Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
ವ್ಯಾಪಾರದಲ್ಲಿ ಯಶಸ್ವಿಯಾಗಲು ಈ ಮಂತ್ರಗಳನ್ನು ಪಠಿಸಿ
ಅದರಲ್ಲೂ ಮೊದಲ ಬಾರಿಗೆ ವ್ಯವಹಾರವನ್ನು ಪ್ರಾರಂಭಿಸುವವರು, ಈಗಾಗಲೇ ವ್ಯವಹಾರ ಆರಂಭಿಸಿರುವವರು ಯಾರು ತಾನೇ ಯಶಸ್ವಿ ಉದ್ಯಮಿಯಾಗಲು ಬಯಸುವುದಿಲ್ಲ?. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲವೂ ಸಾಕಷ್ಟು ಸಾವಾಲುಗಳನ್ನು ಎದುರಿಸುವಂತೆ ಮಾಡಿದೆ. ಎಲ್ಲ ಸವಾಲುಗಳನ್ನು ಎದುರಿಸಿ ನೀವು ಸಹ ನಿಮ್ಮ ವ್ಯವಹಾರದಲ್ಲಿ ಯಶಸ್ವಿಯಾಗಲು ಜ್ಯೋತಿಶಾಸ್ತ್ರ ನಿಮಗೆ ಸಲಹೆ ನೀಡುತ್ತದೆ.

ಅದರಂತೆ ನಿತ್ಯ ನೀವು ಈ ಶ್ಲೋಕಗಳನ್ನು ಭಜಿಸುವುದರಿಂದ ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಯಾವುದೇ ಅಡೆತಡೆ, ವಿಘ್ನ, ಸವಾಲುಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ.
ಯಾವುದೇ ವ್ಯವಹಾರವು ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಸಹಾಯ ಮಾಡುವ ಕೆಲವು ಸರಳ ಮಂತ್ರಗಳು ಇಲ್ಲಿವೆ:

ವ್ಯವಹಾರದಲ್ಲಿ ಯಶಸ್ಸಿಗೆ ಮಂತ್ರ
ಮಂತ್ರಗಳು ದೇವತೆ ಅಥವಾ ಗ್ರಹವನ್ನು ಆಹ್ವಾನಿಸಿ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತದೆ, ಇದು ನಿಮ್ಮ ಮನಸ್ಸಿನ ಮೇಲಿನ ಪರಿಣಾಮಗಳನ್ನು ಸುಧಾರಿಸುತ್ತದೆ. ಸರಿಯಾದ ಸಮಯದಲ್ಲಿ, ನಿಷ್ಠೆಯಿಂದ ಮಂತ್ರಗಳನ್ನು ಪಠಸುವುದರಿಂದ ಪ್ರಯೋಜನಕಾರಿ ಕಂಪನಗಳನ್ನು ಸೃಷ್ಟಿಸಲು, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು, ಜೀವನದಲ್ಲಿ ಮುಂದೆ ಬರಲು, ಉತ್ತಮ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಯಾವೆಲ್ಲಾ ಮಂತ್ರಗಳು ಮುಂದೆ ಓದಿ:

