Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
2022ರಲ್ಲಿ ಹಜ್ ಯಾತ್ರೆ ಯಾವಾಗ? ಮೆಕ್ಕಾದ ಕಾಬಾದ ವಿಶೇಷತೆಯೇನು?
ಹಜ್ ಮುಸ್ಲಿಂರಿಗೆ ತುಂಬಾ ಪವಿತ್ರವಾದ ಸ್ಥಳ, ಇಲ್ಲಿಗೆ ಪ್ರತೀವರ್ಷ ಲಕ್ಷಾಂತರ ಜನರು ಭೇಟಿಕೊಡುತ್ತಾರೆ. ಹಜ್ ಯಾತ್ರೆ ಮಾಡುವುದು ಮುಸ್ಲಿಂ ಸಮುದಾಯದಲ್ಲಿ ತುಂಬಾ ಪವಿತ್ರವಾದ ಕಾರ್ಯವಾಗಿದೆ. ಕೋವಿಡ್ ಸಾಂಕ್ರಮಿಕದಿಂದಾಗಿ ಎರಡು ವರ್ಷಗಳಿಂದ ಹಜ್ ಯಾತ್ರೆಗೆ ಅವಕಾಶವಿರಲಿಲ್ಲ, ಈ ವರ್ಷ ಪವಿತ್ರ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ.
ಹಜ್ ಯಾತ್ರೆ ಮಾಡಬೇಕೆಂಬುವುದು ಪ್ರತಿಯೊಂದು ಮುಸ್ಲಿಂನ ಕನಸಾಗಿರುತ್ತೆ. ಯಾರು ದೈಹಿಕವಾಗಿ ಹಾಗೂ ಆರ್ಥಿಕವಾಗಿ ಸದೃಢವಾಗಿರುತ್ತಾರೋ ಅವರು ಹಜ್ ಯಾತ್ರೆ ಮಾಡುತ್ತಾರೆ. ಎರಡು ವರ್ಷದಿಂದ ಹಜ್ ಯಾತ್ರೆ ನಡೆಯದಿದ್ದ ಕಾರಣ ಈ ವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಊಹಿಸಲಾಗಿದೆ.
2022ರಲ್ಲಿ ಹಜ್ ಯಾತ್ರೆ ಯಾವಾಗ? ಹಜ್ ಯಾತ್ರೆಯ ಮಹತ್ವವೇನು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

2022ರಲ್ಲಿ ಹಜ್ ಯಾತ್ರೆ ಯಾವಾಗ?
ಈ ವರ್ಷ ಹಜ್ ಯಾತ್ರೆ ಜುಲೈ 7, ಗುರುವಾರದಂದು ಪ್ರಾರಂಭವಾಗಲಿದೆ. ಈ ಹಜ್ ಯಾತ್ರೆ ಜುಲೈ 12, ಮಂಗಳವಾರ ಸಂಜೆ ಮುಕ್ತಾಯವಾಗಲಿದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ 12ನೇ ಮತ್ತು ಕೊನೆಯ ತಿಂಗಳಾದ ಧು ಅಲ್-ಹಿಜ್ಜಾದ 8ನೇ ದಿನದಂದು ಹಜ್ ಯಾತ್ರೆ ಬರುತ್ತದೆ.

ಹಜ್ ಯಾತ್ರೆಯನ್ನು ಯಾರು ಮಾಡುತ್ತಾರೆ?
ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಹಜ್ ಯಾತ್ರೆ ಮಾಡಬೇಕೆಂಬುವುದು ಪ್ರತಿಯೊಬ್ಬ ಮುಸ್ಲಿಂನ ಬಯಕೆಯಾಗಿರುತ್ತದೆ. ಪುರುಷರು ಹಾಗೂ ಮಹಿಳೆಯರು ಹಜ್ ಯಾತ್ರೆಗೆ ಹೋಗುತ್ತಾರೆ. ಯಾತ್ರೆಯ ಬಳಿಕ ಯಾತ್ರಿಗಳು ತಮ್ಮ ಕೂದಲು ಸಂಪೂರ್ಣವಾಗಿ ಕತ್ತರಿಸುತ್ತಾರೆ. ಮಹಿಳೆಯರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುತ್ತಾರೆ.

