ಹಿಂದೂ ಧರ್ಮದಲ್ಲಿ ಮಾತ್ರ ಇರುವ ವಿಶೇಷತೆಗಳಿವು

ಹಿಂದೂ ಧರ್ಮವೆಂದರೆ ಅದು ಶಾಶ್ವತ ಧರ್ಮ, ಸನಾತನ ಧರ್ಮ, ಅನಂತ ಧರ್ಮ, ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂಗಳ ಹಬ್ಬ, ಹರಿದಿನಗಳು, ಆಚರಣೆ, ವಿಚಾರಧಾರೆಗಳು ಜಗತ್ತಿನಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

What Are The Secrets Peolpe Should Know About Hinduism In Kannada

ಹಿಂದೂಗಳೇ ಆಗಿದ್ದರೂ ಹಿಂದೂ ಧರ್ಮವನ್ನು ತಲತಲಾಂತರಗಳಿಂದ ಆಚರಣೆ ಮಾಡುತ್ತಿದ್ದರೂ ಕೂಡ ನಮ್ಮ ಧರ್ಮದಲ್ಲೇ ಇರುವ ಕೆಲವೊಂದು ರಹಸ್ಯ ವಿಚಾರಗಳು ನಮಗೆ ತಿಳಿದಿಲ್ಲ. ಹಾಗಾದ್ರೆ ನಮ್ಮ ಊಹೆಗೂ ನಿಲುಕದ ಸಂಗತಿಗಳು ಯಾವುದು? ಅನಾದಿ ಕಾಲದಿಂದಲೂ ಆಚರಣೆಯಲ್ಲಿರುವ ವಿಚಾರಧಾರೆಗಳೇನು? ಸನಾತನ ಹಿಂದೂ ಧರ್ಮದಲ್ಲಿರುವ ಕೆಲವೊಂದು ರಹಸ್ಯ ಸಂಗತಿಗಳ ಬಗ್ಗೆ ನಾವು ಹೇಳ್ತೀವಿ.

1.ಮಹಿಳೆ, ಪುರುಷ ಹಾಗೂ ಪ್ರಾಣೆಗಳ ರೂಪದಲ್ಲಿ ದೇವರನ್ನು ಪೂಜಿಸುತ್ತಾರೆ

1.ಮಹಿಳೆ, ಪುರುಷ ಹಾಗೂ ಪ್ರಾಣೆಗಳ ರೂಪದಲ್ಲಿ ದೇವರನ್ನು ಪೂಜಿಸುತ್ತಾರೆ

ಹಿಂದೂ ಧರ್ಮದಲ್ಲಿ ದೇವರು ಇಂತಹದ್ದೇ ರೂಪದಲ್ಲಿ ಇರಬೇಕೆಂಬ ಕಾನೂನಿಲ್ಲ. ಹಿಂದೂಗಳು ಕಲ್ಲು, ಪ್ರಾಣಿ, ಹಾವು, ಪಕ್ಷಿ ಹೀಗೆ ಎಲ್ಲದರಲ್ಲೂ ದೇವರನ್ನು ಕಾಣುತ್ತಾರೆ. ಇದರ ಜೊತೆಗೆ ಪುರುಷ ಹಾಗೂ ಮಹಿಳಾ ಶಕ್ತಿಯನ್ನು ಪೂಜಿಸಲಾಗುತ್ತದೆ. ದೇವತೆ ಎಂದರೆ ಶಕ್ತಿಯ ಪ್ರತಿರೂಪ. ಕೆಲವೊಂದು ಕಡೆ ಶಕ್ತಿ ದೇವತೆಯನ್ನೇ ಪ್ರಧಾನವಾಗಿ ಪೂಜಿಸಲಾಗುತ್ತದೆ. ಇನ್ನೂ ಮನುಷ್ಯ ಹಾಗೂ ಪ್ರಾಣಿಯನ್ನು ಹೋಲುವ ಆಂಜನೇಯನಿಗೂ ಹಿಂದೂ ಧರ್ಮದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