1. ಹಣಕಾಸಿನ ತೊಂದರೆಗಳು ಮತ್ತು ವ್ಯವಹಾರದ ಬೆಳವಣಿಗೆಗೆ ಹನುಮಾನ್ ಮಂತ್ರ
ಭಗವಾನ್ ಹನುಮನ ಆಶೀರ್ವಾದ ಪಡೆಯಲು ಉತ್ತಮ ಪರಿಹಾರವೆಂದರೆ ಹನುಮಾನ್ ಚಾಲಿಸಾ. ನಿಮ್ಮ ವ್ಯವಹಾರ ಬೆಳವಣಿಗೆ ಹೊಂದಲು ಮತ್ತು ನಿಮ್ಮ ವ್ಯವಹಾರದ ಹಾದಿಯಲ್ಲಿನ ಪ್ರಮುಖ ಅಡೆತಡೆಗಳನ್ನು ದೂರವಿರಿಸಲು ಹನುಮಾನ್ ಚಾಲಿಸಾ ಬಹಳ ಪರಿಣಾಮಕಾರಿ ಮಂತ್ರವಾಗಿದೆ. ಇದನ್ನು ದಿನದಲ್ಲಿ ಮೂರು ಬಾರಿ ಜಪಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಅಲ್ಲದೆ, ಮಂತ್ರವನ್ನು 108 ಬಾರಿ ಜಪಿಸುವುದರಿಂದ ಹಣಕಾಸಿನ ತೊಂದರೆಗಳು ಮತ್ತು ವ್ಯವಹಾರದ ಬೆಳವಣಿಗೆಯನ್ನು ಸರಾಗಗೊಳಿಸುವಲ್ಲಿ ನಿಮಗೆ ಸಹಾಯವಾಗುತ್ತದೆ:
|| ಮನೋಜವಂ ಮಾರುತತುಲ್ಯವೆಗಂ ಜೀತೆಂದ್ರಿಯಂ ಬುದ್ಧಿಮಾತಾಂ ವರಿಷ್ಠಂ
ವಾತಾತ್ಮಜಂ ವನಾರಾಯುಕ್ತ ಮುಖ್ಯಂ ಶ್ರೀರಮದೂತಂ ಶಿರಸಾ ||

2. ಸಿದ್ಧಿ ಮತ್ತು ಸೌಭಾಗ್ಯಕ್ಕಾಗಿ ಗಣೇಶ ಮಂತ್ರ
ನೀವು ಈ ಮಂತ್ರವನ್ನು ಪ್ರತಿದಿನ 108 ಬಾರಿ ಮತ್ತು ಪ್ರತಿ ಮಂಗಳವಾರ 324 ಬಾರಿ ಗಣೇಶನ ವಿಗ್ರಹದ ಮುಂದೆ ಪಠಿಸಬೇಕು. ಇದರಿಂದ ನಿಮ್ಮ ಉದ್ಯಮದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಬಹುದು. ಈ ಸ್ತ್ರೋತ್ರದ ಅರ್ಥ "ಶ್ರೀ ಗಣೇಶನಿಗೆ ಓಂ ಮತ್ತು ನಮಸ್ಕಾರಗಳು".
|| ಓಂ ಗಣ ಗಣಪತಾಯ ನಮ ||

3. ಉತ್ತಮ ಗಳಿಕೆ ಮತ್ತು ಲಾಭಕ್ಕಾಗಿ ಲಕ್ಷ್ಮಿ ಮಂತ್ರ
ನಿಮ್ಮ ಕುಲದೇವಿ ಅಥವಾ ಕುಟುಂಬ ದೇವತೆಯ ವಿಗ್ರಹದ ಮುಂದೆ ಈ ಮಂತ್ರವನ್ನು ಪ್ರತಿದಿನ 108 ಬಾರಿ ಮತ್ತು ಪ್ರತಿ ಶುಕ್ರವಾರ 324 ಬಾರಿ ಪಠಿಸಬೇಕು. ಈ ಮಂತ್ರವು ನಿಮ್ಮ ಜೀವನದಿಂದ ಎಲ್ಲ ಅಡೆತಡೆಗಳು ಮತ್ತು ದುರದೃಷ್ಟವನ್ನು ತೆಗೆದುಹಾಕುತ್ತದೆ.
|| ಓಂ ಶ್ರೀಂ ಮಹಾಲಕ್ಷ್ಮೀಯೇ ನಮಃ ||

