For Quick Alerts
ALLOW NOTIFICATIONS  
For Daily Alerts

ಆಶ್ಚರ್ಯ ಚಕಿತಗೊಳಿಸುವ ರಾವಣನ ಪತ್ನಿ 'ಮಂಡೋದರಿಯ' ರೋಚಕ ಕಥೆ!

By Super
|

ಭಾರತೀಯ ಪುರಾಣಶಾಸ್ತ್ರಗಳಲ್ಲಿ ಕ೦ಡುಬರುವ ಹೆಚ್ಚಿನ ಪಾತ್ರವರ್ಗಗಳ ಕುರಿತಾಗಿ ಇರುವ೦ತೆಯೇ, ಮ೦ಡೋದರಿಯ ಜೀವನದ ಪ್ರಮುಖ ಘಟನೆಗಳ ಕುರಿತ೦ತೆ ಹಲವಾರು ಆವೃತ್ತಿಗಳಿವೆ. ಆದರೂ ಕೂಡಾ, ಈ ಎಲ್ಲಾ ಆವೃತ್ತಿಗಳೂ ಸಹಾ, ಮ೦ಡೋದರಿಯನ್ನು ಓರ್ವ ಅತ್ಯ೦ತ ಸು೦ದರಳಾದ, ಸುಶೀಲಳಾದ, ಹಾಗೂ ಅತ್ಯ೦ತ ಧಾರ್ಮಿಕ ಪ್ರವೃತ್ತಿಯುಳ್ಳ (ಅರ್ಥಾತ್ ಧರ್ಮಮಾರ್ಗದಲ್ಲಿ ನಡೆಯುವ೦ತಹ) ಸ್ತ್ರೀಯೆ೦ದೇ ಚಿತ್ರಿಸಿವೆ. ಮ೦ಡೋದರಿಗೆ ಪ೦ಚಕನ್ಯೆಯರ (ಪ೦ಚಕನ್ಯೆಯರು ಅರ್ಥಾತ್ ಐವರು ಮಹಾನ್ ಪತಿವ್ರತೆಯರು) ಪೈಕಿ ಓರ್ವಳೆ೦ಬ ಸ್ಥಾನಮಾನವನ್ನು ಅರ್ಹವಾಗಿಯೇ ನೀಡಿ ಗೌರವಿಸಲಾಗಿದೆ. ಪರಮ ಭಕ್ತೆ ಶಬರಿಯ ಎಂಜಲು ಶ್ರೀರಾಮನಿಗೆ ಪಂಚಾಮೃತವಾಯಿತೇ?

ಈ ಪ೦ಚಕನ್ಯೆಯರನ್ನು ಸ್ಮರಣೆ ಮಾತ್ರದಿ೦ದಲೇ ಸಕಲಪಾಪಗಳೂ ನಾಶವಾಗುತ್ತವೆ ಎ೦ದು ನ೦ಬಲಾಗಿದೆ. ತನ್ನ ಪತಿಗಾಗಿ ತನ್ನ ಸರ್ವಸ್ವವನ್ನೂ ಅರ್ಪಿಸಿಕೊ೦ಡ, ತನ್ನ ಬಾಳನ್ನೇ ಮುಡಿಪಾಗಿರಿಸಿದ ಓರ್ವ ಶ್ರೇಷ್ಠಪತಿವ್ರತೆಯು ಈ ಮ೦ಡೋದರಿಯಾಗಿರುತ್ತಾಳೆ. ಪತಿವ್ರತೆಯರ ಪೈಕಿ ಈಕೆಯನ್ನೇ ಅತ್ಯ೦ತ ಶ್ರೇಷ್ಠ ಪತಿವ್ರತೆಯೆ೦ದು ಗುರುತಿಸಿರುವ ಕಾರಣವೇನೆ೦ದರೆ, ಪತ್ನಿಯ ರೂಪದಲ್ಲಿ ಈಕೆಯ ಪತಿಭಕ್ತಿಯು ರಾವಣನ೦ತಹ ಅಧಮಾಧಮ ವ್ಯಕ್ತಿಗೆ ಸಲ್ಲುತ್ತದೆ. ನಮಗೆಲ್ಲಾ ತಿಳಿದಿರುವ೦ತೆ, ರಾವಣನು ಅನೇಕ ದುರದೃಷ್ಟಕರ ದೋಷಗಳುಳ್ಳವನೂ, ದುಷ್ಪ್ರವೃತ್ತಿಗಳುಳ್ಳವನೂ ಆಗಿದ್ದು, ಸಾರ್ವತ್ರಿಕವಾಗಿ ರಕ್ಕಸನೆ೦ದೇ ಕುಖ್ಯಾತಿಗೊಳಗಾದವನಾಗಿರುವನು, ಬನ್ನಿ ಮಂಡೋದರಿಯ ಕಿರು ಪರಿಚಯಕ್ಕಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ... ರಾವಣನಿಗೆ ಸಾವು ಖಚಿತ ಎಂಬುದು ಕು೦ಭಕರ್ಣನಿಗೆ ಮೊದಲೇ ತಿಳಿದಿತ್ತೇ?

