Latest Updates
-
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ!
ವಟ ಸಾವಿತ್ರಿ ವ್ರತ ಯಾವಾಗ? ಪತಿಯ ಪತಿಯ ಆಯುರ್-ಐಶ್ವರ್ಯ ವೃದ್ಧಿಗೆ ಈ ದಿನ ಏನು ಮಾಡಬೇಕು?
ಪತಿಯ ಆಯುರ್ -ಐಶ್ವರ್ಯ ವೃದ್ಧಿಗಾಗಿ ಮಾಡುವ ಆಚರಣೆಯೇ ವಟ ಸಾವಿತ್ರಿ . ಈ ವರ್ಷ ಇದನ್ನು ಕರ್ನಾಟಕದಲ್ಲಿ ಮೇ 30ರಂದು ಆಚರಿಸಲಾಗುವುದು. ಭಾರತೀಯ ಮಹಿಳೆಯರು ಮತ್ತೈದೆ ಸಾವನ್ನು ಬಯಸುತ್ತಾರೆ, ತಮ್ಮ ಪತಿ ದೀರ್ಘಾಯುಷ್ಯದಿಂದ ಬಾಳಬೇಕು ಎಂದು ವ್ರತ ನಿಯಮಗಳನ್ನು ಪಾಲಿಸುತ್ತಾರೆ, ಅದರಲ್ಲೊಂದು ವಟ ಸಾವಿತ್ರಿ ವ್ರತ.

ಹಿಂದೂ ಪುರಾಣದಲ್ಲಿ ಸತ್ಯವಾನ್ ಸಾವಿತ್ರಿ ಕತೆಯಿದೆ. ಅದರಲ್ಲಿ ಸಾವಿತ್ರಿಯ ಅಲ್ಪಾಯುಷಿಯಾದ ಪತಿ ಸತ್ಯವಾನ್‌ನನ್ನು ಯಮನ ಪಾಶದಿಂದ ರಕ್ಷಿಸಲು ಮಾಡುತ್ತಾಳೆ, ಆಕೆಯ ವ್ರತದಿಂದ ಶಕ್ತಿಯಿಂದ ಪತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ.
ಸತ್ಯವಾನ ಅಲ್ಪಾಯುಷಿ ಎಂಬುದು ತಿಳಿದೂ ಆತನನ್ನೇ ವರಿಸಿ, ನಂತರ ತನ್ನ ಸಚ್ಚಾರಿತ್ರ್ಯ, ಚತುರ ಮಾತುಗಳಿಂದ ಯಮನನ್ನೇ ಗೆದ್ದು ಪತಿಯನ್ನು ಉಳಿಸಿಕೊಂಡ ಮಹಾನ್ ಪತಿವ್ರತೆ ಸಾವಿತ್ರಿ. ವ್ರತದ ಮೂಲಕ ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಈ ದಿನವನ್ನು ವಟ ಸಾವಿತ್ರಿ ವ್ರತವನ್ನಾಗಿ ಆಚರಿಸಲಾಗುತ್ತದೆ.

ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ವಟ ಸಾವಿತ್ರಿ ವ್ರತ ಆಚರಣೆ
ವಟ ಸಾವಿತ್ರಿ ವ್ರತವನ್ನು ಮುತ್ತೈದೆಯರು ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಆಚರಿಸುತ್ತಾರೆ. ವಟ ಸಾವಿತ್ರಿ ವ್ರತದ ದಿನದಂದು ವಿವಾಹಿತ ಮಹಿಳೆಯರು ಉಪವಾಸವಿದ್ದು ಪತಿಯ ದೀರ್ಘಾಯುಷ್ಯಕ್ಕಾಗಿ ವ್ರತ ನಿಯಮಗಳನ್ನು ಪಾಲಿಸಲಾಗುವುದು.

ಈ ಬಾರಿ ಜ್ಯೇಷ್ಠ ಅಮಾವಾಸ್ಯೆ 2 ದಿನಗಳು ಬರುವ ಕಾರಣ ಯಾವ ದಿನ ಆಚರಿಸಲಾಗುವುದು?
ಈ ಬಾರಿ ಜ್ಯೇಷ್ಠ ಅಮಾವಾಸ್ಯೆ 2 ದಿನಗಳು ಬರುವ ಕಾರಣ ವಟ ಸಾವಿತ್ರಿ ವ್ರತ ಯಾವ ದಿನ ಆಚರಿಸಲಾಗುವುದು ಎಂಬ ಗೊಂದಲ ಜನರಲ್ಲಿದೆ.
ಸ್ಕಂದ ಪುರಾಣ ಮತ್ತು ಭವಿಷ್ಯೋತ್ತರ ಪುರಾಣದ ಪ್ರಕಾರ, ಜ್ಯೇಷ್ಠ ಮಾಸದ ಅಮವಾಸ್ಯೆಯಂದು ವಟ ಸಾವಿತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. , ಈ ವರ್ಷ ಜ್ಯೇಷ್ಠ ಮಾಸದ ಅಮವಾಸ್ಯೆ ಮೇ 29 ರಂದು ಮಧ್ಯಾಹ್ನ 02:54 ಕ್ಕೆ ಪ್ರಾರಂಭವಾಗಿ ಮೇ 30, 2022 ರಂದು ಸಂಜೆ 04:59 ಕ್ಕೆ ಕೊನೆಗೊಳ್ಳುತ್ತದೆ . ಆದ್ದರಿಂದ ಮೇ 30 ರಂದು ಉದಯ ತಿಥಿಯ ಪ್ರಕಾರ ಈ ಉಪವಾಸವನ್ನು ಆಚರಿಸಲಾಗುತ್ತದೆ.