4. ವಿಷ್ಣು ಮಂತ್ರ
ವಿಷ್ಣುವಿನ ಈ ಮಂತ್ರವನ್ನು ಪ್ರತಿದಿನ 108 ಬಾರಿ ಮತ್ತು ಪ್ರತಿ ಬುಧವಾರ 324 ಬಾರಿ ವಿಷ್ಣುವಿನ ವಿಗ್ರಹದ ಮುಂದೆ ಪಠಿಸಿದರೆ ಉದ್ಯಮದಲ್ಲಿ ಶುಭ ಫಲ ನಿಮ್ಮದಾಗುತ್ತದೆ.
|| ಓಂ ನಮೋ ನಾರಾಯಣಾಯ ನಮಃ ||

5. ವ್ಯವಹಾರದ ಯಶಸ್ಸಿಗೆ ಪರಿಣಾಮಕಾರಿ ಮಂತ್ರ
ಇಷ್ಟೇ ಅಲ್ಲದೆ ನಿತ್ಯ ನಿಮ್ಮ ಮನೆ ಅಥವಾ ವ್ಯಾಪಾರ ಸ್ಥಳದಲ್ಲಿ ಪ್ರತಿದಿನ 108 ಬಾರಿ ಈ ಮಂತ್ರವನ್ನು ಪಠಿಸಬೇಕು.
ಓಂ ಶ್ರೀಮ್ ಹ್ರೀಮ್ ಶ್ರೀಂ ಕಮಲೆ ಕಮಲಲಯ ಪ್ರಸಿದ್ಧ ಪ್ರಸಿದ್ಧ
ಓಂ ಶ್ರೀಮ್ ಶ್ರೀಮ್ ಶ್ರೀಮ್ ಮಹಾಲಕ್ಷ್ಮೀಯೇ ನಮಃ
ನೀವು ಮಂತ್ರವನ್ನು ಮುಚ್ಚಿದ ಕಣ್ಣುಗಳಿಂದ ಜಪಿಸುವುದು ಒಳ್ಳೆಯದು. ಮಂತ್ರ ಪಠಣ ಮಾಡುವಾಗ ಜಪಮಣಿ ಮಾಲಾವನ್ನು ಬಳಸಿ. ಮಂತ್ರವನ್ನು ಯಾಂತ್ರಿಕವಾಗಿ ಜಪಿಸಬೇಡಿ, ಮಂತ್ರಕ್ಕೆ ಸಂಬಂಧಿಸಿದ ದೇವತೆಗೆ ಪೂರ್ಣ ಭಕ್ತಿಯಿಂದ ಅದನ್ನು ಪಠಿಸಿ. ಮಂತ್ರದ ಮೇಲೆ ಮತ್ತು ದೇವತೆಯ ಮೇಲೆ ನಂಬಿಕೆ ಹೊಂದಿರಿ.

ಮಂತ್ರದ ಪರಿಣಾಮ
ಈ ಮಂತ್ರಗಳನ್ನು ಜಪಿಸುವುದರಿಂದ ನಿಮ್ಮ ಹೊಸ ವ್ಯವಹಾರವು ಸುಗಮ, ಒತ್ತಡವಿಲ್ಲದೆ ನಡೆಯುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತದೆ. ಮಂತ್ರಗಳ ಪಠಣವು ಗ್ರಹಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಪ್ರತಿ ಮಂತ್ರವು ಎಲ್ಲರಿಗೂ ಸೂಕ್ತವಲ್ಲ ಎಂಬುದನ್ನು ತಿಳಿದಿರಿ.ನಿಮ್ಮ ರಾಶಿಚಕ್ರ ಹಾಗೂ ಜಾತಕವನ್ನುಉ ಆಧರಿಸಿ ಪರಿಣಿತ ಜ್ಯೋತಿಷಿಗಳನ್ನು ಸಂಪರ್ಕಿಸಿ ಅವರ ಸಲಹೆಯಂತೆ ಸೂಕ್ತವಾದ ಮಂತ್ರವನ್ನು, ಅವರು ಸೂಚಿಸಿದ ಸಮಯದಲ್ಲಿ ಪಠಿಸಿ ಅತ್ಯುತ್ತಮ, ಯಶಸ್ವಿ ಉದ್ಯಮ ನೀವಾಗಿ.



Click it and Unblock the Notifications











