Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಿದೇಶದಲ್ಲೂ ಭಾರತದ ಕೀರ್ತಿ ಹಾರಿಸಿದ ಮಹಿಳೆ: ಆಕೆ ಕಟ್ಟಿದ್ದು 75 ಸಾವಿರ ಕೋಟಿ ಸಾಮ್ರಾಜ್ಯ
ಪುರುಷ ಪ್ರಧಾನ ಸಮಾಜ ವ್ಯವಸ್ಥೆ ಎಂಬ ಕಲ್ಪನೆ ಈಗ ದೂರಾಗಿದೆ. ಮಹಿಳೆಯರು ಸಹ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಕಾಲಿರಿಸಿದ್ದಾರೆ. ದೇಶದ ಬಹುಪಾಲು ಎಲ್ಲಾ ರಂಗದಲ್ಲೂ ಅವರು ಸಾಧನೆ ಮಾಡುತ್ತಿದ್ದಾರೆ. ದೇಶದಲ್ಲಿ ಶ್ರೀಮಂತ ಮಹಿಳೆಯಿಂದ ಹಿಡಿದು ಅತೀ ದೊಡ್ಡ ಕಂಪನಿಯನ್ನೂ ಮಹಿಳೆಯರು ಕಟ್ಟಿ ಬೆಳೆಸಿದ್ದಾರೆ. ಹಾಗಾದರೆ ನಾವು ಮಹಿಳಾ ದಿನಾಚರಣೆಯ ಭಾಗವಾಗಿ ಇಂತಹ ಸಾಧನೆ ಮಾಡಿರುವ ಮಹಿಳೆಯರ ಕುರಿತು ತಿಳಿದುಕೊಳ್ಳೋಣ.
ಮೊದಲೆ ಹೇಳಿದಂತೆ ಮಹಿಳೆಯರು ಸಾಧನೆ ಮಾಡದ ಕ್ಷೇತ್ರವೇ ಇಲ್ಲದಂತಾಗಿದೆ. ಇದೀಗ ಭಾರತೀಯರು ವಿದೇಶಿ ನೆಲದಲ್ಲೂ ಸಹ ತಮ್ಮ ಚಾಪು ಮೂಡಿಸಿದ್ದು, ಅಲ್ಲಿಯೂ ಯಾರು ಮಾಡಿರದ ಸಾಧನೆ ಮಾಡಿದ್ದಾರೆ. ನಾವಿಂದು ಹೇಳುತ್ತಿರೋದು ಹೀಗೆ ದೇಶವಲ್ಲ ವಿದೇಶದ ನೆಲದಲ್ಲಿ ಸಾಧನೆ ಮಾಡಿರುವ ಮಹಿಳೆಯ ಬಗ್ಗೆ.

ನೇಹಾ ನರ್ಕಡೆ ಎಂಬಾಕೆ ಪುಣೆಯಲ್ಲಿ ಜನಿಸಿದರೂ ವಿದೇಶದಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಿ ಯಶಸ್ವಿಯಾಗಿದ್ದಾರೆ. ಮಹಿಳಾ ಉದ್ಯಮಿಯಾಗಿ ಸಾವಿರಾರು ಮಂದಿಗೆ ಕೆಲಸ ಕೊಟ್ಟಿದ್ದು ಅಲ್ಲದೆ ವಿದೇಶದಲ್ಲಿ ಭಾರತದ ಹೆಸರು ಪ್ರಜ್ವಲಿಸುವಂತೆ ಮಾಡಿದ್ದಾರೆ. ಅಮೆರಿಕದಲ್ಲಿ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿ ಎಂಬ ಹೆಸರು ಗಳಿಸಿದ ಅವರ ಯಶಸ್ಸಿನ ಕಥೆ ಇದು.
ಪುಣೆಯಲ್ಲಿ ಜನಿಸಿದ ನೇಹಾ, ತಂತ್ರಜ್ಞಾನ ಮತ್ತು ಸೇವೆಗಳ ಜಗತ್ತಿನಲ್ಲಿ ದೊಡ್ಡ ಖ್ಯಾತಿಯನ್ನು ಗಳಿಸಿದ ಮಹಿಳೆಯರಲ್ಲಿ ಒಬ್ಬರು. ಅಮೆರಿಕದ ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆಯರಲ್ಲಿ ಅವರು ಫೋರ್ಬ್ಸ್‌ನಿಂದ ಎರಡನೇ ಸ್ಥಾನ ಪಡೆದಿದ್ದಾರೆ.
