For Quick Alerts
ALLOW NOTIFICATIONS  
For Daily Alerts

ವಿಚಿತ್ರ ಆದರೂ ಸತ್ಯ! ಈ ದೇವಸ್ಥಾನಗಳಲ್ಲಿ 'ದುಷ್ಟಜನರನ್ನು' ಪೂಜಿಸುತ್ತಾರಂತೆ!

By Manu
|

ದೇವಸ್ಥಾನವೆಂಬುದು ಪೂಜನೀಯ ಸ್ಥಳವಾಗಿದೆ. ದೇವರ ಅನುಗ್ರಹವನ್ನು ಪಡೆದುಕೊಳ್ಳಲು ನಾವು ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ ಅಂತೆಯೇ ಕೆಟ್ಟದ್ದರಿಂದ ನಮ್ಮನ್ನು ರಕ್ಷಿಸಿ ಒಳಿತನ್ನು ಉಂಟುಮಾಡಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಅದೇ ರೀತಿ ನಮ್ಮ ಸುತ್ತಲಿನ ಸಮಾಜವೂ ನಮಗೆ ದೇವಳದಲ್ಲಿರುವ ಒಳ್ಳೆಯತನದ ಬಗ್ಗೆ ತಿಳಿಸಿಹೇಳಿದೆ. ಮಾನವನು ಒಳಿತನ್ನು, ಒಳ್ಳೆಯ ಅಂಶಗಳನ್ನು ಪಡೆದುಕೊಳ್ಳಲಿ ಎಂದೇ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ.

ಆದರೆ ನಾವು ಇಂದಿನ ಲೇಖನಲ್ಲಿ ನಿಮಗೆ ವಿಚಿತ್ರವಾದ ಸಂಗತಿಯೊಂದನ್ನು ತಿಳಿಸಲಿದ್ದು ಇಲ್ಲಿ ದೇವರಿಗೆ ಬದಲಾಗಿ ದುಷ್ಟತನವನ್ನು ಪೂಜಿಸಲಾಗುತ್ತದೆ. ಇತಿಹಾಸದಲ್ಲಿ ನಾವು ಕೆಟ್ಟವರೆಂದು ಭಾವಿಸಿಕೊಂಡವರು, ಕೆಟ್ಟವರು ಪೂಜನೀಯ ಸ್ಥಾನವನ್ನು ಪಡೆದುಕೊಂಡು ದೇವರಾಗಿದ್ದಾರೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ದೇವಸ್ಥಾನಗಳಿದ್ದು ನೀವು ಒಮ್ಮೆ ದರ್ಶನ ಮಾಡಿ.

Temples

*ಗಾಂಧಾರಿ ದೇವಸ್ಥಾನ ಮೈಸೂರು
ಮೈಸೂರಿನ ಹೆಬ್ಬಾಯ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ನೂರು ಕುರು ಪುತ್ರರ ತಾಯಿಯಾದ ಗಾಂಧಾರಿಯ ದೇವಸ್ಥಾನ ಇದಾಗಿದೆ. ಮಕ್ಕಳ ಮೇಲಿನ ಕುರುಡು ವ್ಯಾಮೋಹವು ಅವರ ತಪ್ಪುಗಳನ್ನು ಆಕೆ ಮನ್ನಿಸುವಂತೆ ಮಾಡುತ್ತದೆ. ಮಕ್ಕಳು ದುಷ್ಟರು ಎಂಬುದಾಗಿ ಅರಿತಿದ್ದರೂ ಪಾಂಡವರಿಗೆ ಆಗುತ್ತಿದ್ದ ಅನ್ಯಾಯಗಳನ್ನು ನೋಡಿ ಸುಮ್ಮನಿದ್ದ ತಾಯಿ ಗಾಂಧಾರಿ. ತನ್ನ ಪತಿ ಅಂಧನೆಂದು ಅರಿತೊಡನೆ ಗಾಂಧಾರಿ ಕೂಡ ತನ್ನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಂಡು ದೃಷ್ಟಿ ತ್ಯಾಗ ಮಾಡುತ್ತಾಳೆ. ಅದಕ್ಕಾಗಿಯೇ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಇದನ್ನು ಜೂನ್ 19, 2008 ರಂದು ನಿರ್ಮಿಸಲಾಗಿದ್ದು ಇದಕ್ಕೆ ತಗಲಿದ ವೆಚ್ಚ 2.5 ಕೋಟಿಗಳಾಗಿದೆ.