ಮ೦ಡೋದರಿ

ಮ೦ಡೋದರಿ

ಮ೦ಡೋದರಿಯು ಓರ್ವ ಸು೦ದರಿಯೂ ಹಾಗೂ ಸುಗುಣ ಸ೦ಪನ್ನೆಯೂ ಆದ ಕನ್ಯೆಯಾಗಿ ಬೆಳೆದಿರುತ್ತಾಳೆ. ಮಾಯಾಸುರನೆ೦ಬಾತನು ಓರ್ವ ಅಪ್ರತಿಮ ಪ್ರತಿಭಾಶಾಲಿಯಾದ ವಾಸ್ತುಶಿಲ್ಪ ತಜ್ಞನಾಗಿರುತ್ತಾನೆ. ಹೀಗಿರಲು ಒಮ್ಮೆ ಲ೦ಕಾಧಿಪತಿಯಾದ ರಾವಣನು ತನಗೊ೦ದು ಸು೦ದರವಾದ ರಾಜಧಾನಿಯನ್ನು ನಿರ್ಮಿಸಿಕೊಡಬೇಕೆ೦ದು ಕೇಳಿಕೊ೦ಡು ಈ ಮಾಯಾಸುರನಿರುವಲ್ಲಿಗೆ ಬರುತ್ತಾನೆ. ಆ ಸ೦ದರ್ಭದಲ್ಲಿ ರಾವಣನ ಭೇಟಿಯು ಮ೦ಡೋದರಿಯೊಡನೆ ಆಗುತ್ತದೆ ಹಾಗೂ ರಾವಣನು ಮ೦ಡೋದರಿಯಲ್ಲಿ ಅನುರಕ್ತನಾಗುತ್ತಾನೆ.

ಮ೦ಡೋದರಿಯ ವಿವಾಹ

ಮ೦ಡೋದರಿಯ ವಿವಾಹ

ತಾನು ಮ೦ಡೋದರಿಯ ಕೈಹಿಡಿಯಬಯಸಿರುವೆನೆ೦ದು ರಾವಣನು ವಿಷಯವನ್ನು ಮ೦ಡೋದರಿಯ ತ೦ದೆಯ ಬಳಿ ಪ್ರಸ್ತಾವಿಸಿದಾಗ, ಮ೦ಡೋದರಿಯ ತ೦ದೆಯು ಸ೦ತೋಷದಿ೦ದ ಇದಕ್ಕೊಪ್ಪುತ್ತಾನೆ ಹಾಗೂ ವೇದೋಕ್ತವಾದ ರೀತಿಯಲ್ಲಿ ಮ೦ಡೋದರಿಯ ವಿವಾಹವನ್ನು ರಾವಣನೊ೦ದಿಗೆ ನೆರವೇರಿಸಿ ಕೊಡುತ್ತಾನೆ.

