Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಶಿಕ್ಷಕರ ದಿನಕ್ಕೆ ಇಲ್ಲಿದೆ ಅದ್ಭುತ ನುಡಿಯ ಶುಭಾಶಯಗಳು
ಎಲ್ಲಾ ಶಿಕ್ಷಕರಿಗೆ ಶಿಕ್ಷರ ದಿನದ ಶುಭಾಶಯಗಳು. ನಮ್ಮೆಲ್ಲರ ಬದುಕಿನಲ್ಲಿ ತುಂಬಾನೇ ಗುರುಗಳಿರುತ್ತಾರೆ, ಆದರೆ ಕೆಲವೊಂದು ಗುರುಗಳು ನಮ್ಮ ಬದುಕನ್ನು ರೂಪಿಸುವಲ್ಲಿ ತುಂಬಾ ಮಹತ್ವದ ಪಾತ್ರವನ್ನು ವಹಿಸಿರುತ್ತಾರೆ. ನಮ್ಮನ್ನು ಸರಿದಾರಿಗೆ ನಡೆಸುವ ಗುರು ಸಿಕ್ಕರೆ ಜೀವನದಲ್ಲಿ ಅದಕ್ಕಿಂತ ದೊಡ್ಡದಾದ ಅದೃಷ್ಟ ಬೇರೊಂದಿಲ್ಲ. ಗುರು ಎಂದರೆ ಬರೀ ಪಾಠವನ್ನು ಹೇಳಿಕೊಟ್ಟವರು ಮಾತ್ರವಲ್ಲ, ಜೀವನದ ಪಾಠವನ್ನು ಹೇಳಿಕೊಟ್ಟವರೂ ನಮ್ಮ ಪಾಲಿನ ಗುರುಗಳಾಗುತ್ತಾರೆ.
ಶಿಕ್ಷಕ ವೃತ್ತಿಯಂಥ ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ, ಒಬ್ಬ ವಿದ್ಯಾರ್ಥಿಗೆ ಪಾಠದ ಜೊತೆಗೆ ಜೀವನದ ಮೌಲ್ಯವನ್ನು ಕಲಿಸುವ ಪ್ರಯತ್ನವನ್ನು ಶಿಕ್ಷಕರು ಮಾಡುತ್ತಾರೆ. ಗುರುವಿನ ಗುರಿತು ಕೆಲವು ಮಹಾನ್ ವ್ಯಕ್ತಿಗಳು ಹೇಳಿರುವ ಕೋಟ್‌ಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:
1. ಒಬ್ಬ ಶಿಕ್ಷಕ ಸಾಧಾರಣವಾಗಿರಲು ಸಾಧ್ಯವೇ ಇಲ್ಲ ಮಕ್ಕಳ ಭವಿಷ್ಯ ಕಟ್ಟುವುದು ಮತ್ತು ನಾಶ ಮಾಡುವುದು ಎರಡೂ ಅವನ ಕೈಯಲ್ಲಿದೆ
ಚಾಣಕ್ಯ

2. ಶಿಕ್ಷಣ ಎಂಬುವುದು ಅತ್ಯುತ್ತಮವಾದ ಸ್ನೇಹಿತ
ವಿದ್ಯಾವಂತನಿಗೆ ಎಲ್ಲಾ ಕಡೆಯೂ ಗೌರವ ಸಿಗಲಿದೆ
ಸೌಂದರ್ಯ, ಯೌವನ ಎರಡನ್ನೂ ಮೀರಿಸುವ ಶಕ್ತಿ ಶಿಕ್ಷಣಕ್ಕಿದೆ
ಚಾಣಕ್ಯ
3. ಒಬ್ಬ ವ್ಯಕ್ತಿಯ ನಡತೆ, ಕೌಶಲ್ಯ, ಭವಿಷ್ಯನ್ನು ರೂಪಿಸುವ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು ಎಂದು ಎಪಿಜೆ ಅಬ್ದುಲ್ ಕಲಾಂ
ಶಿಕ್ಷಕರ ದಿನದ ಶುಭಾಶಯಗಳು
4. ಶಿಕ್ಷಕರ ದಿನದ ಶುಭಾಶಯಗಳು
ಯಾರು ನಮ್ಮನ್ನು ನಮ್ಮಷ್ಟಕ್ಕೆ ಯೋಚಿಸುವಷ್ಟು ಶಕ್ತರನ್ನಾಗಿಸುವಲ್ಲಿ ಸಹಾಯ ಮಾಡುತ್ತಾರೋ ಅವರೇ ನಿಜವಾದ ಶಿಕ್ಷಕರು
5. ನಿಮ್ಮಂಥ ಶಿಕ್ಷಕರನ್ನು ಪಡೆದಿರುವುದೇ ನಮ್ಮ ಅದೃಷ್ಟ, ನಿಮ್ಮಿಂದ ನಮ್ಮ ಬದುಕು ಇಷ್ಟು ಸುಂದರವಾಗಿ ರೂಪುಗೊಂಡಿದೆ, ಧನ್ಯವಾದಗಳು
ಶಿಕ್ಷಕರ ದಿನದ ಶುಭಾಶಯಗಳು
6. ನೀವು ಪಾಠ ಮಾಡುವ ರೀತಿ
ನೀವು ಹಂಚುವ ಜ್ಞಾನ
ನೀವು ಮಾಡುವ ಆರೈಕೆ
ನೀವು ತೋರುವ ಪ್ರೀತಿ ಇದೆಲ್ಲವೂ ಸೇರಿ ನಿಮ್ಮನ್ನು ಅದ್ಭುತ ಶಿಕ್ಷಕರನ್ನಾಗಿಸಿದೆ
ಶಿಕ್ಷಕರ ದಿನದ ಶುಭಾಶಯಗಳು



Click it and Unblock the Notifications





