For Quick Alerts
ALLOW NOTIFICATIONS  
For Daily Alerts

'ಅರ್ಧ ನಾರೀಶ್ವರ' ಎನ್ನುವ ಪರಿಕಲ್ಪನೆ ಹಾಗೂ ಮಹತ್ವ

|

ನೀವು ಎಂದಾದರು ಕೇಳಿರಬಹುದು, ಅರ್ಧ ಗಂಡಸು ಮತ್ತು ಅರ್ಧ ಹೆಂಗಸು ಆಗಿರುವ ದೇವರನ್ನು, ಆ ದೇವರೇ " ಅರ್ಧ ನಾರೀಶ್ವರ" ಎಂದು ಪ್ರಖ್ಯಾತನಾಗಿರುವ ದೇವರು. ಅಂದರೆ ಅರ್ಧ ನಾರಿಯ ರೂಪದಲ್ಲಿ ಕಾಣಿಸಿಕೊಳ್ಳುವ ಈಶ್ವರ. ಹೌದು, ಈಶ್ವರ ಮತ್ತು ಆತನ ಸತಿಯಾದ ಶಕ್ತಿದೇವತೆಯ ಅರ್ಧರ್ಧ ದೇಹಗಳು ಸೇರಿಕೊಂಡು ಒಂದು ಪರಿಪೂರ್ಣ ಮಾನವ ಶರೀರವಾಗಿ ಕಾಣುವ ದೇವರ ಪ್ರತಿರೂಪವೇ ಅರ್ಧ ನಾರೀಶ್ವರ. ಈ ಅರ್ಧ ನಾರೀಶ್ವರ ಹೆಣ್ಣೋ, ಗಂಡೋ, ಎಂಬ ಜಿಜ್ಞಾಸೆ ನಿಮ್ಮಲ್ಲಿ ಮೂಡುವುದು ಸಹಜ.

