Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಮಹಿಳೆಯರು ತಲೆಯನ್ನು ಸೆರಗಿನಿಂದ ಏಕೆ ಮುಚ್ಚಿಕೊಳ್ಳುತ್ತಾರೆ?
ಭಾರತೀಯ ಹೆಂಗಸರು ಸದಾ ಸಂಪ್ರದಾಯವಾದಿಗಳು ಎಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡಿರುತ್ತಾರೆ. ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುವುದು, ಹಣೆಗೆ ಕುಂಕುಮವನ್ನು ಅಥವಾ ಬಿಂದಿಯನ್ನು ಇಡುವುದು, ಆಭರಣಗಳನ್ನು ಧರಿಸುವುದು, ಸಾಂಪ್ರದಾಯಿಕ ಬಟ್ಟೆಗಳನ್ನು ಮತ್ತು ವಿಶ್ವದ ಇತರೆಡೆ ಹೆಂಗಸರು ಧರಿಸದ ಕೆಲವೊಂದು ವಸ್ತುಗಳನ್ನು ಮತ್ತು ಆಚರಿಸದ ಕೆಲವೊಂದು ಆಚರಣೆಗಳನ್ನು ಇವರು ಆಚರಿಸುತ್ತಾರೆ.
ಅದರಲ್ಲೂ ಭಾರತದಲ್ಲಿ ಹೆಂಗಸರು ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುವುದು ಕುತೂಹಲಕ್ಕೆ ಕಾರಣವಾದ ವಿಚಾರವಾಗಿದೆ. ಅದರಲ್ಲೂ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯದವರಿಗೆ ಇದರ ಬಗ್ಗೆ ಮತ್ತಷ್ಟೂ ಕುತೂಹಲವಿರುತ್ತದೆ.
ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುವುದು ಗೌರವದ ಸಂಕೇತ. ಮದುವೆಯಾದ ಹೆಂಗಸರು ಮನೆಯ ಹಿರಿಯ ಗಂಡಸರ ಮುಂದೆ ತಮ್ಮ ಸೆರಗು,ಓಣಿ ಅಥವಾ ವೇಲ್‍ನಿಂದ ಮುಚ್ಚಿಕೊಳ್ಳುತ್ತಾರೆ. ಇನ್ನು ಕೆಲವು ಗ್ರಾಮೀಣ ಭಾಗದಲ್ಲಿ ಹೆಂಗಸರು ತಮ್ಮ ಮುಖ ಮತ್ತು ಕುತ್ತಿಗೆಯು ಸಹ ಗಂಡಸರಿಗೆ ಕಾಣದಂತೆ ಮುಚ್ಚಿಕೊಳ್ಳುತ್ತಾರೆ.
ಹಿಂದೂ ಪೂಜೆಯ ವಿಧಿ ವಿಧಾನಗಳ ಸಂಕೇತಗಳು

ಅಲ್ಪ ಸಂಖ್ಯಾತ ಸಮುದಾಯದ ಹೆಂಗಸರು
ಕೆಲವು ಅಲ್ಪ ಸಂಖ್ಯಾತ ಸಮುದಾಯದ ಹೆಂಗಸರು ತಲೆ, ಮುಖ, ಎದೆ,ಕೈ ಮತ್ತು ಹೊಟ್ಟೆ ಭಾಗ ಸಹ ಗಂಡಸರಿಗೆ ಕಾಣದಂತೆ ಮುಚ್ಚಿಕೊಳ್ಳುತ್ತಾರೆ. ಈ ಸಂಪ್ರದಾಯವು ಮುಖ್ಯವಾಗಿ ಹಿಂದೂಗಳ ಮದುವೆಯ ಸಂದರ್ಭದಲ್ಲಿ ನಾವು ನೋಡಬಹುದು. ಅಲ್ಲಿ ಹೊಸದಾಗಿ ಮದುವೆಯಾಗುವ ಹುಡುಗಿಯು ತಮ್ಮ ಮಾವ ತೆಗೆ ಎಂದು ಹೇಳುವವರೆಗೆ ಸೆರಗನ್ನು ತಲೆಯ ಮೇಲೆ ಹೊದ್ದು ಕೊಂಡಿರುತ್ತಾಳೆ. ಇದು ವಧುವಿನ ನಮ್ರತೆಯನ್ನು ಸಾರುವ ಸಂಪ್ರದಾಯವಾಗಿ ಬೆಳೆದುಬಂದಿದೆ. ಕುತೂಹಲಕಾರಿಯಾದ ವಿಚಾರವೆಂದರೆ, ಈ ಸಂಪ್ರದಾಯವು ಇನ್ನಿತರ ಧರ್ಮಗಳಲ್ಲಿ ಸಹ ಚಾಲ್ತಿಯಲ್ಲಿದೆ. ಇಸ್ಲಾಂ ಧರ್ಮದಲ್ಲಿ ಪರ್ದಾ ಎಂಬ ಹೆಸರಿನಲ್ಲಿ ಇದು ಕಡ್ಡಾಯವಾಗಿ ಅನುಸರಿಸಲ್ಪಡುತ್ತದೆ.