2.ಕಾಕಿನಾಡ ರಾವಣ ದೇವಸ್ಥಾನ, ಆಂಧ್ರ ಪ್ರದೇಶ
ದಸರಾ ಸಮಯದಲ್ಲಿ ರಾವಣನ ಪ್ರತಿಮೆಗೆ ಬೆಂಕಿಯನ್ನು ಹಚ್ಚಿ ಕೆಟ್ಟದ್ದರ ಮೇಲಿನ ಜಯವನ್ನು ಆಚರಿಸಲಾಗುತ್ತದೆ. ಆದರೆ ಅದೇ ಕೆಟ್ಟ ಶಕ್ತಿಗೆ ಇಲ್ಲಿನ ದೇವಳದಲ್ಲಿ ಪೂಜೆ ಮಾಡಲಾಗುತ್ತದೆ. ಭಾರತದಲ್ಲಿರುವ ಅತಿ ಅಪರೂಪದ ಹಳ್ಳಿಗಳಲ್ಲಿ ಒಂದಾಗಿರುವ ಕಾಕಿನಾಡದಲ್ಲಿ ರಾವಣನ ದೇವಳವಿದೆ. ಮಹಾನ್ ಶಿವ ಭಕ್ತ ಮತ್ತು ಬುದ್ಧಿವಂತ ಅಸುರನಾಗಿದ್ದನು ರಾವಣ. ದೇವಳದ ಒಳಭಾಗದಲ್ಲಿ ಶಿವನ ವಿಗ್ರಹ ಕೂಡ ಇದೆ. ದೇವಳವನ್ನು ನಿರ್ಮಿಸಿದ ರೀತಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

3.ಕರ್ಣನ ದೇವಸ್ಥಾನ ಉತ್ತರಾಖಾಂಡ
ಮಹಾಭಾರತದಲ್ಲಿ ಬರುವ ದಾನಶೂರ ಕರ್ಣನ ದೇವಸ್ಥಾನ ಉತ್ತರಾಖಂಡದಲ್ಲಿದೆ. ಈತ ದಯಾಳು ಮತ್ತು ದಾನಮಾಡುವುದರಲ್ಲಿ ಎತ್ತಿದ ಕೈ ಎಂದೆನಿಸಿದ್ದ. ಕರ್ಣನಿಗೆ ಅರ್ಪಿತವಾಗಿರುವ ದೇವಸ್ಥಾನಗಳಲ್ಲಿ ದೇವರ ಕೂಡ ಒಂದು. ಹಕ್ಕಿಗಳು ಮತ್ತು ಪ್ರಾಣಿಗಳ ಚಿತ್ರಗಳನ್ನು ಇಲ್ಲಿ ಕೆತ್ತಲಾಗಿದೆ. ರಾಮಾಯಣದ ಎಲ್ಲಾ ದೃಶ್ಯಗಳನ್ನು ದೇವಸ್ಥಾನವು ಒಳಗೊಂಡಿದೆ. ಇಲ್ಲಿ ನಾಣ್ಯವನ್ನು ಚಿಮ್ಮಿದರೆ ಬಯಕೆಗಳು ಈಡೇರುತ್ತವೆ ಎಂಬುದು ನಂಬಿಕೆಯಾಗಿದೆ.

4.ದುರ್ಯೋಧನನ ದೇವಸ್ಥಾನ ಕೇರಳ
ಭಾರತದಲ್ಲಿ ದುರ್ಯೋಧನನಿಗೆ ಮೀಸಲಾಗಿರುವ ದೇವಸ್ಥಾನ ಕೇರಳದ ಪೊರುವಳಿ ಪೆರುವಿರುತ್ತಿ ಮಲನಾಡ ಆಗಿದೆ. ಅರಣ್ಯದಲ್ಲಿ ಪಾಂಡವರನ್ನು ಶೋಧಿಸುತ್ತಿದ್ದ ವೇಳೆ ದುರ್ಯೋಧನನು ಅರಣ್ಯದ ದಕ್ಷಿಣಕ್ಕೆ ಪ್ರಯಾಣಿಸಿ ಉತ್ತರ ದಿಕ್ಕನ್ನು ತಲುಪುತ್ತಾನೆ. ಈ ಸ್ಥಳ ಮಲನಾಡ ಆಗಿದೆ. ಈ ಸಮಯದಲ್ಲಿ ಬಳಲಿದ್ದ ಅರಸನು ಅಲ್ಲಿದ್ದ ಮನೆಯಾಕೆಯನ್ನು ನೀರಿಗಾಗಿ ಕೇಳಿಕೊಳ್ಳುತ್ತಾನೆ. ಆಕೆ ಗೌರವ ಸೂಚಕವಾಗಿ ಪೇಯವನ್ನು ನೀಡುತ್ತಾಳೆ. ಅಂತೆಯೇ ಪೇಯವು ಅರಸನಿಗೆ ಮೆಚ್ಚುಗೆಯಾಗುತ್ತದೆ. ಆ ಮಹಿಳೆಯು ಕುರತ್ತಲಿಯನ್ನು ಧರಿಸಿರುತ್ತಾಳೆ. ಇದು ಕೆಳವರ್ಗದ ಅಸ್ಪ್ರಶ್ಯರಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ತನ್ನನ್ನು ತಾನು ಸಮಾಧಾನಿಸಿಕೊಂಡು ದುರ್ಯೋಧನನ್ನು ಸುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗುತ್ತಾನೆ. ವಾತಾವರಣದಲ್ಲಿರುವ ದೈವಿಕ ಕಳೆ ಆತನನ್ನು ಆಕರ್ಷಿಸುತ್ತದೆ. ಅಲ್ಲಿಯೇ ಮಲೆಯೇರಿ ಕುಳಿತ ದುರ್ಯೋಧನನು ಶಿವನನ್ನು ಹಗಲು ರಾತ್ರಿ ಧ್ಯಾನಿಸುತ್ತಾ ಅಲ್ಲಿನ ಜನರ ಒಳಿತನ್ನು ಕೋರಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಕೌರವ ಅರಸನು ನೂರಾರು ಎಕರೆಗಳಷ್ಟು ಭೂಮಿಯನ್ನು ವ್ಯವಸಾಯಕ್ಕಾಗಿ ಅಲ್ಲಿನ ಜನರಿಗೆ ದಾನ ಮಾಡುತ್ತಾನೆ.

