಟುಕಲ್ ಭಗವತಿ ದೇವಾಲಯ
ಆಟುಕಲ್ ಭಗವತಿ ದೇವಾಲಯದಲ್ಲಿ ಪುರುಷರಿಗೆ ಪ್ರವೇಶವಿರಲ್ಲ. ಈ ದೇವಾಲಯ ಕೇರಳದಲ್ಲಿದೆ. ಪ್ರತೀವರ್ಷ 10 ದಿನಗಳವರೆಗೆ ತುಂಬಾನೇ ದೊಡ್ಡ ಪೂಜೆ ನಡೆಯುವುದು, ಆದರೆ ಇಲ್ಲಿಗೆ ಪುರುಷರಿಗೆ ಅವಕಾಶವಿರಲ್ಲ. ಸಾವಿರಾರು ಮಹಿಳೆಯರು 10 ದಿನಗಳಲ್ಲಿ ನಡೆಯುವ ಪ್ರಮುಖ ಪೂಜೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿಯ ಧಾರ್ಮಿಕ ಆಚರಣೆಯಲ್ಲಿ ಮಹಿಳೆಯರೇ ಇರುತ್ತಾರೆ. ಆದ್ದರಿಂದ ಅತ್ಯಧಿಕ ಮಹಿಳೆಯರು ಸೇರುವ ಧಾರ್ಮಿಕ ಆಚರಣೆ ಎಂದು ಗಿನ್ನಿಸ್ ರೆಕಾರ್ಡ್ ಮಾಡಿದೆ.
ರಾಜಾಸ್ಥಾನದ ಬ್ರಹ್ಮ ದೇವಾಲಯ
ಇಲ್ಲಿ ಬ್ರಹ್ಮನ ಪೂಜಿಸುವುದಾದರೂ ಪುರುರಿಗೆ ಈ ದೇವಾಲಯಕ್ಕೆ ಪ್ರವೇಶವಿಲ್ಲ. ಇದರ ಹಿಂದೆ ಪೌರಾಣಿಕ ಕತೆ ಕೂಡ ಇದೆ. ಬ್ರಹ್ಮ ಪತ್ನಿ ಸರಸ್ವತಿ ಜೊತೆ ಯಜ್ಞ ಮಾಡಬೇಕಾಗಿತ್ತು. ಸರಸ್ವತಿ ಯಜ್ಞಕ್ಕೆ ಬರಲು ತಡವಾದಾಗ ಬ್ರಹ್ಮ ಗಾಯತ್ರಿಯನ್ನು ವಿವಾಹವಾಗಿ ಯಜ್ಞ ಮಾಡುತ್ತಾನೆ. ಆಗ ಅಲ್ಲಿಗೆ ಬಂದ ಸರಸ್ವತಿ ಯಾವ ವಿವಾಹಿತ ಪುರುಷರು ಇಲ್ಲಿಗೆ ಬರುತ್ತಾರೋ ಅವರ ವೈವಾಹಿಕ ಜೀವನ ಹಾಳಾಗುವುದು ಎಂದು ಶಾಪ ನೀಡುತ್ತಾಳೆ ಎಂಬ ನಂಬಿಕೆ. ಈ ದೇವಾಲಯಕ್ಕೆ ಯಾವ ಪುರುಷರೂ ಹೋಗಿ ಪೂಜೆ ಸಲ್ಲಿಸುವುದಿಲ್ಲ.
ಮುಜಾಫರ್‌ನಗರದಲ್ಲಿರುವ ಮಾತಾ ದೇವಾಲಯ
ಅಸ್ಸಾಂನಲ್ಲಿರುವ ಈ ದೇವಾಲಯದ ಒಳಗಡೆ ಕೂಡ ಪುರುಷರಿಗೆ ಪ್ರವೇಶವಿಲ್ಲ. ಇಲ್ಲಿ ನಿಯಮಗಳನ್ನು ತುಂಬಾನೇ ಕಟ್ಟುನಿಟ್ಟಾಗಿ ಪಾಲಿಸಲಾಗುವುದಿಲ್ಲ. ಇಲ್ಲಿ ಪೂಜೆ ಮಾಡಲು ಕೂಡ ಪುರುಷ ಪೂಜಾರಿಯಿಲ್ಲ. ಮಾತೆಯ ಆರಾಧಾನೆಗೆ ಮಾತೆಯರಿಗಷ್ಟೇ ಅವಕಾಶ.
ಕನ್ಯಾ ಕುಮಾರಿಯಲ್ಲಿರುವ ದೇವಿ ಕನ್ಯಾಕುಮಾರಿ
ನೀವು ಕನ್ಯಾಕುಮಾರಿಗೆ ಹೋದಾಗ ಈ ದೇವಾಲಯದ ಬಗ್ಗೆ ಕೇಳಿರಬಹುದು. ಈ ದೇವಾಲಯದಲ್ಲಿ ಪುರುಷರಿಗೆ ದೇವರ ದೇವಿಯ ಪಡೆಯಲು ಅನುಮತಿಯಿಲ್ಲ. ಇವತ್ತಿಗೂ ಈ ದೇವಾಲಯಕ್ಕೆ ಮಹಿಳೆಯರಷ್ಟೇ ಹೋಗುತ್ತಾರೆ. ಭಾರತದಲ್ಲಿರುವ 52 ಶಕ್ತಿ ಪೀಠದಲ್ಲಿ ಈ ದೇವಾಲಯ ಕೂಡ ಒಂದಾಗಿದೆ. ಇಲ್ಲಿ ಭಗವತಿ ದೇವಿಯನ್ನು ಆರಾಧಿಸಲಾಗುವುದು.
ಕಾಮಕ್ಯ ದೇವಾಲಯ
ಮುಟ್ಟಿನ ದೇವತೆ ಎಂದು ಕರೆಯಲ್ಪಡುವ ಈ ದೇವಾಲಯಕ್ಕೆ ಕೂಡ ಪುರುಷರ ಅನುಮತಿಯಿಲ್ಲ. ಅಂಬುಬಾಚಿ ಮೇಳದಲ್ಲಿ 3 ದಿನಗಳವರೆಗೆ ದೇವಿಯ ದರ್ಶನವಿರುವುದಿಲ್ಲ. ಇದು ದೇವಿಯ ಋತುಸ್ರಾವದ ಸಮಯ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಇಲ್ಲಿಗೆ ಪುರುಷರ ಅನುಮತಿಯಿಲ್ಲ.



Click it and Unblock the Notifications