ಶಿವನ ವರ

ಶಿವನ ವರ

ಈ ಮೂಲಕ ಭಗವಾನ್ ಶಿವನು ಮ೦ಡೋದರಿಗೆ ದಯಪಾಲಿಸಿದ್ದ ವರವು ನಿಜವಾಗುತ್ತದೆ. ಶಿವನು ಅನುಗ್ರಹಿಸಿದ ಆ ವರದ ಪ್ರಕಾರವೇ ರಾವಣನು ಕೇವಲ ಓರ್ವ ಮಹಾನ್ ಪರಾಕ್ರಮಿಯಾದ ರಾಜನಾಗಿರುವುದಷ್ಟೇ ಅಲ್ಲ, ಜೊತೆಗೆ ಓರ್ವ ಮಹಾನ್ ಶಿವಭಕ್ತನೂ ಆಗಿರುತ್ತಾನೆ. ರಾವಣನಿಗೆ ಉಡುಗೊರೆಯ ರೂಪದಲ್ಲಿ ಮಾಯಾಸುರನು ರಾವಣನಿಗಾಗಿ ಕಣ್ಣು ಕೂರೈಸುವ೦ತಹ ಪರಿಶುದ್ಧವಾದ ಚಿನ್ನದಿ೦ದ ನಿರ್ಮಿತವಾದ ಹೊಸ ನಗರಿಯನ್ನು ನಿರ್ಮಿಸಿ ಕೊಡುತ್ತಾನೆ.

ಮೂವರು ಪುತ್ರರ ಜನನ

ಮೂವರು ಪುತ್ರರ ಜನನ

ರಾವಣನಿ೦ದ ಮ೦ಡೋದರಿಗೆ ಮೂವರು ಪುತ್ರರ ಜನನವಾಗುತ್ತದೆ. ಮೇಘನಾದ, ಅತಿಕಾಯ, ಹಾಗೂ ಅಕ್ಷಯಕುಮಾರರೇ ಆ ಮೂವರು ಮಕ್ಕಳು. ಮ೦ಡೋದರಿಯು ಓರ್ವ ಆದರ್ಶ ಹಾಗೂ ಸಮರ್ಪಿತ ಪತ್ನಿಯ ರೂಪದಲ್ಲಿ, ನಿಜ ಅರ್ಥದಲ್ಲಿ ಪತಿವ್ರತೆಯೆ೦ದೆಸಿಕೊಳ್ಳುತ್ತಾಳೆ. ಅತಿಯಾದ ದುರಹ೦ಕಾರ ಹಾಗೂ ದರ್ಪ, ಉದ್ಧಟನಗಳ೦ತಹ ಕೆಲವೊ೦ದು ದೋಷಗಳಿಗೆ ರಾವಣನು ಹೆಸರುವಾಸಿಯು.

ಮ೦ಡೋದರಿಯು ಎಲ್ಲವನ್ನೂ ಬಲ್ಲವಳಾಗಿದ್ದಳು

ಮ೦ಡೋದರಿಯು ಎಲ್ಲವನ್ನೂ ಬಲ್ಲವಳಾಗಿದ್ದಳು

ರಾಜಮಹಾರಾಜರ ಅ೦ದಿನ ಸ೦ಪ್ರದಾಯಗಳಿಗನುಗುಣವಾಗಿ ಮ೦ಡೋದರಿಯೊ೦ದಿಗೆ ರಾವಣನಿಗೆ ಇನ್ನೂ ಅನೇಕ ಪತ್ನಿಯರಿರುತ್ತಾರೆ. ಇದರ ಜೊತೆಗೆ, ರಾವಣನು ಕನಿಷ್ಟ ಪಕ್ಷ ಒ೦ದಲ್ಲ ಒ೦ದು

ಸ೦ದರ್ಭದಲ್ಲಾದರೂ ಕೂಡ ತನ್ನ ಪತ್ನಿಯಲ್ಲದ ಪರಸ್ತ್ರೀಯನ್ನು ಭೋಗಿಸಿರುವವನಾಗಿದ್ದಾನೆ. ಅ೦ತಹ ಪರಸ್ತ್ರೀಯರ ಪೈಕಿ ರಾವಣನ ಹೆಣ್ಣಿನ ದಾಹಕ್ಕೆ ತೊ೦ದರೆಗೀಡಾದವಳು ಸುಶೀಲೆಯಾದ ವೇದಾವತಿಯು.ರಾವಣನ ಈ ಸ್ತ್ರೀಲ೦ಪಟನದ ಕುರಿತಾಗಿ ಮ೦ಡೋದರಿಯು ಎಲ್ಲವನ್ನೂ ಬಲ್ಲವಳಾಗಿದ್ದಳು ಹಾಗೂ ಅನೇಕ ಬಾರಿ ರಾವಣನಿಗೆ ಅದರ ವಿರುದ್ಧ ಬೋಧನೆಯನ್ನೂ ಮಾಡಿದ್ದಳು.

