Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಜುಲೈ 30ಕ್ಕೆ ರವಿ ಪ್ರದೋಷ ವ್ರತ: ಪ್ರದೋಷ ಶಿವ ಪೂಜೆಯಲ್ಲಿ ಈ ನಿಯಮ ಪಾಲಿಸಿ
ಪ್ರದೋಷ ವ್ರತದ ದಿನ ಶಿವನ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು. ಅದರಲ್ಲೂ ಶ್ರಾವಣ ಪ್ರದೋಷ ವ್ರತ ಆಚರಿಸಿದರೆ ಅದರ ಫಲ ದ್ವಿಗುಣವಾಗುವುದು ಎಂದು ಹೇಳಲಾಗುವುದು. ಶ್ರಾವಣ ಮಾಸ ಶಿವನ ಆರಾಧನೆಗೆ ಮೀಸಲಾದ ಮಾಸ. ಜುಲೈ 30ಕ್ಕೆ ಪ್ರದೋಷ ವ್ರತ ಬಂದಿದೆ. ಅಲ್ಲದೆ ಈ ದಿನ ಎರಡು ವಿಶೇಷ ಯೋಗ ಕೂಡ ಏರ್ಪಟ್ಟಿರುವುದರಿಂದ ಈ ದಿನ ತುಂಬಾನೇ ವಿಶೇಷವಾಗಿದೆ. ರವಿ ಪ್ರದೋಷ ವ್ರತದ ಮಹತ್ವ, ಪೂಜಾ ಮುಹೂರ್ತ, ಪೂಜಾ ವಿಧಿಗಳೇನು ನೋಡೋಣ ಬನ್ನಿ:

ಜುಲೈ 30 ಪ್ರದೋಷ ವ್ರತದ ಮಹತ್ವ
ಈ ವರ್ಷ ಪ್ರದೋಷ ವ್ರತವನ್ನು ಜುಲೈ 30, ಭಾನುವಾರದಂದು ಆಚರಿಸಲಾಗುವುದು. ಈ ದಿನ ಎರಡು ರವಿಯೋಗ ಮತ್ತು ಸರ್ವಾರ್ಥ ಅಮೃತ ಯೋಗವೂ ಸೃಷ್ಟಿಯಾಗುತ್ತಿದೆ. ಸಾಮಾನ್ಯವಾಗಿ, ಯಾವುದೇ ವ್ರತವನ್ನು ಬೆಳಗ್ಗೆ ಮಾಡಲಾಗುವುದು, ಆದರೆ ಪ್ರದೋಷ ವ್ರತದ ದಿನದಂದು ಪ್ರದೋಷ ಕಾಲದಲ್ಲಿ ಅಂದರೆ ಸಂಜೆಯ ಸಮಯದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು. ನಂತರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು. ಈ ದಿನ ಶಿವ ಪೂಜೆಯಲ್ಲಿ ಬಿಲ್ವೆಪತ್ರೆ, ಅಕ್ಷತೆ, ದೀಪ, ಧೂಪ, ಗಂಗಾಜಲ ಇವುಗಳನ್ನು ಬಳಸಿ ಶಿವ ಪೂಜೆ ಮಾಡಬೇಕು. ಈ ದಿನ ಬೆಳಗ್ಗೆಯಿಂದಲೇ ಉಪವಾಸ ನಿಯಮವನ್ನು ಪಾಲಿಸಬೇಕು.
ರವಿ ಪ್ರದೋಷ ವ್ರತ ಪೂಜಾ ಮುಹೂರ್ತ
ಶ್ರಾವಣ ಶುಕ್ಲ ತ್ರಯೋದಶಿ
ಪ್ರದೋಷ ವ್ರತ ತಿಥಿ ಪ್ರಾರಂಭ: ಜುಲೈ 30 ಬೆಳಗ್ಗೆ 10:34ಕ್ಕೆ
ಪ್ರದೋಷ ವ್ರತ ತಿಥಿ ಮುಕ್ತಾಯ: ಜುಲೈ 31 ಬೆಳಗ್ಗೆ 07:26ಕ್ಕೆ
ರವಿ ಪ್ರದೋಷ ವ್ರತ ಬಂದಿರುವುದರಿಂದ ತುಂಬಾನೇ ಒಳ್ಳೆಯದು
ಪ್ರದೋಷ ವ್ರತ ಶಿವ ಪೂಜೆಗೆ ಶ್ರೇಷ್ಠವಾಗಿದೆ, ಪ್ರದೋಷ ವ್ರತ ರವಿವಾರ ಬಂದರೆ ಇನ್ನೂ ಶ್ರೇಷ್ಠ ಎಂದು ಹೇಳಲಾಗುವುದು. ರವಿ ಪ್ರದೋಷ ವ್ರತವನ್ನು ಆಚರಿಸುವುದರಿಂದ ಆ ವ್ಯಕ್ತಿ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಪಡೆಯುತ್ತಾನೆ ಎಂದು ಹೇಳಾಗಿದೆ.
ಪೂಜಾವಿಧಿ
* ಈ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕು
* ನಂತರ ಪುಣ್ಯ ನದಿಯಲ್ಲಿ ಸ್ನಾನ ಮಾಡಬೇಕು ಅಥವಾ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಬೇಕು.
* ಸೂರ್ಯನಿಗೆ ಗಂಗಾಜಲವನ್ನು ಅರ್ಪಿಸಿ
* ಶಿವ ಪಾರ್ವತಿಗೆ ಹೂವು, ಹಣ್ಣುಗಳು, ಪಂಚಾಮೃತ ಅರ್ಪಿಸಿ, ನಂತರ ಶಿವ-ಪಾರ್ವತಿಯ ಮಂತ್ರಗಳನ್ನು ಪಠಿಸಬೇಕು.
* ಈ ದಿನ ಉಪವಾಸವಿದ್ದು ಶಿವ-ಪಾರ್ವತಿಯನ್ನು ಆರಾಧನೆ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ, ಸಂತಾನ ಭಾಗ್ಯ ದೊರೆಯಲಿದೆ.
* ಶಿವ ಪೂಜೆಯಲ್ಲಿ ಬಿಲ್ವಪತ್ರೆ ಅರ್ಪಿಸಿ.
ಪ್ರದೋಷ ವ್ರತದ ಪೌರಾಣಿಕ ಮಹತ್ವ
ಯಾರು ಪ್ರದೋಷ ವ್ರತವನ್ನು ಆಚರಿಸುತ್ತಾರೋ ಅವರಿಗೆ ಎರಡು ಹಸುಗಳನ್ನು ದಾನ ಮಾಡಿದ ಪುಣ್ಯ ಫಲ ಸಿಗಲಿದೆ. ಶಿವನ ಆರಾಧನೆ ಮಾಡುವುದರಿಂದ ಪಾಪಕರ್ಮಗಳಿಂದ ಮುಕ್ತಿ ಸಿಗುವುದು ಎಂದು ಹೇಳಲಾಗಿದೆ.



Click it and Unblock the Notifications