ಕ್ರೈಸ್ತ ಧರ್ಮದಲ್ಲಿ
ಕ್ರೈಸ್ತ ಧರ್ಮದಲ್ಲಿ ಪ್ರಾರ್ಥನೆಗಳ ಸಂದರ್ಭದಲ್ಲಿ ಹೆಂಗಸರು ತಲೆಯನ್ನು ಸ್ಕಾರ್ಫ್‍ನಿಂದ ಮುಚ್ಚಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಹಿಂದೂ ಧರ್ಮದಲ್ಲಿ ಈ ಸಂಪ್ರದಾಯ ಕೆಲವು ಸಲ ಅತಿರೇಕಕ್ಕೆ ಹೋಗುತ್ತದೆ. ವಿಶೇಷವಾಗಿ ಸಾಂಪ್ರದಾಯಿಕ ಹಿಂದೂಗಳಲ್ಲಿ ಇದು ಸ್ವಲ್ಪ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾದರೆ ಬನ್ನಿ ಭಾರತೀಯ ಹೆಂಗಸರು ಸೆರಗಿನಿಂದ ತಮ್ಮ ತಲೆಯನ್ನು ಏಕೆ ಮುಚ್ಚಿಕೊಳ್ಳೂತ್ತಾರೆ? ಎಂದು ತಿಳಿದುಕೊಳ್ಳೋಣ.

ಹಿಂದೂ ಗ್ರಂಥಗಳು
ಕುತೂಹಲಕಾರಿಯಾದ ವಿಚಾರವೇನೆಂದರೆ ಹಿಂದೂ ಗ್ರಂಥಗಳಲ್ಲಿ ಹೆಂಗಸರು ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳಬೇಕು ಎಂಬುದರ ಬಗ್ಗೆ ಉಲ್ಲೇಖಗಳೇ ಇಲ್ಲ. ಪ್ರಾಚೀನ ಭಾರತದಲ್ಲಿ ಹೆಂಗಸರು ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳದೆಯೇ ಹೊರಗೆ ಹೋಗುತ್ತಿದ್ದರು. ಇನ್ನು ಪ್ರಾರ್ಥನೆಯ ಸಂದರ್ಭದಲ್ಲಿ ಸೆರಗನ್ನು ಹೊದ್ದು ಕೊಳ್ಳಬೇಕೆಂಬುದು ಕಡ್ಡಾಯವಾಗಿಲ್ಲ.

ಭದ್ರತೆಯ ಪರಿಕಲ್ಪನೆ
ಬಹುತೇಕ ಧರ್ಮಗಳಲ್ಲಿ ಹೆಂಗಸರು ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುವುದು ಎಂಬುದು ಭದ್ರತೆಯ ಸಂಕೇತವಾಗಿ ಗುರುತಿಸಲ್ಪಡುತ್ತದೆ. ನಂಬಿಕೆಗಳ ಪ್ರಕಾರ ಹೆಂಗಸರು ತಮ್ಮ ಮುಖ ಮತ್ತು ತಲೆಯನ್ನು ಕಾಣದಂತೆ ಮುಚ್ಚಿಕೊಳ್ಳುವುದರಿಂದ ಆಕೆಯು ಇತರ ಗಂಡಸರ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆಯಿರುತ್ತದೆ. ಇದರಿಂದ ಆಕೆಯ ಮಾನ- ಮರ್ಯಾದೆಗಳಿಗೆ ಯಾವುದೇ ಭಂಗ ಬರದಂತೆ ಭದ್ರತೆಯು ದೊರೆಯುತ್ತದೆ.ಅದಕ್ಕಾಗಿಯೇ ಹೆಂಗಸರು ತಮ್ಮ ಗಂಡನ ಹೊರತುಪಡಿಸಿ ಇನ್ನಿತರ ಗಂಡಸರ ಮುಂದೆ ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುವ ಸಂಪ್ರದಾಯ ಜಾರಿಗೆ ಬಂತು.

