Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾಸ್ತು ಟಿಪ್ಸ್: ಮನೆಯಲ್ಲಿ ಮೀನಿನ ಅಕ್ವೇರಿಯಮ್ಸ್ ಹೀಗಿದ್ದರೆ-ಮನೆಯಲ್ಲಿ ಶಾಂತಿ ನೆಲೆಸುತ್ತದೆ
ನಮ್ಮ ಹಿಂದೂ ಶಾಸ್ತ್ರದಲ್ಲಿ ವಾಸ್ತುವಿಗೆ ಪ್ರತ್ಯೇಕ ಸ್ಥಾನವನ್ನು ನೀಡಲಾಗಿದ್ದು, ಮನೆ ಕಟ್ಟುವಲ್ಲಿಂದ ಹಿಡಿದು, ಮನೆಯ ಒಳಗೆ ಯಾವ ವಿನ್ಯಾಸಗಳನ್ನು ಹೇಗೆ ನಿರ್ಮಿಸಬೇಕು? ಯಾವ ಸ್ಥಳದಲ್ಲಿ ಏನು ಕಟ್ಟಬೇಕು, ಬಚ್ಚಲು ಮನೆ ಯಾವ ದಿಕ್ಕಿನಲ್ಲಿ ಇರಬೇಕು, ದೇವರ ಕೋಣೆ ಯಾವ ಭಾಗದಲ್ಲಿ ನಿರ್ಮಿಸಬೇಕು, ಅಡುಗೆ ಮನೆಯನ್ನು ಯಾವ ಭಾಗದಲ್ಲಿ ನಿರ್ಮಿಸಿದರೆ ಒಳ್ಳೆಯದು ಎಂಬುದನ್ನು ವಿವರವಾಗಿ ತಿಳಿಸುತ್ತದೆ. ಈ ರೀತಿ ವಾಸ್ತುವನ್ನು ಅನುಸರಿಸಿಕೊಂಡು ಮನೆಯ ನಿರ್ಮಾಣವನ್ನು ನಾವು ಮಾಡಿದಲ್ಲಿ ಯಾವುದೇ ರೀತಿಯ ಅಶುಭಗಳು ಉಂಟಾಗುವುದಿಲ್ಲ ಎಂಬುದು ನಂಬಿಕೆಯಾಗಿದೆ.
ಹಿಂದಿನಿಂದಲೂ ವಾಸ್ತು ಎಂಬುದು ನಮ್ಮ ಆಚರಣೆ ಮತ್ತು ಪದ್ಧತಿಗಳಿಗೆ ಬುನಾದಿಯಾಗಿದೆ. ನಾವು ಕಟ್ಟುವ ಕಟ್ಟಡ ಹೇಗೇ ಇರಲಿ ಅಥವಾ ಎಷ್ಟೇ ದೊಡ್ಡದಾಗಿರಲಿ ಚಿಕ್ಕದಾಗಿರಲಿ ವಾಸ್ತುವನ್ನು ಅನುಸರಿಸುವುದು ಮತ್ತು ವಾಸ್ತುವಿನಲ್ಲಿ ತಿಳಿಸಿರುವ ಸಲಹೆಗಳನ್ನು ಪಾಲಿಸುವುದು ಮಹತ್ತರವಾದುದಾಗಿದೆ. ನಿಮ್ಮ ಮನೆಯಲ್ಲಿ ಏನಾದರೂ ಹೊಸ ವಸ್ತುವನ್ನು ನೀವು ತರುತ್ತಿದ್ದೀರಿ ಎಂದಾದಲ್ಲಿ ಆ ವಸ್ತುವನ್ನು ಎಲ್ಲಿ ಇರಿಸಬೇಕು ಮತ್ತು ಯಾವ ದಿಕ್ಕಿನಲ್ಲಿ ಇರಿಸಿದರೆ ಒಳ್ಳೆಯದು ಎಂಬುದನ್ನು ವಾಸ್ತು ತಿಳಿಸುತ್ತದೆ.