ವಟ ಸಾವಿತ್ರಿ ವ್ರತ 2022 ದಿನಾಂಕ
ಅಮವಾಸ್ಯೆ ತಿಥಿಯಿಂದ ಆರಂಭ: ಮೇ 29, 2022 ಮಧ್ಯಾಹ್ನ 02:54 ಕ್ಕೆ
ಅಮಾವಾಸ್ಯೆ ತಿಥಿಯ ಅಂತ್ಯ: ಮೇ 30, 2022 ಸಂಜೆ 04:59 ರವರೆಗೆ
ವಟ ಸಾವಿತ್ರಿ ವ್ರತವನ್ನು ಸೋಮವಾರ, 30 ಮೇ 2022 ರಂದು ಆಚರಿಸಲಾಗುತ್ತದೆ.

ವಟ ಸಾವಿತ್ರಿ ಪೂಜಾ ವಿಧಿ
ವ್ರತದ ದಿನ ಬೆಳಗ್ಗೆ ನಸುಕಿನಲ್ಲೇ ಎದ್ದು ತಲೆಸ್ನಾನ ಮಾಡಿ, ಮಡಿಬಟ್ಟೆ ಧರಿಸಿ ವ್ರತ ಮಾಡಬೇಕು. ಈ ವ್ರತ ಆಚರಣೆ ಮಾಡುವವರು ಮಣೆಯ ಮೇಲೆ ಅಥವಾ ಮನೆಯ ಗೋಡೆಯ ಮೇಲೆ ಯಮ, ಸಾವಿತ್ರಿ, ಸತ್ಯವಾನ, ಆಲದ ಮರಗಳನ್ನು ಗಂಧದಲ್ಲಿ ಬರೆಯುತ್ತಾರೆ. ನಂತರ ನೆಲದ ಮೇಲೆ ಅಕ್ಕಿಯನ್ನು ಹರವುತ್ತಾರೆ. ಸಾವಿತ್ರಿ ಮತ್ತು ಸತ್ಯವಾನನ ಬೊಂಬೆ ಅಥವಾ ಮೂರ್ತಿಯನ್ನು ಬಟ್ಟಲಿನಲ್ಲಿಟ್ಟು ಪೂಜಿಸುತ್ತಾರೆ. ಈ ಪೂಜೆಗೆ ಗಂಧದ ಬಟ್ಟಲಾದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಬಟ್ಟಲಿನಲ್ಲಿ ಆಲದ ಮರದ ಎಲೆಗಳನ್ನು ಇಟ್ಟು ಮಂತ್ರ ಹೇಳುತ್ತಾ ಪೂಜಿಸುತ್ತಾರೆ.
ಮನೆಯ ಒಳಗಡೆ ಪೂಜೆ ಮಾಡಿದ ಬಳಿಕ ಹೊರಗಿರುವ ಆಲದ ಮರವನ್ನು ಪೂಜಿಸುತ್ತಾರೆ. ಆಲದ ಮರದ ಸುತ್ತ ದಾರವನ್ನು ಕಟ್ಟಿ, ತಾಮ್ರ ಅಥವಾ ಯಾವುದೇ ನಾಣ್ಯಗಳನ್ನಿಟ್ಟು ಪತಿಯ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುತ್ತಾರೆ. ಹಿರಿಯ ಮಹಿಳೆಯರು ಕಿರಿಯ ಮಹಿಳೆಯರಿಗೆ, 'ನೀನೂ ಸಾವಿತ್ರಿಯಂತಾಗು' ಎಂದು ಹಾರೈಸುತ್ತಾರೆ. ಈ ವ್ರತವನ್ನು ಪ್ರತಿವರ್ಷ ಶ್ರದ್ಧೆ ಭಕ್ತಿಯಿಂದ ಮಾಡಿದರೆ ಪತಿಯ ಆಯುಸ್ಸು-ಆರೋಗ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.



Click it and Unblock the Notifications