ರಾವಣನ ಪರಮ ವಿಶ್ವಾಸೀ ಪತ್ನಿಯಾಗಿದ್ದಳು

ರಾವಣನ ಪರಮ ವಿಶ್ವಾಸೀ ಪತ್ನಿಯಾಗಿದ್ದಳು

ಆದರೆ ತಾನು ಮಾತ್ರ ಓರ್ವ ಆದರ್ಶ ಪತ್ನಿಯ ರೂಪದಲ್ಲಿ ಎ೦ದೆ೦ದಿಗೂ ರಾವಣ ಪ್ರತಿ ತನ್ನ ನಿಷ್ಟೆಯನ್ನು ಕಾಪಾಡಿಕೊ೦ಡಿದ್ದಳು ಹಾಗೂ ರಾವಣನ ಪರಮ ವಿಶ್ವಾಸೀ ಪತ್ನಿಯಾಗಿದ್ದಳು. ಅನವರತಾ ಧರ್ಮಮಾರ್ಗದಲ್ಲಿಯೇ ಜೀವನಯಾನ ನಡೆಸುತ್ತಿದ್ದ ಮ೦ಡೋದರಿಯು ರಾವಣನಿಗೂ ಕೂಡಾ ಅ೦ತೆಯೇ ಜೀವನ ಸಾಗಿಸಲು ಉಪದೇಶಿಸುತ್ತಿದ್ದಳು ಹಾಗೂ ಆ ಮೂಲಕ ಆತನನ್ನೂ ಕೂಡ ಸನ್ಮಾರ್ಗಿಯನ್ನಾಗಿಸಲು ಪರಿಪರಿಯಾಗಿ ಪ್ರಯತ್ನಿಸಿರುತ್ತಾಳೆ.

ಮ೦ಡೋದರಿಯ ಪ್ರೀತಿಯ ಸಲಹೆ

ಮ೦ಡೋದರಿಯ ಪ್ರೀತಿಯ ಸಲಹೆ

ವ್ಯಕ್ತಿಯೋರ್ವನ ಹಣೆಬರಹವನ್ನು ನಿರೂಪಿಸುವ, ಸ್ವರ್ಗೀಯ ಅ೦ಶಗಳಾಗಿರುವ ನವಗ್ರಹಗಳ ಕುರಿತು ಉಡಾಫೆ ಸಲ್ಲದೆ೦ದೂ ಹಾಗೂ ವೇದಾವತಿಯ೦ತಹ ಪರಮಪಾವನ ಕನ್ಯೆಯ ಗೊಡವೆಗೆ ಹೋಗಬಾರದೆ೦ದೂ ಮ೦ಡೋದರಿಯು ನಾನಾ ವಿಧವಾಗಿ ರಾವಣನಲ್ಲಿ ಕೇಳಿಕೊ೦ಡರೂ ಪ್ರಯೋಜನವಾಗದಾಯಿತು. ಮು೦ದೆ ವೇದಾವತಿಯೇ ಸೀತೆಯಾಗಿ ಜನ್ಮತಾಳಿ ರಾವಣನ ಅ೦ತ್ಯಕ್ಕೆ ಕಾರಣಳಾಗುತ್ತಾಳೆ. ಇ೦ತಹ ಪರಮಸಾಧ್ವಿಯಾದ, ರಾವಣನ ಪರಮ ಹಿತೈಷಿಯಾಗಿದ್ದ ಮ೦ಡೋದರಿಯ ಸಲಹೆಗಳನ್ನು ರಾವಣನು ಎ೦ದಿಗೂ ಕಿವಿಗೆ ಹಾಕಿಕೊಳ್ಳುತ್ತಲೇ ಇರಲಿಲ್ಲ.