2. ವಿಶೇಷ ಶಕ್ತಿ ಹೊಂದಿರುವ ಮುಕ್ಕೋಟಿ ದೇವರು

2. ವಿಶೇಷ ಶಕ್ತಿ ಹೊಂದಿರುವ ಮುಕ್ಕೋಟಿ ದೇವರು

ಹಿಂದೂಗಳು ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳಲು ಒಂದೊಂದು ದೇವರ ಮೊರೆ ಹೋಗುತ್ತಾರೆ. ಉದಾಹರಣೆಗೆ ಗಣಪತಿಯನ್ನು ವಿಘ್ನ ನಿವಾರಕನಾಗಿ ಪೂಜೆಸಲಾಗುತ್ತದೆ. ಆತನಿಗೆ ಮೊದಲ ಪೂಜೆಯನ್ನೂ ಸಲ್ಲಿಸಲಾಗುತ್ತದೆ. ಇನ್ನೂ ಸರಸ್ವತಿ ವಿದ್ಯಾಧಾತೆ, ಲಕ್ಷ್ಮೀಯು ಸಂಪತ್ತು, ಸಮೃದ್ಧಿಯ ಅಧಿದೇವತೆ , ಧರ್ಮ ಮಾರ್ಗದಲ್ಲಿ ಜನತೆಯನ್ನು ನಡೆಸೋದಕ್ಕಾಗಿ ಅವತರಿಸಿದವನೇ ಶ್ರೀ ರಾಮ, ಕೃಷ್ಣನು ದುಷ್ಟರನ್ನು ಸಂಹರಿಸಿ ಒಳ್ಳೆಯವರನ್ನು ಪೊರೆಯುತ್ತಾನೆ ಎಂದು ನಂಬಲಾಗಿದೆ. ಇನ್ನೂ ದೇವರ ದೇವನೆ ಮಹಾದೇವ. ಹೀಗೆ ಹಿಂದೂಗಳು ತಮ್ಮ ಸಕಲ ಸಂಕಷ್ಟಗಳ ನಿವಾರಣೆಗೆ ಇಲ್ಲಿ ಒಂದೊಂದು ದೇವರಿಗೆ ಪೂಜೆ-ಪುನಸ್ಕಾರಗಳನ್ನು ಸಲ್ಲಿಸುವುದು ವಾಡಿಕೆ.

3. ಹಿಂದೂ ಧರ್ಮಕ್ಕಿದೆ ಪುರಾತನ ಇತಿಹಾಸ

3. ಹಿಂದೂ ಧರ್ಮಕ್ಕಿದೆ ಪುರಾತನ ಇತಿಹಾಸ

ಜಗತ್ತಿನಲ್ಲಿ ಕೆಲವೇ ಕೆಲವು ಧರ್ಮಗಳು ಮಾತ್ರ ಅಂದಿನಿಂದ ಇಂದಿನವರೆಗೂ ಜೀವಂತವಾಗಿರೋದು. ಅವುಗಳಲ್ಲಿ ಹಿಂದೂ ಧರ್ಮವು ಒಂದು. ನಾಗರೀಕತೆ ಆರಂಭವಾದ ನಂತರ ಮತ್ತೆ ಹಿಂದೂ ಧರ್ಮ ಆಚರಣೆಗೆ ಬರುತ್ತದೆ. ಇಂದಿನಿಂದ 5000 ವರ್ಷಗಳ ಹಿಂದೆ ತಿರುಗಿ ನೋಡಿದ್ರೆ ಅಲ್ಲಿ ಜನ ಹಿಂದೂ ಧರ್ಮವನ್ನೇ ಪ್ರಧಾನ ಧರ್ಮವಾಗಿ ಆಚರಣೆ ಮಾಡುತ್ತಿದ್ದರು. ಅಚ್ಚರಿಯಂದ್ರೆ ಹಿಂದೂ ಧರ್ಮದ ಸ್ಥಾಪಕ ಯಾರು ಅಂತಾನೇ ಗೊತ್ತಿಲ್ಲ. ಇಂತವರೇ ಹಿಂದೂ ಧರ್ಮವನ್ನು ಸ್ಥಾಪಿಸಿದ್ದಾರೆ ಅನ್ನೋದಕ್ಕೆ ಪುರಾವೆಗಳು ಇಲ್ಲ. ಯುಗಯುಗ ಗಳಿಂದಾನು ಶಾಶ್ವತವಾಗಿರುವ ಏಕೈಕ ಧರ್ಮ ಹಿಂದೂ ಧರ್ಮ.

