Latest Updates
-
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ
ವಾಸ್ತುಶಾಸ್ತ್ರದ ಪ್ರಕಾರ ಮನೆಯ ನಾಮಫಲಕ ಹೇಗಿರಬೇಕು?
ವಾಸ್ತು ಶಾಸ್ತ್ರವೆಂದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ನಂಬುವರು. ಯಾವುದೇ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಮೊದಲು ವಾಸ್ತು ಪ್ರಕಾರವೇ ಅದು ಇರಬೇಕೆಂದು ನೋಡಿಕೊಳ್ಳುವರು. ಮನೆಯ ಪ್ರವೇಶದ್ವಾರ, ಕಿಟಕಿಗಳು, ಅಡುಗೆ ಮನೆ, ದೇವರ ಪೂಜಾ ಕೊಠಡಿ...ಹೀಗೆ ಪ್ರತಿಯೊಂದು ಕೂಡ ವಾಸ್ತು ಪ್ರಕಾರ ಇರುವಂತೆ ನೋಡಿಕೊಳ್ಳಲಾಗುತ್ತದೆ. ಅದೇ ರೀತಿ ಮನೆ ಎಂದ ಮೇಲೆ ಅದಕ್ಕೆ ಏನಾದರೂ ಹೆಸರು ಇಡಲೇಬೇಕು. ಮನೆಗೆ ಹೆಸರು ಇಡಲು ನಾವು ತುಂಬಾ ಕಷ್ಟಪಡುತ್ತೇವೆ. ಇದರೊಂದಿಗೆ ಮನೆಯ ಮುಂದೆ ಆ ನಾಮಫಲಕ ಹಾಕಿಬಿಡುತ್ತೇವೆ.

ಆದರೆ ನಾಮಫಲಕವು ವಾಸ್ತು ಪ್ರಕಾರ ಇದೆಯಾ ಎಂದು ನೀವು ಆಲೋಚನೆ ಮಾಡಿದ್ದೀರಾ? ಗೋಡೆಯಲ್ಲಿರುವಂತಹ ಬಣ್ಣದಂತೆ ನಾಮಫಲಕದ ಬಣ್ಣ ಕೂಡ ಇದೆಯಾ? ನಾಮಫಲಕದ ಗಾತ್ರ ಸರಿಯಾಗಿದೆಯಾ? ನಾಮಫಲಕಕ್ಕೆ ಕೂಡ ವಾಸ್ತುವಿನಲ್ಲಿ ಕೆಲವೊಂದು ನಿಯಮಗಳು ಇವೆ. ನಾಮಫಲಕಕ್ಕೆ ಇರುವಂತಹ ಕೆಲವೊಂದು ನಿಯಮಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದನ್ನು ನೀವು ಓದಿಕೊಂಡು ನಿಮ್ಮ ಮನೆಯ ನಾಮಫಲಕವು ವಾಸ್ತು ಪ್ರಕಾರ ಇದೆಯಾ ಎಂದು ತಿಳಿಯಿರಿ.

ಮನೆಯ ಹೆಸರಿನ ನಕಲು ಮಾಡುವುದು
ಈಗಾಗಲೇ ಇರುವಂತಹ ಮನೆಯ ಹೆಸರನ್ನು ನಕಲು ಮಾಡಬಾರದು. ಮನೆಯ ಹೆಸರು ವಿಭಿನ್ನವಾಗಿರಬೇಕು ಮತ್ತು ನಿಮ್ಮ ಹತ್ತಿರದ ಅಥವಾ ಬೇರೆಯವರ ಮನೆಯ ಹೆಸರಿನಂತೆ ಇದು ಇರಬಾರದು.

ಹೆಸರಿಗೆ ಒಂದು ಅರ್ಥವಿರಬೇಕು
ಮನೆಗೆ ಆಯ್ಕೆ ಮಾಡಿರುವಂತಹ ಹೆಸರಿಗೆ ಒಂದು ಅರ್ಥ ಇರಬೇಕು. ಕೆಲವು ಮಂದಿ ತಮ್ಮ ಹೆಸರುಗಳನ್ನು ಜೋಡಿಸಿಕೊಂಡು ಮನೆಗೆ ಆ ಹೆಸರು ಇಡುವರು. ಇನ್ನು ಕೆಲವರು ತುಂಬಾ ಆಕರ್ಷಣೀಯ ಹೆಸರನ್ನು ಇಡುವರು. ಆದರೆ ಇದರ ಅರ್ಥವು ನಕಾರಾತ್ಮಕ ಆಗಿರಬಹುದು. ಇದನ್ನು ಕಡೆಗಣಿಸಬೇಕು. ಒಳ್ಳೆಯ, ಧನಾತ್ಮಕ ಮತ್ತು ಪವಿತ್ರ ಹೆಸರನ್ನು ಮನೆಗೆ ಇಡಬೇಕು.

ಸ್ಪಷ್ಟವಾದ ಹೆಸರು
ಹೆಸರು ಸ್ಪಷ್ಟವಾಗಿ ಇಲ್ಲವಾದರೆ ಅದರಿಂದ ನಕಾರಾತ್ಮಕ ಅರ್ಥವು ಬರುವುದು. ಹೆಸರು ಓದುವಂತೆ ಇದ್ದರೆ ಆಗ ಅದನ್ನು ಓದಿದಾಗ ಅದರಿಂದ ಧನಾತ್ಮಕ ಶಕ್ತಿ ಬರುವುದು. ಇದರಿಂದ ಮನೆಗೆ ಒಳ್ಳೆಯದು.