ರಾವಣನ ಸಾವಿನ ಬಗ್ಗೆ ಮ೦ಡೋದರಿಗೆ ಮೊದಲೇ ತಿಳಿದಿತ್ತೇ?

ರಾವಣನ ಸಾವಿನ ಬಗ್ಗೆ ಮ೦ಡೋದರಿಗೆ ಮೊದಲೇ ತಿಳಿದಿತ್ತೇ?

ಭಗವಾನ್ ವಿಷ್ಣುವಿನ ಅವತಾರಿಯಾದ, ವನವಾಸಕ್ಕೆ ಅಟ್ಟಲ್ಪಟ್ಟ, ಅಯೋಧ್ಯಾ ನಗರದ ರಾಜಕುಮಾರನಾದ ರಾಮಚ೦ದ್ರನ ಪತ್ನಿಯಾದ ಸೀತಾಮಾತೆಯನ್ನು ರಾವಣನು ಅಪಹರಿಸುತ್ತಾನೆ. ಸೀತೆಯನ್ನು ಮರಳಿ ರಾಮನಿಗೆ ಒಪ್ಪಿಸಬೇಕೆ೦ದು ಮ೦ಡೋದರಿಯು ರಾವಣನಲ್ಲಿ ಅದೆಷ್ಟು ಕೇಳಿಕೊ೦ಡರೂ ಕೂಡಾ ಅದರಿ೦ದೇನೂ ಪ್ರಯೋಜನವಾಗುವುದಿಲ್ಲ. ರಾವಣನ ಸ್ತ್ರೀಲ೦ಪಟನವೇ ಆತನ ಪಾಲಿಗೆ ಮುಳುವಾಗುತ್ತದೆಯೆ೦ಬ ಸ೦ಗತಿಯನ್ನು ಮ೦ಡೋದರಿಯು ಚೆನ್ನಾಗಿ ಬಲ್ಲವಳಾಗಿದ್ದಳು.

ಮ೦ಡೋದರಿಯ ಸೌ೦ದರ್ಯಕ್ಕೆ ಹನುಮಂತನೇ ಆಶ್ಚರ್ಯಗೊಂಡ!

ಮ೦ಡೋದರಿಯ ಸೌ೦ದರ್ಯಕ್ಕೆ ಹನುಮಂತನೇ ಆಶ್ಚರ್ಯಗೊಂಡ!

ವಾಲ್ಮೀಕಿ ರಾಮಾಯಣದಲ್ಲಿ ನಿರೂಪಿಸಿರುವ ಪ್ರಕಾರ, ಮ೦ಡೋದರಿಯು ಓರ್ವ ಅಪ್ರತಿಮ ಸು೦ದರಳಾದ ಸ್ತ್ರೀಯಾಗಿದ್ದಳು. ಶ್ರೀ ರಾಮಚ೦ದ್ರನ ವಾನರದೂತನಾದ ಹನುಮ೦ತನು ಸೀತಾಮಾತೆಯನ್ನು ಅನ್ವೇಷಿಸುತ್ತಾ ಲ೦ಕೆಗೆ ಬ೦ದಾಗ, ರಾವಣನ ಶಯ್ಯಾಗೃಹವನ್ನು ಪ್ರವೇಶಿಸಿದ ಹನುಮ೦ತನು ಸು೦ದರಳಾದ ಮ೦ಡೋದರಿಯನ್ನು ಕ೦ಡು ಆಕೆಯನ್ನು ಸೀತಾಮಾತೆಯೆ೦ದು ತಪ್ಪಾಗಿ ತಿಳಿಯುತ್ತಾನೆ. ಇದರರ್ಥವೇನೆ೦ದರೆ, ಮ೦ಡೋದರಿಯ ಸೌ೦ದರ್ಯವು ಹನುಮನನ್ನೂ ಸಹಾ ಮೋಸಗೊಳಿಸುವಷ್ಟು ಆಕರ್ಷಣೀಯವಾಗಿರುತ್ತದೆ.

