Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ದೀಪಾವಳಿಯಂದು ಲಕ್ಷ್ಮಿ ಪೂಜೆಗೆ ಬೇಕಾಗುವ ಪೂಜಾ ಸಾಮಾಗ್ರಿಗಳು
ದೀಪಗಳ ಹಬ್ಬ ದೀಪಾವಳಿಯನ್ನು ಹೆಚ್ಚು ಸಂಭ್ರಮ ಮತ್ತು ಸಡಗರದಿಂದ ದೇಶಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬವನ್ನು ಇನ್ನಷ್ಟು ವಿಧಿವತ್ತಾಗಿ ಆಚರಿಸುವುದಕ್ಕಾಗಿ ಕೆಲವೊಂದು ಕ್ರಮಗಳಿವೆ ಮತ್ತು ದೀಪಗಳ ಹಬ್ಬ ದೀಪಾವಳಿಯು ಕೂಡ ಅರ್ಥವತ್ತಾದ ಹಿನ್ನೆಲೆಯೊಂದನ್ನು ಹೊಂದಿದೆ. ನಮ್ಮ ಮನದೊಳಗಿರುವ ಅಜ್ಞಾನವನ್ನು ತೊಲಗಿಸಿ ಅಲ್ಲಿ ಒಳ್ಳೆಯತನದ ಜ್ಞಾನದ ದೀವಿಗೆಯನ್ನು ಬೆಳಗುವುದು ಎಂಬ ಅರ್ಥವನ್ನು ದೀಪಾವಳಿ ಸಾರುತ್ತಿದೆ.
ದೀಪಾವಳಿಯಂದು ಬಂಧು ಮಿತ್ರರೊಂದಿಗೆ ಹಬ್ಬವನ್ನು ಆಚರಿಸುವುದರ ಜೊತೆಗೆ ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ನೀಡುವುದು ಸಿಹಿ ಹಂಚುವ ಕ್ರಮವನ್ನು ಅನುಸರಿಸಲಾಗುತ್ತದೆ. ಮನೆಯಲ್ಲಿ ಸಕಲ ಸಂಪತ್ತು ತುಂಬಿರಲಿ ಎಂದು ಭಕ್ತರು ಈ ದಿನ ದೇವರನ್ನು ವಿಶೇಷವಾಗಿ ಪೂಜಿಸುತ್ತಾರೆ. ಈ ಹಬ್ಬವನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.ನವೆಂಬರ್ 6ನೇ ತಾರೀಖಿನಂದು ಈ ಬಾರಿಯ ದೀಪಾವಳಿ ಆರಂಭವಾಗುತ್ತಿದ್ದು ಇದು ಧನ್‌ತೇರಾಸ್ ಆಗಿದ್ದು ದೀಪಾವಳಿಯ ಆರಂಭದ ಸೂಚಕವಾಗಿದೆ.

ದೀಪಾವಳಿಯಂದು ಲಕ್ಷ್ಮೀ ಪೂಜೆಗೆ ಮಹತ್ತರ ಸ್ಥಾನವನ್ನು ನೀಡಲಾಗುತ್ತದೆ. ಈ ದಿನದಂದು ನೀವು ಪೂಜೆಗೆ ಬಳಸುವ ಪರಿಕರಗಳನ್ನು ತಿಳಿದುಕೊಂಡಿರಬೇಕು. ಇಂದಿನ ಲೇಖನದಲ್ಲಿ ಪೂಜಾ ಸಾಮಾಗ್ರಿಗಳು ಯಾವುವು ಎಂಬುದರ ವಿವರಗಳನ್ನು ನಾವು ನೀಡುತ್ತಿದ್ದು ವಿವರಗಳನ್ನು ತಿಳಿದುಕೊಳ್ಳಿ.
{image-1-10-1507631394-11-1507701782.jpg kannada.boldsky.com}
ಲಕ್ಷ್ಮೀ ಪೂಜೆಗೆ ಬೇಕಾಗುವ ಸಾಮಾಗ್ರಿಗಳು
*ಹೂವುಗಳು
*ದೀಪ
*ಘಂಟೆ
*ಅಗರ್‌ಬತ್ತಿ
*ಶ್ರೀಗಂಧದ ಪೇಸ್ಟ್
*ಶಂಖ
ನಿಮ್ಮ ಪೂಜಾ ತಟ್ಟೆಯಲ್ಲಿ ಮೇಲೆ ತಿಳಿಸಿದ ಸಾಮಾಗ್ರಿಗಳು ಅವಶ್ಯವಾಗಿ ಇರಲೇಬೇಕು. ಈ ತಾಲಿಯನ್ನು ನಿಮ್ಮ ಹತ್ತಿರದವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಇದರಿಂದ ಅವರ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಥಾಲಿಯ ಆಯ್ಕೆಯನ್ನು ಮಾಡುವುದು ಹೇಗೆ
*ವೃತ್ತಾಕಾರದಲ್ಲಿರುವ ಥಾಲಿಯನ್ನು ಆರಿಸಿಕೊಳ್ಳಿ
*ಮಧ್ಯಭಾಗದಲ್ಲಿ ಸ್ವಸ್ತಿಕಾ ಚಿಹ್ನೆಯನ್ನು ಬಿಡಿಸಿ ಇದನ್ನು ಬಿಡಿಸಲು ನೀವು ಶ್ರೀಗಂಧದ ಪೇಸ್ಟ್ ಅನ್ನು ಬಳಸಿಕೊಳ್ಳಬಹುದು.