ನಾಮಫಲಕ ಹಾಕಲು ದಿಕ್ಕು
ನಾಮಫಲಕವು ಯಾವಾಗಲೂ ಮನೆಯ ಪ್ರವೇಶ ದ್ವಾರದ ಎಡಭಾಗದಲ್ಲಿ ಇರಬೇಕು. ಬೇರೆಲ್ಲಾ ಭಾಗಕ್ಕಿಂತ ಇದು ತುಂಬಾ ಪವಿತ್ರವೆಂದು ನಂಬಲಾಗಿದೆ. ಮುಖ್ಯದ್ವಾರದ ಅರ್ಧದಷ್ಟು ಎತ್ತರದಲ್ಲಿ ನಾಮಫಲಕವನ್ನು ಹಾಕಬೇಕು. ಇದಕ್ಕಿಂತ ಎತ್ತರದಲ್ಲಿ ಹಾಕಬಾರದು.

ನಾಮಫಲಕದ ಆಕಾರ ಮತ್ತು ವಿನ್ಯಾಸ
ನಾಮಫಲಕದ ಆಕಾರವು ವೃತ್ತಾಕಾರ, ತ್ರಿಕೋನ ಅಥವಾ ಅಸಾಮಾನ್ಯ ಆಕಾರದಲ್ಲಿ ಇದ್ದರೆ ಅದು ತುಂಬಾ ಒಳ್ಳೆಯದು. ನಾಮಫಲಕದಲ್ಲಿನ ಶಬ್ದಗಳು ಎರಡು ಗೆರೆಯಷ್ಟು ಮಾತ್ರ ಬರೆದಿರಬೇಕು. ನಾಮಫಲಕದಲ್ಲಿ ಪಕ್ಷಿಗಳು ಅಥವಾ ಪ್ರಾಣಿಗಳ ಚಿತ್ರಗಳನ್ನು ಬಿಡಿಸಿರಬಾರದು.

ಒಳ್ಳೆಯ ನಿರ್ವಹಣೆ
ಕೆಲವು ಮನೆಗಳಲ್ಲಿ ನಾಮಫಲಕವನ್ನು ಸರಿಯಾಗಿ ಜೋಡಿಸಿರುವುದಿಲ್ಲ ಮತ್ತು ಅದನ್ನು ಫ್ಯಾಶನ್ ಗಾಗಿ ಹಾಕಿಡುವರು. ಇದು ಸರಿಯಲ್ಲ ಎನ್ನುವುದು ವಾಸ್ತು ಹೇಳುತ್ತದೆ. ನಾಮಫಲಕವನ್ನು ಸರಿಯಾಗಿ ಜೋಡಿಸಬೇಕು, ಅದು ಸ್ಥಿರವಾಗಿರಬೇಕು ಮತ್ತು ಅದು ಅಲುಗಾಡುತ್ತಲಿರಬಾರದು. ನಾಮಫಲಕಕ್ಕೆ ಯಾವುದೇ ಹಾನಿ ಆಗಿರಬಾರದು ಮತ್ತು ಇದನ್ನು ಸರಿಯಾಗಿ ನಿರ್ವಹಣೆ ಮಾಡಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದರಲ್ಲಿ ಯಾವುದೇ ತೂತು ಇರಲೇಬಾರದು.

ನಾಮಫಲಕವು ಲಿಫ್ಟ್ ನ ಎದುರಿಗೇ ಇರಬಾರದು
ನೀವು ಬಹುಮಹಡಿ ಕಟ್ಟಡದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರೆ ಆಗ ನೀವು ಲಿಫ್ಟ್ ನ ನೇರಕ್ಕೆ ನಾಮಫಲಕವನ್ನು ಹಾಕಬೇಡಿ. ಲಿಫ್ಟ್ ತೆರೆದಾಗ ಅದರಲ್ಲಿ ಇರುವವರಿಗೆ ನಿಮ್ಮ ಮನೆಯ ನಾಮಫಲಕವು ಕಣ್ಣಿಗೆ ಬೀಳಬಾರದು.

ನಾಮಫಲಕದ ಸುತ್ತಲು ವಸ್ತುಗಳು
ಮನೆಯ ಮುಖ್ಯದ್ವಾರದ ಬದಿಯಲ್ಲಿ ಪೊರಕೆ, ನೆಲ ಒರೆಸುವ ಸಾಮಗ್ರಿಗಳನ್ನು ಇಡಬೇಡಿ. ಕೆಲವೊಂದು ಕಡೆಗಳಲ್ಲಿ ಇದು ನಾಮಫಲಕದ ಬದಿಯಲ್ಲಿ ಕೂಡ ಕಂಡುಬರುವುದು. ಇದು ತುಂಬಾ ಅಪವಿತ್ರ ಎಂದು ಪರಿಗಣಿಸಲಾಗಿದೆ. ನಾಮಫಲಕದ ಬದಿಯಲ್ಲಿ ಸ್ವಚ್ಛಗೊಳಿಸುವ ಯಾವುದೇ ಸಾಮಗ್ರಿಗಳನ್ನು ಇಡಬಾರದು.

ನಾಮಫಲಕದ ಬಣ್ಣ
ಮನೆಯ ನಾಮಫಲಕದ ಬಣ್ಣವು ಯಜಮಾನನ ರಾಶಿಚಕ್ರಕ್ಕೆ ಅನುಗುಣವಾಗಿ ಇರಬೇಕು. ಜ್ಯೋತಿಷಿಗಳನ್ನು ಭೇಟಿಯಾಗಿ ಅವರ ನೆರವಿನಿಂದ ನೀವು ಅಕ್ಷರಗಳನ್ನು ಆಯ್ಕೆ ಮಾಡಿ.



Click it and Unblock the Notifications