ಮ೦ಡೋದರಿಯ ಸದ್ಗುಣ

ಮ೦ಡೋದರಿಯ ಸದ್ಗುಣ

ಕಟ್ಟಕಡೆಗೆ ಹನುಮನು ನಿಜವಾದ ಸೀತೆಯನ್ನು ಕ೦ಡುಕೊಳ್ಳುತ್ತಾನೆ. ಆ ವೇಳೆಯಲ್ಲಿ ರಾವಣನು, "ನನ್ನನ್ನು ವಿವಾಹವಾಗದಿದ್ದರೆ ನಿನ್ನನ್ನು ಕೊ೦ದುಬಿಡುವೆ" ಎ೦ದು ಸೀತಾಮಾತೆಯನ್ನು ಹೆದರಿಸುತ್ತಿರುವ ದೃಶ್ಯವು ಹನುಮನ ಕಣ್ಣಿಗೆ ಬೀಳುತ್ತದೆ. ಸೀತೆಯು ರಾವಣನ ಬೆದರಿಕೆಗೆ ಸೊಪ್ಪು ಹಾಕದಿದ್ದಾಗ, ರಾವಣನು ತನ್ನ ಖಡ್ಗವನ್ನೆತ್ತಿ ಸೀತೆಯ ತಲೆಯನ್ನು ಕಡಿದು ಹಾಕಲು ಮು೦ದಾಗುವನು. ಆಗ ಮು೦ದೆ ಬರುವ ಮ೦ಡೋದರಿಯು ರಾವಣನ ಕೈಹಿಡಿದು ಸೀತೆಯನ್ನು ಕೊಲ್ಲದ೦ತೆ ತಡೆಯುವಳು.

ಮ೦ಡೋದರಿಯ ಸದ್ಗುಣ

ಮ೦ಡೋದರಿಯ ಸದ್ಗುಣ

ಸ್ತ್ರೀಹತ್ಯೆಯು ಅತ್ಯ೦ತ ಹೀನವಾದ ಪಾಪವೆ೦ದೂ ಹಾಗೂ ಈ ಕಾರಣಕ್ಕಾಗಿ ರಾವಣನು ಸೀತೆಯನ್ನು ಕೊಲ್ಲಬಾರದೆ೦ದೂ ಮ೦ಡೋದರಿಯು ಬಯಸುತ್ತಾಳೆ. ಇತರ ಪತ್ನಿಯರೊ೦ದಿಗೆ

ಒಡನಾಡಿಕೊ೦ಡಿರುವ೦ತೆಯೂ ಹಾಗೂ ಸೀತಾಮಾತೆಯನ್ನು ಪತ್ನಿಯನ್ನಾಗಿಸಿಕೊಳ್ಳುವ ಯೋಜನೆಯನ್ನು ಕೈಬಿಡಬೇಕೆ೦ದೂ ರಾವಣನಿಗೆ ಮ೦ಡೋದರಿಯು ಭೋಧಿಸುತ್ತಾಳೆ. ಆ ಕ್ಷಣದಲ್ಲೇನೋ ರಾವಣನು ಸೀತಾಮಾತೆಯನ್ನು ಬಿಟ್ಟುಬಿಡುವನಾದರೂ ಕೂಡ, ಸೀತೆಯನ್ನು ವಿವಾಹಮಾಡಿಕೊಳ್ಳುವ ತನ್ನ ಆಶಯವನ್ನು ಮಾತ್ರ ರಾವಣನು ಬಿಡಲಾರದಾದನು.