5. ಶಕುನಿಯ ದೇವಸ್ಥಾನ ಕೇರಳ
ಪಾಂಡವರನ್ನು ಅಸಹಾಯಕರನ್ನಾಗಿ ಮಾಡುವಲ್ಲಿ ಕುಟಿಲ ಶಕುನಿಯ ಬುದ್ಧಿ ಇದ್ದೇ ಇದೆ. ಈ ಶಕುನಿಗೂ ಒಂದು ದೇವಸ್ಥಾನವಿದ್ದು ಪವಿತ್ರೇಶ್ವರಂನಲ್ಲಿದೆ. ಇಲ್ಲಿ ಶಕುನಿಯು ತನ್ನ ಸೋದರ ಅಳಿಯಂದಿರೊಂದಿಗೆ ಸುತ್ತಾಡುತ್ತಿದ್ದನು ಎಂಬುದಾಗಿ ದಂತಕಥೆಗಳು ಹೇಳುತ್ತವೆ. ಯುದ್ಧ ನಂತರ ಇಲ್ಲಿಗೆ ಬಂದ ಶಕುನಿಯು ಶಿವನ ಆಶೀರ್ವಾದವನ್ನು ಪಡೆದುಕೊಂಡು ಮೋಕ್ಷವನ್ನು ಹೊಂದುತ್ತಾನೆ.

6. ಭೀಷ್ಮನ ದೇವಸ್ಥಾನ ಅಲಹಾಬಾದ್
ಹೈ ಕೋರ್ಟ್ ಲಾಯರ್ ಜೆ.ಆರ್ ಭಟ್ಟ ಭೀಷ್ಮನ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಜನರು ಪಿತೃ ಪಕ್ಷದ ಸಮಯದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ತಮ್ಮ ಹಿರಿಯರ ಸದ್ಗತಿಗಾಗಿ ಪ್ರಾರ್ಥಿಸಿ ಬೇಕಾದ ಕ್ರಿಯಾವಿಧಿಗಳನ್ನು ಮಾಡುತ್ತಾರೆ. ಗಂಗಾ ಮಾತೆಯ ಮಗನಾದ ಭೀಷ್ಮನು, ಮಲತಾಯಿ ಸತ್ಯವತಿಗೆ ಕೊಟ್ಟ ಮಾತಿನಂತೆ ಬ್ರಹ್ಮಚಾರಿಯಾಗಿಯೇ ಉಳಿಯುತ್ತಾನೆ. ಪಾಂಡವ ಕೌರವ ಇಬ್ಬರಿಗೂ ಹಿರಿಯಜ್ಜ ಎಂದೆನಿಸಿದ್ದರೂ, ಕೊನೆಯ ವೇಳೆಯಲ್ಲಿ ಕೌರವರ ಭಾಗದಿಂದಲೇ ಯುದ್ಧವನ್ನು ಮಾಡುತ್ತಾರೆ.

English summary

Temples where “The Evil” is worshiped!

here is the list of temples which are not dedicated to gods and goddesses, rather to the evil characters of Hindu mythology.
Story first published: Monday, July 3, 2017, 10:28 [IST]
X
Desktop Bottom Promotion