4. ಅಸಂಖ್ಯಾತ ಪವಿತ್ರ ಗ್ರಂಥಗಳಿದೆ

4. ಅಸಂಖ್ಯಾತ ಪವಿತ್ರ ಗ್ರಂಥಗಳಿದೆ

ಹಿಂದೂಗಳಿಗೆ ತಮ್ಮ ಧರ್ಮದ ಆಚಾರ-ವಿಚಾರ, ಕಟ್ಟು ಪಾಡುಗಳ ಬಗ್ಗೆ ತಿಳಿಸಿಕೊಡುವುದಕ್ಕೆ ಅಸಂಖ್ಯಾತ ಪವಿತ್ರ ಗ್ರಂಥಗಳಿದೆ. ಹಿಂದೂ ಧರ್ಮದ ಬಗ್ಗೆ ತಿಳಿಯೋದಕ್ಕೆ ಒಂದು ಪುಸ್ತಕ ಓದಿದರೆ ಸಾಲೋದಿಲ್ಲ. ಹಿಂದೂಗಳಿಗೆ ಮಾರ್ಗದರ್ಶನ ನೀಡೋದಕ್ಕೆ ಲಕ್ಷಾಂತರ ಗ್ರಂಥಗಳಿದೆ. ಅದರಲ್ಲಿ ಮೊದಲನೇಯದ್ದು ವೇದಗಳು. ನಂತರ ಹಿಂದೂ ಧರ್ಮದ ತತ್ವಶಾಸ್ತ್ರಗಳ ಬಗ್ಗೆ ಉಪನಿಷತ್‌ಗಳಲ್ಲಿ ಉಲ್ಲೇಖವಾಗಿದೆ. ಇದ್ರ ಜೊತೆಗೆ ರಾಮಾಯಣ, ಮಹಾಭಾರತ, ಪುರಾಣ, ಭಗವಗ್ಧಿತೆಯು ಹಿಂದೂಗಳ ಪವಿತ್ರ ಗ್ರಂಥಗಳು.

5. ನಾಲ್ಕು ಧರ್ಮಗಳನ್ನು ಪ್ರತಿನಿಧಿಸುವ ಏಕೈಕ ಧರ್ಮ

5. ನಾಲ್ಕು ಧರ್ಮಗಳನ್ನು ಪ್ರತಿನಿಧಿಸುವ ಏಕೈಕ ಧರ್ಮ

ಹಿಂದೂ ಧರ್ಮ ಎಂದಾಕ್ಷಣ ನಮಗೆ ಥಟ್ಟನೆ ನೆನಪಾಗೋದು. ಹಿಂದೂ, ಜೈನ, ಬೌದ್ಧ, ಸಿಖ್ಖ್. ಸಾಮಾನ್ಯವಾಗಿ ಇವು ಮೂರು ಧರ್ಮಗಳು ಕೂಡ ಹಿಂದೂ ಧರ್ಮದ ಒಂದು ಭಾಗದಂತಿದೆ. ಆಚಾರ-ವಿಚಾರಗಳಲ್ಲಿ ಕೊಂಚ ಬದಲಾವಣೆ ಇದೆ ಅಷ್ಟೆ. ಆದರೆ ಈ ನಾಲ್ಕು ಧರ್ಮಗಳಲ್ಲಿಯೂ ಧರ್ಮ, ಕರ್ಮ, ಸಮರ, ಮತ್ತು ಮೋಕ್ಷದ ಹಾದಿ ಒಂದೇ. ಹೀಗಾಗಿ ಉಳಿದ ಮೂರು ಧರ್ಮಗಳನ್ನು ಹಿಂದೂ ಧರ್ಮ ಪ್ರತಿನಿಧಿಸುತ್ತದೆ.