ಹೌದು! ಈ ಅರ್ಧನಾರೀಶ್ವರನಲ್ಲಿ ಹೆಣ್ಣಿನ ಸ್ತ್ರೀ ಸಹಜ ಶಕ್ತಿಗಳು ಮತ್ತು ಗಂಡಿನ ಆಳ್ತನ ಎರಡೂ ಇರುತ್ತವೆ. ಕೆಲವೊಂದು ಪುರಾಣದ ಪ್ರಕಾರ ಈ ಜಗತ್ತಿನಲ್ಲಿರುವುದೆಲ್ಲವೂ ಅರ್ಧ ನಾರೀಶ್ವರನಿಂದಲೇ ಬಂದಂತಹವು ಮತ್ತು ಅವುಗಳ ಜೀವಿತಾವಧಿ ಮುಗಿದ ನಂತರ ಅವೆಲ್ಲವು ಮತ್ತೆ ಅರ್ಧ ನಾರೀಶ್ವರನ ಬಳಿಗೆ ಹೋಗುತ್ತವೆಯಂತೆ.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ ನಮ್ಮ ವಿಶ್ವದಲ್ಲಿ ಎಂದಿಗು ನಾಶವಾಗದಿರುವ ಎರಡು ಶಕ್ತಿಗಳು ಇವೆಯಂತೆ: ಒಂದು ಪುರುಷ ಮತ್ತೊಂದು ಪ್ರಕೃತಿ. ಪ್ರಕೃತಿಯು ಮೂರು ಗುಣಗಳನ್ನು ಹೊಂದಿದೆ: ಸತ್ವ (ಪವಿತ್ರತೆ ಮತ್ತು ಸಂರಕ್ಷಣೆ ಮಾಡುವ ಗುಣ), ರಜಸ್ (ಸೃಷ್ಟಿ) ಮತ್ತು ತಮಸ್ (ಅಂಧಕಾರ ಅಥವಾ ವಿನಾಶಕಾರಿ) ಇವೇ ಆ ಮೂರು ಗುಣಗಳು. ಈ ಮೂರು ಗುಣಗಳ ನಡುವೆ ಯಾವಾಗ ಸಮತೋಲನವು ತಪ್ಪಿ ಹೋಗುತ್ತದೆಯೋ, ಆಗ ಸೃಷ್ಟಿ ಕಾರ್ಯವು ಆರಂಭವಾಗುತ್ತದೆ. ರಜಸ್ ಗುಣವು ಸೃಷ್ಟಿಯನ್ನು ಮುಂದುವರಿಸುತ್ತದೆ. ಆದ್ದರಿಂದ ಪುರುಷ ಮತ್ತು ಪ್ರಕೃತಿ ಎಂದಿಗು ಸ್ವಾತಂತ್ರವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಸೃಷ್ಟಿಯನ್ನು ಮಾಡುವ ಸಲುವಾಗಿ ಇವೆರಡು ಜೊತೆಯಾಗಿ ಇರುತ್ತವೆ. ದೇವಿ ಭಾಗವತ ಪುರಾಣದ ಪ್ರಕಾರ ಪುರುಷನು (ಶಿವ, ಲೌಕಿಕ ರೂಪದಲ್ಲಿ) ಆದಿಶಕ್ತಿಯನ್ನು ಒಲಿಸಿಕೊಳ್ಳಲು "ಕ್ಲೀಂ" ಎನ್ನುವ ಬೀಜ ಮಂತ್ರದಿಂದ ಸಾವಿರ ವರ್ಷಗಳ ಕಾಲ ಧ್ಯಾನ ಮಾಡಿದನಂತೆ.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಆಗ ಆಕೆಯು ಸಿಧಿದಾತ್ರಿ ಎಂಬ ಅವತಾರವನ್ನು ಎತ್ತಿ ಶಿವನ ಮುಂದೆ ನಿಂತಳಂತೆ. ಆಗ ಆಕೆಯು ಶಿವನ ಎಡ ಭಾಗದ ಅರ್ಧ ಭಾಗವಾಗಿ ಕಾಣಿಸುತ್ತಿದ್ದಳಂತೆ. ಇದೇ ಪುರಾಣದ ಪ್ರಕಾರ ಪಾರ್ವತಿಯು ಶಕ್ತಿ ಮತ್ತು ಸೌಂದರ್ಯದ ಅಧಿ ದೇವತೆಯಾಗಿ, ಆಕೆಯನ್ನು ಸಗುಣ ಸ್ವರೂಪ (ಮಾನವ ರೂಪದಲ್ಲಿ)ದಲ್ಲಿ ಪರಿಗಣಿಸಲಾಗಿದೆ. ಅದರರ್ಥ ಪಾರ್ವತಿ ದೇವತೆಗಳ ನೈಜ ಸ್ವರೂಪಿಣಿಯಾಗಿದ್ದು, ಆಕೆಯು ಎಲ್ಲಾ ದೇವಾನುದೇವತೆಗಳಿಂದ ಉದಯಿಸಿದ ಮೂರು ಗುಣಗಳನ್ನು (ಸತ್ವ, ರಜಸ್ ಅಥವಾ ತಮಸ್) ತೋರಿಸುತ್ತಾಳಂತೆ.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಭಗವಾನ್ ವಿಷ್ಣುವು ಸ್ಥಿತಿಕಾರಕನಾಗಿದ್ದಾನೆ. ಆತನ ನಾಭಿಯಿಂದ ಜನಿಸಿದ ಬ್ರಹ್ಮನು ಪ್ರಕೃತಿಯ ಕೆಲವೊಂದು ಅಂಶಗಳನ್ನು ತೆಗೆದುಕೊಂಡು ಜೀವಿಗಳನ್ನು ಸೃಷ್ಟಿಸಲು ತೊಡಗಿದನು. ಹಾಗಾಗಿ ಆತ ಸೃಷ್ಟಿಕರ್ತನಾದನು. ಶಿವನು ಲಯಕಾರಕನಾಗಿ ವಿನಾಶವನ್ನು ಮಾಡಿ ಹೊಸ ಸೃಷ್ಟಿಗೆ ಅವಕಾಶ ಕಲ್ಪಿಸುವವನಾದನು. ಹೀಗೆ ತ್ರಿಮೂರ್ತಿಗಳು ಅಸ್ತಿತ್ಪಕ್ಕೆ ಬಂದರು.