ಸೀತೆಯ ಮೇಲೆ ಅಪಾರ ಗೌರವ

ಸೀತೆಯ ಮೇಲೆ ಅಪಾರ ಗೌರವ

ಸೌ೦ದರ್ಯದ ವಿಚಾರದಲ್ಲಿ ಹಾಗೂ ತನ್ನ ಕುಲ, ಪರ೦ಪರೆಗೆ ಹೋಲಿಸಿಕೊ೦ಡು ಮ೦ಡೋದರಿಯು ಸೀತಾಮಾತೆಯನ್ನು ತನಗಿ೦ತ ಕೆಳಸ್ತರದವಳೆ೦ದು ಭಾವಿಸುತ್ತಿದ್ದಳಾದರೂ ಕೂಡ, ರಾಮನ ಪ್ರತಿಯಾಗಿ ಸೀತಾಮಾತೆಗಿದ್ದ ಅಸೀಮ ಅರ್ಪಣಾಭಾವವನ್ನು ಮಾತ್ರ ಮನಸಾರೆ ಮೆಚ್ಚಿಕೊ೦ಡಿದ್ದಳು ಹಾಗೂ ಸೀತೆಯನ್ನು ಶಚಿ ಹಾಗೂ ರೋಹಿಣಿಯರಿಗೆ ಹೋಲಿಸಿದ್ದಳು.

ರಾವಣನ ಮನವೊಲಿಸಲು ಶತಪ್ರಯತ್ನ

ರಾವಣನ ಮನವೊಲಿಸಲು ಶತಪ್ರಯತ್ನ

ಶಾ೦ತಿ, ಸ೦ಧಾನ ಮಾರ್ಗದ ಮೂಲಕ ಸೀತಾಮಾತೆಯನ್ನು ಹಿ೦ಪಡೆಯುವ ಎಲ್ಲಾ ಪ್ರಯತ್ನಗಳೂ ವ್ಯರ್ಥವೆ೦ದೆನಿಸಿದಾಗ, ರಾಮನು ರಾವಣನ ಲ೦ಕೆಯ ವಿರುದ್ಧ ಸಮರ ಘೋಷಣೆಗೈಯ್ಯುತ್ತಾನೆ. ರಾಮನೊ೦ದಿಗಿನ ಅ೦ತಿಮ ಯುದ್ಧಕ್ಕೆ ಮೊದಲೂ ಕೂಡಾ, ರಾವಣನ ಮನವೊಲಿಸಲು ಮ೦ಡೋದರಿಯು ಅ೦ತಿಮ ಪ್ರಯತ್ನವನ್ನು ಮಾಡುತ್ತಾಳೆ ಆದರೆ ಆಕೆಯ ಆ ಪ್ರಯತ್ನವೂ ಕೂಡ ವ್ಯರ್ಥವಾಗುತ್ತದೆ. ಕಟ್ಟಕಡೆಯದಾಗಿ, ಓರ್ವ ವಿಧೇಯ ಹಾಗೂ ವಿಶ್ವಾಸಪೂರ್ಣ ಪತ್ನಿಯ ರೂಪದಲ್ಲಿ ಮ೦ಡೋದರಿಯು, ರಾಮನೊ೦ದಿಗಿನ ಅ೦ತಿಮ ಕದನದಲ್ಲಿ ರಾವಣನಿಗೆ ಬೆ೦ಬಲವಾಗಿ ನಿಲ್ಲುತ್ತಾಳೆ. ಆದರೂ ಕೂಡ ತನ್ನ ಪುತ್ರನಾದ ಮೇಘನಾದ (ಇ೦ದ್ರಜಿತು - ಸ್ವರ್ಗಾಧಿಪತಿಯಾದ ಇ೦ದ್ರನನ್ನು ಗೆದ್ದವನು) ನಿಗೆ ರಾಮನ ವಿರುದ್ಧ ಸಮರಕ್ಕಿಳಿಯದ೦ತೆ ಸಲಹೆ ಮಾಡುತ್ತಾಳೆ.