6. ಒಬ್ಬೊರದ್ದು ಒಂದೊಂದು ನಂಬಿಕೆಗಳು

6. ಒಬ್ಬೊರದ್ದು ಒಂದೊಂದು ನಂಬಿಕೆಗಳು

ಹಿಂದೂ ಧರ್ಮದಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರುವ ಅನೇಕ ವಿಚಾರಗಳಿದೆ. ಕೆಲವರು ಬ್ರಾಹ್ಮಣಕವೇ ನಿರಂತರ ಎಂದು ನಂಬಿದ್ದಾರೆ. ಇನ್ನೂ ಕೆಲವರು ದೇವತೆಗಳು ನಿರಂತರ ಮತ್ತು ಅವರುಗಳು ಅತೀಂದ್ರಿಯ ರೂಪದಲ್ಲಿದ್ದಾರೆ ಎಂದು ನಂಬಿದ್ದಾರೆ. ಉದಾಹರಣೆಗೆ ವೈಷ್ಣವರ ಪ್ರಕಾರ ಕೃಷ್ಣನೇ ಅತ್ಯನ್ನತ, ಶೈವರು ಶಿವನ ಆರಾಧಕರು ಇಲ್ಲಿ ನಾವು ಬೇರೆ ಬೇರೆ ಜನರ ನಂಬಿಕೆಗಳು ಬೇರೆ ಬೇರೆ ವಿಧದಲ್ಲಿರುವುದನ್ನ ಕಾಣುತ್ತೇವೆ. ಇಲ್ಲಿ ದೇವರುಗಳು ಬೇರೆ ಇರಬಹುದು ಆದರೆ ನಂಬಿಕೆ ಒಂದೇ.

7. ಮೂರ್ತಿ ರೂಪದಲ್ಲಿ ದೇವರ ಆರಾಧನೆ

7. ಮೂರ್ತಿ ರೂಪದಲ್ಲಿ ದೇವರ ಆರಾಧನೆ

ಹಿಂದೂಗಳು ಮೂರ್ತಿ ಪೂಜಾ ಆರಾಧಕರು ಹೌದು. ಮರದ, ಮಣ್ಣಿನ, ಅಥವಾ ಲೋಹದಿಂದ ದೇವರ ಮೂರ್ತಿ ತಯಾರಿಸಿ ಅದರಲ್ಲಿ ದೇವರನ್ನು ಕಾಣುತ್ತಾರೆ. ಹಿಂದೂಗಳು ಪ್ರತಿನಿತ್ಯ ತಮ್ಮ ಮನೆಯಲ್ಲಿ ದೇವರನ್ನು ಆರಾಧಿಸುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಇನ್ನೂ ದೇವಸ್ಥಾನಗಳಲ್ಲೂ ದೇವರಿಗೆ ನಿತ್ಯವು ಪೂಜೆ, ಹೋಮ-ಹವನ, ಅಭಿಷೇಕ ನಡೆಯುತ್ತದೆ. ಮನೆಯಲ್ಲಿ ಸಮಸ್ಯೆಯಿದ್ದರೆ, ವ್ಯಾಪಾರದಲ್ಲಿ ನಷ್ಟ ಉಂಟಾದಾಗ ಹೀಗೆ ಅನೇಕ ಕಷ್ಟಕರ ಸಂದರ್ಭಗಳಲ್ಲಿ ಗುರುಗಳ ಮೊರೆ ಹೋಗಿ ಅವರು ಸೂಚಿಸಿದಂತೆ ಪೂಜಾ ವಿಧಾನಗಳನ್ನು ನೆರವೇರಿಸುತ್ತಾರೆ.

8. ಪುನರ್ಜನ್ಮದ ನಂಬಿಕೆಗಳು

8. ಪುನರ್ಜನ್ಮದ ನಂಬಿಕೆಗಳು

ಹಿಂದೂಗಳು ಆತ್ಮವೇ ಶಾಶ್ವತ ಎಂದು ನಂಬಿದ್ದಾರೆ. ಒಬ್ಬ ವ್ಯಕ್ತಿ ಸತ್ತ ಮೇಲೆ ಅವನ ಆತ್ಮ ಇನ್ನೊಂದು ದೇಹವನ್ನು ಸೇರಿಕೊಳ್ಳುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಸಾವು ಮತ್ತು ಮರುಹುಟ್ಟನ್ನು ಹಿಂದೂ ಧರ್ಮದಲ್ಲಿ ಸಮರ ಎಂದು ಕರೆಯಲಾಗುತ್ತದೆ. ನಾವು ಮಾಡಿದ ಕರ್ಮ ಫಲದಿಂದ ಮರುಹುಟ್ಟು ಪಡೆಯುತ್ತೇವೆ ಎಂಬ ನಂಬಿಕೆಯಿದೆ. ನಾನು ಇಂದು ಅನುಭವಿಸುತ್ತಿರುವ ಸುಖ-ದು:ಖ, ಕಷ್ಟ-ನಷ್ಟಗಳಿಗೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳ ಪಲ ಎಂದು ನಂಬಲಾಗುತ್ತದೆ. ಹೀಗಾಗಿ ಹಿಂದೂಗಳಲ್ಲಿ ಇಂತಹದೊಂದು ನಂಬಿಕೆಗಳು ಆಳವಾಗಿ ಬೇರೂರಿದೆ.

