Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ರಾವಣ ಮಾಸ ಯಾವಾಗಿನಿಂದ ಶುರು? ಈ ತಿಂಗಳಿನಲ್ಲಿದೆ ಈ ಪ್ರಮುಖ ಹಬ್ಬಗಳು, ವ್ರತಗಳು
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸ ಐದನೇ ತಿಂಗಳಾಗಿದೆ. ಶ್ರಾವಣ ಮಾಸ ಹಿಂದೂಗಳಿಗೆ ತುಂಬಾನೇ ಪ್ರಮುಖವಾದ ಮಾಸವಾಗಿದೆ. ಈ ಸಮಯದಲ್ಲಿ ಶಿವನ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು. ಶ್ರಾವಣ ಆಚರಣೆ ಮಾಡುವವರು ಈ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವ ಮಾಡುವುದಿಲ್ಲ. ಶ್ರಾವಣ ಮಾಸದ ಮತ್ತೊಂದು ಪ್ರತ್ಯೇಕವೆಂದರೆ ಈ ತಿಂಗಳಿನಿಂದ ಹಬ್ಬ-ಹರಿದಿನಗಳು ಪ್ರಾರಂಭವಾಗುವುದು.
ಈ ವರ್ಷ ಶ್ರಾವಣ ಎಂದಿನಿಂದ ಶುರು, ಈ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳಾವುವು ಎಂದು ನೋಡೋಣ:

ಶ್ರಾವಣ ಯಾವಾಗನಿಂದ ಪ್ರಾರಂಭ?
ಶ್ರಾವಣ ಮಾಸವು ಜುಲೈ 18ರಿಂದ ಸೆಪ್ಟೆಂಬರ್ 15ರವರೆಗೆ ಶ್ರಾವಣ ಮಾಸ ಆಚರಿಸಲಾಗವುದು. ಈ ವರ್ಷ ಶ್ರಾವಣ ಅಧಿಕ ಮಾಸ ಇರುವುದರಿಂದ ಆಗಸ್ಟ್ 18ರಿಂದ ಅಧಿಕ ಮಾಸವಾಗಿದೆ. ಈ ಸಮಯದಲ್ಲಿ ನಾಗ ಪಂಚಮಿ, ವರಲಕ್ಷ್ಮಿ ವ್ರತ, ಕೃಷ್ಣ ಜಯಂತಿ ಹೀಗೆ ಪ್ರಮುಖ ಹಬ್ಬಗಳಿವೆ.
ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳು
ಶ್ರಾವಣ ಮಾಸದಲ್ಲಿಬರುವ ಏಕಾದಶಿ ದಿನಾಂಕಗಳು
ಜುಲೈ 29: ಪದ್ಮಿನಿ ಏಕಾದಶಿ
ಆಗಸ್ಟ್ 12: ಪರಮ ಏಕಾದಶಿ
ಪುತ್ರದಾ ಏಕಾದಶಿ ಆಗಸ್ಟ್ 27
ಸೆಪ್ಟೆಂಬರ್ 10: ಅಜಾ ಏಕಾದಶಿ
ಪ್ರದೋಷ ವ್ರತ
ಜುಲೈ 30
ಆಗಸ್ಟ್ 13
ಆಗಸ್ಟ್ 28
ಸೆಪ್ಟೆಂಬರ್ 12
ಮಂಗಳಗೌರಿ ವ್ರತ
ಈ ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರ ಮಂಗಳಗೌರಿ ವ್ರತ ಆಚರಿಸಲಾಗುವುದು.
ಜುಲೈ 25
ಆಗಸ್ಟ್ 1
ಆಗಸ್ಟ್ 8
ಆಗಸ್ಟ್ 15
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 5
ಸೆಪ್ಟೆಂಬರ್ 11
ಈ ದಿನಗಳಲ್ಲಿ ಮಂಗಳಗೌರಿವ್ರತವನ್ನು ಆಚರಿಸಲಾಗುವುದು.
ಶ್ರಾವಣ ಮಾಸದಲ್ಲಿ ಮಹಿಳೆಯರು ಮಂಗಳ ಗೌರಿ ವ್ರತ ಪಾಲಿಸುತ್ತಾರೆ. ದೇವಿ ಪಾರ್ವತಿಯ ಕೃಪೆಗಾಗಿ ಈ ವ್ರತವನ್ನು ಪಾಲಿಸುತ್ತಾರೆ. ಈ ವ್ರತವನ್ನು ಶ್ರಾವಣ ಮಾಸದ ಪ್ರತಿ ಮಂಗಳವಾರದಿಂದ ಕೊನೆಯ ಮಂಗಳವಾರದವರೆಗೆ ಆಚರಿಸಲಾಗುವುದು. ಈ ಸಮಯದಲ್ಲಿ ಗೌರಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಮುತ್ತೈದೆಯರು ತುಂಬಾ ಸಾಂಪ್ರದಾಯಕವಾಗಿ ಉಡುಗೆ ತೊಟ್ಟು ಮಂಗಳ ಗೌರಿಗೆ ಒಡವೆ, ಆಭರಣಗಳಿಂದ ಅಲಂಕಾರ ಮಾಡಿ ಮಂಗಳಗೌರಿ ವ್ರತ ಮಾಡಲಾಗುವುದು. ಗಂಡನಿಗೆ ಆಯುಸ್ಸು ಹೆಚ್ಚಲು ಹಾಗೂ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚುವಂತಾಗಲಿ ಎಂಬ ಉದ್ದೇಶದಿಂದ ಮಂಗಳಗೌರಿ ವ್ರತ ಆಚರಿಸಲಾಗುವುದು.
ಶ್ರಾವಣ ಮಾಸದ ಪ್ರಮುಖ ದಿನಗಳು
ಆಗಸ್ಟ್ 19: ಮಧುಶ್ರಾವಣಿ ತೃತೀಯಾ
ಆಗಸ್ಟ್ 20: ಧ್ರುವ ಗಣಪತಿ ವ್ರತ
ಆಗಸ್ಟ್ 22: ಕಲ್ಕಿ ಜಯಂತಿ
ಆಗಸ್ಟ್ 24: ಧ್ರುವ ಅಷ್ಟಮಿ
ಆಗಸ್ಟ್ 25: ವರಲಕ್ಷ್ಮಿ ವ್ರತ
ಆಗಸ್ಟ್ 30: ರಿಗ್ ಶ್ರಾವಣಿ
ಸೆಪ್ಟೆಂಬರ್ 6: ಕೃಷ್ಣ ಜಯಂತಿ



Click it and Unblock the Notifications