ಮುಸ್ಲಿಂ ದಾಳಿಕೋರರ ಆಕ್ರಮಣಗಳು
ಹೆಂಗಸರು ತಮ್ಮ ತಲೆಯನ್ನು ಮತ್ತು ಮುಖವನ್ನು ಮುಚ್ಚಿಕೊಳ್ಳುವ ಸಂಪ್ರದಾಯವು ಮುಸ್ಲಿಂ ದಾಳಿಕೋರರ ಕಾರಣವಾಗಿ ಜಾರಿಗೆ ಬಂದಿತು ಎಂದು ಹೇಳಬಹುದು. ರಜಪೂತರ ಆಡಳಿತದ ಅವಧಿಯಲ್ಲಿ ದಾಳಿಕೋರರ ಕೆಟ್ಟ ಕಣ್ಣುಗಳ ದೃಷ್ಟಿಯಿಂದ ಹೆಂಗಸರನ್ನು ಸುರಕ್ಷಿತವಾಗಿ ಇರಿಸುವ ಸಲುವಾಗಿ ಈ ಪರ್ದಾ ಅಥವಾ ಘೋಷಾ ಪದ್ದತಿ ಜಾರಿಗೆ ಬಂದಿತು. ಇದರ ಪ್ರಸಿದ್ಧ ಉದಾಹರಣೆಯೆಂದರೆ ಅಲ್ಲಾ-ಉದ್-ದಿನ್ ಖಿಲ್ಜಿಯದು, ಈ ದೆಹಲಿಯ ಸುಲ್ತಾನನು ಚಿತ್ತೋಡಿನ ರಾಣಿ ಪದ್ಮಿನಿಯ ಸೌಂದರ್ಯಕ್ಕೆ ಮಾರು ಹೋದನು. ಈಕೆಯನ್ನು ತನ್ನ ಕೈವಶ ಮಾಡಿಕೊಳ್ಳಲು ಚಿತ್ತೋಡಿನ ರಾಜ್ಯದ ಮೇಲೆ ಆಕ್ರಮಣ ಮಾಡಿದನು. ಆದರೆ ರಾಣಿ ಪದ್ಮಿನಿಯು ಮಾನಾಪಮಾನಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಜೌಹರ್ ( ಜೀವಂತ ಅಗ್ನಿ ಪ್ರವೇಶ) ಮಾಡಿಕೊಂಡಳು. ಹೀಗೆ ಆಕೆ ಶತ್ರುಗಳಿಗೆ ದೊರಕಲಿಲ್ಲ. ಈ ಘಟನೆಯಿಂದ ಭಾರತದಲ್ಲಿ ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುವುದು ಜನಪ್ರಿಯವಾಯಿತು.

ಮುಸ್ಲಿಂ ದಾಳಿಕೋರರ ಆಕ್ರಮಣಗಳು
ಇನ್ನೂ ಕೆಲವರ ಅಭಿಪ್ರಾಯದಂತೆ ಹೆಂಗಸರು ತಮ್ಮ ತಲೆ ಮತ್ತು ದೇಹದ ಇತರ ಅಂಗಗಳು, ಗಂಡನನ್ನು ಹೊರತುಪಡಿಸಿ ಇತರ ಗಂಡಸರಿಗೆ ತೋರದಂತೆ ಮುಚ್ಚಿಕೊಳ್ಳುವುದರಿಂದ, ಆಕೆ ಇತರೆ ಗಂಡಸರ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು. ಇದರಿಂದ ಆಕೆಯ ಸ್ತ್ರೀತನದ ಮಾನ, ಮರ್ಯಾದೆ ಮತ್ತು ಘನತೆಗಳು ಮತ್ತಷ್ಟು ಹೆಚ್ಚಾಗುತ್ತವೆ.