ಒಟ್ಟು ನಿವ್ವಳ ಆಸ್ತಿ 42 ಸಾವಿರ ಕೋಟಿ
ನೇಹಾ 'ಕನ್ಫ್ಲುಯೆಂಟ್' ಹೆಸರಿನ ಸಾಫ್ಟ್‌ವೇರ್ ಕಂಪನಿಯ ಮಂಡಳಿಯ ಸದಸ್ ಮತ್ತು ಸಹ-ಸಂಸ್ಥಾಪಕಿಯಾಗಿದ್ದಾರೆ. ಕಂಪನಿಯ ಮಾರುಕಟ್ಟೆ ಮೌಲ್ಯ $9.1 ಬಿಲಿಯನ್ ಆಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 75 ಸಾವಿರ ಕೋಟಿ ಮೌಲ್ಯದ ಟೆಕ್ ಕಂಪನಿಯ ಶೇ.6 ರಷ್ಟು ಷೇರುಗಳನ್ನು ನೇಹಾ ಹೊಂದಿದ್ದಾರೆ. ನೇಹಾ ಅವರ ನಿವ್ವಳ ಮೌಲ್ಯ ಸುಮಾರು 520 ಮಿಲಿಯನ್ ಡಾಲರ್ ಆಗಿದೆ. ಅಂದರೆ ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿ.
ನೇಹಾ ಹುಟ್ಟಿದ್ದು ಪುಣೆಯಲ್ಲಿ. ಅವಳು ತನ್ನ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಮಾಡಿದ್ದಳು, ಅದರ ನಂತರ, ಅವಳು ತನ್ನ ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ತೆರಳಿದ್ದಳು. ತನ್ನ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ನಂತರ ಅವರು ಒರಾಕಲ್‌ನಲ್ಲಿ ಎರಡು ವರ್ಷಗಳ ಕಾಲ ತಾಂತ್ರಿಕ ಸಿಬ್ಬಂದಿಯಾಗಿ ಕೆಲಸ ಮಾಡಿ ಅನುಭವ ಪಡೆದರು. ನಂತರ ಆಕೆ ಲಿಂಕ್ಡ್‌ಇನ್ ಸಂಸ್ಥೆಗೆ ಸೇರಿದಳು.
ಒಂದೇ ವರ್ಷಕ್ಕೆ ಬಡ್ತಿ
ಸಾಫ್ಟ್‌ವೇರ್ ಪ್ರಪಂಚದಲ್ಲಿ ಇನ್ನಿಲ್ಲದ ಜ್ಞಾನ ಹೊಂದಿದ್ದ ಆಕೆಗೆ ಸಂಸ್ಥೆ ಒಂದೇ ವರ್ಷಕ್ಕೆ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಿತು. ಈ ಹುದ್ದೆಯನ್ನು ಸಮರ್ಪಕವಾಗಿ ನಿಭಾಯಿಸಿದ ಆಕೆಗೆ ಮತ್ತೊಂದು ವರ್ಷದಲ್ಲಿ ಮತ್ತೊಂದು ಬಡ್ತಿ ಕಾದಿತ್ತು. ಆಕೆಯ ಕೆಲಸ ಕಂಡು ಕಂಪನಿ ಆಕೆಯನ್ನು ಪ್ರಧಾನ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಬಡ್ತಿ ನೀಡಿತು.
ತೃಪ್ತಿಯಾದ ನೇಹಾ ಸ್ವಂತ ಕಂಪನಿ ತೆರೆದಳು
ತನ್ನ ಕಂಪನಿ ಬಡ್ತಿ ಮೇಲೆ ಬಡ್ತಿ ನೀಡುತ್ತಿದ್ದರು ಸಮಾಧಾನ ತೃಪ್ತಿಯಾಗದ ನೇಹಾ ತನ್ನದೇ ಸ್ವಂತ ಕಂಪನಿ ತೆರೆಯಲು ಮುಂದಾದಳು. ಹೀಗಾಗಿ 2014ರಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದಳು. ನೇಹಾ ಮತ್ತು ಅವರ ಇಬ್ಬರು ಸಹೋದ್ಯೋಗಿಗಳು ಲಿಂಕ್ಡ್‌ಇನ್‌ನಲ್ಲಿ ತಮ್ಮ ಹುದ್ದೆಯನ್ನು ತೊರೆದು ಹೊರಬಂದರು.
ಒಟ್ಟಿಗೆ 'ಕನ್ಫ್ಲುಯೆಂಟ್' ಎಂಬ ಸಾಫ್ಟ್‌ವೇರ್ ಕಂಪನಿಯನ್ನು ಪ್ರಾರಂಭಿಸಿದರು. ಮೊದಲ ಐದು ವರ್ಷಗಳ ಕಾಲ ಅವರು ಕಂಪನಿಯ ಮುಖ್ಯ ತಂತ್ರಜ್ಞಾನ ಮತ್ತು ಉತ್ಪನ್ನ ಅಧಿಕಾರಿ ಹುದ್ದೆಯಲ್ಲಿದ್ದರು. ಈಗ ಅವರು ಸಂಸ್ಥೆಯ ಮಂಡಳಿಯ ಸದಸ್ಯರಾಗಿದ್ದಾರೆ. 2021ರಲ್ಲಿ, ನೇಹಾ ಮತ್ತೊಂದು ಕಂಪನಿಯಾದ 'ಆಸಿಲೇಟರ್' ಅನ್ನು ಪ್ರಾರಂಭಿಸಿದರು. ಈ ಕಂಪನಿ ಸಹ ಇಂದು ಲಾಭದ ದಾರಿಯಲ್ಲಿದೆ.



Click it and Unblock the Notifications