9. ನಾಲ್ಕು ಗುರಿ ಮತ್ತು ಮೋಕ್ಷ ಮಾರ್ಗ

9. ನಾಲ್ಕು ಗುರಿ ಮತ್ತು ಮೋಕ್ಷ ಮಾರ್ಗ

ಹಿಂದೂ ನಂಬಿಕೆಗಳಲ್ಲಿ ನಾಲ್ಕು ಗುರಿಗಳಿದೆ. ಅವುಗಳೆಂದರೆ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷ. ದೇವರ ಇರುವಿಕೆಯನ್ನು ಅನುಭವಿಸಲು ನಾಲ್ಕು ಪ್ರಾಥಮಿಕ ದಾರಿಗಳಿದೆ. ಇದು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಮನುಷ್ಯ ಯಾವ ಕಡೆಗೆ ಒಲವು ತೋರುತ್ತಾನೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಆ ನಾಲ್ಕು ಮಾರ್ಗಗಳು ಯಾವುದೆಂದರೆ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ, ರಾಜಯೋಗ.

10. ಸತ್ಯದ ಒಳಾರ್ಥ

10. ಸತ್ಯದ ಒಳಾರ್ಥ

ಹಿಂದೂ ಧರ್ಮವು ಅತ್ಯಂತ ಶುದ್ಧವಾದ ಧರ್ಮ. ಇಂತಹ ಶ್ರೇಷ್ಠವಾದ ಧರ್ಮವು ಇತರ ಧರ್ಮಗಳಿಗೂ ಗೌರವ ನೀಡುತ್ತದೆ. ಹಿಂದೂ ಧರ್ಮದ ಪ್ರಾಥಾಮಿಕ ತತ್ವ ಏನೆಂದರೆ ಸತ್ಯವನ್ನು ಹುಡುಕುವುದು. ಆದರೆ ಅದಕ್ಕೆ ಇಂತಹದ್ದೇ ದಾರಿ ಅನ್ನೋದು ಇಲ್ಲ. ವೇದಗಳ ಪ್ರಕಾರ ಸತ್ಯವೆಂಬುದು ಒಂದೇ ಅದನ್ನು ವಿವಿಧ ಹೆಸರಿನಿಂದ ಕರೆಯಲಾಗುತ್ತದೆ ಅಷ್ಟೇ.

" ಧರ್ಮದ ಹೆಸರಿನಲ್ಲಿ ಹೊಡೆದಾಡುವ ಬದಲು ನಮ್ಮ ಧರ್ಮ ಏನು ಹೇಳುತ್ತೆ, ಅದರ ಉಲ್ಲೇಖವಾಗಿರುವ ಸತ್ಯಗಳು ಏನು? ನಮ್ಮ ಆಚರಣೆಗಳು ಎಂತಹದ್ದು ಎಂಬುದನ್ನು ತಿಳಿದುಕೊಳ್ಳಿ. ಸಾಧ್ಯವಾದರೆ ಇತರರಿಗೂ ತಿಳಿಸುವ ಪ್ರಯತ್ನ ಮಾಡಿ. "

Desclaimer : ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಬೋಲ್ಡ್‌ಸ್ಕೈ ಕನ್ನಡ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಕೇವಲ ಮಾಹಿತಿಯನ್ನು ತಲುಪಿಸುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ದಯವಿಟ್ಟು ಇದನ್ನು ಆಚರಿಸುವ ಮೊದಲು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.

English summary

What Are The Secrets Peolpe Should Know About Hinduism In Kannada

Here are the Secrets Peolpe Should Know About Hinduism.
X
Desktop Bottom Promotion