ಹಜ್ ಯಾತ್ರೆಯ ಮಹತ್ವ
ಹಜ್ ಯಾತ್ರೆ ಮುಸ್ಲಿಂರ ಪ್ರಮುಖವಾದ ಸಂಪ್ರದಾಯವಾಗಿದೆ. ವಿಶ್ವದ ಎಲ್ಲಾ ಕಡೆಯ ಮುಸ್ಲಿಂರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಮುಖ್ಯ ಹಜ್ ಅನ್ನು ಬಕ್ರೀದ್ ದಿನದಂದು ಆಚರಿಸಲಾಗುವುದು. ಇದು ತ್ಯಾಗದ ಸಂಕೇತದ ಹಬ್ಬವಾಗಿದೆ. ಹಜ್ ಮೆಕ್ಕಾದಲ್ಲಿರುವ ಪವಿತ್ರವಾದ ಕಾಬಾಕ್ಕೆ ತೆರಳುವುದಾಗಿದೆ. ಯಾತ್ರಿಕರು ಜಮ್ರಾಹೆ ಉಕ್ವಾ, ಜಮ್ರಾಹೆ ವುಸ್ತಾ ಮತ್ತು ಜಮ್ರಾಹೆ ಉಲಾ ಸ್ಥಳಗಳಲ್ಲಿ ನಿರ್ಮಿಸಲಾದ ಮೂರು ವಿಭಿನ್ನ ಕಂಬಗಳ ಮೇಲೆ ಕಲ್ಲುಗಳನ್ನು ಎಸೆಯುವ ಸಂಪ್ರದಾಯವಿದೆ.

ಕುರಾನ್‌ನ ಪ್ರಕಾರ
ಕುರಾನ್‌ನ ಪ್ರಕಾರ ಈ ಮೂರು ಸ್ಥಳಗಳಲ್ಲಿ ಹಜರತ್ ಇಬ್ರಾಹಿಂ ತನ್ನ ಮಗನನ್ನು ಬಲಿ ಪಡೆಯಲು ಮುಂತಾದ ಸೈತಾನನ್ನು ತಡೆಯಲು ಯತ್ನಿಸಿದಾಗ ಅವನ ಮೇಲೆ ಕಲ್ಲು-ಮಣ್ಣುಗಳನ್ನು ಎಸೆಯಲಾಯಿತು ಎಂದು ಹೇಳಲಾಗಿದೆ. ಹಾಗಾಗಿ ಹಜ್ ಯಾತ್ರಿಗಳು ಸೈತಾನನಿಗೆ ಕಲ್ಲುಗಳನ್ನು ಎಸೆಯುವುದಾಗಿ ಆ ಕಂಬಗಳಿಗೆ ಕಲ್ಲುಗಳನ್ನುಎಸೆಯಲಾಗುವುದು. ನಾಲ್ಕನೇ ಹಂತದಲ್ಲಿ ಮತ್ತೆ ಕಲ್ಲು ತೂರಾಟ ನಡೆಯುತ್ತದೆ. ಈ ಆಚರಣೆಯು ದಿನವಿಡೀ ನಡೆಯುತ್ತದೆ. ಹಜ್ ಎರಡು ಬಾರಿ ಜಮ್ರಾಹೆ ಉಕ್ವಾ, ಜಮ್ರಾಹೆ ವುಸ್ತಾ ಮತ್ತು ಜಮ್ರಾಹೆ ಉಲಾ ಸ್ಥಳಗಳಲ್ಲಿ ನಿರ್ಮಿಸಲಾದ ಸ್ತಂಭಗಳಿಗೆ ಕಲ್ಲುಗಳನ್ನು ಎಸೆಯುತ್ತಾ ಮಿನಾವನ್ನು ತಲುಪಲಾಗುವುದು, ಹಜ್ ಯಾತ್ರೆಯಲ್ಲಿ ಏಳು ಬಾರಿ ಕಲ್ಲುಗಳನ್ನು ಎಸೆಯಲಾಗುವುದು. ನಂತರ ಕಾಬಾದ ಸುತ್ತ ಅಪ್ರದಕ್ಷಿಣೆಯಾಗಿ 7 ಸುತ್ತುಗಳನ್ನು ಸುತ್ತುವುದರೊಂದಿಗೆ ಹಜ್ ಯಾತ್ರೆ ಪೂರ್ಣಗೊಳ್ಳುವುದು.



Click it and Unblock the Notifications
