Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿ 2021: ದುರ್ಗಾ ದೇವಿ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಗತಿಗಳು
ಶಕ್ತಿ ದೇವತೆ ದುರ್ಗೆಯನ್ನು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಸಾಕಷ್ಟು ಕಾರಣಗಳಿಂದಾಗಿ, ಅವಳ ಮಹಿಮೆಗಳಿಂದಾಗಿ ದುರ್ಗೆ ಬಹಳ ಬಲಶಾಲಿ, ಪ್ರಭಾವಶಾಲಿ ದೇವತೆ. ಒಂದು ರೀತಿಯಲ್ಲಿ ಅವಳು ಕರುಣಾಳು ತಾಯಿ ಎಂದು ಕರೆಯಲ್ಪಡುತ್ತಿದ್ದರೆ, ಇನ್ನೊಂದು ರೀತಿಯಲ್ಲಿ ಅವಳು ತನ್ನ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಎಲ್ಲಾ ದುಷ್ಟ, ನೀಚ ಜೀವಿಗಳ ವಿರುದ್ಧ ಹೋರಾಡಲು ಸಿದ್ಧಳಾಗಿರುವವಳು, ನಾಶಮಾಡುವ ಸಂಹಾರಕಿ ಎಂದೂ ಕರೆಯುತ್ತಾರೆ.

ಮನುಷ್ಯನ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ, ಕೆಡುಕುಗಳನ್ನು ದುರ್ಗಾ ಮಾತೆ ನಿವಾರಣೆ ಮಾಡಿ ಅಲ್ಲಿ ಪ್ರೀತಿ, ಕರುಣೆ, ಅನುಕಂಪವೆಂಬ ಅಮೃತವನ್ನು ತುಂಬುತ್ತಾಳೆ. ಭಕ್ತಿಯನ್ನು ಮನದಲ್ಲಿದ್ದರೆ, ಅಹಂಕಾರ, ಮತ್ಸರ, ಹಗೆತನ ಮತ್ತು ಕೆಟ್ಟ ಶಕ್ತಿಗಳನ್ನು ಅಗಳು ಬಡಿದೋಡಿಸುತ್ತಾಳೆ.
ದುರ್ಗೆಯನ್ನು ಆರಾಧಿಸುವ ನವರಾತ್ರಿ ಹಬ್ಬಕ್ಕೇ ಇನ್ನೇನು ದಿನಗಣನೆ ಆರಂಭವಾಗಿದೆ. ನವರಾತ್ರಿ 2021ನೇ ಸಾಲಿನಲ್ಲಿ ಅಕ್ಟೋಬರ್ 7ರಂದು ಆರಂಭವಾಗಿ ಅಕ್ಟೋಬರ್ 14ಕ್ಕೆ ಅಂತ್ಯವಾಗಿ 15ರಂದು ವಿಜಯ ದಶಮಿ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ನವರಾತ್ರಿಯ ಸಮಯದಲ್ಲಿ ಭಕ್ತರು ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ. ಈ ಹಿನ್ನೆಲೆ ಇಂತಹ ಶಕ್ತಿ ದೇವತೆಯ ಬಗ್ಗೆ ನಿಮಗೆ ಈವರೆಗೂ ತಿಳಿದಿರದ ಸಾಕಷ್ಟು ಕುತೂಹಲಕಾರಿ ಸಂಗತಿಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

1. ಶಿವನ ರೂಪ
ದುರ್ಗಾ ಮಾತೆ ಶಿವನ ಶಿವನ ಭಾಗ ಎಂದು ಪರಿಗಣಿಸಲಾಗಿದೆ. ಶಿವ ರೂಪವಾದರೆ, ದುರ್ಗಾ ಮಾತೆ ಅಭಿವ್ಯಕ್ತಿ.

2. ಅಷ್ಟ ಭುಜಾ ದುರ್ಗಾ
ದುರ್ಗೆಯ 8 ತೋಳುಗಳು 8 ದಿಕ್ಕುಗಳನ್ನು ಸೂಚಿಸುತ್ತವೆ, ಆದ್ದರಿಂದ ಅವಳನ್ನು "ಅಷ್ಟ ಭುಜಾ ದುರ್ಗಾ" ಎಂದು ಕರೆಯುತ್ತಾರೆ. ಪ್ರತಿಯೊಂದು ತೋಳುಗಳು ಪ್ರಬಲ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ತನ್ನ ಭಕ್ತರನ್ನು ಯಾವುದೇ ತಪ್ಪು ಅಥವಾ ಕೆಟ್ಟದ್ದರಿಂದ ರಕ್ಷಿಸಲು ಅವಳು ತನ್ನ ಎಂಟು ಕೈಗಳಲ್ಲಿ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಾಳೆ ಎಂಬುದು ಅದರ ಅರ್ಥ.