ಇಂದಿನ ನಮ್ಮ ಲೇಖನದಲ್ಲಿ ಅಕ್ವೇರಿಯಮ್ ಅನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇರಿಸದರೆ ಉತ್ತಮ ಎಂದು ವಾಸ್ತು ತಿಳಿಸುತ್ತದೆ ಎಂಬುದನ್ನು ಅರಿತುಕೊಳ್ಳೋಣ. ಅಕ್ವೇರಿಯಮ್‌ನಲ್ಲಿರುವ ಮೀನುಗಳ ಚಲನೆಯಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಸಂಚಲನವಾಗುತ್ತದೆ ಹಾಗೂ ಅವುಗಳ ಚಲನೆಯಿಂದ ಧನ ಮತ್ತು ಸಂಪತ್ತಿನಲ್ಲಿ ಏರಿಕೆಯುಂಟಾಗುತ್ತದೆ ಎಂಬುದಾಗಿ ವಾಸ್ತು ಶಾಸ್ತ್ರ ತಿಳಿಸುತ್ತದೆ. ಅದಾಗ್ಯೂ ನೀವು ಅಕ್ವೇರಿಯಮ್ ಅನ್ನು ಮನೆಗೆ ತರುತ್ತಿದ್ದೀರಿ ಎಂದಾದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಅಕ್ವೇರಿಯಮ್‌ನಲ್ಲಿರುವ ಮೀನುಗಳ ಸಂಖ್ಯೆ
ಮನೆಯ ಶಕ್ತಿಯನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಮೀನುಗಳ ಸಂಖ್ಯೆ ಕೂಡ ಪರಿಣಾಮ ಬೀರುತ್ತದೆ. ಹೆಚ್ಚು ಮೀನುಗಳಿದ್ದರೆ ಆ ಚಂದ ಕೂಡ ಹೆಚ್ಚುತ್ತದೆ. ಹೆಚ್ಚು ಮೀನುಗಳಿದ್ದರೆ ಅವುಗಳಿಗೂ ಸಂತಸ ತಾನೇ. ಆದರೆ ಮೀನುಗಳ ಸಂಖ್ಯೆ ಎಷ್ಟಿರಬೇಕು ಎಂಬುದನ್ನು ವಾಸ್ತು ತಿಳಿಸುತ್ತದೆ. ಸಂಖ್ಯೆ ಒಂಭತ್ತಾಗಿದೆ.

ಮೀನುಗಳ ಆಯ್ಕೆ
ಡ್ರ್ಯಾಗನ್ ಮೀನು ಮತ್ತು ಗೋಲ್ಡ್ ಫಿಶ್ ಅನ್ನು ಆಯ್ಕೆಮಾಡುವುದು ಸಂಪತ್ತಿನ ಸಂಕೇತವಾಗಿದೆ. ಜನರಿಗೆ ಬೇರೆ ಬೇರೆ ಮೀನುಗಳನ್ನು ಇರಿಸುವ ಖಯಾಲಿ ಇರುತ್ತದೆ. ಇದರಿಂದ ತಮ್ಮ ಅಕ್ವೇರಿಯಮ್ ಹೆಚ್ಚು ಸುಂದರವಾಗಿರುತ್ತದೆ ಮತ್ತು ನೈಜವಾಗಿರುತ್ತದೆ ಎಂಬುದು ಇವರ ನಂಬಿಕೆಯಾಗಿರುತ್ತದೆ. ಆದರೆ ನಿಮ್ಮ ಧನ ಸಂಪತ್ತು ನಿಮ್ಮ ಗುರಿಯಾಗಿದ್ದರೆ ಡ್ರ್ಯಾಗನ್ ಮತ್ತು ಗೋಲ್ಡನ್ ಮೀನಿನ ಆಯ್ಕೆಮಾಡಿಕೊಳ್ಳಿ.

ಮೀನುಗಳ ಬಣ್ಣ
ಬೇರೆ ಬೇರೆ ಬಣ್ಣ ಮತ್ತು ವಿನ್ಯಾಸಗಳಿರುವ ಮೀನುಗಳಿಂದ ನಮ್ಮ ಅಕ್ವೇರಿಯಮ್ ಅನ್ನು ಭರ್ತಿ ಮಾಡುವ ಯೋಚನೆ ನಮ್ಮದಾಗಿರುತ್ತದೆ. ಒಂದೇ ಬಣ್ಣದ ಎಂಟು ಮೀನುಗಳನ್ನು ಮತ್ತು ಒಂದು ಮೀನು ಬೇರೆ ಬಣ್ಣದ್ದು ಹೀಗೆ ಆಯ್ಕೆಮಾಡಬೇಕು. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಮೀನು ಸತ್ತರೆ ಅದನ್ನು ಸ್ಥಳಾಂತರಿಸಿ
ಮೀನುಗಳು ನಿರ್ದಿಷ್ಟ ಆಯುಷ್ಯವನ್ನು ಹೊಂದಿರುತ್ತವೆ. ತಮ್ಮ ಜೀವಿತಾವಧಿಯ ನಂತರ ಅವುಗಳು ಸಹಜ ಸಾವನ್ನು ಪಡೆಯುತ್ತವೆ. ಅಕ್ವೇರಿಯಮ್‌ನಲ್ಲಿ ಸತ್ತ ಮೀನನ್ನು ದೀರ್ಘಕಾಲ ಇರಿಸುವುದು ಅಮಂಗಳವಾಗಿದೆ. ಆ ಮೀನನ್ನು ಕೂಡಲೇ ಸ್ಥಳಾಂತರಿಸಿ.