*ಮಧ್ಯಭಾಗದಲ್ಲಿ ದೀಪವನ್ನು ಇರಿಸಿ
*ಘಂಟೆ ಮತ್ತು ಅಗರಬತ್ತಿಯನ್ನು ಇರಿಸಿಕೊಳ್ಳಿ
*ತಟ್ಟೆಯಲ್ಲಿ ಶಂಖವನ್ನು ಇರಿಸಿ ಬೇಕಾದಲ್ಲಿ ಖಾಲಿ ಇರುವ ಸ್ಥಳವನ್ನು ಹೂವುಗಳಿಂದ ವಿಶೇಷವಾಗಿ ದಾಸವಾಳದಿಂದ ಅಲಂಕರಿಸಿಕೊಳ್ಳಬಹುದಾಗಿದೆ.
*ಲಕ್ಷ್ಮೀ ಪೂಜೆಗೆ ಬೇಕಾಗುವ ಸಾಮಾಗ್ರಿಗಳು
*ಓಂ ಬರೆದಿರುವ ಚಿನ್ನ ಅಥವಾ ಬೆಳ್ಳಿಯ ನಾಣ್ಯ
*ಹಣತೆಗಳು
*ವ್ಯಾಕ್ಸ್ ಲ್ಯಾಂಪ್ಸ್
*ಪೂಜಾ ತಟ್ಟೆ
*ಹಸಿ ಹಾಲು
*ರೋಲಿ, ಅಕ್ಕಿ
*ಲಕ್ಷ್ಮೀ ಮತ್ತು ಗಣೇಶನ ಫೋಟೋ
*ರೇಷ್ಮೆ ಬಟ್ಟೆ
*ಸಿಹಿತಿಂಡಿಗಳು
*ಅಗರ್‌ಬತ್ತಿ
*ಹೂವುಗಳು
*ಕಮಲದ ಹೂವುಗಳು
*ನೀರಿನಿಂದ ತುಂಬಿರುವ ಕಲಶ
*ಆರತಿ ಬೆಳಗುವ ತಟ್ಟೆ
ಗಮನದಲ್ಲಿರಿಸಬೇಕಾದ ಅಂಶ
ಪೂಜೆಯಲ್ಲಿ ನಿಮಗೆ ಮುಖ್ಯವಾಗಿ ಬೇಕಾಗಿರುವುದು ನಾಣ್ಯಗಳಾಗಿವೆ. ಚಿನ್ನ ಅಥವಾ ಬೆಳ್ಳಿಯ ನಾಣ್ಯಗಳನ್ನು ನೀವು ಬಳಸಿಕೊಳ್ಳಬಹುದು. ಬಳಸುವ ನಾಣ್ಯಗಳ ಸಂಖ್ಯೆ 11, 21, 31 ಅಥವಾ 101 ಆಗಿರಬೇಕು.
ಪೂಜಾ ತಟ್ಟೆಯಲ್ಲಿ ಮಣ್ಣಿನ ಹಣತೆಗಳನ್ನು 21 ಅಥವಾ 31 ಸಂಖ್ಯೆಯಲ್ಲಿ ಇರಿಸಬೇಕು. ಮನೆಯನ್ನು ಅಲಂಕರಿಸಲು ವ್ಯಾಕ್ಸ್ ದೀಪಗಳನ್ನು ಬಳಸಬಹುದಾಗಿದೆ.
ಎಲ್ಲಾ ದೀಪಗಳನ್ನು ಇರಿಸಿಕೊಳ್ಳುವುದಕ್ಕಾಗಿ ದೊಡ್ಡ ತಟ್ಟೆಯನ್ನು ಬಳಸಿ. ನಾಣ್ಯಗಳನ್ನು ಇದರಲ್ಲಿ ಇರಿಸಬಹುದು. ರೋಲಿ, ಅಕ್ಕಿ, ಹಸಿ ಹಾಲನ್ನು ಎರಡು ಭಾಗವನ್ನಾಗಿ ಮಾಡಿ. ಒಂದು ಭಾಗವನ್ನು ಪೂಜೆಗೆ ಬಳಸಬೇಕು ಇನ್ನೊಂದು ಭಾಗದಿಂದ ಪೂಜೆಯಲ್ಲಿ ಪಾಲ್ಗೊಂಡವರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಚೋತಿ ದೀಪಾವಳಿಯಂದು ಲಕ್ಷ್ಮೀ ಮತ್ತು ಗಣೇಶನ ಫೋಟೋಗಳನ್ನು ಬಳಸಲಾಗುತ್ತದೆ. ಮೂರ್ತಿಗಳನ್ನು ಧನ್‌ತೇರಾಸ್ ದಿನದಂದು ಬಳಸಲಾಗುತ್ತದೆ.
ರೇಷ್ಮೆ ಬಟ್ಟೆಯು ಗಾಢವಾಗಿರಬೇಕು. ನಾಣ್ಯಗಳ ತಟ್ಟೆಯೊಂದಿಗೆ ಇದನ್ನು ಬಳಸಬೇಕು ಮತ್ತು ಪೂಜೆ ಮಾಡುವ ಪ್ರದೇಶದಲ್ಲಿ ಬಳಸಲಾಗುತ್ತದೆ. ದೀಪಾವಳಿಯಂದು ಬೆಳಗ್ಗೆ ಪೂಜೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಂಜೆ ಪೂಜೆಯನ್ನು ನಡೆಸಬೇಕು. ಪಟಾಕಿ ಹಚ್ಚುವುದು, ಮೊದಲಾದ ದೀಪಾವಳಿ ಸಡಗರವನ್ನು ಪೂಜೆಯ ನಂತರ ನಿರ್ವಹಿಸಲಾಗುತ್ತದೆ.



Click it and Unblock the Notifications