3. ಸಿಂಹದ ಮೇಲೆ ಸವಾರಿ
ಸಿಂಹವನ್ನು ಕಾಡಿನ ರಾಜ ಎಂದು ಹೇಳಲಾಗುತ್ತದೆ, ಅದು ಆಕೆಯ ಶಕ್ತಿಯ ಚಿತ್ರಣವನ್ನು ತೋರ್ಪಡಿಸುತ್ತದೆ. ದುರ್ಗಾದೇವಿ ಸಿಂಹವನ್ನೇ ತನ್ನ ವಾಹನವಾಗಿ ಮಾಡಿಕೊಂಡಿದ್ದಾಳೆ. ಇದರ ಮೇಲೆ ಅವಳು ಸವಾರಿ ಮಾಡುತ್ತಾಳೆ. ಸಿಂಹವು ಶಕ್ತಿಯನ್ನು ಸೂಚಿಸಿದರೆ, ಸಿಂಹದ ಮೇಲೆ ಕುಳಿತಿರುವ ದುರ್ಗೆಯು ಅಂತಿಮ ಶಕ್ತಿಯನ್ನು ಸಂಕೇತಿಸುತ್ತದೆ. ಅವಳು ಅವನನ್ನು ಎಲ್ಲಾ ಕೆಟ್ಟದ್ದನ್ನು ನಾಶಮಾಡುವ ಸಾಧನವಾಗಿ ಬಳಸುತ್ತಾಳೆ.

4. ತ್ರಯಂಬಕೆ
ದುರ್ಗಾ ದೇವಿಯನ್ನು ತ್ರಯಂಬಕೆ ಎಂದು ಕರೆಯಲಾಗುತ್ತದೆ, ಕಾರಣ ಅವಳಿಗೆ ಮೂರು ಕಣ್ಣುಗಳಿವೆ. ಅವಳ ಮೂರು ಕಣ್ಣುಗಳು ಅಗ್ನಿ, ಸೂರ್ಯ ಮತ್ತು ಚಂದ್ರನನ್ನು ಸೂಚಿಸುತ್ತವೆ. ದುರ್ಗಾವನ್ನು ಸರ್ವೋಚ್ಚ ಶಕ್ತಿ ಎಂದು ಭಾವಿಸಬಹುದು. 'ದುರ್ಗಾ' ಎಂಬ ಪದದ ಅರ್ಥ ಅಜೇಯ.

5. ಸರ್ವೋಚ್ಚ ಶಕ್ತಿ
ದುರ್ಗೆಯು ಸರ್ವೋಚ್ಚ ಶಕ್ತಿ ಉಳ್ಳವಳು ಎಂದು ಪರಿಗಣಿಸಲಾಗಿದೆ. ದುರ್ಗಾ ವಿವಿಧ ರೂಪಗಳನ್ನು ಪಡೆದಿದ್ದರಿಂದ ರಾಕ್ಷಸನಾದ ಮಹಿಷಾಸುರನನ್ನು ನಾಶಮಾಡಲು ಸಾಧ್ಯವಾಯಿತು. ಆದ್ದರಿಂದ ಅವಳನ್ನು ಮಹಿಷಾಸುರ ಮರ್ದಿನಿ ಎಂದು ಕರೆಯಲಾಗುತ್ತದೆ.

6. ತ್ರಿಶೂಲಧಾರಿ
ದುರ್ಗೆಯು ತ್ರಿಶೂಲಧಾರಿ. ಅವಳ ಕೈಯಲ್ಲಿರುವ ತ್ರಿಶೂಲವು ಮೂರು ಮಾನವ ಗುಣಗಳನ್ನು ಹೊಂದಿದೆ, ಅವುಗಳೆಂದರೆ ಸತ್ವ, ರಜಸ್ಸು ಮತ್ತು ತಮಸ್ಸು. ಈ ಮೂರು ನಿಷ್ಕ್ರಿಯತೆ, ಆಸೆಗಳನ್ನು ಮತ್ತು ಒತ್ತಡವನ್ನು ಸೂಚಿಸುತ್ತದೆ. ಜೀವನದಲ್ಲಿ ಸಂತೋಷವಾಗಿರಲು ಈ ಮೂರು ವಿಷಯಗಳ ನಡುವೆ ಸಮತೋಲನ ಇರಬೇಕು ಎಂಬುದು ಇದರ ಅರ್ಥವಾಗಿದೆ.

