Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
Diwali 2023: ದೀಪಾವಳಿ ಹಬ್ಬದಂದು ಈ ಪ್ರಾಣಿಗಳನ್ನು ನೋಡಿದರೆ ನೀವು ಸಂಪದ್ಭರಿತರಾಗುವುದು ಗ್ಯಾರಂಟಿ
ಪ್ರತಿ ವರ್ಷ ಕಾರ್ತಿಕ ಅಮವಾಸ್ಯೆಯಂದು ಆಚರಿಸಲಾಗುವ ದೀಪಾವಳಿ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿ ಆಚರಿಸಲಾಗುತ್ತದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಆಚರಿಸುವ ದೀಪಾವಳಿ ಹಬ್ಬ ನಮ್ಮ ಸಂಸ್ಕೃತಿಯ ಸಂಕೇತ. ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯದ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯಂದು ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ ಮತ್ತು ಮಾತೃದೇವತೆಯನ್ನು ಸ್ವಾಗತಿಸಲು ದೇವಿಯನ್ನು ಪೂಜಿಸುತ್ತಾರೆ.

ಈ ವರ್ಷ ನವೆಂಬರ್ 10ರಿಂದ 14ರವರೆಗೆ ಐದು ದಿನಗಳ ಕಾಲ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಜ್ಯೋತಿಶಾಸ್ತ್ರ ಹಾಗೂ ಹಿಂದಿನ ನಂಬಿಕೆಗಳ ಪ್ರಕಾರ ಈ ದೀಪಾವಳಿ ಹಬ್ಬದ ಸಮಯದಲ್ಲಿ ಕೆಲವು ಪ್ರಾಣಿಗಳನ್ನು ನೋಡಿದರೆ ಶುಭ, ಲಕ್ಷ್ಮಿ ಒಲಿಯುತ್ತಾಳೆ, ಅದೃಷ್ಟದ ಸಂಕೇತ ಮತ್ತು ನಿಮ್ಮ ಮೇಲೆ ಹಣದ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ.
ಯಾವ ಪ್ರಾಣಿಗಳು, ಇದು ಹೇಗೆ ಶುಭಕಾರಕ, ಯಾವೆಲ್ಲಾ ಸುಭ ತರಲಿದೆ ಮುಂದೆ ನೋಡೋಣ:

ಹಸು
ಹಿಂದೂ ಧರ್ಮದಲ್ಲಿ, ಕಾಮಧೇನು ಎಂದು ಕರೆಯುವ ಹಸುವನ್ನು ತಾಯಿ ಮತ್ತು ಪೂಜ್ಯ ಸಮಾನ ಎಂದು ಪರಿಗಣಿಸಲಾಗುತ್ತದೆ. ಜನರು ಕೂಡ ಹಸುವನ್ನು ಪೂಜಿಸುತ್ತಾರೆ. ಮತ್ತೊಂದೆಡೆ, ನಂಬಿಕೆಯ ಪ್ರಕಾರ ದೀಪಾವಳಿಯ ದಿನದಂದು ನೀವು ಎಲ್ಲಾದರೂ ಹಸುವನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ದೀಪಾವಳಿಯಂದು ಹಸುವನ್ನು ನೋಡುವುದು ನಿಮ್ಮ ಮನೆಯಲ್ಲಿ ಸಂಪತ್ತು ಮತ್ತು ವೈಭವವನ್ನು ಸೂಚಿಸುತ್ತದೆ.

ಬೆಕ್ಕು
ಜ್ಯೋತಿಷ್ಯ ತಜ್ಞರ ಪ್ರಕಾರ, ದೀಪಾವಳಿಯ ದಿನದಂದು ನೀವು ಬೆಕ್ಕನ್ನು ನೋಡಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಲಕ್ಷ್ಮಿಯ ವಿಶೇಷ ಕೃಪೆಯು ನಿಮ್ಮ ಮನೆಯ ಮೇಲೆ ಬೀಳಲಿದೆ ಎಂದರ್ಥ.

ಹಲ್ಲಿ
ಹಲವಾರು ಮನೆಗಳಲ್ಲಿ ಹಲ್ಲಿಯ ಬಗ್ಗೆ ಅನೇಕ ಜನರು ಚಿಂತಿತರಾಗುತ್ತಾರೆ, ಏಕೆಂದರೆ ಅದನ್ನು ನೋಡಿದರೆ ಒಂದು ಭಯ ಜತೆಗೆ ಅದು ವಿಷಕಾರಿ ಎಂಬುದು ಗೊತ್ತು. ಆದರೆ ದೀಪಾವಳಿಯ ದಿನದಂದು ನೀವು ಹಲ್ಲಿಯನ್ನು ನೋಡಿದರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹಲ್ಲಿಯ ನೋಟವು ಲಕ್ಷ್ಮಿ ದೇವಿಯ ಸಂತೋಷದ ಸೂಚಕವೆಂದು ಪರಿಗಣಿಸಲಾಗಿದೆ.

ಗೂಬೆ
ಇದಲ್ಲದೆ, ಗೂಬೆಯು ಲಕ್ಷ್ಮಿ ದೇವಿಯ ವಾಹನವಾಗಿದೆ ಮತ್ತು ಇದು ಅಪರೂಪವಾಗಿ ಕಂಡುಬರುತ್ತದೆ. ಆದರೆ ದೀಪಾವಳಿಯ ದಿನದಂದು ನೀವು ಗೂಬೆಯನ್ನು ಎಲ್ಲಿಯಾದರೂ ನೋಡಿದರೆ ಅದು ನಿಮಗೆ ಅದೃಷ್ಟವನ್ನು ತಂದುಕೊಡಲಿದೆ ಎಂದು ನಂಬಲಾಗಿದೆ. ಅಂದರೆ, ದೀಪಾವಳಿಯ ದಿನ ಗೂಬೆಯನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.



Click it and Unblock the Notifications