ಮುಸ್ಲಿಂ ದಾಳಿಕೋರರ ಆಕ್ರಮಣಗಳು
ಆಧುನಿಕ ಯುಗದಲಿ ತಲೆಯನ್ನು ಮತ್ತು ಮುಖವನ್ನು ವೇಲ್‍ನಿಂದ ಮುಚ್ಚಿಕೊಳ್ಳುವುದು ಒಂದು ಫ್ಯಾಶನ್ ಸ್ಟೇಟ್‍ಮೆಂಟ್ ಆಗಿ ಪರಿವರ್ತನೆಯಾಗಿದೆ. ದಕ್ಷಿಣ ಭಾರತದ ಹೆಂಗಸರ ಸಾಂಪ್ರದಾಯಿಕ ಉಡುಗೆಗಳಲ್ಲಿ ವೇಲ್ ಇಲ್ಲ. ಇದರಿಂದಾಗಿಯೇ ಅರ್ಥವಾಗುತ್ತದೆ, ವೇಲ್ ಈ ಪ್ರಾಂತ್ಯಕ್ಕೆ ಸೇರಿಲ್ಲವೆಂದು. ಘೂಂಘಟ್ ಅಥವಾ ಘೋಷಾವು ಮಧ್ಯಕಾಲೀನ ಯುಗದಲ್ಲಿ ಜಾರಿಗೆ ಬಂದಿತು. ಏಕೆಂದರೆ ಆಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅದು ಅವಶ್ಯಕವಾಗಿತ್ತು ಮತ್ತು ಅದನ್ನು ಕಡ್ಡಾಯವಾಗಿ ಹೇರಲಾಗುತ್ತಿತ್ತು. ಆದರೆ ಈ ಸಂಪ್ರದಾಯವು ಹೇರಿಕೆಗಿಂತ, ಆಧ್ಯತೆಗೆ ಹೊತ್ತು ನೀಡಿದರೆ ಚೆನ್ನ.

ನಿರ್ಬಂಧಗಳನ್ನು ಹೇರುವುದು ಸರಿಯಲ್ಲ
ಸೆರಗನ್ನು ತಲೆಯ ಮೇಲೆ ಮುಚ್ಚಿಕೊಳ್ಳಬೇಕೆ?, ಬೇಡವೇ? ಎಂಬುದನ್ನು ಹೆಂಗಸರೆ ನಿರ್ಧರಿಸಿಕೊಂಡರೆ ಚೆನ್ನ. ಏಕೆಂದರೆ ಹೇಗೆ ಬಟ್ಟೆಯನ್ನು ಧರಿಸಿಕೊಳ್ಳಬೇಕು ಎಂಬುದು ಆಕೆಯ ಸ್ವಂತ ನಿಲುವಾಗಿರಬೇಕು. ಆಕೆಯನ್ನು ಕೆಲವೊಂದು ಶಿಷ್ಟಾಚಾರ ಅಥವಾ ಸಂಪ್ರದಾಯಗಳ ಹೆಸರಿನಲ್ಲಿ ನಿರ್ಬಂಧಗಳನ್ನು ಹೇರುವುದು ಒಳ್ಳೆಯದಲ್ಲ. ಪ್ರಾರ್ಥನೆಗಳ ಸಂದರ್ಭದಲ್ಲಿ ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುವುದು ಒಳ್ಳೆಯ ಸಂಪ್ರದಾಯ, ಇದಕ್ಕೆ ಹಿರಿಯರಿಂದ, ಅಕ್ಕ ಪಕ್ಕದವರಿಂದ ಖಂಡಿತ ನೀವು ಅಭಿನಂದನೆಗೆ ಅರ್ಹರಾಗುತ್ತೀರಿ. ನಾವು ಮಾಡುವ ಆಚರಣೆಯು ಹಿರಿಯರಿಗೆ ಗೌರವವನ್ನು ನೀಡುತ್ತದೆ ಎಂದಾದಲ್ಲಿ ತಪ್ಪೇನಿಲ್ಲ, ಒಂದು ಆಚರಣೆಯಿಂದ ನಮ್ಮ ಗೌರವ ಮತ್ತು ಘನತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದರೆ ಏಕೆ ಮಾಡಬಾರದು? ಆದರೆ ಇದನ್ನು ಕಡ್ಡಾಯವಾಗಿ ಮಾಡಿಸಬಾರದು ಅಷ್ಟೇ!!



Click it and Unblock the Notifications