ಶಿವಪುರಾಣದ ಪ್ರಕಾರ

ಶಿವಪುರಾಣದ ಪ್ರಕಾರ

ಶಿವಪುರಾಣವು ವಿವರಿಸುವ ಈ ಕಥೆಯನ್ನು ಕೇಳಿ, ಸೃಷ್ಟಿಕರ್ತನಾದ ಬ್ರಹ್ಮನು ಎಲ್ಲಾ ಪುರುಷರನ್ನು, ಪ್ರಜಾಪತಿಯನ್ನು ಸೃಷ್ಟಿಸಿ ಅವರಿಗೆ ಮರುಸೃಷ್ಟಿ ಮಾಡಲು ತಿಳಿಸಿದನಂತೆ. ಆಗ ಅವರಿಂದ ಅದು ಸಾಧ್ಯವಾಗಲಿಲ್ಲ. ನಿಧಾನವಾದ ಸೃಷ್ಟಿಕಾರ್ಯದಿಂದ ಗೊಂದಲಗೊಂಡ ಬ್ರಹ್ಮನು ಶಿವನ ಬಳಿ ಸಹಾಯಕ್ಕಾಗಿ ಅಂಗಲಾಚಿದನು. ಆಗ ಬ್ರಹ್ಮನ ಮೂರ್ಖತನವನ್ನು ಹೋಗಲಾಡಿಸಲು ಶಿವನು ಅರ್ಧನಾರೀಶ್ವರನ ರೂಪದಲ್ಲಿ ಕಾಣಿಸಿಕೊಂಡನು. ಆಗ ಬ್ರಹ್ಮನು ಶಿವನ ಅರ್ಧ ಭಾಗವಾಗಿದ್ದ ಆ ನಾರಿಯನ್ನು ಕುರಿತು ತನಗೆ ಸ್ತ್ರೀ ಶಕ್ತಿಯನ್ನು ನೀಡಿ ಸೃಷ್ಟಿ ಕ್ರಿಯೆಯನ್ನು ಸರಾಗಗೊಳಿಸುವಂತೆ ಕೇಳಿಕೊಂಡನು. ಆಗ ಆ ದೇವತೆಯು ಇದಕ್ಕೆ ಒಪ್ಪಿ ತನ್ನ ದೇಹದಿಂದ ಹಲವಾರು ಸ್ತ್ರೀ ಶಕ್ತಿಗಳನ್ನು ಸೃಷ್ಟಿಸಿದಳಂತೆ, ಈ ಮೂಲಕ ಸೃಷ್ಟಿ ಕ್ರಿಯೆಯು ಪ್ರಗತಿಯನ್ನು ಸಂಪಾದಿಸಲು ನೆರವು ನೀಡಿದಳಂತೆ.

ಶಿವಪುರಾಣದ ಪ್ರಕಾರ

ಶಿವಪುರಾಣದ ಪ್ರಕಾರ

ಮತ್ತೆ ಅರ್ಧನಾರೀಶ್ವರನ ಮಹತ್ವದ ವಿಚಾರಕ್ಕೆ ಬಂದರೆ, ಅರ್ಧನಾರೀಶ್ವರನು ಲೌಕಿಕ ಸುಖ ಭೋಗಗಳ ಮತ್ತು ವಿಶ್ವದ ಪವಿತ್ರತೆಯ ಸಾಕಾರ ಮೂರ್ತಿಯಾಗಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಾನೆ. ಅರ್ಧನಾರೀಶ್ವರನು " ಇಬ್ಬರ ಹಿಂದಿರುವ ಪರಿಪೂರ್ಣತೆಯ ಪ್ರತೀಕ"ವಾಗಿ ನಮಗೆ ತೋರುತ್ತದೆ. ಇಲ್ಲಿ ದೇವರು ಹೆಣ್ಣು ಮತ್ತು ಗಂಡು ಎಂಬ ಭೇದಗಳನ್ನು ಮೀರಿ ನಿಂತು ಬಿಡುತ್ತಾನೆ. ಹೀಗೆ ವಿಶ್ವದ ಎಲ್ಲಾ ವ್ಯತ್ಯಾಸಗಳನ್ನು ಏಕೀಕರಣ ಮಾಡುವ ಏಕೈಕ ಶಕ್ತಿಯಾಗಿ ಅರ್ಧನಾರೀಶ್ವರ ಕಾಣಿಸುತ್ತಾನೆ. ಒಟ್ಟಾರೆಯಾಗಿ ಸೃಷ್ಟಿಗೆ ಅಗತ್ಯವಾದ ಎರಡು ವಿಭಿನ್ನ ಮುಖಗಳನ್ನು ಒಂದೇ ದೇಹದಲ್ಲಿ ಅಡಕಗೊಳಿಸಿ, ಒಬ್ಬರನ್ನು ಬಿಟ್ಟು ಮತ್ತೊಬ್ಬರಿಲ್ಲ, ಇವರಿಲ್ಲದೆ ಸೃಷ್ಟಿಯಿಲ್ಲ ಎಂಬ ಸಂದೇಶವನ್ನು ಇಲ್ಲಿ ಸಾರಲಾಗಿದೆ.