7. ದುರ್ಗಾ ವಿಗ್ರಹವನ್ನು ತಯಾರಿಸಲು ವೇಶ್ಯಾಗೃಹಗಳ ಹೊರಗಿನ ಮಣ್ಣು
ದುರ್ಗಾ ವಿಗ್ರಹವನ್ನು ತಯಾರಿಸಲು ವೇಶ್ಯಾಗೃಹಗಳ ಹೊರಗಿನ ಮಣ್ಣನ್ನು ಬಳಸಲಾಗುತ್ತದೆ ಎಂಬ ನಂಬಿಕೆ ಇದೆ. ಏಕೆ ಎಂದು ಆಶ್ಚರ್ಯ ಪಡುವಿರಾ?, ಇದೇ ನೋಡಿ ಕಾರಣ, ದುರ್ಗಾ ಪೂಜೆಯ ಅವಧಿಯನ್ನು ಗುಜರಾತ್‌ನಲ್ಲಿ ಗಾರ್ಬಾ, ಉತ್ತರದಲ್ಲಿ ರಾಮ್‌ಲೀಲಾ ಮತ್ತು ಪೂರ್ವ ಭಾರತದ ದುರ್ಗಾ ಪೂಜೆಯಾಗಿ ಆಚರಿಸಲಾಗುತ್ತದೆ.
ಕೆಲವು ನಂಬಿಕೆ, ಹಿಂದಿನಿಂದ ಬಂದ ಸಂಪ್ರದಾಯದ ಪ್ರಕಾರ, ಒಬ್ಬ ವ್ಯಕ್ತಿಯು ವೇಶ್ಯಾಗೃಹಕ್ಕೆ ಪ್ರವೇಶಿಸಿದಾಗ, ಅವನು ತನ್ನ ಪರಿಶುದ್ಧತೆ ಮತ್ತು ಮುಗ್ಧತೆಯನ್ನು ಅದರ ಹೊರಗೆ ಬಿಡುತ್ತಾನೆ. ಆದ್ದರಿಂದ, ವೇಶ್ಯಾಗೃಹದ ಹೊರಗಿನ ಮಣ್ಣನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ. ವಿಗ್ರಹಗಳನ್ನು ರಚಿಸಲು ಮತ್ತು ಅವುಗಳನ್ನು ಕೆತ್ತಿಸಲು ಆ ಮಣ್ಣನ್ನು ಬಳಸಲು ಇದು ಕಾರಣವಾಗಿದೆ.

8. ಹಲವು ದೇವರಿಂದ ಎರವಲು ಪಡೆದ ಶಕ್ತಿ ಮಾತೆ
ದುರ್ಗಾ ದೇವಿ ಸಹಲು ದೇವಾನು ದೇವತೆಗಳಿಂದ ತನ್ನ ರೂಪವನ್ನು ಎರವಲು ಪಡೆದ ಶಕ್ತಿ ಮಾತೆ ಎನ್ನಲಾಗುತ್ತದೆ. ಕಾರಣ ಏನೆಂದರೆ, ದುರ್ಗಾದೇವಿ ಶಿವನಿಂದ ಅವಳ ಮುಖ, ವಿಷ್ಣುವಿನಿಂದ ಅವಳ ಹತ್ತು ತೋಳುಗಳು, ಬ್ರಹ್ಮನಿಂದ ಪಾದಗಳನ್ನು ಪಡೆದಿದ್ದಾಳೆ. ಅಲ್ಲದೆ, ಇತರೆ ಅನೇಕ ದೇವತೆಗಳು ಅವಳಿಗೆ ಶಂಖ, ಸಿಡಿಲು, ಕತ್ತಿ ಮತ್ತು ಈಟಿಯಂತಹ ಶಸ್ತ್ರಾಸ್ತ್ರಗಳನ್ನು ಸಹ ನೀಡಿದರು ಎಂಬ ನಂಬಿಕೆ ಇದೆ.



Click it and Unblock the Notifications