ಒಬ್ಬ ವ್ಯಕ್ತಿಯೇ ಅಕ್ವೇರಿಯಮ್ ಉಸ್ತುವಾರಿ ನೋಡಿಕೊಳ್ಳಲಿ
ಸಾಮಾನ್ಯವಾಗಿ ಮನೆಯ ಪ್ರತಿಯೊಬ್ಬರೂ ಮೀನಿಗೆ ಊಟ ಹಾಕಬಹುದು. ಆದರೆ ವಾಸ್ತುವಿನಲ್ಲಿ ಇದನ್ನು ಸರಿ ಎಂದು ಹೇಳಲಾಗುತ್ತಿಲ್ಲ. ಪ್ರತೀ ದಿನ ನಿರ್ದಿಷ್ಟ ವ್ಯಕ್ತಿ ಮಾತ್ರವೇ ಮೀನಿಗೆ ಉಣಿಸಬೇಕು. ಒಬ್ಬ ವ್ಯಕ್ತಿ ಮಾತ್ರವೇ ಇದರ ಉಸ್ತುವಾರಿ ನೋಡಿಕೊಳ್ಳಬೇಕು.

ಅಕ್ವೇರಿಯಮ್ ಅನ್ನು ಇರಿಸಲು ಯಾವ ಕೊಠಡಿ ಸೂಕ್ತ?
ವಾಸ್ತು ಪ್ರಕಾರ ಡ್ರಾಯಿಂಗ್ ರೂಮ್ ಅಥವಾ ಲಿವಿಂಗ್ ರೂಮ್‌ನಲ್ಲಿ ಅಕ್ವೇರಿಯಮ್ ಅನ್ನು ಇರಿಸಬೇಕು. ಈ ಎರಡೂ ಕೊಠಡಿಗಳಲ್ಲಿ ಇರಿಸುವುದರಿಂದ ಶುಭವಾಗುತ್ತದೆ. ಮಲಗುವ ಕೋಣೆ ಅಥವಾ ಅಡುಗೆ ಮನೆಯಲ್ಲಿ ಅಕ್ವೇರಿಯಮ್ ಅನ್ನು ಇರಿಸುವುದು ಅಶುಭವಾಗಿದೆ. ಈ ಎರಡೂ ಕೋಣೆಗಳಲ್ಲಿ ಇರಿಸುವುದರಿಂದ ನಿದ್ದೆ ಮತ್ತು ಆರೋಗ್ಯ ಸಮಸ್ಯೆಗಳು ಕಾಡಬಹುದು.

ಅಕ್ವೇರಿಯಮ್ ಅನ್ನು ಇರಿಸಲು ಸೂಕ್ತ ದಿಕ್ಕು
ಉತ್ತರ ಮತ್ತು ಪೂರ್ವದಲ್ಲಿ ಅಕ್ವೇರಿಯಮ್ ಅನ್ನು ಇರಿಸಬೇಕು ಎಂಬುದಾಗಿ ವಾಸ್ತು ತಿಳಿಸುತ್ತದೆ. ನಿಮ್ಮ ಲಿವಿಂಗ್ ರೂಮ್‌ನಲ್ಲಿ ಈ ಎರಡೂ ದಿಕ್ಕಿನಲ್ಲಿ ಒಂದನ್ನು ಆಯ್ಕೆಮಾಡಿಕೊಂಡು ಅಲ್ಲಿ ಅಕ್ವೇರಿಯಮ್ ಅನ್ನು ಇರಿಸಿ. ಮನೆಯಲ್ಲಿ ಒಂದೇ ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚು ಅಕ್ವೇರಿಯಮ್ ಇರಬಾರದು.



Click it and Unblock the Notifications