ಶಿವಪುರಾಣದ ಪ್ರಕಾರ

ಶಿವಪುರಾಣದ ಪ್ರಕಾರ

ಅರ್ಧನಾರೀಶ್ವರನಂತಹ ಉಭಯಲಿಂಗಿಗಳು ಸಾಂಪ್ರದಾಯಿಕವಾಗಿ ಎಲ್ಲಾ ಸಂಸ್ಕೃತಿಗಳಲ್ಲಿ ಸಂತಾನೋತ್ಪತಿ ಮತ್ತು ಅಭಿವೃದ್ಧಿಯ ಸಂಕೇತವಾಗಿ ಗುರುತಿಸಲ್ಪಡುತ್ತಾರೆ. ಈ ಅವತಾರದಲ್ಲಿ ಶಿವನು ಶಕ್ತಿ ಸ್ವರೂಪಿಣಿಯಾದ ಪ್ರಕೃತಿಯನ್ನು ಅಪ್ಪಿಕೊಂಡಿರುತ್ತಾನೆ. ಇಲ್ಲಿ ಪ್ರಕೃತಿಯು ಸೃಷ್ಟಿಕಾರಕ ಶಕ್ತಿಯಾದರೆ, ಶಿವನು ಆ ಶಕ್ತಿ ನಾಶವಾದಾಗ ಅದನ್ನು ಪುನಃಶ್ಚೇತನಗೊಳಿಸುವವನಾಗಿ ಕಾಣುತ್ತಾನೆ.

ಅರ್ಧ ನಾರೀಶ್ವರನ ಪರಿಕಲ್ಪನೆ ಮತ್ತು ಮಹತ್ವ

ಅರ್ಧ ನಾರೀಶ್ವರನ ಪರಿಕಲ್ಪನೆ ಮತ್ತು ಮಹತ್ವ

ಇದರ ಜೊತೆಗೆ ಸಾಂಪ್ರದಾಯಿಕವಾಗಿ ಹೆಂಡತಿಯು ಗಂಡನ ಎಡಭಾಗದಲ್ಲಿ ಮಾತ್ರ ಏಕೆ ಕೂರಬೇಕು ಎಂಬ ಪ್ರಶ್ನೆಗು ಸಹ ಅರ್ಧನಾರೀಶ್ವರ ಉತ್ತರ ನೀಡುತ್ತಾನೆ. ಏಕೆಂದರೆ ಸಂಪ್ರದಾಯದ ರೀತಿ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ ಹೆಂಡತಿ ಗಂಡನ ಎಡ ಭಾಗದಲ್ಲಿ ಕೂರುತ್ತಾಳೆ. ಅದಕ್ಕಾಗಿಯೇ ಆಕೆಯನ್ನು ವಾಮಾಂಗಿ ಎನ್ನುವುದು. ವಾಮ ಎಂದರೆ ಎಡ ಎಂದರ್ಥ. ನಮ್ಮ ದೇಹದಲ್ಲಿ ಸ್ತ್ರೀ ಗುಣಗಳನ್ನು ಹೊಂದಿರುವ ಹೃದಯವು ನೆಲೆಸಿರುವುದು ಎಡ ಭಾಗದ ಮೆದುಳಿನಲ್ಲಿ. ಇದು ಅರಿವು ಮತ್ತು ಸೃಷ್ಟಿಶೀಲತೆಯಂತಹ ಗುಣಗಳನ್ನು ಒಳಗೊಂಡಿರುತ್ತದೆ. ಇನ್ನೂ ಬಲಭಾಗದ ಮೆದುಳಿನಲ್ಲಿ ಸ್ನಾಯು ಶಕ್ತಿ, ತರ್ಕ, ವೀರತ್ವ ಮತ್ತು ವ್ಯವಸ್ಥಿತ ಆಲೋಚನೆಗಳನ್ನು ಮಾಡುವ ಗುಣಗಳು ಇರುತ್ತವೆ.

English summary

The Concept & Significance Of Ardhanarishvara

Have you ever heard of the God who is half man and half woman? The deity is popularly known as the 'ardhanarishvara' meaning lord who is half woman. You must be wondering as to what it implies? Is God a man or a woman? Let us find out about the concept of Ardhanarishvara.
X