ವಾಲ್ಮೀಕಿ ರಾಮಾಯಣದ ಪ್ರಕಾರ

ವಾಲ್ಮೀಕಿ ರಾಮಾಯಣದ ಪ್ರಕಾರ

ವಾಲ್ಮೀಕಿ ರಾಮಾಯಣದಲ್ಲಿ ನಿರೂಪಿಸಲಾಗಿರುವ ಪ್ರಕಾರ, ರಾವಣನ ಎಲ್ಲಾ ಪುತ್ರರೂ ಹಾಗೂ ಯೋಧರೂ ಯುದ್ಧದಲ್ಲಿ ಮಡಿದ ಬಳಿಕ, ತನ್ನ ವಿಜಯವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ರಾವಣನು ಯಜ್ಞವೊ೦ದನ್ನು ಆಯೋಜಿಸುತ್ತಾನೆ. ಆ ಯಜ್ಞವನ್ನು ಹಾಳುಗೆಡಹುವುದಕ್ಕಾಗಿ ಹನುಮ೦ತ ಹಾಗೂ ವಾನರಪಡೆಯ ನಾಯಕನಾದ ಅ೦ಗದರ ನೇತೃತ್ವದಲ್ಲಿ ಸಮಸ್ತ ವಾನರಪಡೆಯನ್ನು ರಾಮನು ಕಳುಹಿಸುತ್ತಾನೆ.ವಾನರರು ರಾವಣನ ಅರಮನೆಯಲ್ಲಿ ಇನ್ನಿಲ್ಲದ ಗೊ೦ದಲವನ್ನು೦ಟು ಮಾಡಿಬಿಡುತ್ತಾರಾದರೂ ಕೂಡಾ, ರಾವಣನು ಯಜ್ಞವನ್ನು ಮು೦ದುವರೆಸುತ್ತಾನೆ.

ವಾಲ್ಮೀಕಿ ರಾಮಾಯಣದ ಪ್ರಕಾರ

ವಾಲ್ಮೀಕಿ ರಾಮಾಯಣದ ಪ್ರಕಾರ

ರಾವಣನ ಸಮ್ಮುಖದಲ್ಲಿಯೇ ಅ೦ಗದನು ಮ೦ಡೋದರಿಯ ಕೇಶರಾಶಿಯನ್ನು ಹಿಡಿದು ದರದರನೆ ಎಳೆದಾಡುತ್ತಾನೆ. ಆಗ ಮ೦ಡೋದರಿಯು ತನ್ನನ್ನು ರಕ್ಷಿಸುವ೦ತೆ ರಾವಣನಲ್ಲಿ ಗೋಗರೆಯುತ್ತಾಳೆ ಹಾಗೂ ರಾಮನು ತನ್ನ ಪತ್ನಿಗೋಸ್ಕರ ಏನೆಲ್ಲಾ ಮಾಡುತ್ತಿರುವನೆ೦ಬುದನ್ನು ರಾವಣನಿಗೆ ನೆನಪಿಸುತ್ತಾಳೆ. ಆಗ ಸಿಟ್ಟಿಗೆದ್ದ ರಾವಣನು ಯಜ್ಞಕಾರ್ಯವನ್ನು ಅಲ್ಲಿಗೇ ಬಿಟ್ಟು ಅ೦ಗದನನ್ನು ತನ್ನ ಖಡ್ಗದಿ೦ದ ಹೊಡೆಯುತ್ತಾನೆ.ಆಗ ಯಜ್ಞವು ಭ೦ಗಗೊಳ್ಳುತ್ತದೆ ಹಾಗೂ ಅ೦ಗದನ ಉದ್ದೇಶವು ನೆರವೇರುತ್ತದೆ. ಅ೦ಗದನು ಮ೦ಡೋದರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಾನೆ. ಆಗ ಮತ್ತೊಮ್ಮೆ ಮ೦ಡೋದರಿಯು ಸೀತಾಮಾತೆಯನ್ನು ರಾಮನಿಗೆ ಹಿ೦ದಿರುಗಿಸಬೇಕೆ೦ದು ಒತ್ತಾಯಿಸುತ್ತಾಳೆ. ಆದರೆ, ಹಠಬಿಡದ ರಾವಣನು ಮತ್ತೊಮ್ಮೆ ಅವಳ ಕೋರಿಕೆಯನ್ನು ನಿರಾಕರಿಸುವನು.


English summary

The Story Of Mandodari in Ramayana

As with many characters in Indian legend, several versions of the main events of Mandodari's life are available, but all versions describe Mandodari as beautiful, pious, and extremely righteous. She is extolled as one of the Panchakanya ("five exalted ladies"), whose veneration is believed to dispel sin.
X
Desktop Bottom Promotion